Star Health Logo
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್

ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ನಿಮ್ಮ ಪೋಷಕರಿಗೆ ಪ್ರೀತಿ, ಕಾಳಜಿ ಮತ್ತು ಬೆಂಬಲವನ್ನು ಮರಳಿ ನೀಡಲು ಸುವರ್ಣ ಅವಕಾಶ.

ಸ್ಟಾರ್ ಹೆಲ್ತ್‌ನಲ್ಲಿ ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ನಿರ್ದಿಷ್ಟವಾಗಿ ವೈದ್ಯಕೀಯ ಚಿಕಿತ್ಸಾ ವೆಚ್ಚಗಳು ಮತ್ತು ಆರೋಗ್ಯ ಸಮಸ್ಯೆಗಳು ಹಾಗೂ ವಯಸ್ಸಿನ ಕಾರಣದಿಂದ ತೀವ್ರವಾಗಿ ಕಾಡುವ ಕಾಯಿಲೆಗಳಿಗೆ ತಗಲುವ ಆಸ್ಪತ್ರೆ ದಾಖಲಾತಿ ವೆಚ್ಚಗಳಿಗಾಗಿ ಸಮಗ್ರ ಕವರೇಜ್ ಅನ್ನು ಒದಗಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಇದು ವಯಸ್ಕರಿಗೆ ಹೆಚ್ಚಿನ ವಿಮಾ ಮೊತ್ತವನ್ನು ಒದಗಿಸುತ್ತದೆ ಮತ್ತು ನಗದು ರಹಿತ ಚಿಕಿತ್ಸಾ ಸೌಲಭ್ಯಗಳು, ವಾರ್ಷಿಕ ಆರೋಗ್ಯ ತಪಾಸಣೆ, ಮೊದಲೇ ಅಸ್ತಿತ್ವದಲ್ಲಿರುವ ರೋಗಗಳಿಗೆ ರಕ್ಷಣೆ ಮತ್ತು ಇನ್ನೂ ಹೆಚ್ಚಿನ ವರ್ಧಿತ ಪ್ರಯೋಜನಗಳನ್ನು ನೀಡುತ್ತದೆ.

*I hereby authorise Star Health Insurance to contact me. It will override my registry on the NCPR.

ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು

 

ಸುಲಲಿತ ವೃದ್ಧಾಪ್ಯವು ಆರೋಗ್ಯಕರ ಮನಸ್ಸು, ದೇಹ ಮತ್ತು ಚೈತನ್ಯಕ್ಕೆ ಪ್ರಮುಖ ಮಾರ್ಗದರ್ಶಿಯಾಗಿದೆ. ವಯಸ್ಸಾದ ವ್ಯಕ್ತಿಯು ಆರೋಗ್ಯ ಸಮಸ್ಯೆಯನ್ನು ಎದುರಿಸುವ ಸಾಧ್ಯತೆಯು ಹೆಚ್ಚು. ವಯಸ್ಕರಲ್ಲಿ ಕಣ್ಣಿನ ಪೊರೆ, ಬೆನ್ನು, ಕುತ್ತಿಗೆ ನೋವು, ಸಂಧಿವಾತ, ಮಧುಮೇಹ, ಖಿನ್ನತೆ ಮತ್ತು ಬುದ್ಧಿಮಾಂದ್ಯತೆಯನ್ನು ಎದುರಿಸಬಹುದು ಎಂದು WHO ಹೇಳುತ್ತದೆ. ಇರುವ ಯಾವುದೇ ವೈದ್ಯಕೀಯ ತೊಡಕುಗಳ ಹೊರತಾಗಿಯೂ ನಿಮ್ಮ ಪೋಷಕರಿಗೆ ಉತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಮತ್ತು ಉಳಿತಾಯವನ್ನು ಉಡುಗೊರೆಯಾಗಿ ನೀಡಿ.

 

ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಏಕೆ ಬೇಕು?

 

ಸರಿಸುಮಾರು ತಮ್ಮ 60 ರ ವಯಸ್ಸಿನಲ್ಲಿ ಜನರು ಕೆಲವು ವೈದ್ಯಕೀಯ ಕಾಯಿಲೆಗಳಿಂದ ಬಳಲುತ್ತಾರೆ. ಇಂದು ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳೊಂದಿಗೆ, ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಪಡೆಯುವುದು ಹೆಚ್ಚು ಅವಶ್ಯಕವಾಗಿದೆ ಮತ್ತು ಆದ್ಯತೆಯ ವಿಷಯವಾಗಿದೆ. ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ನಿಮ್ಮ ಪೋಷಕರಿಗೆ ಯಾವುದೇ ವೈದ್ಯಕೀಯ ಅನಿರೀಕ್ಷಿತ ಪರಿಸ್ಥಿತಿಗಳಿಗೆ ಸನ್ನದ್ಧರಾಗಲು ಸಹಾಯ ಮಾಡುತ್ತದೆ ಹಾಗೂ ಸಕಾಲಿಕ ಆರೈಕೆ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ಖಚಿತವಾಗಿ ಒದಗಿಸುತ್ತದೆ. ನಿಮ್ಮ ಪೋಷಕರು ಈಗಿನಿಂದಲೇ ಏಕೆ ಹೆಲ್ತ್ ಇನ್ಶೂರೆನ್ಸ್ ಪಡೆಯಬೇಕು ಎಂಬುದನ್ನು ಈ ಕೆಳಗಿನ ಪ್ರಮುಖ ಅಂಶಗಳಿಂದ ಅರ್ಥಮಾಡಿಕೊಳ್ಳಬಹುದು:

 

ಆರ್ಥಿಕ ಸ್ವಾತಂತ್ರ್ಯ

 

ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ, ನಿಮ್ಮ ಬಿಲ್‌ಗಳನ್ನು ಕುಟುಂಬ ಸದಸ್ಯರ ಮೇಲೆ ಅವಲಂಬಿತರಾಗಿದೇ ನೀವೇ ಭರಿಸಲು ಬಯಸುತ್ತೀರಿ. ಹೆಲ್ತ್ ಇನ್ಶೂರೆನ್ಸ್ ಸಹಾಯದಿಂದ ನೀವಿದನ್ನು ಮಾಡಬಹುದು. ಹೆಲ್ತ್ ಇನ್ಶೂರೆನ್ಸ್ ಆರ್ಥಿಕ ಅಪಾಯ ನಿರ್ವಹಣಾ ಸಾಧನವಾಗಿದ್ದು ಅಲ್ಲಿನ ಅಪಾಯವನ್ನು ಜನರ ಗುಂಪಿಗೆ ವರ್ಗಾಯಿಸಲಾಗುತ್ತದೆ. ಈ ರೀತಿಯಲ್ಲಿ, ನಿಮ್ಮ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ನೀವು ಬೇರೆಯವರ ಮೇಲೆ ಅವಲಂಬಿತರಾಗಬೇಕಿಲ್ಲ.

 

ನಿಮ್ಮ ಉಳಿತಾಯವನ್ನು ಅಬಾಧಿತವಾಗಿರಿಸಿಕೊಳ್ಳಿ

 

ಆರಾಮದಾಯಕ ನಿವೃತ್ತಿಯನ್ನು ಹೊಂದಲು ಅನೇಕ ವರ್ಷಗಳ ಉಳಿತಾಯದ ಅಗತ್ಯವಿದೆ. ದಶಕಗಳಿಂದ ಕೂಡಿದ ಸಂಪತ್ತು ಕೇವಲ ಆಸ್ಪತ್ರೆಯಲ್ಲಿಯೇ ಖಾಲಿಯಾಗಬಹುದು. ಈಗಾಗುವುದನ್ನು ತಡೆಯಲು ನೀವು ಬಯಸುತ್ತೀರಾದರೆ, ನೀವು ಮಾಡಬೇಕಾಗಿರುವುದು ಹಿರಿಯ ನಾಗರಿಕರ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ನಲ್ಲಿ ಹೂಡಿಕೆ ಮಾಡುವುದು 

 

ಇದು ಆದಾಯದ ಕೊರತೆಯನ್ನು ನೀಗಿಸುತ್ತದೆ 

 

ನಿಮ್ಮ ಪಿಂಚಣಿಯ ಮೂಲಕ ವೈದ್ಯಕೀಯ ಬಿಲ್‌ಗಳನ್ನು ಸರಿಹೊಂದಿಸುವುದು ಕಷ್ಟಸಾಧ್ಯವಾದ ಕೆಲಸ. ನಿಮ್ಮ ಕಡೆಯ ಹಿರಿಯ ನಾಗರಿಕರಿಗೆ ವೈದ್ಯಕೀಯ ಇನ್ಶೂರೆನ್ಸ್‌ನೊಂದಿಗೆ ನೀವು ಅಂತಹ ಯಾವುದರ ಕುರಿತೂ ಸಹ ಚಿಂತಿಸುವ ಅಗತ್ಯವಿಲ್ಲ. ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ ನಿಮ್ಮ ವೆಚ್ಚಗಳನ್ನು ಕಡಿಮೆ ಮಾಡಲು ಈ ಪಾಲಿಸಿಯು ನಿಮಗೆ ಸಹಾಯ ಮಾಡುತ್ತದೆ.

 

ನಿಮ್ಮ ಯೋಜನೆಗಳು ಸರಿಯಾದ ಹಾದಿಯಲ್ಲಿ ಸಾಗುತ್ತವೆ

 

ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಅನೇಕ ವರ್ಷಗಳ ಉಳಿತಾಯದ ಮೂಲಕ ತಮ್ಮ ನಿವೃತ್ತಿ ಜೀವನದ ಕನಸನ್ನು ಕಾಣುತ್ತಾರೆ. ನೀವು ಇಡೀ ಪ್ರಪಂಚದ ಪ್ರವಾಸವನ್ನು ಕೈಗೊಳ್ಳಲು ಬಯಸಬಹುದು ಅಥವಾ ನಿಮ್ಮ ಹಿಂದಿನ ಆಸೆಯಂತೆಯೇ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಬಹುದು. ಹಿರಿಯರ ಹೆಲ್ತ್ ಇನ್ಶೂರೆನ್ಸ್ ನಿಮ್ಮ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ. ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ ನೀವು ಸಂಪೂರ್ಣವಾಗಿ ರಕ್ಷಣೆ ಪಡೆಯುತ್ತೀರಿ ಎಂದು ಇದು ಖಚಿತಪಡಿಸುತ್ತದೆ.

 

ಪೋಷಕರಿಗೆ ಸರಿಯಾದ ಹೆಲ್ತ್ ಇನ್ಶೂರೆನ್ಸ್ ಅನ್ನು ಹೇಗೆ ಆಯ್ದುಕೊಳ್ಳಬೇಕು?

 

ವಯಸ್ಸಿನ ಹೆಚ್ಚಾದಂತೆ ಸಾಮಾನ್ಯವಾಗಿ ಅನಾರೋಗ್ಯವು ಕಾಡಲು ಪ್ರಾರಂಭವಾಗುತ್ತದೆ. ಅಲ್ಲದೆ, ಸಮಯದೊಂದಿಗೆ ವೈದ್ಯಕೀಯ ಹಣದುಬ್ಬರವು ನಿಮ್ಮ ಉಳಿತಾಯವನ್ನು ಅಪಾಯದಲ್ಲಿರಿಸುತ್ತದೆ. ಈ ಬಿಕ್ಕಟ್ಟಿನಲ್ಲಿ, ನಿಮ್ಮ ಪೋಷಕರಿಗೆ ಸರಿಯಾದ ಮತ್ತು ಉತ್ತಮವಾದ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಯಾವಾಗಲೂ ಒಳ್ಳೆಯ ಆಯ್ಕೆಯಾಗಿದೆ. ನಿಮ್ಮ ವೃದ್ಧಾಪ್ಯದಲ್ಲಿಯೂ ನೀವು ಮನಶ್ಶಾಂತಿಯನ್ನು ಪಡೆಯಬಹುದು. ಹೀಗಾಗಿ, ನಿಮ್ಮ ಪೋಷಕರಿಗೆ ಸರಿಯಾದ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆ ಮಾಡಲು ಸಹಾಯವಾಗುವ ಕೆಲವು ಉಪಯುಕ್ತ ಮತ್ತು ಪರಿಣಾಮಕಾರಿ ಸಲಹೆಗಳನ್ನು ಕೆಳಗಿನ ಲಿಸ್ಟ್ ಒಳಗೊಂಡಿರುತ್ತದೆ.

 

ಸಾಕಷ್ಟು ಕವರೇಜ್‌ಗಾಗಿ ಆಯ್ಕೆ ಮಾಡಿ

 

ಕವರ್‌ಗೆ ಯಾವುದೇ ಮಿತಿಯಲ್ಲ, ಆದರೆ ನಿಮ್ಮ ಆರ್ಥಿ ಪರಿಸ್ಥಿತಿಗೆ ಅನುಗುಣವಾಗಿ, ನೀವು ಪಾವತಿಸಿದ ಪ್ರೀಮಿಯಂಗೆ ಮೌಲ್ಯಮಾಪನ ಮಾಡಬೇಕಾದ ಗರಿಷ್ಠ ವ್ಯಾಪ್ತಿಯನ್ನು ಯಾವ ಕಂಪನಿಯು ಒದಗಿಸುತ್ತದೆ ಎಂಬುದನ್ನು ನೀವು ನೋಡಬೇಕು. ಉತ್ತಮ ಮೌಲ್ಯಕ್ಕಾಗಿ ನಿಮ್ಮ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವ ಮೊದಲು ಸರಿಯಾಗಿ ಪರಿಶೀಲಿಸಿ.

 

ಹೊಂದಿಕೊಳ್ಳುವಿಕೆ

 

ಅನೇಕ ರೀತಿಯ ಪಾಲಿಸಿಗಳಿವೆ ಮತ್ತು ಇವುಗಳಲ್ಲಿ ಪ್ರತಿಯೊಂದೂ ವಿಭಿನ್ನ ಹೊಂದಿಕೊಳ್ಳುವಿಕೆಯ (ಫ್ಲೆಕ್ಸಿಬಿಲಿಟಿ) ಆಯ್ಕೆಗಳನ್ನು ಹೊಂದಿವೆ. ಕವರೇಜ್, ಅವಧಿ, ಆ್ಯಡ್-ಆನ್‌ಗಳು, ವಿಮಾಮೊತ್ತ ಇತ್ಯಾದಿಗಳ ವಿಷಯದಲ್ಲಿ ನಿಮಗೆ ಗಣನೀಯ ಹೊಂದಿಕೊಳ್ಳುವಿಕೆಯನ್ನು ನೀಡುವ ರೀತಿಯ ಪಾಲಿಸಿಯನ್ನು ಆಯ್ದುಕೊಳ್ಳಿ.

 

ಸಹ-ಪಾವತಿಗಳು

 

ಕಡಿಮೆ ಸಹ-ಪಾವತಿ ರಚನೆಯನ್ನು ಆರಿಸಿಕೊಳ್ಳುವುದು ಯಾವಾಗಲೂ ಉತ್ತಮ. ಸಹ-ಪಾವತಿಗಳು ನಿಮ್ಮ ಪಾಲಿಸಿಯನ್ನು ಆರ್ಥಿಕ ಮತ್ತು ಕೈಗೆಟಕುವಂತೆ ಮಾಡುತ್ತದೆ.

 

ಪೂರ್ವಾಸ್ತಿತ್ವದಲ್ಲಿರುವ ಅನಾರೋಗ್ಯದ ಕವರೇಜ್ ಆಗುತ್ತದೆಯೇ ಎಂಬುದನ್ನು ನೋಡಿ

 

ಪೂರ್ವಾಸ್ತಿತ್ವದಲ್ಲಿರುವ ಅನಾರೋಗ್ಯವು ಕನಿಷ್ಠ ಅವಧಿಯೊಂದಿಗೆ ಕವರ್ ಆಗಬೇಕು. ಉದಾಹರಣೆಗೆ, 1 ವರ್ಷ ಅಥವಾ 6 ತಿಂಗಳುಗಳು. ಪಾಲಿಸಿಯು ನಿಮ್ಮ ಪೂರ್ವಾಸ್ತಿತ್ವದಲ್ಲಿರುವ ರೋಗಗಳು ಮತ್ತು ಅವುಗಳ ತೊಡಕುಗಳನ್ನು ಒಳಗೊಂಡಿದೆಯೇ ಎಂಬುದನ್ನು ಪರಿಶೀಲಿಸಿ. ಕೆಲವು ಪಾಲಿಸಿಗಳಲ್ಲಿ ಈ ಆಯ್ಕೆಯಿರುವುದಿಲ್ಲವಾದ್ದರಿಂದ ಈ ಆಯ್ಕೆಯನ್ನು ಹೊಂದಿರುವ ಪಾಲಿಸಿಯನ್ನು ಆಯ್ದುಕೊಳ್ಳಿ.

 

ನವೀಕರಣದ ವಯಸ್ಸು

 

ಇದು ಪಾಲಿಸಿ ಮತ್ತು ಗ್ರಾಹಕರ ಮೇಲೆ ಅವಲಂಬಿತವಾಗಿದೆ, ಆದರೆ 'ಜೀವನಪರ್ಯಂತ ನವೀಕರಣ' ನೀಡುವ ಇಂತಹ ಕಂಪನಿಗಳಿವೆ. ನೀಡಿರುವ ಆಯ್ಕೆಗಳಿಂದ ವಿಮಾಗಾರರನ್ನು ಆಯ್ದುಕೊಳ್ಳಿ.

 

ಕ್ಲೈಮ್ ಮಾಡುವ ಕಾರ್ಯವಿಧಾನ

 

ನಿಮ್ಮ ಪಾಲಿಸಿಯು ಅನುಸರಣಾ ಸರಳ ಕ್ಲೈಮ್ ಕಾರ್ಯವಿಧಾನವನ್ನು ಹೊಂದಿದೆಯೇ ಪರೀಕ್ಷಿಸಿಕೊಳ್ಳಿ. ಕ್ಲೈಮ್ ಪ್ರಕ್ರಿಯೆಯಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಮೊದಲು ಪ್ರಕ್ರಿಯೆಯ ಬಗ್ಗೆ ಮುಂಚಿತವಾಗಿ ವಿವರಣೆಯನ್ನು ಪಡೆಯಿರಿ ಇಲ್ಲದಿದ್ದರೆ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

 

ಶಿಫಾರಸು ಮಾಡಲಾದ ಪೋಷಕರ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್

 

ಪೋಷಕರ ಹೆಲ್ತ್ ಇನ್ಶೂರೆನ್ಸ್ ರಕ್ಷಣೆಯನ್ನು ವಯಸ್ಸಿನ ಆಧಾರದ ಮೇಲೆ ವರ್ಗೀಕರಿಸಬಹುದು - 60 ವರ್ಷಕ್ಕಿಂತ ಕಡಿಮೆ |  60 ವರ್ಷಕ್ಕಿಂತ ಮೇಲ್ಪಟ್ಟು. ಸ್ಟಾರ್ ಹೆಲ್ತ್ ‌ನಲ್ಲಿ ಪೋಷಕರಿಗೆ ಶಿಫಾರಸು ಮಾಡಲಾದ ಕೆಲವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಈ ಕೆಳಗಿನಂತಿವೆ:

 

ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ

 

ಸ್ಟಾರ್‌ನ ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್  ಇನ್ಶೂರೆನ್ಸ್ ಪಾಲಿಸಿಯು 60 ರಿಂದ 75 ವರ್ಷ ವಯಸ್ಸಿನ ಹಿರಿಯರಿಗೆ ಕೈಗೆಟಕುವ ಆರೋಗ್ಯ ವಿಮೆಯ ರಕ್ಷಣೆಯನ್ನು ಒದಗಿಸುತ್ತದೆ. ಈ ಪಾಲಿಸಿಯು ಜೀವನಪರ್ಯಂತ ನವೀಕರಣ ಆಯ್ಕೆಯನ್ನು ಹೊಂದಿದೆ, ಇದು ಡೇಕೇರ್ ಕಾರ್ಯವಿಧಾನಗಳು ಮತ್ತು ಚಿಕಿತ್ಸೆಗಳು, ಪೂರ್ವಾಸ್ತಿತ್ವದಲ್ಲಿರುವ ರೋಗಗಳು, ಆಧುನಿಕ ಚಿಕಿತ್ಸೆಗಳು ಮತ್ತು ವಯಸ್ಸಾದರವರಿಗೆ ಅಗತ್ಯವಾಗಿರಬಹುದಾದ ಪ್ರಮುಖ ವೈದ್ಯಕೀಯ ಮಧ್ಯಸ್ಥಿಕೆಗಳನ್ನು ಒಳಗೊಂಡಿದೆ.

 

ಸಾಮಾನ್ಯವಾಗಿ, ವಯಸ್ಸು ಹೆಚ್ಚಾದಂತೆ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಹೆಚ್ಚಿಸಲಾಗುತ್ತದೆ. ಆದಾಗ್ಯೂ ಈ ಪಾಲಿಸಿಯು ವಯಸ್ಸಿನ ಹೊರತಾಗಿಯೂ ನಿರಂತರ ಪ್ರೀಮಿಯಂ ಅನ್ನು ನೀಡುತ್ತದೆ.  ನಿಮ್ಮ ಪೋಷಕರಿಗೆ ಅವರು ನಿಮಗೆ ನೀಡಿದ ಬೆಂಬಲ ಮತ್ತು ಪ್ರೀತಿಯನ್ನು ನೀಡಿ. ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನೀಡುವ ಮೂಲಕ ನಿಮ್ಮ ಪೋಷಕರು ತಮ್ಮ ಇಳಿವಯಸ್ಸಿನಲ್ಲಿ ಸರಿಯಾದ ರಕ್ಷಣೆ ಮತ್ತು ಕಾಳಿಜಿಯನ್ನು ಪಡೆಯುತ್ತಾರೆ ಮತ್ತು 80D ಅಡಿಯಲ್ಲಿ ನೀವು ತೆರಿಗೆ ವಿನಾಯಿತಿಗಳನ್ನು ಪಡೆದುಕೊಳ್ಳಿ.

 

ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗುತ್ತವೆ?

 

ವೃದ್ಧರಿಗೆ ವೈದ್ಯಕೀಯ ವೆಚ್ಚಗಳು ಹೆಚ್ಚಾಗುತ್ತಿವೆ. ಹಿರಿಯ ನಾಗರಿಕರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ವಿಮೆ ಮಾಡಿಸುವುದರಿಂದ ನಿಮ್ಮ ಆರ್ಥಿಕತೆಯನ್ನು ಹಾಗೆಯೇ ಇರಿಸಿಕೊಳ್ಳಿ ಮತ್ತು ಯಾವುದೇ ತೊಂದರೆಯಿಲ್ಲದೆ ಸಕಾಲಿಕ ಚಿಕಿತ್ಸೆಯನ್ನು ಪಡೆಯಿರಿ. ಈ ಪಾಲಿಸಿಯ ಅಡಿಯಲ್ಲಿ ನೀಡಲಾಗುವ ಪ್ರಮುಖ ಕವರೇಜ್‌ಗಳು ಈ ಕೆಳಗಿನಂತಿವೆ:

 

  • ICU ವೆಚ್ಚಗಳು, ನರ್ಸಿಂಗ್ ವೆಚ್ಚಗಳು, ಶಸ್ತ್ರ ಚಿಕಿತ್ಸಕರ ವೆಚ್ಚಗಳು, ತಜ್ಞರ ವೆಚ್ಚಗಳು, ರಕ್ತ, ಆಮ್ಲಜನಕ, ಔಷಧಿಗಳ ವೆಚ್ಚ, ರೋಗನಿರ್ಣಯ ಇತ್ಯಾದಿಗಳಂತಹ ಒಳರೋಗಿ ಆಸ್ಪತ್ರೆ ಶುಲ್ಕಗಳನ್ನು ಇದು ಒಳಗೊಂಡಿದೆ
  • ಆಸ್ಪತ್ರೆಗೆ ದಾಖಲಾದ ನಂತರ ಮತ್ತು ಮೊದಲಿನ ವೆಚ್ಚಗಳು
  • ತುರ್ತು ಸಾರಿಗೆ ಶುಲ್ಕಗಳು (ಆ್ಯಂಬ್ಯುಲೆನ್ಸ್)
  • ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಹೊರರೋಗಿ ಸಮಾಲೋಚನೆ
  • ಭಾರತದಾದ್ಯಂತ ನೆಟ್‌ವರ್ಕ್/ನೆಟ್‌ವರ್ಕ್ ಅಲ್ಲದ ಆಸ್ಪತ್ರೆಗಳಲ್ಲಿ ಚಿಕಿತ್ಸೆ
  • ಮನೆಯಲ್ಲಿಯೇ ಚಿಕಿತ್ಸೆ
  • ಆಧುನಿಕ ಚಿಕಿತ್ಸೆ
  • ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ
  • ಪೂರ್ವಾಸ್ತಿತ್ವದಲ್ಲಿರುವ ರೋಗಗಳಿಗೆ ಕವರೇಜ್
  • ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ವಾರ್ಷಿಕ ಆರೋಗ್ಯ ತಪಾಸಣೆಗಾಗಿ ಕವರೇಜ್
  • ಇನ್-ಹೌಸ್ ಕ್ಲೈಮ್ ಸೆಟಲ್‌ಮೆಂಟ್

 

ಯಾವುದೇ ಕವರ್ ಆಗುವುದಿಲ್ಲ

 

ಕೆಳಗಿನ ಚಿಕಿತ್ಸೆಗಳು/ಅನಾರೋಗ್ಯಗಳು ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಒಳಗೊಂಡಿರುವುದಿಲ್ಲ:

 

  1. ಭಾರತದ ಹೊರಗೆ ತೆಗೆದುಕೊಳ್ಳುವ ಚಿಕಿತ್ಸೆ
  2. ಸುನ್ನತಿ, ಲಿಂಗ-ಬದಲಾವಣೆ ಶಸ್ತ್ರ ಚಿಕಿತ್ಸೆ, ಕಾಸ್ಮೆಟಿಕ್ ಮತ್ತು ಪ್ಲಾಸ್ಟಿಕ್ ಸರ್ಜರಿ
  3. 7.5 ಡಯೋಪ್ಟರ್‌ಗಿಂತ ಕಡಿಮೆ ರಿಫ್ರಾಕ್ಟಿವ್ ದೋಷ ಸರಿಪಡಿಸುವಿಕೆ, ಶ್ರವಣ ದೋಷ ಸರಿಪಡಿಸುವಿಕೆ, ದಂತ ಕಸಿ.
  4. ಮಾದಕದ್ರವ್ಯಗಳ ಬಳಕೆ, ಸ್ವತಃ ಉಂಟುಮಾಡಿಕೊಂಡ ಗಾಯಗಳು, STDಗಳು
  5. ಅಪಾಯಕಾರಿ ಕ್ರೀಡೆಗಳು, ಯುದ್ಧ, ಭಯೋತ್ಪಾದನೆ, ಅಂತರ್ಯುದ್ಧ ಅಥವಾ ಕಾನೂನು ಉಲ್ಲಂಘನೆ
  6. ಯಾವುದೇ ರೀತಿಯ ಸೇವಾ ಶುಲ್ಕ, ಹೆಚ್ಚುವರಿ ಶುಲ್ಕ, ಪ್ರವೇಶ ಶುಲ್ಕಗಳು, ನೋಂದಣಿ ಶುಲ್ಕಗಳು, ಆಸ್ಪತ್ರೆಯಿಂದ ವಿಧಿಸಲಾದ ಗುರುತಿನ ಚೀಟಿ.

 

ವೇಟಿಂಗ್ ಅವಧಿಗಳು

 

ಅಪಘಾತಗಳ ಸಂದರ್ಭಗಳನ್ನು ಹೊರತುಪಡಿಸಿ ಎಲ್ಲಾ ಚಿಕಿತ್ಸೆಗಳಿಗೆ 30-ದಿನಗಳ ವೇಟಿಂಗ್ ಅವಧಿಯು ಅನ್ವಯಿಸುತ್ತದೆ.

 

ಪಾಲಿಸಿಯ ಪ್ರಾರಂಭದ ದಿನಾಂಕದಿಂದ 12 ತಿಂಗಳ ವೇಟಿಂಗ್ ಅವಧಿಯ ನಂತರ ಪಾಲಿಸಿಯು ಪೂರ್ವಾಸ್ತಿತ್ವದಲ್ಲಿರುವ ರೋಗಗಳನ್ನು ಒಳಗೊಂಡಿದೆ.

 

ಪಾಲಿಸಿಯ ದಾಖಲೆಗಳಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ರೋಗಗಳು ಪಾಲಿಸಿಯ ಪ್ರಾರಂಭದ ದಿನಾಂಕದಿಂದ 24 ತಿಂಗಳ ವೇಟಿಂಗ್ ಅವಧಿಯ ನಂತರ ಕವರ್ ಆಗುತ್ತವೆ.

 

ತೆರಿಗೆ ಪ್ರಯೋಜನಗಳು

 

ಆದಾಯ ತೆರಿಗೆ 1961 ರ ಸೆಕ್ಷನ್ 80D ಅಡಿಯಲ್ಲಿ ಪ್ರೀಮಿಯಂ ಮೊತ್ತದ ಮೇಲೆ ರೂ. 50000 ವರೆಗೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.

 

ಅರ್ಹತಾ ಮಾನದಂಡ

 

60-75 ವರ್ಷಗಳ ಗರಿಷ್ಠ ಪ್ರವೇಶ ಮಿತಿಯೊಂದಿಗೆ ವ್ಯಾಪಕ ವ್ಯಾಪ್ತಿಯನ್ನು ನೀಡುವ ಮೂಲಕ, ಸೀನಿಯರ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ವಯಸ್ಸಾದ ನಾಗರಿಕರಿಗೆ ಹೆಚ್ಚು ಶಿಫಾರಸು ಮಾಡಲಾದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಒಂದಾಗಿದೆ. ಇದು ಭಾರತದಲ್ಲಿ ಪರಿಚಯಿಸಲಾದ ಮೊದಲ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಒಂದಾಗಿದ್ದು ಹಿರಿಯರ ನಿರ್ದಿಷ್ಟ ಆರೋಗ್ಯ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಇದರ ಅರ್ಹತಾ ಮಾನದಂಡಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ:

 

  • ಪ್ರವೇಶ ವಯಸ್ಸು: 60 - 75 ವರ್ಷಗಳು
  • ನವೀಕರಣ: ಜೀವನಪರ್ಯಂತ
  • ವಿಮಾ ಮೊತ್ತದ ವ್ಯಾಪ್ತಿ: ರೂ.1 ಲಕ್ಷ - ರೂ. 25 ಲಕ್ಷಗಳು
  • ವೈದ್ಯಕೀಯ ಪರೀಕ್ಷೆಯ ಅವಶ್ಯಕತೆ: ಪಾಲಿಸಿಯನ್ನು ನೀಡುವ ಮೊದಲು ಯಾವುದೇ ಪೂರ್ವ ವಿಮಾ ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ.

 

ಸಹ-ಪಾವತಿ ಹೇಗೆ ಕಾರ್ಯನಿರ್ವಹಿಸುತ್ತದೆ

 

ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಯೋಜನೆಯು ಈ ಕೆಳಗಿನಂತೆ ಸಹ-ಪಾವತಿಗೆ ಒಳಪಟ್ಟಿರುತ್ತದೆ:

 

ಸಂಪೂರ್ಣ ವಿಮಾ ಮೊತ್ತಕ್ಕೆ ಸಹ-ಪಾವತಿಸ್ವೀಕಾರಾರ್ಹ ಕ್ಲೈಮ್‌ಗಾಗಿ 30%

 

ಉದಾಹರಣೆಗೆ:

 

  • ಎಲ್ಲಾ ವಿಮಾ ಮೊತ್ತಕ್ಕೆ -ಒಂದು ವೇಳೆ ಸ್ವೀಕಾರಾರ್ಹ ಕ್ಲೈಮ್ 1 ಲಕ್ಷ ಆಗಿದ್ದರೆ ಮತ್ತು ಅದು PED/ನಾನ್-ಪೆಡ್ ಕ್ಲೈಮ್ ಆಗಿದ್ದರೆ, 30000 (30%) ವಿಮೆದಾರರು ಭರಿಸಬೇಕಾಗುತ್ತದೆ. ಉಳಿದಿರುವ 70000 (70%) ಅನ್ನು ವಿಮಾಗಾರರು ಪಾವತಿಸುತ್ತಾರೆ.

 

ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ

 

ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯು ಸಮಗ್ರ ವ್ಯಾಪ್ತಿಯನ್ನು ಒದಗಿಸುತ್ತದೆ ಮತ್ತು ವೈದ್ಯಕೀಯ ತುರ್ತುಸ್ಥಿತಿಗಳ ಸಂದರ್ಭದಲ್ಲಿ ಆರ್ಥಿಕ ಸುರಕ್ಷತೆಯನ್ನು ನೀಡುತ್ತದೆ. ಈ ಪಾಲಿಸಿಯು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು 18 ರಿಂದ 65 ವರ್ಷ ವಯಸ್ಸಿನವರೆಗೆ ರಕ್ಷಣೆಯನ್ನು ಒಳಗೊಂಡಿರುತ್ತದೆ ಮತ್ತು ಜೀವನಪರ್ಯಂತ ನವೀಕರಣ ಆಯ್ಕೆಯನ್ನು ಹೊಂದಿದೆ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು 1 ಲಕ್ಷದಿಂದ 1 ಕೋಟಿಯವರೆಗಿನ ವಿಮಾ ಮೊತ್ತವನ್ನು ಆಯ್ಕೆ ಮಾಡಬಹುದು ಮತ್ತು ನೀವು ಕಂತುಗಳಲ್ಲಿ ಪ್ರೀಮಿಯಂ ಅನ್ನು ಪಾವತಿಸಬಹುದು.

 

ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಯಾವುದು ಕವರ್ ಆಗುತ್ತದೆ?

 

ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ ಕೆಳಗಿನ ಕವರೇಜ್ ಒಳಗೊಂಡಿದೆ:

 

  • ಒಳರೋಗಿ ಆಸ್ಪತ್ರೆ ದಾಖಲಾತಿ ವೆಚ್ಚಗಳು
  • ಆಸ್ಪತ್ರೆಗೆ ದಾಖಲಾದ ನಂತರ ಮತ್ತು ಮೊದಲಿನ ವೆಚ್ಚಗಳು
  • ಡೇಕೇರ್ ಕಾರ್ಯವಿಧಾನಗಳು/ಚಿಕಿತ್ಸೆಗಳು
  • ಮನೆಯಲ್ಲಿಯೇ ಚಿಕಿತ್ಸೆ
  • ಆ್ಯಂಬುಲೆನ್ಸ್ ವೆಚ್ಚಗಳು
  • ಆಯುಷ್ ಚಿಕಿತ್ಸೆಗಳು
  • ಎರಡನೇ ವೈದ್ಯಕೀಯ ಅಭಿಪ್ರಾಯ
  • ಡೆಲಿವರಿ ಮತ್ತು ನವಜಾತ ಶಿಶುವಿನ ಕವರ್
  • ಅಂಗಾಂಗ ದಾನಿಗಳ ವೆಚ್ಚಗಳು
  • ಬಾರಿಯಾಟ್ರಿಕ್ ಶಸ್ತಚಿಕಿತ್ಸೆ
  • ವೈಯಕ್ತಿಕ ಅಪಘಾತದ ಕವರ್ – ಸಾವು ಮತ್ತು ಶಾಶ್ವತ ಸಂಪೂರ್ಣ ಅಂಗವೈಕಲ್ಯಕ್ಕೆ ಇಡಿಗಂಟು ಪ್ರಯೋಜನ
  • ಹೊರರೋಗಿ ವೈದ್ಯಕೀಯ ಸಮಾಲೋಚನೆ
  • ಹೊರರೋಗಿ ದಂತ ಮತ್ತು ನೇತ್ರ ಚಿಕಿತ್ಸೆಗಳು
  • ಆಸ್ಪತ್ರೆ ನಗದು ಪ್ರಯೋಜನ
  • ವೇಟಿಂಗ್ ಅವಧಿಯು ಪೂರ್ಣಗೊಳ್ಳುವವರೆಗೆ ಪೂರ್ವಾಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳು
  • ಕೇವಲ ರೋಗ ನಿರ್ಣಯನ್ನು ಪಡೆಯಲು ಯಾವುದೇ ಆಸ್ಪತ್ರೆಗೆ ದಾಖಲಾಗುವುದು
  • ಭಾರತದ ಹೊರಗೆ ತೆಗೆದುಕೊಳ್ಳುವ ಚಿಕಿತ್ಸೆ
  • ಸುನ್ನತಿ, ಲಿಂಗ-ಬದಲಾವಣೆ ಶಸ್ತ್ರ ಚಿಕಿತ್ಸೆ, ಕಾಸ್ಮೆಟಿಕ್ ಮತ್ತು ಪ್ಲಾಸ್ಟಿಕ್ ಸರ್ಜರಿ
  • 7.5 ಡಯೋಪ್ಟರ್‌ಗಿಂತ ಕಡಿಮೆ ರಿಫ್ರಾಕ್ಟಿವ್ ದೋಷ ಸರಿಪಡಿಸುವಿಕೆ, ಶ್ರವಣ ದೋಷ ಸರಿಪಡಿಸುವಿಕೆ, ಸೌಂದರ್ಯ ದಂತ ಕಸಿ
  • ಅಪಾಯಕಾರಿ ಕ್ರೀಡೆಗಳು ಅಥವಾ ಸಾಹಸಕ್ರೀಡೆ ಸಂಬಂಧಿತ ಗಾಯಗಳು
  • ಸಾಬೀತಾಗದ ಚಿಕಿತ್ಸೆಗಳು
  • ಲೈಂಗಿಕವಾಗಿ ಹರಡುವ ಕಾಯಿಲೆ/ STDಗಳು (HIV ಹೊರತುಪಡಿಸಿ ಇತರೆ)
  • ಪರಮಾಣು ಶಸ್ತ್ರಾಸ್ತ್ರ ಮತ್ತು ಯುದ್ಧ ಸಂಬಂಧಿತ ಅಪಾಯಗಳು
  • ಉದ್ದೇಶಪೂರ್ವಕ ಸ್ವಯಂ ಹಾನಿ

 

ಯಾವುದು ಕವರ್ ಆಗುವುದಿಲ್ಲ

 

ಕೆಳಗಿನವುಗಳು ಪಾಲಿಸಿಯಿಂದ ಹೊರಗಿಡುವ ಭಾಗಶಃ ಪಟ್ಟಿಯಾಗಿದೆ. ಎಲ್ಲಾ ಹೊರಗಿಡುವಿಕೆಗಳ ವಿವರವಾದ ಪಟ್ಟಿಯನ್ನು ಪಾಲಿಸಿ ದಾಖಲೆಯಲ್ಲಿ ಸೇರಿಸಲಾಗಿದೆ.

 

  • ವೇಟಿಂಗ್ ಅವಧಿಯು ಪೂರ್ಣಗೊಳ್ಳುವವರೆಗೆ ಪೂರ್ವಾಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳು
  • ಕೇವಲ ರೋಗನಿರ್ಣಯದ ಮಾಹಿತಿಯನ್ನು ಪಡೆಯಲು ಯಾವುದೇ ಆಸ್ಪತ್ರೆಗೆ ದಾಖಲಾಗುವುದ
  • ಭಾರತದ ಹೊರಗೆ ತೆಗೆದುಕೊಳ್ಳುವ ಚಿಕಿತ್ಸೆ
  • ಸುನ್ನತಿ, ಲಿಂಗ-ಬದಲಾವಣೆ ಶಸ್ತ್ರ ಚಿಕಿತ್ಸೆ, ಕಾಸ್ಮೆಟಿಕ್ ಮತ್ತು ಪ್ಲಾಸ್ಟಿಕ್ ಸರ್ಜರಿ
  • 7.5 ಡಯೋಪ್ಟರ್‌ಗಿಂತ ಕಡಿಮೆ ರಿಫ್ರಾಕ್ಟಿವ್ ದೋಷ ಸರಿಪಡಿಸುವಿಕೆ, ಶ್ರವಣ ದೋಷ ಸರಿಪಡಿಸುವಿಕೆ, ದಂತ ಕಸಿ
  • ಅಪಾಯಕಾರಿ ಮತ್ತು ಸಾಹಸಕ್ರೀಡೆ ಸಂಬಂಧಿತ ಗಾಯಗಳು
  • ಸಾಬೀತಾಗದ ಚಿಕಿತ್ಸೆಗಳು
  • ಲೈಂಗಿಕವಾಗಿ ಹರಡುವ ಕಾಯಿಲೆ/ STDಗಳು (HIV ಹೊರತುಪಡಿಸಿ ಇತರೆ)
  • ಪರಮಾಣು ಶಸ್ತ್ರಾಸ್ತ್ರ ಮತ್ತು ಯುದ್ಧ ಸಂಬಂಧಿತ ಅಪಾಯಗಳು
  • ಉದ್ದೇಶಪೂರ್ವಕ ಸ್ವಯಂ ಹಾನಿ

 

ವೇಟಿಂಗ್ ಅವಧಿಗಳು

 

ಅಪಘಾತಗಳ ಸಂದರ್ಭಗಳನ್ನು ಹೊರತುಪಡಿಸಿ ಎಲ್ಲಾ ಚಿಕಿತ್ಸೆಗಳಿಗೆ 30-ದಿನಗಳ ವೇಟಿಂಗ್ ಅವಧಿಯು ಅನ್ವಯಿಸುತ್ತದೆ.

 

ಪಾಲಿಸಿಯ ಪ್ರಾರಂಭದ ದಿನಾಂಕದಿಂದ 12 ತಿಂಗಳ ವೇಟಿಂಗ್ ಅವಧಿಯ ನಂತರ ಪಾಲಿಸಿಯು ಪೂರ್ವಾಸ್ತಿತ್ವದಲ್ಲಿರುವ ರೋಗಗಳನ್ನು ಒಳಗೊಂಡಿದೆ.

 

ಪಾಲಿಸಿಯ ಪ್ರಾರಂಭದ ದಿನಾಂಕದಿಂದ ನಿರ್ದಿಷ್ಟ ರೋಗಗಳು 24  ತಿಂಗಳ ವೇಟಿಂಗ್ ಅವಧಿಯನ್ನು ಹೊಂದಿರುತ್ತದೆ.

 

ತೆರಿಗೆ ಪ್ರಯೋಜನಗಳು

 

ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80D ಅಡಿಯಲ್ಲಿ ಪ್ರೀಮಿಯಂ ಮೊತ್ತದ ಮೇಲೆ ತೆರಿಗೆ ಪ್ರಯೋಜನವನ್ನು ಪಡೆಯಬಹುದು.

 

ಅರ್ಹತಾ ಮಾನದಂಡ

 

ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು 18 ವರ್ಷ ವಯಸ್ಸಿನಿಂದ 65 ವರ್ಷ ವಯಸ್ಸಿನ ವ್ಯಕ್ತಿಗಳು ಖರೀದಿಸಬಹುದು, 65 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರು ಜೀವನಪರ್ಯಂತ ನವೀಕರಣ ಆಯ್ಕೆಯನ್ನು ಹೊಂದಿರುತ್ತೀರಿ. ಕಾಂಪ್ರಹೆನ್ಸಿವ್ ಫ್ಯಾಮಿಲಿ ಫ್ಲೋಟರ್ ಪ್ಲ್ಯಾನ್ 3 ತಿಂಗಳಿನಿಂದ 25 ವರ್ಷದೊಳಗಿನ ಇಬ್ಬರು ವಯಸ್ಕರು ಮತ್ತು ಮೂರು ಅವಲಂಬಿತ ಮಕ್ಕಳನ್ನು ಒಳಗೊಂಡಂತೆ ಅವರ ಕುಟುಂಬವನ್ನು ಒಳಗೊಳ್ಳಲು ವಿಮಾದಾರರಿಗೆ ಅನುವು ಮಾಡಿಕೊಡುತ್ತದೆ.

 


 

ಫ್ಯಾಮಿಲಿ ಹೆಲ್ತ್ ಆಪ್ಟಿಮಾ ಇನ್ಶೂರೆನ್ಸ್ ಪ್ಲ್ಯಾನ್

 

ಕುಟುಂಬಕ್ಕೆ ಆರ್ಥಿಕ ಬೆಂಬಲ ಒದಗಿಸುವುದು ಸವಾಲಿನ ವಿಷಯವಾಗಿದೆ. ಆದ್ದರಿಂದ ನೀವು ಸೂಪರ್ ಸೇವರ್ ಪಾಲಿಸಿಯನ್ನು ಆಯ್ದುಕೊಳ್ಳಬಹುದು ಅದು ಇಡೀ ಕುಟುಂಬಕ್ಕೆ ಕವರೇಜ್ ಒದಗಿಸುತ್ತದೆ ಮತ್ತು ನಿಮ್ಮ ಖರ್ಚುಗಳನ್ನು ಕಡಿಮೆಗೊಳಿಸುತ್ತದೆ. ಈ ಫ್ಯಾಮಿಲಿ ಹೆಲ್ತ್ ಆಪ್ಟಿಮಾ (FHO) ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಸೂಕ್ತ ಬೆಲೆಯನ್ನು ಹೊಂದಿದೆ ಇದರಿಂದ ಅತಿ ಕಿರಿಯರನ್ನು ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರ, ಸೇರಿ ಆರೋಗ್ಯ ಸಮಸ್ಯೆಗಳ ಕುರಿತು ನೀವು ಕಾಳಜಿವಹಿಸಬಹುದು. ನೀವು ಹೊಸದಾಗಿ ಪೋಷಕರಾಗಿದ್ದರೆ, ನಿಮ್ಮ ನವಜಾತ ಶಿಶುವನ್ನು ಹುಟ್ಟಿದ 16 ನೇ ದಿನದಿಂದ ಆಸ್ಪತ್ರೆ ದಾಖಲಾತಿ ಕವರೇಜ್‌ನಲ್ಲಿ ಇನ್ಶೂರೆನ್ಸ್‌ಗೆ ಸೇರಿಸಬಹುದು. ಪ್ರತಿ ಸಂಪೂರ್ಣ ಮಿತಿ  ಬರಿದಾಗುವಿಕೆ ಮೇಲೆ 3 ಬಾರಿ 100% ರಷ್ಟು ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್ ಅನ್ನು FHO ನೀಡುತ್ತದೆ.

 

ಈ ಪ್ಲ್ಯಾನ್ ಜೊತೆಗೆ ನೀವು, ನಿಮ್ಮ ವಿಮಾ  ಮೊತ್ತದ 300% ಆಟೋಮ್ಯಾಟಿಕ್ ರಿಸ್ಟೋರೇಷನ್ (ಪ್ರತಿ ಸಲ100%), ತವರಿಗೆ ಮೃತದೇಹ ರವಾನೆ, ಸಂಬಂಧಿಕರಿಗೆ ಕೃಪಾ ಪ್ರಯಾಣ, ವೈದ್ಯಕೀಯ ಉದ್ದೇಶಕ್ಕಾಗಿ ಸ್ವದೇಶಕ್ಕೆ ತುರ್ತು ವರ್ಗಾವಣೆ, ಅಂಗಾಂಗ ದಾನಿಗಳ ವೆಚ್ಚಗಳು, ರೀಚಾರ್ಜ್ ಪ್ರಯೋಜನ, ರಸ್ತೆ ಅಪಘಾತಕ್ಕೆ (RTA) ಮತ್ತು ನೆರವು ಸಹಿತ ಗರ್ಭಧಾರಣೆ ಚಿಕಿತ್ಸೆಗೆ ಹೆಚ್ಚುವರಿ ವಿಮಾ ಮೊತ್ತದಂತಹ ಅನೇಕ ರೀತಿಯ ಪ್ರಯೋಜನಗಳನ್ನು ಆನಂದಿಸಬಹುದು.

 

ಫ್ಯಾಮಿಲಿ ಹೆಲ್ತ್ ಆಪ್ಟಿಮಾ ಇನ್ಶೂರೆನ್ಸ್ ಪ್ಲ್ಯಾನ್ ಅಡಿಯಲ್ಲಿ ಏನೆಲ್ಲಾ ಒಳಗೊಂಡಿದೆ?

 

  • ಒಳರೋಗಿ ಆಸ್ಪತ್ರೆ ದಾಖಲಾತಿ ವೆಚ್ಚಗಳು
  • ಆಸ್ಪತ್ರೆಗೆ ದಾಖಲಾದ ನಂತರ ಮತ್ತು ಮೊದಲಿನ ವೆಚ್ಚಗಳು
  • ಡೇಕೇರ್ ಕಾರ್ಯವಿಧಾನಗಳು/ಚಿಕಿತ್ಸೆಗಳು
  • ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ವಾರ್ಷಿಕ ಆರೋಗ್ಯ ತಪಾಸಣೆಗಾಗಿ ಕವರೇಜ್
  • ಮನೆಯಲ್ಲಿಯೇ ಚಿಕಿತ್ಸೆ
  • ಆ್ಯಂಬುಲೆನ್ಸ್ ಚಿಕಿತ್ಸೆಗಳು
  • ಆಯುಷ್ ಚಿಕಿತ್ಸೆಗಳು
  • ಎರಡನೇ ವೈದ್ಯಕೀಯ ಅಭಿಪ್ರಾಯ
  • ನವಜಾತ ಶಿಶುವಿನ ರಕ್ಷಣೆ
  • ಅಂಗಾಂಗ ದಾನಿಗಳ ವೆಚ್ಚಗಳು
  • ನೆರವು ಸಹಿತ ಗರ್ಭಧಾರಣೆ ಚಿಕಿತ್ಸೆ
  • ಯುದ್ಧದಂತಹ ಸಂದರ್ಭಗಳು, ಶತ್ರುಗಳ ಆಕ್ರಮಣ ಇತ್ಯಾದಿಗಳಿಂದ ಉಂಟಾಗುವ ಗಾಯ ಅಥವಾ ಕಾಯಿಲೆ.
  • ಸ್ವಯಂ ಪ್ರೇರಿತ ಗಾಯಗಳಿಂದಾಗಿ ಉಂಟಾಗುವ ವೆಚ್ಚಗಳು.
  • ಅಪಘಾತದಿಂದಾಗಿ ಉಂಟಾಗಿರದ ದಂತ ಚಿಕಿತ್ಸೆಗಳು
  • ಕಡಿತ ನಂತರದ ಮತ್ತು ಇತರ ವೈದ್ಯಕೀಯ ಚಿಕಿತ್ಸೆಗಳನ್ನು ಹೊರತುಪಡಿಸಿ ವ್ಯಾಕ್ಸಿನೇಷನ್

 

ಯಾವುದು ಕವರ್ ಆಗುವುದಿಲ್ಲ

 

  • ಯುದ್ಧದಂತಹ ಸಂದರ್ಭಗಳು, ಶತ್ರುಗಳ ಆಕ್ರಮಣ ಇತ್ಯಾದಿಗಳಿಂದ ಉಂಟಾಗುವ ಗಾಯ ಅಥವಾ ಕಾಯಿಲೆ.
  • ಸ್ವಯಂ ಪ್ರೇರಿತ ಗಾಯಗಳಿಂದಾಗಿ ಉಂಟಾಗುವ ವೆಚ್ಚಗಳು.
  • ಅಪಘಾತದಿಂದಾಗಿ ಉಂಟಾಗಿರದ ದಂತ ಚಿಕಿತ್ಸೆಗಳು
  • ಕಡಿತ ನಂತರದ ಮತ್ತು ಇತರ ವೈದ್ಯಕೀಯ ಚಿಕಿತ್ಸೆಗಳನ್ನು ಹೊರತುಪಡಿಸಿ ವ್ಯಾಕ್ಸಿನೇಷನ್

 

ವೇಟಿಂಗ್ ಅವಧಿ

 

ಅಪಘಾತಗಳ ಸಂದರ್ಭಗಳನ್ನು ಹೊರತುಪಡಿಸಿ ಎಲ್ಲಾ ಚಿಕಿತ್ಸೆಗಳಿಗೆ 30-ದಿನಗಳ ವೇಟಿಂಗ್ ಅವಧಿಯು ಅನ್ವಯಿಸುತ್ತದೆ.

 

ಪಾಲಿಸಿಯ ಪ್ರಾರಂಭದ ದಿನಾಂಕದಿಂದ 48 ತಿಂಗಳ ವೇಟಿಂಗ್ ಅವಧಿಯ ನಂತರ ಪೂರ್ವಾಸ್ತಿತ್ವದಲ್ಲಿರುವ ರೋಗಗಳನ್ನು ಕವರ್ ಮಾಡಬಹುದು.

 

ಪಾಲಿಸಿಯ ಪ್ರಾರಂಭದ ದಿನಾಂಕದಿಂದ 24 ತಿಂಗಳ ಕಾಯುವ ಅವಧಿಯ ನಂತರ ನಿರ್ದಿಷ್ಟ ರೋಗಗಳನ್ನು ಕವರ್ ಮಾಡಬಹುದು.

 

ತೆರಿಗೆ ಪ್ರಯೋಜನಗಳು

 

ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80D ಅಡಿಯಲ್ಲಿ ಪ್ರೀಮಿಯಂ ಮೊತ್ತದ ಮೇಲೆ ತೆರಿಗೆ ಪ್ರಯೋಜನವನ್ನು ಪಡೆಯಬಹುದು.

 

ಅರ್ಹತಾ ಮಾನದಂಡ

 

ಭಾರತದಲ್ಲಿ ನೆಲೆಸಿರುವ, 18 ವರ್ಷದಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ  ವಿಮೆಯನ್ನು ತೆಗೆದುಕೊಳ್ಳಬಹುದು.  65 ವರ್ಷಗಳ ನಂತರ, ನೀವು ಜೀವನಪರ್ಯಂತ ನವೀಕರಣ ಆಯ್ಕೆಯ ಪ್ರಯೋಜನವನ್ನು ಪಡೆಯಬಹುದು. 16 ನೇ ದಿನದಿಂದ ಮಗುವನ್ನು ಕುಟುಂಬದ ಭಾಗವಾಗಿ ಪಾಲಿಸಿ ಕವರ್‌ಗೆ ಸೇರಿಸಿಕೊಳ್ಳಬಹುದು.
ಈ ಪಾಲಿಸಿಯು ಫ್ಲೋಟರ್ ಆಧಾರದ ಮೇಲಿದೆ. 16 ದಿನಗಳಿಂದ 25 ವರ್ಷಗಳವರೆಗಿನ ಸೂಚಕರು, ಸಂಗಾತಿ, ಅವಲಂಬಿತ ಮಕ್ಕಳು, ಅವಲಂಬಿತ ಪೋಷಕರು, ಅತ್ತೆ ಮಾವಂದಿರ (ಇನ್ ಲಾ) ಕುಟುಂಬವನ್ನು ಸಹ ಒಳಗೊಳ್ಳಬಹುದು.

 

 

 

ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿ

 

ಯುವಕರು ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬಾಗಿದ್ದಾರೆ. ಆದ್ದರಿಂದ ನಿಮ್ಮ ಯೌವ್ವನದ ಸಮಯವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. 40 ವರ್ಷದೊಳಗಿನ ಯುವಜನತೆ ಮತ್ತು ಅವರ ಕುಟುಂಬಗಳಿಗೆ ಆರೋಗ್ಯಕರ ಜೀವನಶೈಲಿಯನ್ನು ಒದಗಿಸುವುದು ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರಾಥಮಿಕ ಉದ್ದೇಶವಾಗಿದೆ. ಈ ಪಾಲಿಸಿಯು, ಚಿನ್ನ ಮತ್ತು ಬೆಳ್ಳಿ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದರಲ್ಲಿ ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನೀವು ಆಯ್ಕೆ ಮಾಡಬಹುದು.

 

ಈ ಪಾಲಿಸಿಯು ಪ್ರೋತ್ಸಾಹಧನಯುಕ್ತ ಸ್ವಾಸ್ಥ್ಯ ಕಾರ್ಯಕ್ರಮಗಳು, ನವೀಕರಣಗಳ ಮೇಲಿನ ರಿಯಾಯಿತಿ, ಅತಿ ಕಡಿಮೆ ವೇಟಿಂಗ್ ಅವಧಿಗಳು, ಆಸ್ಪತ್ರೆ ದಾಖಲಾತಿಯ ಮೊದಲಿನ ಮತ್ತು ನಂತರದ ವೆಚ್ಚಗಳು, ಸಂಚಿತ ಬೋನಸ್, ಆಸ್ಪತ್ರೆ ನಗದು ಪ್ರಯೋಜನ, ವಾರ್ಷಿಕ ತಪಾಸಣೆ, ವಿಮಾಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್, ರಸ್ತೆ ಅಪಘಾತಕ್ಕೆ ಹೆಚ್ಚುವರಿ ಕವರೇಜ್‌ನಂತಹ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

 

ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗುತ್ತವೆ?

 

  • ಒಳರೋಗಿ ಆಸ್ಪತ್ರೆ ದಾಖಲಾತಿ ವೆಚ್ಚಗಳು
  • ಆಸ್ಪತ್ರೆಗೆ ದಾಖಲಾದ ನಂತರ ಮತ್ತು ಮೊದಲಿನ ವೆಚ್ಚಗಳು
  • ಡೇಕೇರ್ ಚಿಕಿತ್ಸೆಗಳು
  • ತುರ್ತು ರೋಡ್ ಆ್ಯಂಬ್ಯುಲೆನ್ಸ್
  • ವಾರ್ಷಿಕ ಆರೋಗ್ಯ ತಪಾಸಣೆ
  • ಸಂಗಾತಿ/ನವಜಾತ ಶಿಶುವಿನ ಮಧ್ಯಂತರ ಸೇರ್ಪಡೆ
  • ಡೆಲಿವರಿ ಚಿಕಿತ್ಸೆಗಳು (ಕೇವಲ ಗೋಲ್ಡ್ ಪ್ಲ್ಯಾನ್ ಅಡಿಯಲ್ಲಿ)
  • ಆಸ್ಪತ್ರೆ ನಗದು ಪ್ರಯೋಜನ (ಕೇವಲ ಗೋಲ್ಡ್ ಪ್ಲ್ಯಾನ್ ಅಡಿಯಲ್ಲಿ)
  • ವಿಶ್ರಾಂತಿ ಚಿಕಿತ್ಸೆ, ಪುನರ್ವಸತಿ ಮತ್ತು ವಿಶ್ರಾಂತಿ ಆರೈಕೆ
  • ಬೊಜ್ಜು/ತೂಕ ನಿಯಂತ್ರಣ
  • ಸುನ್ನತಿ, ಲಿಂಗ-ಬದಲಾವಣೆ ಶಸ್ತ್ರ ಚಿಕಿತ್ಸೆ, ಕಾಸ್ಮೆಟಿಕ್ ಮತ್ತು ಪ್ಲಾಸ್ಟಿಕ್ ಸರ್ಜರಿ
  • ಅಪಾಯಕಾರಿ ಅಥವಾ ಸಾಹಸಕ್ರೀಡೆ ಸಂಬಂಧಿತ ಗಾಯಗಳು
  • ರಿಫ್ರಾಕ್ಟಿವ್ ದೋಷ
  • ಅಪಘಾತದಿಂದಾಗಿ ಉಂಟಾಗಿರದ ದಂತ ಚಿಕಿತ್ಸೆಗಳು
  • ಮನೆಯಲ್ಲಿಯೇ ಚಿಕಿತ್ಸೆ, ಭಾರತದಿಂದ ಹೊರಗೆ ಚಿಕಿತ್ಸೆ
  • ಗರ್ಭಾವಸ್ಥೆ (ಗೋಲ್ಡ್ ಪ್ಲ್ಯಾನ್ ಅಡಿಯಲ್ಲಿ ಹೊರತುಪಡಿಸಿ), ಬಂಜೆತನ, ಜನ್ಮದಾತ ಬಾಹ್ಯ ರೋಗ/ದೋಷಗಳು
  • ಮಾದಕ ವಸ್ತು ಬಳಕೆ, ಉದ್ದೇಶಪೂರ್ವಕ ಸ್ವಯಂ ಗಾಯ, ಯುದ್ಧ, ಭಯೋತ್ಪಾದನೆ, ಅಂತರ್ಯುದ್ಧ ಅಥವಾ ಕಾನೂನು ಉಲ್ಲಂಘನೆ

 

ಯಾವುದು ಕವರ್ ಆಗುವುದಿಲ್ಲ?

 

  • ವಿಶ್ರಾಂತಿ ಚಿಕಿತ್ಸೆ, ಪುನರ್ವಸತಿ ಮತ್ತು ವಿಶ್ರಾಂತಿ ಆರೈಕೆ
  • ಬೊಜ್ಜು/ತೂಕ ನಿಯಂತ್ರಣ
  • ಸುನ್ನತಿ, ಲಿಂಗ-ಬದಲಾವಣೆ ಶಸ್ತ್ರ ಚಿಕಿತ್ಸೆ, ಕಾಸ್ಮೆಟಿಕ್ ಮತ್ತು ಪ್ಲಾಸ್ಟಿಕ್ ಸರ್ಜರಿ
  • ಅಪಾಯಕಾರಿ ಅಥವಾ ಸಾಹಸಕ್ರೀಡೆ ಸಂಬಂಧಿತ ಗಾಯಗಳು
  • ರಿಫ್ರಾಕ್ಟಿವ್ ದೋಷ
  • ಅಪಘಾತದಿಂದಾಗಿ ಉಂಟಾಗಿರದ ದಂತ ಚಿಕಿತ್ಸೆಗಳು
  • ಮನೆಯಲ್ಲಿಯೇ ಚಿಕಿತ್ಸೆ, ಭಾರತದಿಂದ ಹೊರಗೆ ಚಿಕಿತ್ಸೆ
  • ಗರ್ಭಾವಸ್ಥೆ (ಗೋಲ್ಡ್ ಪ್ಲ್ಯಾನ್ ಅಡಿಯಲ್ಲಿ ಹೊರತುಪಡಿಸಿ), ಬಂಜೆತನ, ಜನ್ಮದಾತ ಬಾಹ್ಯ ರೋಗ/ದೋಷಗಳು
  • ಮಾದಕ ವಸ್ತು ಬಳಕೆ, ಉದ್ದೇಶಪೂರ್ವಕ ಸ್ವಯಂ ಗಾಯ, ಯುದ್ಧ, ಭಯೋತ್ಪಾದನೆ, ಅಂತರ್ಯುದ್ಧ ಅಥವಾ ಕಾನೂನು ಉಲ್ಲಂಘನೆ

 

ವೇಟಿಂಗ್ ಅವಧಿ

 

ಅಪಘಾತಗಳ ಸಂದರ್ಭಗಳನ್ನು ಹೊರತುಪಡಿಸಿ ಎಲ್ಲಾ ಚಿಕಿತ್ಸೆಗಳಿಗೆ 30-ದಿನಗಳ ವೇಟಿಂಗ್ ಅವಧಿಯು ಅನ್ವಯಿಸುತ್ತದೆ.

 

ಪಾಲಿಸಿಯ ಪ್ರಾರಂಭದ ದಿನಾಂಕದಿಂದ 12 ತಿಂಗಳ ವೇಟಿಂಗ್ ಅವಧಿಯ ನಂತರ ಪಾಲಿಸಿಯು ಪೂರ್ವಾಸ್ತಿತ್ವದಲ್ಲಿರುವ ರೋಗಗಳನ್ನು ಒಳಗೊಂಡಿದೆ.

 

ಪಾಲಿಸಿಯ ಪ್ರಾರಂಭದ ದಿನಾಂಕದಿಂದ 12 ತಿಂಗಳ ವೇಟಿಂಗ್ ಅವಧಿಯ ನಂತರ ನಿರ್ದಿಷ್ಟ ರೋಗಗಳನ್ನು ಸಹ ಕವರ್ ಮಾಡಬಹುದು.

 

ತೆರಿಗೆ ಪ್ರಯೋಜನಗಳು

 

ಆದಾಯ ತರಿಗೆ ಕಾಯಿದೆ 1961 ರ ಸೆಕ್ಷನ್ 80D ಅಡಿಯಲ್ಲಿ ಪ್ರೀಮಿಯಂ ಮೊತ್ತದ ಮೇಲೆ ತೆರಿಗೆ ಪ್ರಯೋಜನವನ್ನು ಪಡೆಯಬಹುದು.

 

ಅರ್ಹತಾ ಮಾನದಂಡ

 

ಪ್ರವೇಶದ ಸಮಯದಲ್ಲಿ 18 ವರ್ಷ ವಯಸ್ಸನ್ನು ಹೊಂದಿದ್ದು 40 ವರ್ಷ ವಯಸ್ಸಿನ ಜನರು ಈ ವಿಮೆಯನ್ನು ತೆಗೆದುಕೊಳ್ಳಬಹುದು. ಅವಲಂಬಿತ ಮಕ್ಕಳನ್ನು 91 ದಿನಗಳಿಂದ ಮತ್ತು 25 ವರ್ಷ ವಯಸ್ಸಿನವರೆಗೆ ಕವರ್ ಮಾಡಬಹುದು.


ಈ ಪಾಲಿಸಿಯು ವೈಯಕ್ತಿಕ ಆಧಾರದ ಮೇಲೆ ಮತ್ತು ಫ್ಲಾಮಿಲಿ ಫ್ಲೋಟರ್ ಆಧಾರದ ಮೇಲೆ ಲಭ್ಯವಿದೆ. ಈ ಪಾಲಿಸಿಯ ಉದ್ದೇಶಕ್ಕಾಗಿ ಕುಟುಂಬ ಅಂದರೆ ಸ್ವಯಂ, ಸಂಗಾತಿ ಮತ್ತು ಅವಲಂಬಿತ ಮಕ್ಕಳು 3 ಮೀರಬಾರದು.

 

ಮಾರಟೋರಿಯಂ ಅವಧಿ

ಪಾಲಿಸಿಯ ಅಡಿಯಲ್ಲಿ ನಿರಂತರ ಎಂಟು ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಯಾವುದೇ ಹಿಂದೆ ನೋಡುವಿಕೆಯು ಅನ್ವಯವಾಗುವುದಿಲ್ಲ. ಎಂಟು ವರ್ಷಗಳ ಈ ಅವಧಿಯನ್ನು ಮೊರಟೋರಿಯಂ ಅವಧಿ ಎಂದು ಕರೆಯಲಾಗುತ್ತದೆ. ಮೊರಟೋರಿಯಂ ಮೊದಲ ಪಾಲಿಸಿಯ ವಿಮಾ ಮೊತ್ತಕ್ಕೆ ಅನ್ವಯಿಸುತ್ತದೆ ಮತ್ತು ನಂತರದ 8 ಸತತ ವರ್ಷಗಳ ಪೂರ್ಣಗೊಳಿಸುವಿಕೆಯ ವರ್ಧಿತ ಮಿತಿಗಳಲ್ಲಿ ಮಾತ್ರ ವಿಮಾ ಮೊತ್ತವನ್ನು ವರ್ಧಿಸಿದ ದಿನಾಂಕದಿಂದ ಅನ್ವಯಿಸುತ್ತದೆ. ಮಾರಟೋರಿಯಂ ಅವಧಿಯ ಮುಕ್ತಾಯದ ನಂತರ, ಸಾಬೀತಾದ ವಂಚನೆ ಮತ್ತು ಪಾಲಿಸಿ ದಾಖಲೆಯಲ್ಲಿ ನಿರ್ದಿಷ್ಟ ಪಡಿಸಿದ ಶಾಶ್ವತ ವಿನಾಯಿತಿಗಳನ್ನು ಹೊರತುಪಡಿಸಿ ಯಾವುದೇ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳು ಸ್ಪರ್ಧಾತ್ಮಕವಾಗಿರುವುದಿಲ್ಲ. ಆದಾಗ್ಯೂ ಪಾಲಿಸಿಗಳು ಪಾಲಿಸಿ ದಾಖಲೆಗಳ ಪ್ರಕಾರ ಎಲ್ಲಾ ಮಿತಿಗಳು, ಉಪ ಮಿತಿಗಳು, ಸಹ-ಪಾವತಿಗಳು, ಕಡಿತಗೊಳಿಸುವಿಕೆಗೆ ಒಳಪಟ್ಟಿರುತ್ತವೆ.

 


 

ಸಹಾಯ ಕೇಂದ್ರ

ಗೊಂದಲದಲ್ಲಿದ್ದೀರಾ? ನಾವು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಸಂಬಂಧಿತ ಎಲ್ಲಾ ಪ್ರಶ್ನೆಗಳಿಗೆ ನಮ್ಮಿಂದ ಉತ್ತರ ಪಡೆಯಿರಿ.

ಈ ಪಾಲಿಸಿಯನ್ನು ಖರೀದಿಸಲು,  www.starhealth.in ಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ಸ್ಟಾರ್ ಹೆಲ್ತ್ ಶಾಖೆಗೆ ಭೇಟಿ ನೀಡಿ. ಅಥವಾ ಪ್ಲ್ಯಾನ್ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು 044 6900 6900 / 044 4674 5800 ಸಂಖ್ಯಗೆ ಕರೆಮಾಡಬಹುದು.