ಸ್ಟಾರ್ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ

*I hereby authorise Star Health Insurance to contact me. It will override my registry on the NCPR.

IRDAI UIN: SHAHLIP22028V072122

HIGHLIGHTS

Plan Essentials

essentials

PED ಬೈ-ಬ್ಯಾಕ್

ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ, ಪೂರ್ವಾಸ್ತಿತ್ವದ ಕಾಯಿಲೆಗಳಿಗೆ ವೇಟಿಂಗ್ ಅವಧಿಯನ್ನು 3 ವರ್ಷಗಳಿಂದ 1 ವರ್ಷಕ್ಕೆ ಕಡಿಮೆ ಮಾಡಬಹುದಾಗಿದೆ ಇದು ಐಚ್ಛಿಕ ಕವರ್ ಆಗಿದೆ.
essentials

ಬಾರಿಯಾಟಿಕ್ ಶಸ್ತ್ರಚಿಕಿತ್ಸೆ

ಬಾರಿಯಾಟಿಕ್ ಶಸ್ತ್ರಚಿಕಿತ್ಸಾ ಕಾರ್ಯವಿಧಾನಗಳಿಗಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳೊಳಗೆ ಕವರ್ ಮಾಡಲಾಗುತ್ತದೆ.
essentials

ಡೆಲಿವರಿ ಪ್ರಯೋಜನ

ನಾರ್ಮಲ್ ಮತ್ತು ಸಿ-ಸೆಕ್ಷನ್ ಡೆಲಿವರಿ (ಪ್ರಸವಪೂರ್ವ ಮತ್ತು ನಂತರ ಸೇರಿದಂತೆ) ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳೊಳಗೆ ಕವರ್ ಮಾಡುತ್ತದೆ.ಹೊರರೋಗಿ ಕವರ್
essentials

ಹೊರರೋಗಿ ಕವರ್

ಹೊರರೋಗಿಗಳ ಸಮಾಲೋಚನೆ ಮತ್ತು ಹೊರರೋಗಿ ಚಿಕಿತ್ಸೆ (ದಂತ ಮತ್ತು ನೇತ್ರ) ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳೊಳಗೆ ಕವರ್ ಮಾಡುತ್ತದೆ.
essentials

ಸಂಚಿತ ಬೋನಸ್

ರೂ. 5 ಲಕ್ಷ ವಿಮಾ ಮೊತ್ತಕ್ಕೆ, ಸಂಚಿತ ಬೋನಸ್ ಅನ್ನು ಪ್ರತಿ ಕ್ಲೈಮ್ ಮುಕ್ತ ವರ್ಷದ ನಂತರ ಗರಿಷ್ಠ 100% ವರೆಗೆ ಬೇಸಿಕ್ ವಿಮಾ ಮೊತ್ತದ 50% ನಂತೆ ಲೆಕ್ಕಹಾಕಲಾಗುತ್ತದೆ. ರೂ. 7,50,000/- ಅಥವಾ ಅದಕ್ಕಿಂತ ಹೆಚ್ಚಿನ ವಿಮಾ ಮೊತ್ತಕ್ಕೆ, ಸಂಚಿತ ಬೋನಸ್ ಅನ್ನು ಬೇಸಿಕ್ ವಿಮಾ ಮೊತ್ತದ 100% ನಂತೆ .
essentials

ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್

ಪಾಲಿಸಿ ಅವಧಿಯಲ್ಲಿ ಬೇಸಿಕ್ ವಿಮಾ ಮೊತ್ತದ ಬರಿದಾಗುವಿಕೆ ನಂತರ, ವಿಮಾ ಮೊತ್ತದ 100% ಅನ್ನು ಪಾಲಿಸಿ ವರ್ಷದಲ್ಲಿ ಒಮ್ಮೆ ರಿಸ್ಟೋರ್ ಮಾಡಲಾಗುತ್ತದೆ, ಅದನ್ನು ಈಗಾಗಲೇ ಕ್ಲೈಮ್‌ಗಳನ್ನು ಮಾಡಲಾದ ಅನಾರೋಗ್ಯ ಅಥವಾ ಕಾಯಿಲೆಗೆ ಬಳಸಿಕೊಳ್ಳಬಹುದು.
essentials

ವೈಯಕ್ತಿಕ ಅಪಘಾತ ಕವರ್

ಯಾವುದೇ ಹೆಚ್ಚುವರಿ ಪ್ರೀಮಿಯಂ ಇಲ್ಲದೆ ಪಾಲಿಸಿ ಅವಧಿಯಲ್ಲಿ ವಿಮೆದಾರರ ಅಪಘಾತದಿಂದ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯ ಸಂದರ್ಭದಲ್ಲಿ ವಿಶ್ವಾದ್ಯಂತ ವೈಯಕ್ತಿಕ ಅಪಘಾತ ಕವರ್ ಅನ್ನು ಒದಗಿಸಲಾಗುತ್ತದೆ.
essentials

ಆಸ್ಪತ್ರೆ ಕ್ಯಾಶ್

ಆಸ್ಪತ್ರೆಯಲ್ಲಿ ಪ್ರತಿ ಪೂರ್ಣವಾದ ದಿನಕ್ಕೆ ಕ್ಯಾಶ್ ಪ್ರಯೋಜನವನ್ನು ಪ್ರತಿ ಆಸ್ಪತ್ರೆಗೆ ದಾಖಲಾಗುವಿಕೆಗೆ ಗರಿಷ್ಠ 7 ದಿನಗಳು ಮತ್ತು 120 ದಿನಗಳ ಪಾಲಿಸಿ ಅವಧಿವರೆಗೆ ಪಾಲಿಸಿ ಷರತ್ತುಗಳಲ್ಲಿ ನಮೂದಿಸಲಾದ ಮಿತಿಗಳವರೆಗೆ ಒದಗಿಸಲಾಗುತ್ತದೆ
DETAILED LIST

ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

ಪಾಲಿಸಿ ವಿಧ

ಈ ಪಾಲಿಸಿಯನ್ನು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಪಡೆಯಬಹುದಾಗಿದೆ.

ಪ್ರವೇಶದ ವಯಸ್ಸು

18 ರಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆದುಕೊಳ್ಳಬಹುದಾಗಿದೆ. ಅವಲಂಬಿತ ಮಕ್ಕಳನ್ನು 91 ನೇ ದಿನದಿಂದ 25 ವರ್ಷಗಳವರೆಗೆ ಕವರ್ ಮಾಡಲಾಗುತ್ತದೆ.

ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ

ಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳನ್ನು ಕವರ್ ಮಾಡಲಾಗುತ್ತದೆ.

ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ

ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕದ 60 ದಿನಗಳ ಮೊದಲು ಉಂಟಾಗುವ ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವದ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡಲಾಗುತ್ತದೆ.

ಆಸ್ಪತ್ರೆಗೆ ದಾಖಲಾಗುವಿಕೆ ನಂತರ

ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಡಿಸ್ಚಾರ್ಜ್ ಆದ ದಿನಾಂಕದಿಂದ 90 ದಿನಗಳವರೆಗೆ ಕವರ್ ಮಾಡಲಾಗುತ್ತದೆ.

ಕೊಠಡಿ ಬಾಡಿಗೆ

ಈ ಪಾಲಿಸಿಯ ಅಡಿಯಲ್ಲಿ ಕೊಠಡಿ ಬಾಡಿಗೆ (ಖಾಸಗಿ ಏಕ A/C ಕೊಠಡಿ), ಬೋರ್ಡಿಂಗ್ ಮತ್ತು ನರ್ಸಿಂಗ್ ಖರ್ಚುಗಳಿಗೆ ಯಾವುದೇ ಮಿತಿಯಿಲ್ಲ.

ರೋಡ್ ಆಂಬ್ಯುಲೆನ್ಸ್

ಆಸ್ಪತ್ರೆಗೆ ದಾಖಲಾಗುವಿಕೆ, ಉತ್ತಮ ಸೌಲಭ್ಯಗಳಿಗಾಗಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಮತ್ತು ಆಸ್ಪತ್ರೆಯಿಂದ ನಿವಾಸಕ್ಕೆ ಸ್ಥಳಾಂತರಗೊಳ್ಳಲು ಆಂಬ್ಯುಲೆನ್ಸ್ ಶುಲ್ಕವನ್ನು ಪಾಲಿಸಿ ಕವರ್ ಮಾಡುತ್ತದೆ.

 ಏರ್ ಆಂಬ್ಯುಲೆನ್ಸ್

ಪ್ರತಿ ಪಾಲಿಸಿ ಅವಧಿಗೆ ಗರಿಷ್ಠ ರೂ. 5,00,000/- ರವರೆಗೆ ಪ್ರತಿ ಆಸ್ಪತ್ರೆಗೆ ದಾಖಲಾಗುವಿಕೆಗೆ ರೂ. 2,50,000/- ರಂತೆ ಏರ್ ಆಂಬ್ಯುಲೆನ್ಸ್ ಖರ್ಚನ್ನು ಸಹ ಕವರ್ ಮಾಡಲಾಗುತ್ತದೆ.

ಮಧ್ಯಂತರ ಸೇರ್ಪಡೆ

ನವ ವಿವಾಹಿತ ಸಂಗಾತಿ ಮತ್ತು ನವಜಾತ ಶಿಶುವನ್ನು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಪಾಲಿಸಿಯಲ್ಲಿ ಸೇರಿಸಿಬಹುದಾಗಿದೆ. ವೇಟಿಂಗ್ ಅವಧಿಗಳು ಹೊಸ ಸೇರ್ಪಡೆಗಳ ಸೇರ್ಪಡೆ ದಿನಾಂಕದಿಂದ ಅನ್ವಯವಾಗುತ್ತವೆ.

ಡೇ ಕೇರ್ ಕಾರ್ಯವಿಧಾನಗಳು

ತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾಗುವಿಕೆಯ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನ್ ಕವರ್ ಮಾಡಲಾಗುತ್ತದೆ.

ಆಧುನಿಕ ಚಿಕಿತ್ಸೆ

ಆಧುನಿಕ ಚಿಕಿತ್ಸಾ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಪಾವತಿಸಲಾಗುತ್ತದೆ.

ಆಸ್ಪತ್ರೆ ಕ್ಯಾಶ್

ಆಸ್ಪತ್ರೆಯಲ್ಲಿ ಪ್ರತಿ ಪೂರ್ಣವಾದ ದಿನಕ್ಕೆ ಕ್ಯಾಶ್ ಪ್ರಯೋಜನವನ್ನು ಪ್ರತಿ ಆಸ್ಪತ್ರೆಗೆ ದಾಖಲಾಗುವಿಕೆಗೆ ಗರಿಷ್ಠ 7 ದಿನಗಳು ಮತ್ತು 120 ದಿನಗಳ ಪಾಲಿಸಿ ಅವಧಿವರೆಗೆ ಪಾಲಿಸಿ ಷರತ್ತುಗಳಲ್ಲಿ ನಮೂದಿಸಲಾದ ಮಿತಿಗಳವರೆಗೆ ಒದಗಿಸಲಾಗುತ್ತದೆ.

ಮನೆಯಲ್ಲೇ ಚಿಕಿತ್ಸೆ

ವೈದ್ಯರ ಸಲಹೆಯ ಮೇರೆಗೆ ಮೂರು ದಿನಗಳಿಗಿಂತ ಹೆಚ್ಚಿನ ಅವಧಿಗೆ ತೆಗೆದುಕೊಳ್ಳಲಾದ ಆಯುಷ್ ಚಿಕಿತ್ಸೆ ಸೇರಿದಂತೆ ಮನೆಯಲ್ಲೇ ಚಿಕಿತ್ಸೆಗೆ ತಗಲುವ ಖರ್ಚನ್ನು ಕವರ್ ಮಾಡಲಾಗುತ್ತದೆ.

 ಡೆಲಿವರಿ ಖರ್ಚುಗಳು

ಸಿಸೇರಿಯನ್ ಸೆಕ್ಷನ್ ಸೇರಿದಂತೆ ಡೆಲಿವರಿ ಖರ್ಚುಗಳನ್ನು (ಪ್ರಸವಪೂರ್ವ ಮತ್ತು ನಂತರದ ಎರಡೂ) ಗರಿಷ್ಠ ಎರಡು ಹೆರಿಗೆಗಳಿಗೆ ಒಳಪಟ್ಟಂತೆ ನಿಗದಿತ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ.

ನವಜಾತ ಶಿಶು ಕವರ್

ನವಜಾತ ಶಿಶುವಿನ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚನ್ನು ಆಯ್ಕೆ ಮಾಡಿದ ವಿಮಾ ಮೊತ್ತದ ಆಧಾರದ ಮೇಲೆ ನಿಗದಿತ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ.

ವ್ಯಾಕ್ಸಿನೇಷನ್ ಖರ್ಚುಗಳು

ನವಜಾತ ಶಿಶುವಿನ ವ್ಯಾಕ್ಸಿನೇಷನ್ ಖರ್ಚುಗಳನ್ನು ಆಯ್ಕೆ ಮಾಡಿದ ವಿಮಾ ಮೊತ್ತದ ಆಧಾರದ ಮೇಲೆ ನಿಗದಿತ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ.

ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್

ಪಾಲಿಸಿ ಅವಧಿಯಲ್ಲಿ ಬೇಸಿಕ್ ವಿಮಾ ಮೊತ್ತದ ಬರಿದಾಗುವಿಕೆಯ ನಂತರ, ವಿಮಾ ಮೊತ್ತದ 100% ಅನ್ನು ಪಾಲಿಸಿ ಅವಧಿಯಲ್ಲಿ ಒಂದು ಬಾರಿ ರಿಸ್ಟೋರ್ ಮಾಡಲಾಗುತ್ತದೆ.

ಸಹ-ಪಾವತಿ

ಪ್ರವೇಶದ ಸಮಯದಲ್ಲಿ 61 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಿಮೆದಾರರಿಗೆ ಹೊಸ ಮತ್ತು ನವೀಕರಣ ಪಾಲಿಸಿಗಳಿಗಾಗಿ ಈ ಪಾಲಿಸಿಯು ಪ್ರತಿ ಕ್ಲೈಮ್ ಮೊತ್ತದ 10% ರಷ್ಟು ಸಹ-ಪಾವತಿಗೆ ಒಳಪಟ್ಟಿರುತ್ತದೆ.

ಬಾರಿಯಾಟಿಕ್ ಶಸ್ತ್ರಚಿಕಿತ್ಸೆ

ಬಾರಿಯಾಟಿಕ್ ಶಸ್ತ್ರಚಿಕಿತ್ಸಾ ಕಾರ್ಯವಿಧಾನಗಳಿಗಾಗಿ ಆಸ್ಪತ್ರೆಯ ಖರ್ಚನ್ನು ರೂ. 2,50,000/- ದಿಂದ ರೂ. 5,00,000/- ವರೆಗೆ ಆಸ್ಪತ್ರೆಗೆ ದಾಖಲಾಗಿಸುವಿಕೆಯ ಪೂರ್ವ ಮತ್ತು ನಂತರದ ಖರ್ಚನ್ನು ಕವರ್ ಮಾಡಲಾಗುತ್ತದೆ.

ಆಯುಷ್ ಚಿಕಿತ್ಸೆ

ಆಯುಷ್ ಆಸ್ಪತ್ರೆಗಳಲ್ಲಿ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಪದ್ಧತಿಯ ಚಿಕಿತ್ಸೆಗಾಗಿ ತಗಲುವ ಖರ್ಚನ್ನು ನಿಗದಿತ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ.

ಹೊರರೋಗಿ ಸಮಾಲೋಚನೆ

ದಂತ ಮತ್ತು ನೇತ್ರ ಚಿಕಿತ್ಸೆಗಳನ್ನು ಹೊರತುಪಡಿಸಿ ಯಾವುದೇ ನೆಟ್‌ವರ್ಕ್ ಸೌಲಭ್ಯದಲ್ಲಿ ಉಂಟಾಗುವ ಹೊರರೋಗಿ ವೆಚ್ಚಗಳನ್ನು ಈ ಪಾಲಿಸಿಯಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ.

ಹೊರರೋಗಿ ಸಮಾಲೋಚನೆ - ದಂತ ಮತ್ತು ನೇತ್ರದ

ಹಲ್ಲಿನ ಮತ್ತು ನೇತ್ರ ಚಿಕಿತ್ಸೆಗಳಿಗೆ ಹೊರರೋಗಿ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. ವಿಮೆದಾರರು ಮೂರು ವರ್ಷಗಳ ಪ್ರತಿ ಬ್ಲಾಕ್ ನಂತರ ಈ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಅಂಗದಾನಿ ವೆಚ್ಚಗಳು

ದಾನಿಯಿಂದ ಸ್ವೀಕೃತಿದಾರ ವಿಮೆದಾರರ ಅಂಗಕಸಿಗಾಗಿ ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಗೆ ಉಂಟಾಗುವ ಖರ್ಚುಗಳನ್ನು ಕಸಿಯ ಕ್ಲೈಮ್ ಪಾವತಿಸಬಹುದಾದ್ದದ್ದು ಆಗಿದ್ದರೆ ಪಾವತಿಸಲಾಗುತ್ತದೆ.

ಆರೋಗ್ಯ ತಪಾಸಣೆ

ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಉಂಟಾಗುವ ಆರೋಗ್ಯ ತಪಾಸಣೆ ಖರ್ಚುಗಳನ್ನು ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ನಿಗದಿತ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ.

ಎರಡನೇ ವೈದ್ಯಕೀಯ ಸಮಾಲೋಚನೆ

ಕಂಪನಿಯ ವೈದ್ಯರ ನೆಟ್‌ವರ್ಕ್‌ನಲ್ಲಿರುವ ವೈದ್ಯರಿಂದ ವಿಮೆದಾರರು ಎರಡನೇ ವೈದ್ಯಕೀಯ ಸಮಾಲೋಚನೆಯನ್ನು ಪಡೆದುಕೊಳ್ಳಬಹುದಾಗಿದೆ. ವೈದ್ಯಕೀಯ ದಾಖಲೆಗಳನ್ನು e_medicalopinion@starhealth.in ಮೇಲ್ ಐಡಿಗೆ ಕಳುಹಿಸಬಹುದು.

ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮ

ವಿವಿಧ ಸ್ವಾಸ್ಥ್ಯ ಚಟುವಟಿಕೆಗಳ ಮೂಲಕ ವಿಮೆದಾರರ ಜೀವನಶೈಲಿ ಆರೋಗ್ಯಕರವಾಗಿರುವಂತೆ ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ಸ್ವಾಸ್ಥ್ಯ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಹಾಗೆಯೇ, ಗಳಿಸಿದ ಸ್ವಾಸ್ಥ್ಯ ಬೋನಸ್ ಪಾಯಿಂಟ್‌ಗಳನ್ನು ನವೀಕರಣ ರಿಯಾಯಿತಿಗಳನ್ನು ಪಡೆಯಲು ಬಳಸಿಕೊಳ್ಳಬಹುದು. ಕಂತು ಆಯ್ಕೆಗಳು

ಕಂತು ಆಯ್ಕೆಗಳು

ಪಾಲಿಸಿ ಪ್ರೀಮಿಯಂ ಅನ್ನು ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು. ಇದನ್ನು ವಾರ್ಷಿಕ, ದ್ವೈವಾರ್ಷಿಕ (2 ವರ್ಷಗಳಿಗೊಮ್ಮೆ) ಮತ್ತು ತ್ರೈವಾರ್ಷಿಕ (3 ವರ್ಷಗಳಿಗೊಮ್ಮೆ) ಆಧಾರದ ಮೇಲೆ ಪಾವತಿಸಬಹುದು.
ಪಾಲಿಸಿ ವಿವರಗಳು ಹಾಗೂ ಕರಾರುಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ದಾಖಲೆಯನ್ನು ಓದಿ.
ಸ್ಟಾರ್ ಹೆಲ್ತ್

ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಏಕೆ ನಮ್ಮ ಆಯ್ಕೆಯಾಗಿರಬೇಕು?

ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.

ನಮ್ಮ ಗ್ರಾಹಕರು

ಸ್ಟಾರ್ ಹೆಲ್ತ್ ಜೊತೆಗೆ ‘ಸಂತೋಷದಾಯಕ ವಿಮಾದಾರರು!’ ಆಗಿದ್ದಾರೆ

ನಿಮ್ಮ ಸಮಯ ಮತ್ತು ಹಣವನ್ನು ಉಳಿಸಲು ಮತ್ತು ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಕಂಡುಕೊಳ್ಳಲು ತುಂಬಾ ಕಷ್ಟಕರವಾಗಿಸುವ ತೊಂದರೆಗಳನ್ನು ತೊಡೆದುಹಾಕಲು ನಾವು ಬದ್ಧರಾಗಿದ್ದೇವೆ.

Customer Image
ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಿಂದ ಹೆಲ್ತ್ ಅನ್ನು ಖರೀದಿಸಲು ನನ್ನಸ್ನೇಹಿತರೊಬ್ಬರು ಹೇಳಿದ್ದರು ಹಾಗೂ ನನ್ನ ಮಗನ ಅನಾರೋಗ್ಯದ ಸಮಯದಲ್ಲಿ ಅದು ನನಗೆ ಸಹಾಯ ಮಾಡಿತು ಅವರ ನಗದು ರಹಿತ ಚಿಕಿತ್ಸಾ ಸೌಲಭ್ಯವು ಆ ಸಮಯದಲ್ಲಿ ಸಹಾಯಕವಾಗಿತ್ತು. ಅವರ ಸೇವೆ ಮತ್ತು ಬೆಂಬಲವನ್ನುನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ

ಟಿಜಿ ಕೆ ಉಮ್ಮನ್

ತಿರುವನಂತಪುರಂ

ವಿಮಾದಾರರಾಗಿ
Customer Image
ನಾನು ಕಳೆದ 8 ವರ್ಷಗಳಿಂದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿದ್ದೇನೆ ಮತ್ತು ಆ ಸಮಯದಲ್ಲಿ ಎರಡು ಕ್ಲೈಮ್‌ಗಳಿಗೆ ಅರ್ಜಿ ಸಲ್ಲಿಸಿದ್ದೇನೆ. ಎರಡೂ ಕ್ಲೈಮ್‌ಗಳು ಇತ್ಯರ್ಥಗೊಂಡಿವೆ ಮತ್ತು ನಾನು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಕಂಪನಿಯಿಂದ ಉತ್ತಮ ಬೆಂಬಲವನ್ನು ಪಡೆದಿದ್ದೇನೆ.

ವಾಣಿಶ್ರೀ

ಬೆಂಗಳೂರು

ವಿಮಾದಾರರಾಗಿ
Customer Image
ನನ್ನ ಕುಟುಂಬವು 2006 ರಿಂದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿದೆ. ಕಳೆದ ತಿಂಗಳು ನಾವು ಅರ್ಜಿ ಸಲ್ಲಿಸಿದ ನಮ್ಮ ಕ್ಲೈಮ್ ಅನ್ನು ಯಾವುದೇ ತೊಂದರೆಯಿಲ್ಲದೆ ಇತ್ಯರ್ಥಗೊಳಿಸಲಾಗಿದೆ. ನಾವು ಅಂತಹ ಸೇವಾ ಪೂರೈಕೆದಾರರ ಭಾಗವಾಗಿರುವುದಕ್ಕೆ ನಮಗೆ ಸಂತೋಷವಾಗಿದೆ.

ರಾಮಚಂದ್ರನ್

ಚೆನ್ನೈ

ವಿಮಾದಾರರಾಗಿ
Customer Image
ನನಗೆ ಅಗತ್ಯವಿದ್ದಾಗ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನನಗೆ ಸಾಕಷ್ಟು ಸಹಾಯ ಮಾಡಿತು. ನನ್ನ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ನನಗೆ ನಗದು ರಹಿತ ಚಿಕಿತ್ಸೆಯನ್ನು ಒದಗಿಸಿದ ಸ್ಟಾರ್‌ನ ಸಮಗ್ರ ನೀತಿಯ ಅಡಿಯಲ್ಲಿ ನಾನು ಕವರೇಜ್ ಪಡೆದಿದ್ದೇನೆ.

ಶೈಲಾ ಗಣಾಚಾರಿ

ಮುಂಬೈ

ವಿಮಾದಾರರಾಗಿ
Customer Image
ನಾನು ಕಳೆದ 7-8 ವರ್ಷಗಳಿಂದ ಮೆಡಿಕ್ಲೈಮ್ ಸೇವೆಗಳನ್ನು ಬಳಸುತ್ತಿದ್ದೇನೆ. ನಾನು ಇತರ ಕಂಪನಿಗಳನ್ನು ಪ್ರಯತ್ನಿಸಿದೆ. ಆದರೆ, ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನನಗೆ ಒದಗಿಸಿದ ಸೇವೆಯಿಂದ ನಾನು ತೃಪ್ತನಾಗಿದ್ದೇನೆ, ಅವರು ಸ್ನೇಹಪರ ಬೆಂಬಲ ಸಿಬ್ಬಂದಿಯನ್ನು ಸಹ ಹೊಂದಿದ್ದಾರೆ.

ಸುಧೀರ್ ಭಾಯಿಜಿ

ಇಂದೋರ್

ವಿಮಾದಾರರಾಗಿ
user
ಟಿಜಿ ಕೆ ಉಮ್ಮನ್
ತಿರುವನಂತಪುರಂ

ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಿಂದ ಹೆಲ್ತ್ ಅನ್ನು ಖರೀದಿಸಲು ನನ್ನಸ್ನೇಹಿತರೊಬ್ಬರು ಹೇಳಿದ್ದರು ಹಾಗೂ ನನ್ನ ಮಗನ ಅನಾರೋಗ್ಯದ ಸಮಯದಲ್ಲಿ ಅದು ನನಗೆ ಸಹಾಯ ಮಾಡಿತು ಅವರ ನಗದು ರಹಿತ ಚಿಕಿತ್ಸಾ ಸೌಲಭ್ಯವು ಆ ಸಮಯದಲ್ಲಿ ಸಹಾಯಕವಾಗಿತ್ತು. ಅವರ ಸೇವೆ ಮತ್ತು ಬೆಂಬಲವನ್ನುನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ

user
ವಾಣಿಶ್ರೀ
ಬೆಂಗಳೂರು

ನಾನು ಕಳೆದ 8 ವರ್ಷಗಳಿಂದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿದ್ದೇನೆ ಮತ್ತು ಆ ಸಮಯದಲ್ಲಿ ಎರಡು ಕ್ಲೈಮ್‌ಗಳಿಗೆ ಅರ್ಜಿ ಸಲ್ಲಿಸಿದ್ದೇನೆ. ಎರಡೂ ಕ್ಲೈಮ್‌ಗಳು ಇತ್ಯರ್ಥಗೊಂಡಿವೆ ಮತ್ತು ನಾನು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಕಂಪನಿಯಿಂದ ಉತ್ತಮ ಬೆಂಬಲವನ್ನು ಪಡೆದಿದ್ದೇನೆ.

user
ರಾಮಚಂದ್ರನ್
ಚೆನ್ನೈ

ನನ್ನ ಕುಟುಂಬವು 2006 ರಿಂದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿದೆ. ಕಳೆದ ತಿಂಗಳು ನಾವು ಅರ್ಜಿ ಸಲ್ಲಿಸಿದ ನಮ್ಮ ಕ್ಲೈಮ್ ಅನ್ನು ಯಾವುದೇ ತೊಂದರೆಯಿಲ್ಲದೆ ಇತ್ಯರ್ಥಗೊಳಿಸಲಾಗಿದೆ. ನಾವು ಅಂತಹ ಸೇವಾ ಪೂರೈಕೆದಾರರ ಭಾಗವಾಗಿರುವುದಕ್ಕೆ ನಮಗೆ ಸಂತೋಷವಾಗಿದೆ.

user
ಶೈಲಾ ಗಣಾಚಾರಿ
ಮುಂಬೈ

ನನಗೆ ಅಗತ್ಯವಿದ್ದಾಗ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನನಗೆ ಸಾಕಷ್ಟು ಸಹಾಯ ಮಾಡಿತು. ನನ್ನ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ನನಗೆ ನಗದು ರಹಿತ ಚಿಕಿತ್ಸೆಯನ್ನು ಒದಗಿಸಿದ ಸ್ಟಾರ್‌ನ ಸಮಗ್ರ ನೀತಿಯ ಅಡಿಯಲ್ಲಿ ನಾನು ಕವರೇಜ್ ಪಡೆದಿದ್ದೇನೆ.

user
ಸುಧೀರ್ ಭಾಯಿಜಿ
ಇಂದೋರ್

ನಾನು ಕಳೆದ 7-8 ವರ್ಷಗಳಿಂದ ಮೆಡಿಕ್ಲೈಮ್ ಸೇವೆಗಳನ್ನು ಬಳಸುತ್ತಿದ್ದೇನೆ. ನಾನು ಇತರ ಕಂಪನಿಗಳನ್ನು ಪ್ರಯತ್ನಿಸಿದೆ. ಆದರೆ, ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನನಗೆ ಒದಗಿಸಿದ ಸೇವೆಯಿಂದ ನಾನು ತೃಪ್ತನಾಗಿದ್ದೇನೆ, ಅವರು ಸ್ನೇಹಪರ ಬೆಂಬಲ ಸಿಬ್ಬಂದಿಯನ್ನು ಸಹ ಹೊಂದಿದ್ದಾರೆ.

ಬೇರೆ ಏನನ್ನಾದರೂ ಹುಡುಕುತ್ತಿದ್ದೀರಾ?

ಪ್ರಾರಂಭಿಸಿ

ಅತ್ಯುತ್ತಮವಾದುದರ ಖಾತರಿ ಹೊಂದಿರಿ

ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.

Contact Us
ಹೆಚ್ಚಿನ ಮಾಹಿತಿ ಬೇಕೆ?
Get Insured
ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?