New
AROGYA SEVA KENDRA - Free Health Consultation -Click Here to Know More|BIMA BHAROSA - An Integrated Grievance Management System to facilitate the policyholders and complainants to file their grievances with IRDAI -Click here to know more|Click here to link your KYC|Policies where the risk commencement date is on or after 1st October 2024, all the policy servicing shall be as per the IRDAI (Insurance Products) Regulations, 2024 dated 20th March 2024 and Master Circular on Health Insurance Business dated 29th May 2024
DND Registration

ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿ

India +91✓

IRDAI UIN: SHAHLIP26043V062526

HIGHLIGHTS

Plan Essentials

purple essential logo 2

ಮಧ್ಯಂತರ ಸೇರ್ಪಡೆ

ಹೊಸದಾಗಿ ಮದುವೆಯಾದ ಸಂಗಾತಿ, ನವಜಾತ ಶಿಶು ಮತ್ತು/ಅಥವಾ ಕಾನೂನಾತ್ಮಕವಾಗಿ ದತ್ತು ಪಡೆದ ಮಗುವನ್ನು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಪಾಲಿಸಿಯನ್ನು ಸೇರಿಸಿಕೊಳ್ಳಬಹುದು. ವೇಟಿಂಗ್ ಅವಧಿಯು ಹೊಸದಾಗಿ ಸೇರ್ಪಡೆಗೊಳ್ಳುವ ದಿನಾಂಕದಿಂದ ಅನ್ವಯವಾಗುತ್ತದೆ.

purple essential logo 6

ಪ್ರವೇಶ ವಯಸ್ಸು

18 ರಿಂದ 40 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ಫ್ಲೋಟರ್ ಆಧಾರದ ಅಡಿಯಲ್ಲಿ, 91 ದಿನಗಳು ಮತ್ತು 25 ವರ್ಷ ವಯಸ್ಸಿನ ಗರಿಷ್ಠ ಮೂರು ಅವಲಂಬಿತ ಮಕ್ಕಳನ್ನು ಒಳಗೊಂಡಿದೆ.

purple essential logo 3

ವಿಶೇಷ ರಿಯಾಯಿತಿ

36 ವರ್ಷಕ್ಕಿಂತ ಮೊದಲು ಪಾಲಿಸಿಯನ್ನು ಖರೀದಿಸಲು ಮತ್ತು 40 ವರ್ಷಗಳ ನಂತರ ಅದನ್ನು ನವೀಕರಿಸಲು ಪ್ರೀಮಿಯಂನಲ್ಲಿ 10% ರಿಯಾಯಿತಿ ಅನ್ವಯಿಸುತ್ತದೆ.

purple essential logo 3

ಸ್ಟಾರ್ ವೆಲ್‌ನೆಸ್ ಪ್ರೋಗ್ರಾಂ

ಆರೋಗ್ಯಕರ ಜೀವನಶೈಲಿಯಲ್ಲಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಗಳಿಸಿದ ವೆಲ್‌ಮೆಸ್ ಪಾಯಿಂಟ್‌ಗಳನ್ ಪಾಲಿಸಿ ನವೀಕರಣದ ಸಮಯದಲ್ಲಿ 2-10% ವರೆಗೆ ರಿಯಾಯಿತಿ ಗಳಿಸಲು ಬಳಸಿಕೊಳ್ಳಬಹುದು.

purple essential logo 3

ರಸ್ತೆ ಅಪಘಾತಕ್ಕೆ ಹೆಚ್ಚುವರಿ ಮೂಲ ವಿಮಾ ಮೊತ್ತ

ಮೂಲ ವಿಮಾ ಮೊತ್ತವು ಖಾಲಿಯಾದರೆ, ರಸ್ತೆ ಅಪಘಾತಗಳಿಂದ ಆಸ್ಪತ್ರೆಗೆ ದಾಖಲಾಗಿಲು,  ಅದನ್ನು 25% ನಿಂದ ಗರಿಷ್ಠ ರೂ. 10,00,000/- ವರೆಗೆ ಹೆಚ್ಚಿಸಲಾಗುತ್ತದೆ.

purple essential logo 3

ಕಂತಿನ ಆಯ್ಕೆಗಳು

ಪಾಲಿಸಿ ಪ್ರೀಮಿಯಂ ಅನ್ನು ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು. ಇದನ್ನು ವಾರ್ಷಿಕ, ದ್ವೈವಾರ್ಷಿಕ (2 ವರ್ಷಗಳಿಗೊಮ್ಮೆ) ಮತ್ತು ತ್ರೈವಾರ್ಷಿಕ (3 ವರ್ಷಗಳಿಗೊಮ್ಮೆ) ಆಧಾರದ ಮೇಲೆ ಪಾ. ಈ ಸೌಲಭ್ಯವು . 5 ಲಕ್ಷ ಮತ್ತು ಅದಕ್ಕಿಂತ ಹೆಚ್ತ್ ವಿಮಾ ಮೊತ್ತಕ್ಕೆ ಮಾತ್ರ ಲಭ್ಯವಿರುತ್ತದೆ.

purple essential logo 2

ವೈದ್ಯಕೀಯ ಪರೀಕ್ಷೆ

ಈ ಪಾಲಿಸಿಯನ್ನು ಪಡೆಯಲು ಪೂರ್ವ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ

purple essential logo 6

ಪಾಲಿಸಿದ ವಿಧ

ಈ ಪಾಲಿಸಿಯನ್ನು ಲೈಯಕ್ತಿಕ ಮತ್ತು ಫ್ಲೋಟರ್ ಆಧಾರದ ಮೇಲೆ ಪಡೆಯಬಹುದು.

Detailed List

ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

ಗೋಲ್ಡ್ ಪ್ಲ್ಯಾನ್ಸಿಲ್ವರ್ ಪ್ಲ್ಯಾನ್

ಒಳರೋಗಿ ಆಸ್ಪತ್ರೆ

ಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ವೆಚ್ಚಗಳನ್ನು ಇದು ಒಳಗೊಂಡಿದೆ.

ಆಸ್ಪತ್ರೆ ದಾಖಲಾತಿ ಪೂರ್ವ

ಒಳರೋಗಿಯನ್ನು ಆಸ್ಪತ್ರೆಗೆ ದಾಖಲಿಸುವುದರ ಜೊತೆಗೆ, ಆಸ್ಪತ್ರೆಗೆ ದಾಖಲಾದ ದಿನಾಂಕದ 60 ದಿನಗಳ ಮೊದಲು ತಗಲುವ ವೈದ್ಯಕೀಯ ವೆಚ್ಚಗಳನ್ನು ಸಹ ಒಳಗೊಂಡಿದೆ.

ಆಸ್ಪತ್ರೆಗೆ ದಾಖಲಾದ ನಂತರ

ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ದಿನಾಂಕದಿಂದ 90 ದಿನಗಳವರೆಗಿನ ಆಸ್ಪತ್ರೆ ದಾಖಲಾತಿ ನಂತರದ ವೈದ್ಯಕೀಯ ವೆಚ್ಚಗಳನ್ನು ಪಾಲಿಸಿಯ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳ ಪ್ರಕಾರ ಒಳಗೊಂಡಿದೆ.

ಕೊಠಡಿಯ ಬಾಡಿಗೆ

ಕೊಠಡಿ (ಏಕ ಖಾಸಗಿ ಎ/ಸಿ ಕೊಠಡಿ), ಒಳರೋಗಿಯು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಬೋರ್ಡಿಂಗ್ ಮತ್ತು ಶುಶ್ರೂಷೆ ವೆಚ್ಚಗಳನ್ನು ಒಳಗೊಂಡಿದೆ.

ರೋಡ್ ಆ್ಯಂಬುಲೆನ್ಸ್ ಆ್ಯಂಬ್ಯುಲೆನ್ಸ್

ಖಾಸಗಿ ಆ್ಯಂಬ್ಯುಲೆನ್ಸ್ ಸೇವೆಗಳ ಮೂಲಕ ವಿಮಾದಾರರನ್ನು ಆಸ್ಪತ್ರೆಗೆ ದಾಖಲಿಸಲು ಮತ್ತು ಉತ್ತಮ ಚಿಕಿತ್ಸೆಗೆ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲು ಆ್ಯಂಬ್ಯುಲೆನ್ಸ್ ಶುಲ್ಕವನ್ನು ಒಳಗೊಂಡಿರುತ್ತದೆ.

ಡೇ ಕೇರ್ ಕಾರ್ಯವಿಧಾನಗಳು

ತಾಂತ್ರಿಕ ಪ್ರಗತಿಯಿಂದಾಗಿ ಆಸ್ಪತ್ರೆಗೆ ದಾಖಲಾದ 24 ಗಂಟೆಗಳಿಗಿಂತ ಕಡಿಮೆ ಅವಧಿಯ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರ ಚಿಕಿತ್ಸಾ ವಿಧಾನಗಳು ಕವರ್ ಆಗುತ್ತವೆ.

ಆಧುನಿಕ ಚಿಕಿತ್ಸೆ

ಓರಲ್ ಕಿಮೋಥೆರಪಿ, ಇಂಟ್ರಾ ವಿಟ್ರಿಯಲ್ ಇಂಜೆಕ್ಷನ್‌ಗಳು, ರೋಬೋಟಿಕ್ ಸರ್ಜರಿಗಳು ಮುಂತಾದ ಆಧುನಿಕ ಚಿಕಿತ್ಸೆಗಳಿಗೆ ತಗಲುವ ವೆಚ್ಚಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳಿಗೆ ಒಳಪಡಿಸಲಾಗುತ್ತದೆ.

ರಸ್ತೆ ಅಪಘಾತಕ್ಕೆ (RTA) ಹೆಚ್ಚುವರಿ ಮೂಲ ವಿಮಾ ಮೊತ್ತ

ಮೂಲ ವಿಮಾ ಮೊತ್ತವು ಖಾಲಿಯಾದರೆ, ರಸ್ತೆ ಅಪಘಾತದಿಂದಾಗಿ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ, ಅದು 25% ಇಂದ ಗರಿಷ್ಠ ರೂ. 10,00,000/- ಕ್ಕೆ ಹೆಚ್ಚಿಸಲಾಗುತ್ತದೆ.

ಮೂಲ ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್

ಪಾಲಿಸಿ ಅವಧಿಯಲ್ಲಿ ವಿಮಾ ಮೊತ್ತದ ಭಾಗಶಃ ಅಥವಾ ಪೂರ್ಣ ಬಳಕೆಯ ಮೇಲೆ, ಅದೇ ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾ ಮೊತ್ತದ 100% ಅನ್ನು ರಿಸ್ಟೋರ್ ಮಾಡಲಾಗುತ್ತದೆ.

ಸಂಚಿತ ಬೋನಸ್

ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ ವಿಮಾ ಮೊತ್ತದ ಗರಿಷ್ಠ 100% ಗೆ ಒಳಪಟ್ಟು ವಿಮಾ ಮೊತ್ತದ 20% ನಲ್ಲಿ ಸಂಚಿತ ಬೋನಸ್ ಅನ್ನು ನೀಡಲಾಗುತ್ತದೆ.

ಆನ್‌ಲೈನ್ ರಿಯಾಯಿತಿ

ಆನ್‌ಲೈನ್ ಮೂಲಕ ಮೊದಲ ಬಾರಿಗೆ ಪಾಲಿಸಿಯನ್ನು ಖರೀದಿಸಲು ಪ್ರೀಮಿಯಂನಲ್ಲಿ 5% ರಿಯಾಯಿತಿ ನೀಡಲಾಗುತ್ತದೆ.

ವಿಶೇಷ ರಿಯಾಯಿತಿ

36 ವರ್ಷಕ್ಕಿಂತ ಮೊದಲು ಪಾಲಿಸಿಯನ್ನು ಖರೀದಿಸಲು ಮತ್ತು 40 ವರ್ಷಗಳ ನಂತರ ಅದನ್ನು ನವೀಕರಿಸಲು ಪ್ರೀಮಿಯಂನಲ್ಲಿ 10% ರಿಯಾಯಿತಿ ಅನ್ವಯಿಸುತ್ತದೆ.

ಇ-ವೈದ್ಯಕೀಯ ಅಭಿಪ್ರಾಯ  

ಕಂಪನಿಯ ಪರಿಣತ ಪ್ಯಾನಲ್‌ನಿಂದ ಇ-ವೈದ್ಯಕೀಯ ಅಭಿಪ್ರಾಯ ಸೌಲಭ್ಯವು ವಿಮಾದಾರರು ಪ್ರಾರಂಭಿಸಿದ ವಿನಂತಿಯ ಮೇಲೆ ಲಭ್ಯವಿದೆ.

ಆರೋಗ್ಯ ತಪಾಸಣೆ

ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಉಂಟಾಗುವ ಆರೋಗ್ಯ ತಪಾಸಣೆ ವೆಚ್ಚಗಳು ಕ್ಲೈಮ್‌ಗೆ ಸಂಬಂಧಪಡದೆ ನಿಗದಿತ ಮಿತಿಗಳಿಗೆ ಒಳಪಟ್ಟಿರುತ್ತದೆ.

ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮಗಳು

ವಿವಿಧ ಸ್ವಾಸ್ಥ್ಯ ಚಟುವಟಿಕೆಗಳ ಮೂಲಕ ವಿಮಾದಾರರ ಆರೋಗ್ಯಕರ ಜೀವನಶೈಲಿಯನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ಸ್ವಾಸ್ಥ್ಯ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗುತ್ತದೆ.  ಹೆಚ್ಚುವರಿಯಾಗಿ ವಿಮಾದಾರರು ಗಳಿಸಿದ ಸ್ವಾಸ್ಥ್ಯ ಬೋನಸ್ ಪಾಯಿಂಟ್‌ಗಳನ್ನು ಗರಿಷ್ಠ 10% ವರೆಗೆ ನವೀಕರಣ ರಿಯಾಯಿತಿಗಳನ್ನು ಪಡೆದುಕೊಳ್ಳಲು ಬಳಸಬಹುದು.

ಜೀವನಪರ್ಯಂತ ನವೀಕರಣ

ಈ ಪಾಲಿಸಿಯು ಜೀವನಪರ್ಯಂತ ನವೀಕರಣ ಆಯ್ಕೆಯನ್ನು ಒದಗಿಸುತ್ತದೆ.

ಡೆಲಿವರಿ ವೆಚ್ಚಗಳು

ಸಿಸೇರಿಯನ್ ಸೇರಿದಂತೆ ಡೆಲಿವರಿ ವೆಚ್ಚಗಳು ಗರಿಷ್ಠ ಎರಡು ಹೆರಿಗೆಗಳವರೆಗೆ ಪ್ರತಿ ಹೆರಿಗೆಗೆ ರೂ. 30,000/-.

ಆಸ್ಪತ್ರೆ ನಗದು ಪ್ರಯೋಜನ

ಆಸ್ಪತ್ರೆಯಲ್ಲಿ ಕಳೆದ ಪ್ರತಿಯೊಂದು ಸಂಪೂರ್ಣ ದಿನಕ್ಕೆ ರೂ.1000/- ನಗದು ಪ್ರಯೋಜನವನ್ನು ಪ್ರತಿ ಆಸ್ಪತ್ರೆಗೆ ಗರಿಷ್ಠ 7 ದಿನಗಳು ಮತ್ತು ಪ್ರತಿ ಪಾಲಿಸಿ ಅವಧಿಗೆ 14 ದಿನಗಳವರೆಗೆ ಒದಗಿಸಲಾಗುತ್ತದೆ.
ಪಾಲಿಸಿ ವಿವರಗಳು ಹಾಗೂ ಕರಾರುಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ದಾಖಲೆಯನ್ನು ಓದಿ.

ಬೇರೆ ಏನನ್ನಾದರೂ ಹುಡುಕುತ್ತಿದ್ದೀರಾ?

ಎಲ್ಲಾ ಪ್ಲ್ಯಾನ್‌ಗಳನ್ನು ವೀಕ್ಷಿಸಿ
ಪ್ರಾರಂಭಿಸಿ

ಅತ್ಯುತ್ತಮವಾದುದರ ಖಾತರಿ ಹೊಂದಿರಿ

ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.

ಹೆಚ್ಚಿನ ಮಾಹಿತಿ ಬೇಕೆ?
ಹೆಚ್ಚಿನ ಮಾಹಿತಿ ಬೇಕೆ?
ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?
ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?
ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿ
Disclaimer:

Health Insurance Coverage for pre-existing medical conditions is subject to underwriting review and may involve additional requirements, loadings, or exclusions. Please disclose your medical history in the proposal form for a personalised assessment. 
The information provided on this page is for general informational purposes only. Availability and terms of health insurance plans may vary based on geographic location and other factors. Consult a licensed insurance agent or professional for specific advice. T&C Apply. For further detailed information or inquiries, feel free to reach out via email at marketing.d2c@starhealth.in