New
AROGYA SEVA KENDRA - Free Health Consultation -Click Here to Know More|BIMA BHAROSA - An Integrated Grievance Management System to facilitate the policyholders and complainants to file their grievances with IRDAI -Click here to know more|Click here to link your KYC|Policies where the risk commencement date is on or after 1st October 2024, all the policy servicing shall be as per the IRDAI (Insurance Products) Regulations, 2024 dated 20th March 2024 and Master Circular on Health Insurance Business dated 29th May 2024
DND Registration

ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ

India +91✓

IRDAI UIN: SHAHLIP26041V082526

HIGHLIGHTS

Plan Essentials

purple essential logo 3

ಹೊಂದಿಕೆಯಾಗಬಹುದಾದ ವಿಮಾ ಮೊತ್ತ

ವೈಯಕ್ತಿಕ ಆಧಾರದ ಮೇಲೆ ಲಭ್ಯವಿರುವ ವಿಮಾ ಮೊತ್ತದ ಆಯ್ಕೆಗಳು - 1/2/3/4/5/7.5/10/15/20/25 ಲಕ್ಷಗಳು ಮತ್ತು ಫ್ಲೋಟರ್ (ಸ್ವಂತ ಮತ್ತು ಸಂಗಾತಿ) ಆಧಾರದ ಮೇಲೆ - 10/15/20/25 ಲಕ್ಷದ ಆಯ್ಕೆಗಳು ಲಭ್ಯವಿದೆ.

purple essential logo 3

ಆಧುನಿಕ ಚಿಕಿತ್ಸೆಗಳು

ಓರಲ್ ಕಿಮೋಥೆರಪಿ, ಇಂಟ್ರಾ ವಿಟ್ರಿಯಲ್ ಇಂಜೆಕ್ಷನ್‌ಗಳು, ರೋಬೋಟಿಕ್ ಸರ್ಜರಿಗಳು ಮುಂತಾದ ಆಧುನಿಕ ಚಿಕಿತ್ಸೆಗಳಿಗೆ ತಗಲುವ ವೆಚ್ಚಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳಿಗೆ ಒಳಪಟ್ಟು ಒದಗಿಸಲಾಗುತ್ತದೆ.

purple essential logo 3

ಪ್ರೀಮಿಯಂ ರಿಯಾಯಿತಿಗಳು

ಆನ್‌ಲೈನ್‌ನಲ್ಲಿ ಪಾಲಿಸಿಯನ್ನು ಖರೀದಿಸಲು ಮತ್ತು ನವೀಕರಿಸಲು 5% ರಿಯಾಯಿತಿ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಪಾಲಿಸಿಯನ್ನು ಖರೀದಿಸುವ ಅಥವಾ ನವೀಕರಿಸುವ ಮೊದಲ 45 ದಿನಗಳಲ್ಲಿ ಪಟ್ಟಿ ಮಾಡಲಾದ ವೈದ್ಯಕೀಯ ಪರೀಕ್ಷೆಗಳನ್ನು ತೆಗೆದುಕೊಂಡ ಆರೋಗ್ಯವಂತ ವ್ಯಕ್ತಿಗಳಿಗೆ 10% ರಿಯಾಯಿತಿ ಅನ್ವಯಿಸುತ್ತದೆ.

purple essential logo 2

ಪೂರ್ವಾಸ್ತಿತ್ವದಲ್ಲಿರುವ ಕಾಯಿಲೆಗಳಿಗೆ ವೇಟಿಂಗ್ ಅವಧಿ

ಪೂರ್ವಾಸ್ತಿತ್ವದಲ್ಲಿರುವ ರೋಗಗಳು (PED) ಮತ್ತು ಅವುಗಳ ತೊಡಕುಗಳನ್ನು ಈ ಪಾಲಿಸಿಯ ಅಡಿಯಲ್ಲಿ 12 ತಿಂಗಳ ನಂತರ ಕವರ್ ಮಾಡಲಾಗುತ್ತದೆ, ಅರ್ಜಿಯ ಸಮಯದಲ್ಲಿ ಅದನ್ನು ಘೋಷಿಸಲಾಗುತ್ತದೆ ಮತ್ತು ವಿಮಾದಾರರಿಂದ ಸ್ವೀಕರಿಸಲಾಗುತ್ತದೆ.

purple essential logo 2

OP ಸಮಾಲೋಚನೆ

ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಮಾಲೋಚನೆಯನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಪಾವತಿಸಲಾಗುತ್ತದೆ.

purple essential logo 3

ಪ್ರವೇಶ ವಯಸ್ಸು

60 ರಿಂದ 75 ವರ್ಷ ವಯಸ್ಸಿನ ಹಿರಿಯ ನಾಗರಿಕರು ನಿರಂತರ ಪ್ರೀಮಿಯಂ ಮತ್ತು ಜೀವನಪರ್ಯಂತ ನವೀಕರಣ ಆಯ್ಕೆಯೊಂದಿಗೆ ಈ ಪಾಲಿಸಿಯನ್ನು ಪಡೆಯಬಹುದು.

purple essential logo 3

ವೈದ್ಯಕೀಯ ಪರೀಕ್ಷೆ

ಈ ಪಾಲಿಸಿಯನ್ನು ಪಡೆಯಲು ಪೂರ್ವವೈದ್ಯಕೀಯ ಪರೀಕ್ಷೆಯ ಅವಶ್ಯಕತೆಯಿಲ್ಲ.

purple essential logo 4

ಪಾಲಿಸಿ ವಿಧ

ಈ ಪಾಲಿಸಿಯನ್ನು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಪಡೆಯಬಹುದು.

Detailed List

ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

ಪಾಲಿಸಿ ಅವಧಿ

ಈ ಪಾಲಿಸಿಯನ್ನು ಒಂದು, ಎರಡು ಅಥವಾ ಮೂರು ವರ್ಷಗಳ ಅವಧಿಗೆ ಪಡೆಯಬಹುದು.

ವಿಮಾ ಮೊತ್ತ

ಈ ಪಾಲಿಸಿ ಅಡಿಯಲ್ಲಿ ಲಭ್ಯವಿರುವ ವಿಮಾ ಮೊತ್ತದ ಆಯ್ಕೆಗಳು ರೂ. 1,00,000/-,  ರೂ . 2,00,000/-,  ರೂ . 3,00,000/-,  ರೂ . 4,00,000/-,  ರೂ . 5,00,000/-,  ರೂ . 7,50,000/- ,  ರೂ . 10,00,000/-,  ರೂ . 15,00,000/-,  ರೂ . 20,00,000/- ಮತ್ತು  ರೂ . 25,00,000/-. ರೂ. 10,00,000/- ದಿಂದ ರೂ. 25,00,000/- ಫ್ಲೋಟರ್ ಆಧಾರದ ಮೇಲೆ ಲಭ್ಯವಿದೆ.

ಒಳರೋಗಿ ಆಸ್ಪತ್ರೆ ದಾಖಲಾತಿ

ಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ವೆಚ್ಚಗಳನ್ನು ಇದು ಒಳಗೊಂಡಿದೆ. 

ಆಸ್ಪತ್ರೆ ದಾಖಲಾತಿ ಪೂರ್ವ

ಒಳರೋಗಿಯನ್ನು ಆಸ್ಪತ್ರೆಗೆ ದಾಖಲಿಸುವುದರ ಜೊತೆಗೆ, ಆಸ್ಪತ್ರೆಗೆ ದಾಖಲಾದ ದಿನಾಂಕದ 30 ದಿನಗಳ ಮೊದಲು ತಗಲುವ ವೈದ್ಯಕೀಯ ವೆಚ್ಚಗಳನ್ನು ಸಹ ಒಳಗೊಂಡಿದೆ.

ಆಸ್ಪತ್ರೆಗೆ ದಾಖಲಾತಿ ನಂತರ

ಪಾಲಿಸಿ ಷರತ್ತಿನಲ್ಲಿ ತಿಳಿಸಲಾದ ಮಿತಿಗಳ ಪ್ರಕಾರ ಆಸ್ಪತ್ರೆ ದಾಖಲಾತಿ ನಂತರದ ವೈದ್ಯಕೀಯ ವೆಚ್ಚಗಳ 7% ರಷ್ಟು ಒಳಗೊಂಡಿರುತ್ತವೆ.

ಕೊಠಡಿಯ ಬಾಡಿಗೆ

ಒಳರೋಗಿ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಕೊಠಡಿ, ಬೋರ್ಡಿಂಗ್ ಮತ್ತು ಶುಶ್ರೂಷೆ ವೆಚ್ಚಗಳು ರೂ.10,000/- ವರೆಗೆ ವಿಮಾದಾರರು ಆಯ್ಕೆ ಮಾಡಿದ ಗರಿಷ್ಠ ಮೊತ್ತಕ್ಕೆ ಕವರ್ ಮಾಡಲಾಗುತ್ತದೆ.

ICU ಶುಲ್ಕಗಳು

ರೂ. 10 ಲಕ್ಷದವರೆಗಿನ ವಿಮಾ ಮೊತ್ತಕ್ಕೆ ICU ಶುಲ್ಕವಾಗಿ ವಿಮಾ ಮೊತ್ತದ 2% ವರೆಗೆ ಪಾವತಿಸಲಾಗುತ್ತದೆ. ಮತ್ತು ವಿಮಾ ಮೊತ್ತಕ್ಕೆ ರೂ. 15 ಲಕ್ಷದಿಂದ ರೂ. 25 ಲಕ್ಷದವರೆಗಿನ ವಿಮಾ ಮೊತ್ತಕ್ಕೆ, ವಾಸ್ತವಿಕದವರೆಗೆ ICU ಶುಲ್ಕಗಳನ್ನು ಕವರ್ ಮಾಡಲಾಗುತ್ತದೆ.

ರೋಡ್  ಆ್ಯಂಬುಲೆನ್ಸ್

ಖಾಸಗಿ ಆ್ಯಂಬ್ಯುಲೆನ್ಸ್ ಸೇವೆಗಳ ಮೂಲಕ ವಿಮಾದಾರರನ್ನು ಆಸ್ಪತ್ರೆಗೆ ದಾಖಲಿಸಲು  ಆ್ಯಂಬ್ಯುಲೆನ್ಸ್ ಶುಲ್ಕವನ್ನು ಒಳಗೊಂಡಿರುತ್ತದೆ.

ಡೇ ಕೇರ್ ಕಾರ್ಯವಿಧಾನಗಳು

ತಾಂತ್ರಿಕ ಪ್ರಗತಿಯಿಂದಾಗಿ ಆಸ್ಪತ್ರೆಗೆ ದಾಖಲಾದ 24 ಗಂಟೆಗಳಿಗಿಂತ ಕಡಿಮೆ ಅವಧಿಯ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರ ಚಿಕಿತ್ಸಾ ವಿಧಾನಗಳು ಕವರ್ ಆಗುತ್ತವೆ.

ಕಣ್ಣಿನ ಪೊರೆ ಚಿಕಿತ್ಸೆ

ಕಣ್ಣಿನ ಪೊರೆ ಚಿಕಿತ್ಸೆಗಾಗಿ ಉಂಟಾದ ವೆಚ್ಚಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ 24 ತಿಂಗಳ ವೇಟಿಂಗ್ ಅವಧಿಯ ನಂತರ ಕವರ್ ಮಾಡಲಾಗುತ್ತದೆ.

ಸಹ-ಪಾವತಿ

ಈ ಪಾಲಿಸಿಯು ಎಲ್ಲಾ ಕ್ಲೈಮ್‌ಗಳಿಗೆ 30% ರಷ್ಟು ಸಹ-ಪಾವತಿಗೆ ಒಳಪಟ್ಟಿರುತ್ತದೆ.

ಆರೋಗ್ಯ ತಪಾಸಣೆ

ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ವಾರ್ಷಿಕ ಆರೋಗ್ಯ ತಪಾಸಣೆಗೆ ತಗಲುವ ವೆಚ್ಚವನ್ನು ನಿರ್ದಿಷ್ಟಪಡಿಸಿದ ಮಿತಿಗಳಿಗೆ ಒಳಪಡಿಸಲಾಗುತ್ತದೆ.

ಕಂತು ಆಯ್ಕೆಗಳು

ಪಾಲಿಸಿ ಪ್ರೀಮಿಯಂ ಅನ್ನು ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು. ಇದನ್ನು ವಾರ್ಷಿಕ, ದ್ವೈವಾರ್ಷಿಕ (2 ವರ್ಷಗಳಿಗೊಮ್ಮೆ) ಮತ್ತು ತ್ರೈವಾರ್ಷಿಕ (3 ವರ್ಷಗಳಿಗೊಮ್ಮೆ) ಆಧಾರದ ಮೇಲೆ ಪಾವತಿಸಬಹುದು.
ಪಾಲಿಸಿ ವಿವರಗಳು ಹಾಗೂ ಕರಾರುಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ದಾಖಲೆಯನ್ನು ಓದಿ.

ಬೇರೆ ಏನನ್ನಾದರೂ ಹುಡುಕುತ್ತಿದ್ದೀರಾ?

ಎಲ್ಲಾ ಪ್ಲ್ಯಾನ್‌ಗಳನ್ನು ವೀಕ್ಷಿಸಿ
ಪ್ರಾರಂಭಿಸಿ

ಅತ್ಯುತ್ತಮವಾದುದರ ಖಾತರಿ ಹೊಂದಿರಿ

ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.

ಹೆಚ್ಚಿನ ಮಾಹಿತಿ ಬೇಕೆ?
ಹೆಚ್ಚಿನ ಮಾಹಿತಿ ಬೇಕೆ?
ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?
ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?

ಹಿರಿಯ ನಾಗರಿಕರಿಗೆ ಹೆಲ್ತ್ ಇನ್ಶೂರೆನ್ಸ್

 

ವಯಸ್ಸಾಗುವಿಕೆಯು ನಮ್ಮ ಸಮಾಜದ ಎಲ್ಲಾ ವರ್ಗದ ಜನರಿಗೆ ಒಂದು ಅನೂಹ್ಯ ಸವಾಲಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಪ್ರತಿ ನಾಗರಿಕರನ್ನು ಹಿರಿಯ ನಾಗರಿಕರೆಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿನ ಮೊದಲ ಲ್ಯಾಂಗಿಟ್ಯೂಡಿನಲ್ ಏಜಿಂಗ್ ಸ್ಟಡಿ (LASI) ಪ್ರಕಾರ, ಭಾರತದಲ್ಲಿ ಪ್ರತಿ ಮೂವರಲ್ಲಿ ಇಬ್ಬರು ಹಿರಿಯ ನಾಗರಿಕರು ಕೆಲವು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುವ ರೋಗಗಳಲ್ಲಿ ಹೃದಯ ರಕ್ತನಾಳದ ಕಾಯಿಲೆಗಳು(CVD), ದೀರ್ಘಕಾಲದ ಅಧಿಕ ರಕ್ತದೊತ್ತಡ, ಮಧುಮೇಹ,  ಮೂಳೆ ಮತ್ತು ಕೀಲು ರೋಗಗಳು ಮತ್ತು ಇನ್ನೂ ಅನೇಕ ಕಾಯಿಲೆಗಳು ಸೇರಿವೆ. ಆರೋಗ್ಯ ರಕ್ಷಣಾ ಅಗತ್ಯಗಳು ನಿವೃತ್ತಿಯ’ ದೊಡ್ಡ ‘ಅಜ್ಞಾತ ವಿಷಯವಾಗಿದೆ.’ ಆರ್ಥಿಕ ದಷ್ಟಿಕೋನದಿಂದ ಹಿರಿಯ ನಾಗರಿಕರು ಅಂತಹ ದೀರ್ಘಕಾಲದ ಕಾಯಿಲೆಗಳಿಗೆ ಪ್ರಮಾಣಿತ ಚಿಕಿತ್ಸೆಯನ್ನು ಪಡೆಯುವುದು ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚದೊಂದಿಗೆ ನಿಮ್ಮ ಉಳಿತಾಯವನ್ನು ಖಾಲಿಗೊಳಿಸಬಹುದು ಮತ್ತು ನಿಮ್ಮ ನಿವೃತ್ತಿಯ ಉಳಿತಾಯದ ಗುರಿಯನ್ನು ಸರಿದೂಗಿಸಲು ಕಷ್ಟವಾಗುತ್ತದೆ. ಹಿರಿಯ ನಾಗರಿಕರಿಗೆ ಅವರ ಅಗತ್ಯತೆಯ ಆರೋಗ್ಯ ಅವಶ್ಯಕತೆಗಳನ್ನು ಪೂರೈಸಲು ಹೆಲ್ತ್ ಇನ್ಶೂರೆನ್ಸ್‌ನ ಅಗತ್ಯವಿದೆ. ಆದ್ದರಿಂದ ನಿಮ್ಮ ಆರೋಗ್ಯ ರಕ್ಷಣೆಯ ಅಗತ್ಯಗಳನ್ನು ಸರಿದೂಗಿಸುವ ಸರಿಯಾದ ಮತ್ತು ಪರಿಣಾಮಕಾರಿ ಆರೋಗ್ಯ ಯೋಜನೆಯಲ್ಲಿ ತಕ್ಷಣವೇ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.

 ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ

ಸ್ಟಾರ್ ಹೆಲ್ತ್ ಇನ್ಶೂರೆನ್ಸ್  ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ವಯಸ್ಸಾದ ನಾಗರಿಕರಿಗಾಗಿ ಪ್ರಯೋಜನಕಾರಿ ವಿಧಾನದೊಂದಿಗೆ ಪ್ರಸ್ತುತಪಡಿಸುತ್ತಿದೆ. ಈ ಯೋಜನೆಯನ್ನು 60 ರಿಂದ 75 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

 

ಈ ಪಾಲಿಸಿಯು ಹಿರಿಯ ನಾಗರಿಕರಿಗೆ ಉತ್ತಮವಾದ ಪ್ರಯೋಜನಗಳನ್ನು ಹೊಂದಿದ್ದು, ಇದು ಆಧುನಿಕ ಚಿಕಿತ್ಸೆಗಳು, ಗಮನಾರ್ಹ ವೈದ್ಯಕೀಯ ಮಧ್ಯಸ್ಥಿಕೆಗಳು, ಜೀವನಪರ್ಯಂತ ನವೀಕರಣ ಆಯ್ಕೆ, ನಿರಂತರ ಪ್ರೀಮಿಯಂ ಲಭ್ಯತೆಯೊಂದಿಗೆ ಎರಡನೇ ಪಾಲಿಸಿ ವರ್ಷದಿಂದ ಪೂರ್ವಾಸ್ತಿತ್ವದಲ್ಲಿರುವ ಕಾಯಿಲೆಗಳನ್ನು ಒಳಗೊಂಡಿರುವ ವ್ಯಾಪಕ ಶ್ರೇಣಿಯ ಡೇಕೇರ್ ಕಾರ್ಯವಿಧಾನಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಈ ಪಾಲಿಸಿಯು ವೈಯಕ್ತಿಕ/ಫ್ಲೋಟರ್ ವಿಮಾ ಮೊತ್ತದ ಆದಾರದ ಮೇಲೆ ಲಭ್ಯವಿದೆ. ಭಾರದಲ್ಲಿರುವ ಹಿರಿಯ ನಾಗರಿಕರಿಗಾಗಿ ವೈದ್ಯಕೀಯ ವಿಮೆಯ ಕಡೆಗೆ ಉತ್ತಮ ಪಾಕೆಟ್ ಸ್ನೇಹಿ ಪ್ರೀಮಿಯಂಗಾಗಿ ಹುಡುಕುತ್ತಿರುವ ಹಿರಿಯ ನಾಗರಿಕರಿಗೆ ಇದು ಸೂಕ್ತವಾಗಿದೆ. ಪಾಲಿಸಿಯ ಪ್ರಮುಖ ಅಂಶವೆಂದರೆ ಪಾಲಿಸಿಯನ್ನು ಖರೀದಿಸುವಾಗ ಯಾವುದೇ ಪೂರ್ವ-ವಿಮಾ ವೈದ್ಯಕೀಯ ತಪಾಸಣೆಯ ಅಗತ್ಯವಿಲ್ಲ. ಪಾಲಿಸಿಯನ್ನು ಖರೀದಿಸುವಾಗ ನೀವು ಸೆಕ್ಷನ್ 80D ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದು.

ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ, ಕೆಳಗಿನ ಪಟ್ಟಿಮಾಡಿರುವಂತೆ ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಬಹುದು:

  • ವೈಯಕ್ತಿಕ ಆಧಾರದ ಮೇಲೆ ರೂ. 25 ಲಕ್ಷಗಳವರೆಗೆ ಮತ್ತು ಫ್ಲೋಟರ್ ಆಧಾರದ ಮೇಲೆ ರೂ. 10 ಲಕ್ಷಗಳಿಂದ ರೂ. 25 ಲಕ್ಷಗಳವರೆಗೆ ವಿಮಾ ಮೊತ್ತದ ರಕ್ಷಣೆಯ ಲಭ್ಯತೆ.
  • ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಹೊರರೋಗಿ ವೈದ್ಯಕೀಯ ಸಮಾಲೋಚನೆಗಳಿಗೆ ಕವರೇಜ್.
  • ವ್ಯಕ್ತಿಯ ವಯಸ್ಸು ಮತ್ತು ಆಯ್ದ ವಿಮಾ ಮೊತ್ತವನ್ನು ಲೆಕ್ಕಿಸದೆ ಯಾವುದೇ ಪೂರ್ವ ವಿಮಾ ವೈದ್ಯಕೀಯ ತಪಾಸಣೆಯ ಅಗತ್ಯವಿಲ್ಲ.
  • ಒಂದು ವರ್ಷದ ವೇಟಿಂಗ್ ಅವಧಿಯ ನಂತರ ಪೂರ್ವಾಸ್ತಿತ್ವದಲ್ಲಿರುವ (PED) ರೋಗಗಳು ಕವರ್ ಆಗುತ್ತವೆ.
  • ಡೇಕೇರ್ ಕಾರ್ಯವಿಧಾನಗಳು/ಚಿಕಿತ್ಸೆಗಳು ಮತ್ತು ಆಧುನಿಕ ಚಿಕಿತ್ಸೆಗಳ ವಿಶಾಲ ವ್ಯಾಪ್ತಿಯ ನೆಟ್‌ವರ್ಕ್ ಆಸ್ಪತ್ರೆಗಳ ವ್ಯಾಪಕ ಶ್ರೇಣಿಯಲ್ಲಿ ನಗದುರಹಿತ ಮತ್ತು ವೆಚ್ಚಭರಿಸುವಿಕೆ ಸೌಲಭ್ಯಗಳು.
  • ಪಾವತಿಸಿದ ಪ್ರೀಮಿಯಂ ಮೇಲೆ ಚಾಲ್ತಿಯಲ್ಲಿರುವ ಆದಾಯ ತೆರಿಗೆ ನಿಯಮಗಳ ಪ್ರಕಾರ ಪ್ರಯೋಜನಗಳನ್ನು ಪಡೆಯಬಹುದು, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80-D ಅಡಿಯಲ್ಲಿ ಪರಿಹಾರಕ್ಕಾಗಿ ಅರ್ಹತೆ.
  • ಜೀವನಪರ್ಯಂತ ನವೀಕರಣ ಆಯ್ಕೆಯ ಹೆಚ್ಚುವರಿ ಪ್ರಯೋಜನ.
  • ಕೆಲವು ವೈದ್ಯಕೀಯ ದಾಖಲೆಗಳನ್ನು ಸಲ್ಲಿಸುವಾಗ ಪ್ರೀಮಿಯಂನಲ್ಲಿ 10% ರಿಯಾಯಿತಿಯನ್ನು ಅನುಮತಿಸಾಗುತ್ತದೆ.
  • ಪಾಲಿಸಿಯ ಆನ್‌ಲೈನ್ ಖರೀದಿಯ ಮೇಲೆ 5% ರಿಯಾಯಿತಿ.
  • ಪ್ರೀಮಿಯಂಗಳನ್ನು ತ್ರೈಮಾಸಿಕ ಮತ್ತು ಅರ್ಧವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು. ವಾರ್ಷಿಕ, ದ್ವೈವಾರ್ಷಿಕ ಮತ್ತು ತ್ರೈವಾರ್ಷಿಕ ಅವಧಿಗಳಲ್ಲಿ ಪಾವತಿ ಮಾಡಲು ನೀವು ಆದ್ಯತೆ ನೀಡಬಹುದು.

ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಇನ್ಶೂರೆನ್ಸ್ ಪಾಲಿಸಿಯು, ಹಿರಿಯ ನಾಗರಿಕರಿಗೆ ಅವರ ಆರೋಗ್ಯ ರಕ್ಷಣೆಯ ಅಗತ್ಯತೆಯ ಕುರಿತು ಬೆಂಬಲಿಸಲು ಅನೇಕ ಅಂಶಗಳ ಮೇಲೆ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತದೆ ಮತ್ತು ಮೂಲಕ 60+ ಜನರಿಗೆ ಸಾಕಷ್ಟು ಮೆಡಿಕ್ಲೈಮ್ ಪಾಲಿಸಿ ವ್ಯವಸ್ಥೆಯನ್ನು ಕಲ್ಪಿಸುತ್ತದೆ.

ಡೇಕೇರ್ ಕಾರ್ಯವಿಧಾನಗಳು

ಎಲ್ಲಾ ಡೇ ಕೇರ್ ಕಾರ್ಯವಿಧಾನಗಳು, ಶಸ್ತ್ರಚಿಕಿತ್ಸೆಗಳು ಮತ್ತು 24 ಗಂಟೆಗಳಿಗಿಂತ ಕಡಿಮೆ ಅವಧಿಯ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿರುವ ಚಿಕಿತ್ಸೆಗಳ ವೆಚ್ಚವನ್ನು ಒಳಗೊಂಡಿದೆ.

ಒಳ-ರೋಗಿ ಆಸ್ಪತ್ರೆ ವೆಚ್ಚಗಳು

ವಿಮಾ ಮೊತ್ತದವರೆಗೆ ಒಳರೋಗಿ ಆಸ್ಪತ್ರೆಯ ಎಲ್ಲ ವೆಚ್ಚಗಳಿಗೆ ಕವರೇಜ್.

ಆಸ್ಪತ್ರೆ ದಾಖಲಾತಿಯ ಮೊದಲಿನ ಮತ್ತು ನಂತರದ ವೆಚ್ಚಗಳು

ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ದಾಖಲಾತಿಗೆ ಮುಂಚಿತವಾಗಿ ಆಸ್ಪತ್ರೆದೆ ದಾಖಲಾಗುವ ಮೊದಲಿನ ವೆಚ್ಚವನ್ನು ಗರಿಷ್ಠ 30 ದಿನಗಳವರೆಗೆ ಭರಿಸಲಾಗುತ್ತದೆ.

ಪಾಲಿಸಿ ಷರತ್ತಿನಲ್ಲಿ ನಿರ್ದಿಷ್ಟಪಡಿಸಿದ ಮಿತಿಗಳವರೆಗೆ ಉಂಟಾಗುವ ಆಸ್ಪತ್ರೆ ವೆಚ್ಚಗಳ ಗರಿಷ್ಠ 7% ರಷ್ಟು ಆಸ್ಪತ್ರೆ ದಾಖಲಾತಿಯ ನಂತರದ ವೆಚ್ಚಗಳನ್ನು ಭರಿಸಲಾಗುತ್ತದೆ.

ಆಧುನಿಕ ಚಿಕಿತ್ಸೆ

ಬಲೂನ್ ಸೈನುಪ್ಲ್ಯಾಸ್ಟಿ, ಇಮ್ಯುನೋಥರಪಿ ಮತ್ತು ಸ್ಟೆಮ್ ಸೆಲ್ ಥೆರಪಿಯನ್ನು ಒಳಗೊಂಡಿರುವ ಹನ್ನೆರಡು ಆಧುನಿಕ ಚಿಕಿತ್ಸೆಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ  ನೀಡಲಾಗುತ್ತದೆ.

ಹೊರ-ರೋಗಿ ವೆಚ್ಚಗಳು

ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಹೊರರೋಗಿಯಾಗಿ ಯಾವುದೇ ವೈದ್ಯಕೀಯ ಸಮಾಲೋಚನೆ ವೆಚ್ಚಗಳನ್ನು ಪ್ರತಿ ಸಮಾಲೋಚನೆಗೆ ರೂ. 200 ರವರೆಗೆ ಕವರ್ ಆಗುತ್ತದೆ.

ವಾರ್ಷಿಕ ಆರೋಗ್ಯ ತಪಾಸಣೆಗಳು

ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ ಸೀಮಿತ ಮಿತಿಗಳವರೆಗೆ ಆರೋಗ್ಯ ತಪಾಸಣೆಯ ವೆಚ್ಚದ ಪಾವತಿ.

ಪೂರ್ವಾಸ್ತಿತ್ವದಲ್ಲಿರುವ ಕಾಯಿಲೆಗಳು (PED)

ಪಾಲಿಸಿ ಪ್ರಾರಂಭದ ದಿನಾಂಕದಿಂದ 12 ತಿಂಗಳ ನಂತರ ನೀವು ಪೂರ್ವಾಸ್ತಿತ್ವದಲ್ಲಿರುವ ಕಾಯಿಲೆಗಳ ಚಿಕಿತ್ಸೆಗಳಿಗೆ ಕ್ಲೈಮ್ ಮಾಡಬಹುದು.

ನಿರ್ದಿಷ್ಟ ರೋಗ/ಅನಾರೋಗ್ಯದ ಕವರೇಜ್

ಪಾಲಿಸಿಯು 24 ತಿಂಗಳ ವೇಟಿಂಗ್ ಅವಧಿಯ ನಂತರ ಮಾತ್ರ ಕೆಲವು ನಿರ್ದಿಷ್ಟ ರೋಗ/ಚಿಕಿತ್ಸೆಗಳನ್ನು ಒಳಗೊಂಡಿದೆ. ವಿಮಾ ಮೊತ್ತದ ಆಯ್ಕೆಗಳ ಆಧಾರದ ಮೇಲೆ ನಿರ್ದಿಷ್ಟ ಮಿತಿಗಳವರೆಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯು ಕವರ್ ಆಗುತ್ತದೆ.

ಆರಂಭಿಕ ವೇಟಿಂಗ್ ಅವಧಿ – 30 ದಿನಗಳು (ಅಪಘಾತಗಳನ್ನು ಹೊರತುಪಡಿಸಿ).

ಪಾಲಿಸಿಯು ಈ ಕೆಳಗೆ ಪಟ್ಟಿಮಾಡಲಾದ ಚಿಕಿತ್ಸೆಗಳು ಮತ್ತು ಆರೋಗ್ಯ ಪರಿಸ್ಥಿತಿಗಳನ್ನು ಒಳಗೊಂಡಿರುವುದಿಲ್ಲ:

  • ಕಾಸ್ಮೆಟಿಕ್ ಅಥವಾ ಪ್ಲಾಸ್ಟಿಕ್ ಸರ್ಜರಿ ವೆಚ್ಚಗಳು
  • ಲಿಂಗ ಬದಲಾವಣೆಯ ಚಿಕಿತ್ಸೆ
  • ಉದ್ದೇಶಪೂರ್ವಕ ಸ್ವಯಂ ಗಾಯ
  • ಅಪಾಯಕಾರಿ ಅಥವಾ ಸಾಹಸಕ್ರೀಡೆಗಳಲ್ಲಿ ಭಾಗವಹಿಸುವಿಕೆಯಿಂದಾಗಿ ಉಂಟಾಗುವ ಚಿಕಿತ್ಸೆಗಳು.
  • ಆಲ್ಕೋಹಾಲ್ ಅಥವಾ ಡ್ರಗ್ ಬಳಕೆಯಿಂದಾಗಿ ಅಗತ್ಯವಾಗುವ ಚಿಕಿತ್ಸೆಗಳು
  • ಜನ್ಮಜಾತ ಬಾಹ್ಯಸ್ಥಿತಿ/ ದೋಷಗಳು/ವೈಪರೀತ್ಯಗಳು

ಇಂತಹ ಹೊರಗಿಡುವಿಕೆಗಳ ವಿವರವಾದ ಪಟ್ಟಿಯನ್ನು ವೀಕ್ಷಿಸಲು ದಯವಿಟ್ಟು ವೆಬ್‌ಸೈಟ್‌ನಲ್ಲಿ ಪಾಲಿಸಿ ಕರಾರುಗಳು  ಮತ್ತು ಷರತ್ತುಗಳನ್ನು ನೋಡಿ.

 60+ ವಯಸ್ಸಿನ ಜನರು ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಅನ್ನು ಏಕೆ ತೆಗೆದುಕೊಳ್ಳಬೇಕು

 

ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಒಂದು ಕಾಲದಲ್ಲಿ ರಾಷ್ಟ್ರವನ್ನು ನಿರ್ಮಿಸಲು ಸಹಾಯ ಮಾಡಿದ ಹಿರಿಯ ನಾಗರಿಕರಿಗೆ ಆರೋಗ್ಯ ಯೋಜನೆಯನ್ನು ವಿನ್ಯಾಸಗೊಳಿಸುತ್ತಿದೆ. ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು  ವೃದ್ಧ ಸಮುದಾಯಕ್ಕೆ ಬೆಂಬಲ ನೀಡುವ ಸಂಪೂರ್ಣ ಯೋಜನೆಯಾಗಿದೆ.

ಪಾಲಿಸಿಯನ್ನು ಖರೀದಿಸುವ ಮೂಲಕ ಹಿರಿಯ ನಾಗರಿಕರು ಅನುಭವಿಸುವ ಹಲವಾರು ಮೌಲ್ಯಯುತ ಪ್ರಯೋಜನಗಳು ಇದರಲ್ಲಿವೆ:

 

  • ನೆಟ್‌ವರ್ಕ್ ಆಸ್ಪತ್ರೆ ಯಲ್ಲಿ ಯಾವುದೇ ಹೊರರೋಗಿ ವೈದ್ಯಕೀಯ ಸಮಾಲೋಚನೆಗಳ ಕವರೇಜ್
  • ಯಾವುದೇ ಪೂರ್ವ-ವಿಮಾ ವೈದ್ಯಕೀಯ ತಪಾಸಣೆಯ ಅಗತ್ಯವಿಲ್ಲ.
  • ಪೂರ್ವಾಸ್ತಿತ್ವದಲ್ಲಿರುವ ಕಾಯಿಲೆಗಳಿಗೆ (PED) ಒಂದು ವರ್ಷದ ವೇಟಿಂಗ್ ಅವಧಿಯ ನಂತರ ರಕ್ಷಣೆ.
  • ಡೇ ಕೇರ್ ಕಾರ್ಯವಿಧಾನಗಳು ಮತ್ತು ಆಧುನಿಕ ಚಿಕಿತ್ಸೆಗಳಿಗೆ ವಿಶಾಲವಾದ ವ್ಯಾಪ್ತಿ.

 

ಮೀಸಲಾದ ಹಿರಿಯ ನಾಗರಿಕರ ಹಕ್ಕುಗಳು ಮತ್ತು ಕುಂದುಕೊರತೆಗಳು

 

ವಿಮಾದಾರರ ವಿರುದ್ಧ ದೂರುಗಳನ್ನು ಹೊಂದಿರುವ ಪಾಲಿಸಿದಾರರು ಮೊದಲು ಲಿಂಕ್‌ನಲ್ಲಿರುವ ವಿಮಾದಾರರು ದೂರುಗಳು/ಕುಂದುಕೊರತೆ ಪರಿಹಾರ ಸೆಲ್ ಅನ್ನು ಸಂಪರ್ಕಿಸಬೇಕಾಗುತ್ತದೆ,

https://www.starhealth.in/grievance-redressal/

ಇಮೇಲ್:gro@starhealth.in ಅಥವಾ grievances@starhealth.in

ಅವರು ಸರಿಯಾದ ಅವಧಿಯೊಳಗೆ ವಿಮಾದಾರರಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸದಿದ್ದರೆ ಅಥವಾ ಕಂಪನಿಯ ಪ್ರತಿಕ್ರಿಯೆಯಿಂದ ಅತೃಪ್ತರಾಗಿದ್ದರೆ, ಸಂಪರ್ಕಿಸಿ

ಇಂಟಿಗ್ರೆಟೆಡ್ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ(IGMS) - IRDAI ಪೋರ್ಟಲ್ https://igms.irda.gov.in ದೂರುಗಳನ್ನು ನೋಂದಾಯಿಸಲು complaints@irdai.gov.in

ಮತ್ತು ಟೋಲ್ ಫ್ರೀ ಸಂಖ್ಯೆ. 155255 ಅಥವಾ 1800 4254 732 ಗೆ ಕರೆ ಮಾಡಬಹುದು.

 

ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದರಿಂದ ಉಂಟಾಗುವ ತೆರಿಗೆ ಪ್ರಯೋಜನ

 

ಪಾಲಿಸಿಯ ಪ್ರಮುಖ ಪ್ರಯೋಜನವೆಂದರೆ, ವಿಮಾದಾರರು ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80-D ಅಡಿಯಲ್ಲಿ ನಗದು ಹೊರತುಪಡಿಸಿ ಯಾವುದೇ ವಿಧಾನದಿಂದ ಪಾವತಿಸಿದ ಪ್ರೀಮಿಯಂಗೆ ಸಂಬಂಧಿಸಿದಂತೆ ತೆರಿಗೆ ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.

FAQ's

ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ 1 ಲಕ್ಷದಿಂದ 25 ಲಕ್ಷದವರೆಗಿನ ವಿಮಾ ಮೊತ್ತವನ್ನು ಆಧರಿಸಿದೆ.

ಇದರ ಪ್ರೀಮಿಯಂ ತೆರಿಗೆಗಳನ್ನು ಹೊರತುಪಡಿಸಿINR. 4500/- ರಿಂದ 36,000/- ವರೆಗಿನ ಶ್ರೇಣಿಯಲ್ಲಿವೆ

15 ಲಕ್ಷದ ವಿಮಾ ಮೊತ್ತ ಮತ್ತು ಪ್ರೀಮಿಯಂ ಅನ್ನು ಖರೀದಿಸಲು ಉತ್ತಮ ಆಯ್ಕೆಯು ಸುಮಾರು INR 29,000/- ಆಗಿದೆ ಮತ್ತು ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಪ್ರಯೋಜನವು ಲಭ್ಯವಿದೆ.

ವಯಸ್ಸಾದವರ ಆಹಾರ ಪದ್ಧತಿಯ ಬಗ್ಗೆ ಮತ್ತು ಅವರ ಮಿತಿಗಳು ಹಾಗೂ ಅಗತ್ಯಗಳ ಕುರಿತು ನಾವು ಅರಿತುಕೊಂಡಿದ್ದೇವೆ.

ರೋಗನಿರ್ಣಯಕ್ಕಾಗಿ ವಯಸ್ಸಾದವರನ್ನು ಹಲವಾರು ಬಾರಿ ಭೇಟಿ ಮಾಡವಂತೆ ಹೇಳುವುದು ಸೂಕ್ತವಲ್ಲ.

ಯಾವುದೇ ವಿಮಾ ಮೊತ್ತದ ಆಯ್ಕೆಗಾಗಿ ವಿಮಾ ಪೂರ್ವ ವೈದ್ಯಕೀಯ ತಪಾಸಣೆಯ ಅಗತ್ಯವಿಲ್ಲ.

ವಿಮಾ ಪೂರ್ವ ವೈದ್ಯಕೀಯ ತಪಾಸಣೆಯ ವೆಚ್ಚವನ್ನು ಭರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಏಕೆಂದರೆ ನಾವು ವಯಸ್ಸಾದವರನ್ನು ವಿಮಾ ಪೂರ್ವ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದಿಲ್ಲ.

ಈ ಪಾಲಿಸಿಯ ಅಡಿಯಲ್ಲಿ 3 ಅವಧಿ-ಬೌಂಡ್  ಹೊರಗಿಡುವಿಕೆಗಳು ಅಥವಾ ವೇಟಿಂಗ್ ಅವಧಿಗಳಿವೆ, ಅವುಗಳೆಂದರೆ

  1. ಯಾವುದೇ ಆರಂಭಿಕ ಅನಾರೋಗ್ಯ - 30 ದಿನಗಳು ( ಅಪಘಾತಗಳು ಮೊದಲ ದಿನದಿಂದಲೇ ಕವರ್ ಆಗುತ್ತವೆ)
  2. ನಿರ್ದಿಷ್ಟ ನಿಗದಿತ ಚಿಕಿತ್ಸೆ - 24 ತಿಂಗಳುಗಳು ಅಂದರೆ., ಕಣ್ಣಿನ ಪೊರೆ, ಆಂತರಿಕ ವರ್ಟಬ್ರಲ್ ಡಿಸ್ಕ್‌ನ ಪ್ರೊಲ್ಯಾಪ್ಸ್, ENT, ಕ್ಯಾಲ್ಸುಲಿ ಮತ್ತು ಹರ್ನಿಯಾದ ಎಲ್ಲಾ ರೀತಿಯ ನಿರ್ವಹಣೆ, ಇತ್ಯಾದಿ.
  3. ಪೂರ್ವಾಸ್ತಿತ್ವದಲ್ಲಿರುವ ಕಾಯಿಲೆಗಳು - 12 ತಿಂಗಳುಗಳು

ವೈದ್ಯಕೀಯ ವರದಿಗಳನ್ನು ತಯಾರಿಸಲು ಮತ್ತು ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಿಂದ ಸ್ವೀಕರಿಸಲ್ಪಟ್ಟ ಜೀವಮಾನದ ಆರೋಗ್ಯವಂತ ವ್ಯಕ್ತಿಗೆ 10% ರಿಯಾಯಿತಿ.


ಪ್ರಸ್ತಾಪಿಸುವವರು ಈ ಕೆಳಗಿನ ದಾಖಲೆಗಳನ್ನು ಒದಗಿಸಿದರೆ:

ಒತ್ತಡ ಥಾಲಿಯಂ ವರದಿ
BP ವರದಿ
ಸಕ್ಕರೆಯ ಪ್ರಮಾಣ (ರಕ್ತ ಮತ್ತು ಮೂತ್ರ)
ರಕ್ತದ ಯೂರಿಯಾ ಮತ್ತು ಕ್ರಿಯೇಟಿನೈನ್


ಪ್ರಸ್ತಾವನೆಯ ದಿನಾಂಕದಿಂದ 45 ದಿನಗಳಿಗಿಂತ ಮೊದಲು ಮಾಡಿದ ಪರೀಕ್ಷೆಯ ವರದಿಗಳು ಮಾನ್ಯವಾಗಿರುವುದಿಲ್ಲ.


ನಾವು ಡಿಜಿಟಲ್ (ಶೂನ್ಯ-ಸಂಪರ್ಕ) ವಹಿವಾಟನ್ನು ಉತ್ತೇಜಿಸುತ್ತೇವೆ


ಮೊದಲ ಖರೀದಿಗೆ ಮಾತ್ರ 5% ಆನ್‌ಲೈನ್ ಖರೀದಿ ರಿಯಾಯಿತಿ.

ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ವೆಚ್ಚ-ಹಂಚಿಕೆಯ ಅವಶ್ಯಕತೆ. ವಿಮಾದಾರರು ಸ್ವೀಕಾರಾರ್ಹ ಕ್ಲೈಮ್‌ಗಳ  ನಿರ್ದಿಷ್ಟ ಶೇಕಡಾವಾರು ಮೊತ್ತವನ್ನು ಹೊಂದಿರಬೇಕು. ಎಲ್ಲಾ ಕ್ಲೈಮ್‌ಗಳಿಗೆ ನಾಮಮಾತ್ರದ ಸಹ-ಪಾವತಿ 30% ಅನ್ವಯಿಸುತ್ತದೆ.

ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ
Disclaimer:

Health Insurance Coverage for pre-existing medical conditions is subject to underwriting review and may involve additional requirements, loadings, or exclusions. Please disclose your medical history in the proposal form for a personalised assessment. 
The information provided on this page is for general informational purposes only. Availability and terms of health insurance plans may vary based on geographic location and other factors. Consult a licensed insurance agent or professional for specific advice. T&C Apply. For further detailed information or inquiries, feel free to reach out via email at marketing.d2c@starhealth.in