ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್

ಕುಟುಂಬಕ್ಕಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು

ನಮ್ಮ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳೊಂದಿಗೆ ನಿಮ್ಮ ಕುಟುಂಬವನ್ನು ಸುರಕ್ಷಿತಗೊಳಿಸಿ

ಕುಟುಂಬಕ್ಕಾಗಿ ನಮ್ಮ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಯೋಜನೆಯು ಒಂದೇ ಹೆಲ್ತ್ ಪಾಲಿಸಿಯ ಅಡಿಯಲ್ಲಿ ಇಡೀ ಕುಟುಂಬದ ದೊಡ್ಡ ಮತ್ತು ಸಣ್ಣ ವೈದ್ಯಕೀಯ ವೆಚ್ಚಗಳಿಗೆ ಸಮಗ್ರ ವ್ಯಾಪ್ತಿಯನ್ನು ನೀಡುತ್ತದೆ. ಸ್ಟಾರ್ ಹೆಲ್ತ್‌ನಿಂದ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಯೋಜನೆಗಳೊಂದಿಗೆ, ತುರ್ತು ಪರಿಸ್ಥಿತಿಯ ಸಮಯದಲ್ಲಿ ಉಂಟಾಗುವ ವೈದ್ಯಕೀಯ ವೆಚ್ಚಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುವುದರಿಂದ ನೀವು ನಿಮ್ಮ ಪ್ರೀತಿಪಾತ್ರರನ್ನು ಸುರಕ್ಷಿತವಾಗಿರಿಸಿಕೊಳ್ಳಬಹುದು.

*I hereby authorise Star Health Insurance to contact me. It will override my registry on the NCPR.

All Health Plans

Section Title

Star Health Assure Insurance Policy

ಸ್ಟಾರ್‌ ಹೆಲ್ತ್‌ ಪ್ರೀಮಿಯರ್‌ ವಿಮೆ ಪಾಲಿಸಿ

ಕುಟುಂಬದ ಗಾತ್ರ: ಸ್ವಯಂ, ಸಂಗಾತಿ, ಪೋಷಕರು ಮತ್ತು ಅತ್ತೆ-ಮಾವ ಸೇರಿದಂತೆ 6 ವಯಸ್ಕರು ಮತ್ತು 3 ಮಕ್ಕಳನ್ನು ಒಳಗೊಂಡಿದೆ 

ಆಟೋಮ್ಯಾಟಿಕ್ ರಿಸ್ಟೋರೇಷನ್: ವಿಮಾ ಮೊತ್ತವನ್ನು ಎಷ್ಟು ಬಾರಿಯಾದರೂ ರಿಸ್ಟೋರ್ ಮಾಡಲಾಗುತ್ತದೆ ಮತ್ತು ಪ್ರತಿ ಬಾರಿ ಗರಿಷ್ಠ 100% ವರೆಗೆ

ದೀರ್ಘಾವಧಿಯ ರಿಯಾಯಿತಿ: ಪಾಲಿಸಿಯನ್ನು 2 ಅಥವಾ 3 ವರ್ಷಗಳ ಅವಧಿಗೆ ಆರಿಸಿಕೊಂಡರೆ, ಪ್ರೀಮಿಯಂನಲ್ಲಿ ರಿಯಾಯಿತಿ ಲಭ್ಯವಿದೆ

View Plan

Star Comprehensive Insurance Policy

ಸ್ಟಾರ್ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ

ಆಟೋಮ್ಯಾಟಿಕ್ ರಿಸ್ಟೋರೇಷನ್: ಬೇಸಿಕ್ ವಿಮಾ ಮೊತ್ತದ 100% ಅನ್ನು ಪಾಲಿಸಿ ವರ್ಷದಲ್ಲಿ ಒಂದು ಬಾರಿ ರಿಸ್ಟೋರ್ ಮಾಡಲಾಗುತ್ತದೆ 

ಬೈ-ಬ್ಯಾಕ್ PED: ಪೂರ್ವಾಸ್ತಿತ್ವದ ಕಾಯಿಲೆಗಳಿಗೆ ಸಂಬಂಧಿಸಿದಂತೆ ವೇಟಿಂಗ್ ಅವಧಿಯನ್ನು ಕಡಿಮೆ ಮಾಡಬಹುದಾದ ಐಚ್ಛಿಕ ಕವರ್

ಮಧ್ಯಂತರ ಸೇರ್ಪಡೆ: ನವ ವಿವಾಹಿತ ಸಂಗಾತಿ ಮತ್ತು ನವಜಾತ ಶಿಶುವನ್ನು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಪಾಲಿಸಿಯಲ್ಲಿ ಕವರ್ ಮಾಡಬಹುದಾಗಿದೆ

View Plan

Star Women Care Insurance Policy

ಸ್ಟಾರ್ ವುಮೆನ್ ಕೇರ್ ಇನ್ಶೂರೆನ್ಸ್ ಪಾಲಿಸಿ

ವಿಶಿಷ್ಟ ಕವರ್: ಮಹಿಳೆಯರಿಗೆ ಅನೇಕ ರೀತಿಯ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಪಾಲಿಸಿ 

ಆಟೋಮ್ಯಾಟಿಕ್ ರಿಸ್ಟೋರೇಷನ್: ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾ ಮೊತ್ತದ 100% ಅನ್ನು ರಿಸ್ಟೋರ್ ‌ಮಾಡಲಾಗುತ್ತದೆ 

ಡೆಲಿವರಿ ವೆಚ್ಚಗಳು: ಸಾಮಾನ್ಯ ಮತ್ತು ಸಿ-ಸೆಕ್ಷನ್ ಡೆಲಿವರಿ ವೆಚ್ಚಗಳು (ಪ್ರಸವಪೂರ್ವ ಮತ್ತು ನಂತರದ ವೆಚ್ಚ ಸೇರಿದಂತೆ)

View Plan

Young Star Insurance Policy

ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿ

ಆಟೋಮ್ಯಾಟಿಕ್ ರಿಸ್ಟೋರೇಷನ್: ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾ ಮೊತ್ತದ 100% ಅನ್ನು ರಿಸ್ಟೋರ್ ಮಾಡಲಾಗುತ್ತದೆ 

ಮಧ್ಯಾವಧಿ ಸೇರ್ಪಡೆ: ಪಾಲಿಸಿ ವರ್ಷದ ಮಧ್ಯದಲ್ಲಿ ಹೊಸದಾಗಿ ಮದುವೆಯಾದ ಅಥವಾ ವಿವಾಹಿತ ಸಂಗಾತಿಯನ್ನು, ಕಾನೂನುಬದ್ಧವಾಗಿ ದತ್ತು ಪಡೆದ ಮಗು ಮತ್ತು ನವಜಾತ ಶಿಶುವನ್ನು ಸೇರಿಸಲು ನಿಮಗೆ ಅರ್ಹತೆ ನೀಡಲಾಗುತ್ತದೆ 

ಲಾಯಲ್ಟಿ ರಿಯಾಯಿತಿ: 36 ವರ್ಷಕ್ಕಿಂತ ಮೊದಲು ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಲು ಮತ್ತು 40 ವರ್ಷ ಮೀರಿದ ನಂತರ ಅದನ್ನು ನಿರಂತರವಾಗಿ ನವೀಕರಿಸಲು 10% ರಿಯಾಯಿತಿ ನೀಡಲಾಗುತ್ತದೆ

View Plan

New

ಸ್ಮಾರ್ಟ್ ಹೆಲ್ತ್ ಪ್ರೊ

ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್:  ಈ ಪಾಲಿಸಿಯನ್ನು ಪಡೆಯಲು ವಿಮಾ ಇನ್ಶೂರೆನ್ಸ್ ಸ್ಕ್ರೀನಿಂಗ್ ಅಗತ್ಯವಿಲ್ಲ
ಆಟೋಮ್ಯಾಟಿಕ್ ರಿಸ್ಟೋರೇಷನ್: ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾ ಮೊತ್ತದ 100% ಅನ್ನು ರಿಸ್ಟೋರ್ ಮಾಡಲಾಗುತ್ತದೆ 
ಆಯುಷ್ ಚಿಕಿತ್ಸೆ:  ಆಯುಷ್ ಚಿಕಿತ್ಸೆಗಳಿಗೆ ಆಸ್ಪತ್ರೆಗೆ ದಾಖಲಾತಿ ವೆಚ್ಚವನ್ನು ಕವರ್ ಮಾಡಲಾಗುತ್ತದೆ

View Plan

Arogya Sanjeevani Policy

ಆರೋಗ್ಯ ಸಂಜೀವನಿ ಪಾಲಿಸಿ, ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್

ಗ್ರಾಮೀಣ ರಿಯಾಯಿತಿ: ಗ್ರಾಮೀಣ ಜನರಿಗೆ ಪ್ರೀಮಿಯಂನಲ್ಲಿ 20% ರಿಯಾಯಿತಿ 

ಆಧುನಿಕ ಚಿಕಿತ್ಸೆಗಳು: ಆಧುನಿಕ ಚಿಕಿತ್ಸೆಗಳಿಗೆವಿಮಾ ಮೊತ್ತದ 50% ವರೆಗೆ  ಕವರ್ ಪಡೆಯಿರಿ 

ಆಯುಷ್ ಕವರ್: ಆಯುಷ್ ಚಿಕಿತ್ಸೆಗಳಿಗೆ ಆಸ್ಪತ್ರೆಯ ದಾಖಲಾತಿ ವೆಚ್ಚವನ್ನು ಒಳಗೊಂಡಿರುತ್ತದೆ

View Plan

Star Micro Rural and Farmers Care

ಸ್ಟಾರ್ ಮೈಕ್ರೋ ರೂರಲ್ ಮತ್ತು ಫಾರ್ಮರ್ಸ್ ಕೇರ್

ಗ್ರಾಮೀಣ ಕವರ್: ಗ್ರಾಮೀಣ ಜನರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ

ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್ ಅಗತ್ಯವಿಲ್ಲ

ಕಡಿಮೆ ಕಾಯುವಿಕೆ ಅವಧಿ: ಪಿಇಡಿ ಮತ್ತು ನಿರ್ದಿಷ್ಟ ರೋಗಗಳು ಕೇವಲ 6 ತಿಂಗಳ ನಂತರ ಕವರ್ ಆಗುತ್ತವೆ

View Plan

Top-up Health Insurance

ಸೂಪರ್ ಸರ್‌ಪ್ಲಸ್ ಇನ್ಶೂರೆನ್ಸ್ ಪಾಲಿಸಿ

ಟಾಪ್-ಅಪ್ ಪ್ಲಾನ್: ಕೈಗೆಟುಕುವ ಪ್ರೀಮಿಯಂನಲ್ಲಿ ವರ್ಧಿತ ಆರೋಗ್ಯ ಕವರೇಜ್ ಪಡೆಯಿರಿ 

ರಿಚಾರ್ಜ್ ಪ್ರಯೋಜನ: ವಿಮಾ ಮೊತ್ತವು ಮುಗಿದಾಗ ಯಾವುದೇ ಹೆಚ್ಚುವರಿ ಖರ್ಚಿಲ್ಲದೇ ಹೆಚ್ಚುವರಿ ಪರಿಹಾರ ಮೊತ್ತವನ್ನು ಪಡೆಯಿರಿ

ದೀರ್ಘ-ಕಾಲಿಕ ರಿಯಾಯಿತಿ: 2 ವರ್ಷಗಳ ಅವಧಿಯ ಪಾಲಿಸಿಯನ್ನು ಆಯ್ಕೆ ಮಾಡಿದರೆ,  5% ಪ್ರೀಮಿಯಂ ರಿಯಾಯಿತಿ ಲಭ್ಯವಿರುತ್ತದೆ

View Plan

Star Hospital Cash Insurance Policy

ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿ

ಆಸ್ಪತ್ರೆ ದಾಖಲಾತಿಗೆ ಇಡಿಗಂಟಿನ ಪ್ರಯೋಜನ: ಆಸ್ಪತ್ರೆಗೆ ದಾಖಲಾದಾಗ ಸಾಂದರ್ಭಿಕ ವೆಚ್ಚಗಳಿಗೆ ದೈನಂದಿನ ನಗದು ಲಾಭವನ್ನು ಒದಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ 

ಐಸಿಯು ಆಸ್ಪತ್ರೆ ನಗದು:  ಆಸ್ಪತ್ರೆಯ ಐಸಿಯುನಲ್ಲಿ ದಾಖಲಾದ ಸಂದರ್ಭದಲ್ಲಿ ಆಸ್ಪತ್ರೆಯ ನಗದು ಮೊತ್ತದ (ದಿನಕ್ಕೆ) 200% ವರೆಗೆ ಪಡೆಯಬಹುದಾಗಿದೆ 

ಅಪಘಾತ ಆಸ್ಪತ್ರೆ ನಗದು: ಅಪಘಾತಗಳ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ ಪ್ರತಿ 24 ಗಂಟೆಗಳಿಗೊಮ್ಮೆ ಆಸ್ಪತ್ರೆಯ ನಗದು ಮೊತ್ತದ 150% ವರೆಗೆ ಪಡೆಯಿರಿ

View Plan

Star Health Premier Insurance Policy

ಸ್ಟಾರ್‌ ಹೆಲ್ತ್‌ ಪ್ರೀಮಿಯರ್‌ ವಿಮೆ ಪಾಲಿಸಿ

ವಿಶೇಷ ಪಾಲಿಸಿ: ಯಾವುದೇ ಗರಿಷ್ಠ ವಯಸ್ಸಿನ ಮಿತಿಯಿಲ್ಲದೆ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗಾಗಿ ವಿನ್ಯಾಸಗೊಳಿಸಲಾಗಿದೆ 

ಇನ್ಶೂರೆನ್ಸ್ ಪೂರ್ವದ ತಪಾಸಣೆ: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವದ ತಪಾಸಣೆ ಅಗತ್ಯವಾಗಿಲ್ಲ 

ಆರೋಗ್ಯ ತಪಾಸಣೆ ಡಿಸ್ಕೌಂಟ್: ಪಟ್ಟಿ ಮಾಡಲಾದ ಆರೋಗ್ಯ ತಪಾಸಣೆ ವರದಿಗಳನ್ನು ಪಾಲಿಸಿಯ ಪ್ರಾರಂಭದಲ್ಲಿ ಸಲ್ಲಿಸಿದರೆ ಮತ್ತು ಸಲ್ಲಿಸಿದ ವರದಿಗಳಲ್ಲಿನ ತೀರ್ಮಾನಗಳಿಗೆ ಒಳಪಟ್ಟಿದ್ದರೆ 10% ಪ್ರೀಮಿಯಂ ಡಿಸ್ಕೌಂಟ್ ಲಭ್ಯವಿದೆ

View Plan

Senior Citizen Health Insurance

ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ

ಹಿರಿಯರಿಗಾಗಿ ಕವರ್:  ಜೀವನ ಪರ್ಯಂತ ನವೀಕರಣಗಳೊಂದಿಗೆ 60 - 75 ವರ್ಷ ವಯಸ್ಸಿನವರಿಗಾಗಿ ವಿನ್ಯಾಸಗೊಳಿಸಲಾಗಿದೆ

ಹೊರರೋಗಿ ಕವರ್: ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಹೊರರೋಗಿಯಾಗಿ ವೈದ್ಯಕೀಯ ಸಮಾಲೋಚನೆಗಳಿಗೆ ಕವರ್ ಪಡೆಯಿರಿ 

ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್ ಅಗತ್ಯವಿಲ್ಲ

View Plan

Health Insurance for Diabetes

ಡಯಾಬಿಟೀಸ್ ಸೇಫ್ ಇನ್ಶೂರೆನ್ಸ್ ಪಾಲಿಸಿ

ಮಧುಮೇಹದ ಕವರ್: ಟೈಪ್-1 ಮತ್ತು ಟೈಪ್-2 ಮಧುಮೇಹ ಕಂಡುಬಂದ ಜನರನ್ನು ಒಳಗೊಳ್ಳಲು ವಿನ್ಯಾಸಗೊಳಿಸಲಾಗಿದೆ

ಫ್ಯಾಮಿಲಿ ಕವರ್: ಅವರಲ್ಲಿ ಯಾರಾದರೂ ಮಧುಮೇಹಿಗಳಾಗಿದ್ದರೆ ಫ್ಲೋಟರ್ ಆಧಾರದ ಮೇಲೆ (ಸ್ವಯಂ ಮತ್ತು ಸಂಗಾತಿಯ) ಸಹ ಈ ಪಾಲಿಸಿಯನ್ನು ಪಡೆಯಬಹುದು 

ಆಟೋಮ್ಯಾಟಿಕ್ ರಿಸ್ಟೋರೇಷನ್: ವೈಯಕ್ತಿಕ ಯೋಜನೆಗಾಗಿ ಪಾಲಿಸಿ ವರ್ಷದಲ್ಲಿ ಒಮ್ಮೆ ವಿಮಾ ಮೊತ್ತದ 100% ರಿಸ್ಟೋರ್ ಪಡೆಯಿರಿ

View Plan

Star Health Gain Insurance Policy

ಸ್ಟಾರ್ ಹೆಲ್ತ್ ಗೇನ್ ಇನ್ಶೂರೆನ್ಸ್ ಪಾಲಿಸಿ

ವಿಶಾಲ ಕವರ್: ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಮತ್ತು ಹೊರರೋಗಿ ಖರ್ಚುಗಳು ಎರಡಕ್ಕೂ ವಿಶಾಲ ಕವರ್ ಒದಗಿಸುತ್ತದೆ 

ಆಧುನಿಕ ಚಿಕಿತ್ಸೆ: ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಅಥವಾ ಡೇ ಕೇರ್ ಕಾರ್ಯವಿಧಾನಗಳಾಗಿ ಖರ್ಚುಗಳನ್ನು ಕವರ್ ಮಾಡುತ್ತದೆ

ಹೊರರೋಗಿ ಪ್ರಯೋಜನ: ಯಾವುದೇ ನೆಟ್‌ವರ್ಕ್ ಮಾಡಲಾದ ಸೌಲಭ್ಯದಲ್ಲಿ ಹೊರರೋಗಿ ಖರ್ಚುಗಳನ್ನು ಕವರ್ ಮಾಡುತ್ತದೆ

View Plan

Trending
Family Health Insurance

ಫ್ಯಾಮಿಲಿ ಹೆಲ್ತ್ ಆಪ್ಟಿಮಾ ಇನ್ಶೂರೆನ್ಸ್ ಪ್ಲ್ಯಾನ್

ಆಟೋಮ್ಯಾಟಿಕ್ ರಿಸ್ಟೋರೇಷನ್: ವಿಮಾ ಮೊತ್ತದ 100% ಅನ್ನು ಪಾಲಿಸಿ ವರ್ಷದಲ್ಲಿ ಮೂರು ಬಾರಿ ರಿಸ್ಟೋರ್ ಮಾಡಲಾಗುತ್ತದೆ  

ರಸ್ತೆ ಅಪಘಾತಕ್ಕೆ ಹೆಚ್ಚುವರಿ ವಿಮಾ ಮೊತ್ತ: ಕವರೇಜ್‌ ಮಿತಿ ಬರಿದಾಗುವಿಕೆಯ ನಂತರ ರಸ್ತೆ   ಅಪಘಾತಕ್ಕೆ ವಿಮಾ ಮೊತ್ತವನ್ನು ಹೆಚ್ಚಿಸಲಾಗುತ್ತದೆ 

ರೀಚಾರ್ಜ್ ಪ್ರಯೋಜನ: ಕವರೇಜ್‌ ಮಿತಿ ಬರಿದಾಗುವಿಕೆಯ ನಂತರ ಪಾಲಿಸಿ ವರ್ಷದಲ್ಲಿ ಒಂದು ಬಾರಿ ಹೆಚ್ಚುವರಿ ವಿನಾಯಿತಿಯನ್ನು ಪಡೆಯಬಹುದಾಗಿದೆ

View Plan

Young-star-add-on-cover

ಯಂಗ್ ಸ್ಟಾರ್ ಎಕ್ಸ್ಟ್ರಾ ಪ್ರೊಟೆಕ್ಟ್-ಆಡ್‌ ಆನ್‌ ಕವರ್‌

ವರ್ಧಿತ ಕವರ್: ಕೈಗೆಟುಕುವ ಪ್ರೀಮಿಯಂನಲ್ಲಿ ನಿಮ್ಮ ಮೂಲ ಪಾಲಿಸಿಯ ವರ್ಧಿತ ಕವರೇಜ್ ಮಿತಿಗಳನ್ನು ಪಡೆಯಿರಿ
ವೈದ್ಯಕೀಯೇತರ ಐಟಂಗಳ ಕವರ್: ನಿಮ್ಮ ಪಾಲಿಸಿಯ ಅಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್ ಇದ್ದಲ್ಲಿ ವೈದ್ಯಕೀಯೇತರ ಐಟಂಗಳಿಗೆ ಕವರೇಜ್ ಪಡೆಯಿರಿ
ಆಯುಷ್ ಚಿಕಿತ್ಸೆ: ಮೂಲ ಪಾಲಿಸಿಯ ವಿಮಾ ಮೊತ್ತದವರೆಗೆ ಆಯುಷ್ ಚಿಕಿತ್ಸೆಗಳಿಗೆ ಕವರ್ ಪಡೆಯಿರಿ

View Plan

ಕುಟುಂಬವು ನಮ್ಮ ಜೀವನದ ಪ್ರಮುಖ ವಿಷಯವಾಗಿದ್ದು ಅದೊಂದು ಉಡುಗೊರೆಯಾಗಿದೆ. ಸಂತೋಷದಿಂದ ಕೂಡಿದ ಕುಟುಂಬವು ಪ್ರೀತಿ ಮತ್ತು ಆರೋಗ್ಯದಿಂದ ರೂಪಿತಗೊಂಡಿದೆ. ಅದಕ್ಕಾಗಿಯೇ, ಸ್ಟಾರ್ ಹೆಲ್ತ್ ಒದಗಿಸುತ್ತಿದೆ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳ ಶ್ರೇಣಿ. 

ನಮ್ಮ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ನೀವು ಮತ್ತು ನಿಮ್ಮ ಕುಟುಂಬವನ್ನು ಗಮನದಲ್ಲಿರಿಸಿಕೊಂಡು ವಿನ್ಯಾಸಗೊಳಿಸಿದ್ದೇವೆ. ಈ ಪ್ಲ್ಯಾನ್‌ಗಳು ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನು ಸುರಕ್ಷಿತಗೊಳಿಸುವಲ್ಲಿ ನಿಮ್ಮ ಆಯ್ಕೆಯನ್ನು ಉತ್ತಮಗೊಳಿಸಲು ವಿವಿಧ ರೀತಿಯ ಪ್ರಯೋಜನಗಳನ್ನು ಒಳಗೊಂಡಿದೆ.

 

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ

 

ವೈದ್ಯಕೀಯ ತುರ್ತು ಸಂದರ್ಭದಲ್ಲಿ ಹೆಲ್ತ್ ಇನ್ಶೂರೆನ್ಸ್ ಆದ್ಯತೆಯ ವಿಷಯವಾಗಿರುತ್ತದೆ. ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್, ಒಂದೇ ಪಾಲಿಸಿ ಅಡಿಯಲ್ಲಿ ವಯಸ್ಸಿನ ಹೊರತಾಗಿಯೂ ಪ್ರತಿಯೊಬ್ಬರಿಗೂ ಕವರೇಜ್ ಅನ್ನು ಒದಗಿಸುವ ವಿವಿಧ ರೀತಿಯ ಪ್ರಯೋಜನವನ್ನು ಹೊಂದಿರುತ್ತದೆ.

 

  • ಒತ್ತಡ-ಮುಕ್ತ ಆಸ್ಪತ್ರೆ ದಾಖಲಾತಿ

 

ನಿಮ್ಮ ಕುಟುಂಬಕ್ಕೆ ವಿಮೆ ಮಾಡಿಸಿದಾಗ ಆಸ್ಪತ್ರೆ ದಾಖಲಾತಿಯು ಶಾಂತವಾಗಿರುತ್ತದೆ ಮತ್ತು ಜಂಜಾಟ-ಮುಕ್ತವಾಗಿರುತ್ತದೆ. ನಿವು ನೆಟ್‌ವರ್ಕ್ ಆಸ್ಪತ್ರೆಗಳಿಂದ ನಗದು ರಹಿತ ಚಿಕಿತ್ಸೆಯನ್ನು ಪಡೆಯಬಹುದು.

 

  • ತೆರಿಗೆ ಉಳಿತಾಯ 80 D ಪ್ರಯೋಜನ

 

ಆರೋಗ್ಯ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದು ಆದಾಯ ತೆರಿಗೆಯನ್ನು ಉಳಿಸಲು ಸಹಾಯಕವಾಗಿರುತ್ತದೆ. ನೀವು ತೆರಿಗೆ ಪಾವತಿಗಳನ್ನು ಉಳಿಸಬಹುದು ಮತ್ತು ಅದರ ಮಿತಿಯು ನಿಮ್ಮ ವಯಸ್ಸಿನ ಮಾನದಂಡವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80D ಅಡಿಯಲ್ಲಿ ನೀವು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ತೆರಿಗೆ ವಿನಾಯಿತಿಯ ಮಿತಿಯು ₹25,000 ಮತ್ತು ಹಿರಿಯ ನಾಗರಿಕರಿಗೆ ಇದು ₹50,000 ಆಗಿರುತ್ತದೆ.

 

  • ನಗದುಪಾವತಿಗೆ ಯಾವುದೇ ತೆರಿಗೆ ಪ್ರಯೋಜನವಿಲ್ಲ

 

ಆದಾಯ ತೆರಿಗೆ ಪ್ರಯೋಜನಗಳನ್ನು ಪಡೆಯಲು, ಚೆಕ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, ಡಿಮ್ಯಾಂಡ್ ಡ್ರಾಫ್ಟ್ ಅಥವಾ ನೆಟ್‌ಬ್ಯಾಂಕಿಂಗ್‌ನಂತಹ ಬ್ಯಾಂಕಿಂಗ್ ವಿಧಾನಗಳ ಮೂಲಕ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಪಾವತಿಸಿ.
 

 

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಖರೀದಿಸಬೇಕಾದ 5 ಪ್ರಮುಖ ಕಾರಣಗಳು

 

1. ಆರ್ಥಿಕ ಭದ್ರತೆ 

 

ಉತ್ತಮ ಫ್ಯಾಮಿಲಿ ಹೆಲ್ತ್‌ಕೇರ್ ಪ್ಲ್ಯಾನ್‌ನಲ್ಲಿ ಹೂಡಿಕೆ ಮಾಡುವುದು ಕಠಿಣ ಆರೋಗ್ಯ ಪರಿಸ್ಥಿತಿಯ ಸಂದರ್ಭದಲ್ಲಿ ನಿಮ್ಮ ಆರ್ಥಿಕ ಬದ್ಧತೆಗಳನ್ನು ಕಡಿಮೆಗೊಳಿಸುತ್ತದೆ. ಕೆಲವು ಆರೋಗ್ಯ ತುರ್ತುಸ್ಥಿತಿಗಳಿಗೆ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವುದು ನಿಮ್ಮ ಯೋಜನೆಗಳ ಸ್ಥಿರತೆಯ ಮೇಲೆ ಮತ್ತು ಆರ್ಥಿಕ ಭದ್ರತೆಯ ಮೇಲೆ ಆಳವಾದ ಪರಿಣಾಮ ಬೀರಬಹುದು. ಬದಲಾಗುತ್ತಿರುವ ಜೀವನಶೈಲಿಯಿಂದ, ನಾವು ತೀವ್ರವಾದ ಕಾಯಿಲೆಗಳು ಮತ್ತು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ. ಅಂತಹ ಸಂದರ್ಭದಲ್ಲಿ ಹಣವನ್ನು ಸಂಗ್ರಹಿಸುವುದು ಕಷ್ಟವಾಗುತ್ತದೆ ಮತ್ತು ಹೆಲ್ತ್ ಇನ್ಶೂರೆನ್ಸ್ ರಕ್ಷಣೆಯು ಸಹಾಯಕ್ಕೆ ಬರುತ್ತದೆ. ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್, ನಿಮ್ಮ ಪಾಲಿಸಿಯ ಪ್ರಕಾರವನ್ನು ಅವಲಂಬಿಸಿ ಆಸ್ಪತ್ರೆಯ ವೆಚ್ಚಗಳು, ಚಿಕಿತ್ಸಾ ವೆಚ್ಚಗಳು, ವಸತಿ ವೆಚ್ಚಗಳು, ಆಂಬ್ಯುಲೆನ್ಸ್ ಶುಲ್ಕಗಳು ಮತ್ತು ಇನ್ನಿತರ ಹೆಚ್ಚಿನ ವೆಚ್ಚಗಳನ್ನು ಭರಿಸಲು ಅನುವು ಮಾಡಿಕೊಡುತ್ತದೆ. 

 

2. ಮನಶ್ಶಾಂತಿ  

 

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಹೂಡಿಕೆ ಮಾಡುವುದರಿಂದ, ನಿಮ್ಮ ಪ್ರೀತಿಪಾತ್ರರ ವೈದ್ಯಕೀಯ ವೆಚ್ಚಗಳು ಸುರಕ್ಷಿತವಾಗಿರುತ್ತವೆ, ಇದರಿಂದ ನಿಮ್ಮ ಮನಸ್ಸು ನೆಮ್ಮದಿಯಾಗಿರುತ್ತದೆ. ನೀವು ಮತ್ತು ನಿಮ್ಮ ಕುಟುಂಬವು ಆರ್ಥಿಕವಾಗಿ ಸುರಕ್ಷಿತವಾಗಿರುವಾಗ ಚೇತರಿಕೆ ಪ್ರಕ್ರಿಯೆಯಲ್ಲಿ ನಿಮ್ಮ ಮನಸ್ಸು ಇನ್ನಷ್ಟು ಶಾಂತವಾಗಿರಬಹುದು.

 

3. ಗುಣಮಟ್ಟದ ಚಿಕಿತ್ಸೆ

 

ನಿಮ್ಮ ಕುಟುಂಬದ ಎಲ್ಲಾ ಸದಸ್ಯರು ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನಡಿಯಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆದುಕೊಳ್ಳಬಹುದು, ಭಾರತದಲ್ಲಿನ ಅನೇಕ ನಗರಗಳಾದ್ಯಂತ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ನಗದು ರಹಿತ ಆಸ್ಪತ್ರೆ ದಾಖಲಾತಿಯನ್ನು ಪಡೆದುಕೊಳ್ಳಬಹುದು. ತಮ್ಮ ಆಯ್ಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.

 

4. ಹೆಚ್ಚುತ್ತಿರುವ ಆರೋಗ್ಯ ವೆಚ್ಚ

 

ಆರೋಗ್ಯ ಸೇರಿದಂತೆ ಇಂದಿನ ದಿನಗಳಲ್ಲಿ ಎಲ್ಲವೂ ದುಬಾರಿಯಾಗುತ್ತಿದೆ ಎಂಬುದು ಕಟುಸತ್ಯ. ಆರೋಗ್ಯ ಸೇವೆಯ ಸರಾಸರಿ ವೆಚ್ಚವು ಖಂಡಿತವಾಗಿ ಗಗನಕ್ಕೇರಿದೆ, ಸಾಮಾನ್ಯ ಜನರಿಗೆ ಕೆಲವು ಚಿಕಿತ್ಸೆಗಳು ಆರ್ಥಿಕ ಹೊಡೆತವನ್ನು ನೀಡುತ್ತಿವೆ. ಉತ್ತಮ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಉಳಿತಾಯಕ್ಕೆ ಯಾವುದೇ ರೀತಿಯ ಅನಾನುಕೂಲವಾಗದೆ ಕುಟುಂಬದ ಎಲ್ಲಾ ಸದಸ್ಯರಿಗೆ ಉತ್ತಮ ಚಿಕಿತ್ಸೆಯನ್ನು ಒದಗಿಸುತ್ತದೆ.

 

5. ತೆರಿಗೆ ವಿನಾಯಿತಿ

 

ವಿಮೆದಾರರು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80D ಅಡಿಯಲ್ಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಪಾವತಿಸಿದ ಪ್ರೀಮಿಯಂಗಳ ಮೇಲೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಮತ್ತು ನೀವು ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ಪಾವತಿಸಿದರೆ, ಕಡಿತಗಳನ್ನು ಒಟ್ಟಿಗೆ ಸೇರಿಸಬಹುದು ಮತ್ತು ಪ್ರತಿ ವರ್ಷ ತೆರಿಗೆ ವಿನಾಯಿತಿಗಳನ್ನು ಪಡೆಯಬಹುದು.

 

ನಾನು ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಲು ಅರ್ಹನಾಗಿದ್ದೇನೆಯೇ?

 

ಹೌದು, ನೀವು ನಿಮಗಾಗಿ ಮತ್ತು ನಿಮ್ಮ ಸಂಗಾತಿ, ಅವಲಂಬಿತ ಮಕ್ಕಳು, ಪೋಷಕರು ಮತ್ತು ಅತ್ತೆ ಮಾವನವರನ್ನೊಳಗೊಂಡ ಪಾಲಿಸಿಯನ್ನು ಖರೀದಿಸಬಹುದು.

 

  • ಪೂರ್ವಾಸ್ತಿತ್ವದಲ್ಲಿರುವ ಕಾಯಿಲೆ/ ಹಿಂದಿನ ವೈದ್ಯಕೀಯ ಸ್ಥಿತಿ

 

ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ ನಿಮ್ಮ ವೈದ್ಯಕೀಯ ಇತಿಹಾಸವನ್ನು ಬಹಿರಂಗಪಡಿಸುವುದು ಮುಖ್ಯವಾಗಿದೆ. ಪ್ರಸ್ತಾವನೆ ಫಾರ್ಮ್‌ನಲ್ಲಿ ರೋಗಗಳು, ಕಾಯಿಲೆ ಸೇರಿದಂತೆ ನಿಮ್ಮ ಆರೋಗ್ಯ ಇತಿಹಾಸವನ್ನು ನೀವು ಬಹಿರಂಗಪಡಿಸಬೇಕು.

ವೇಟಿಂಗ್ ಅವಧಿಯ ನಂತರ ವಿಮಾಗಾರರು ಕೆಲವು ಪೂರ್ವಾಸ್ತಿತ್ವದಲ್ಲಿರುವ ರೋಗಗಳನ್ನು ಕವರ್ ಮಾಡುತ್ತಾರೆ. ಕೆಲವು ಸಂದರ್ಭಗಲ್ಲಿ ಕೆಲವು ಕಾಯಿಲೆಗಳಿಗೆ PED ಅನ್ನು ಪುನಃ ಖರೀದಿಸುವಂತಹ ಹೆಚ್ಚುವರಿ ಪ್ರೀಮಿಯಂಗಳು ಬೇಕಾಗಬಹುದು.

 

  • ವಯಸ್ಸು

 

18 ರಿಂದ 65 ವಯಸ್ಸಿನ ಜನರು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು.

 

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಎಷ್ಟು ಸದಸ್ಯರನ್ನು ಒಳಗೊಳ್ಳಬಹುದು?

 

ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ, ನೀವು, ನಿಮ್ಮ ಸಂಗಾತಿ, ಮಕ್ಕಳು, ಪೋಷಕರು ಮತ್ತು ಅತ್ತೆ ಮಾವ ಸೇರಿದಂತೆ ನಿಮ್ಮ ಎಲ್ಲಾ ಕಾನೂನು ಕುಟುಂಬ ಸದಸ್ಯರನ್ನು ನೀವು ಕವರ್ ಮಾಡಬಹುದು. ಹೆಚ್ಚುವರಿಯಾಗಿ, ಇಡೀ ಕುಟುಂಬಕ್ಕೆ ವೆಚ್ಚ-ಪರಿಣಾಮಕಾರಿ ಪರಿಣಾಮಗಳನ್ನು  ಒದಗಿಸುವುದರಿಂದ ಉತ್ತಮ ಫ್ಯಾಮಿಲಿ ಹೆಲ್ತ್  ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ.

 

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅಡಿಯಲ್ಲಿ ಕವರೇಜ್

 

ಸ್ಟಾರ್ ಹೆಲ್ತ್‌, ಸಮಗ್ರ ಪ್ರಯೋಜನಗಳು, ತ್ವರಿತ ಕ್ಲೈಮ್ ಪ್ರಕ್ರಿಯೆಗಳು ಮತ್ತು ನಗದು ರಹಿತ ಆಸ್ಪತ್ರೆ ಸೌಲಭ್ಯಗಳೊಂದಿಗೆ ಭಾರತದಲ್ಲಿ ಅತ್ಯುತ್ತಮ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಒದಗಿಸುತ್ತದೆ. ಸ್ಟಾರ್ ಹೆಲ್ತ್‌ನ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ, ವಯಸ್ಸಿನ ಹೊರತಾಗಿಯೂ, ನೀವು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಎಲ್ಲಾ ಕುಟುಂಬದ ಸದಸ್ಯರಿಗೆ ವಿಮಾಮೊತ್ತದ ವ್ಯಾಪಕವಾದ ಕವರೇಜ್ ಪಡೆಯಬಹುದು.
  

ಆಸ್ಪತ್ರೆ ದಾಖಲಾತಿ ವೆಚ್ಚಗಳು  


 
ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಕೊಠಡಿ ಬಾಡಿಗೆ, ಶಸ್ತ್ರಚಿಕಿತ್ಸೆ, ವೆಚ್ಚ, ICU ಶುಲ್ಕಗಳು, ವೈದ್ಯರ ಸಮಾಲೋಚನೆಗಳು ಇತ್ಯಾದಿ ಸೇರಿದಂತೆ ಆಸ್ಪತ್ರೆ ವೆಚ್ಚಗಳು, ರೋಗಗಳು ಮತ್ತು ಗಾಯಗಳನ್ನು ಕವರ್ ಮಾಡುತ್ತದೆ.  


 
ಆಸ್ಪತ್ರೆ ದಾಖಲಾತಿ ಪೂರ್ವ ಮತ್ತು ನಂತರ ವೆಚ್ಚಗಳು  


 
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ ಅಡಿಯಲ್ಲಿ ಆಸ್ಪತ್ರೆ ದಾಖಲಾತಿ ಪೂರ್ವ ಮತ್ತು ನಂತರದ ವೆಚ್ಚಗಳನ್ನು ಒಳಗೊಂಡಿದೆ. ಇವುಗಳಲ್ಲಿ ವೈದ್ಯರ ಶುಲ್ಕ ಮತ್ತು ಚಿಕಿತ್ಸೆ, ವೈದ್ಯಕೀಯ ಬಿಲ್‌ಗಳು, ತನಿಖೆಗಳು, ಫಾಲೋ-ಅಪ್ ನೇಮಕಾತಿಗಳು ಇತ್ಯಾದಿಗಳು ಸೇರಿವೆ.  


 
ಡೇಕೇರ್ ಚಿಕಿತ್ಸೆ  


 
ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಡೇಕೇರ್ ಕಾರ್ಯವಿಧಾನಗಳ ಚಿಕಿತ್ಸಾ ವೆಚ್ಚವನ್ನು ಒಳಗೊಂಡಿದೆ.  


   
ಅಂಗಾಂಗ ದಾನಿ ವೆಚ್ಚಗಳು  
 
ವಿಮಾದಾರರು ಸ್ವೀಕರಿಸುವವರಾಗಿದ್ದರೆ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಅಂಗಾಂಗ ದಾನಿ ವೆಚ್ಚಗಳನ್ನು ಕವರ್ ಮಾಡುತ್ತದೆ.  


 
ಆಯುಷ್ ಕವರ್  


 
ಆಯುರ್ವೇದ, ಸಿದ್ಧ, ಯುನಾನಿ ಮತ್ತು ಹೋಮಿಯೋಪತಿಯಂತಹ ಅಲೋಪತಿ ಹೊರತುಪಡಿಸಿದ ಔಷಧಗಳ ವ್ಯವಸ್ಥೆಗೆ ಒಳರೋಗಿ ಆಸ್ಪತ್ರೆ ದಾಖಲಾತಿಗೆ ಮೆಡಿಕಲ್ ಇನ್ಶೂರೆನ್ಸ್ ಕವರೇಜ್ ಒದಗಿಸುತ್ತದೆ.

 

ಆರೋಗ್ಯ ತಪಾಸಣೆ  


 
ಹೆಚ್ಚಿನ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಆಸ್ಪತ್ರೆ ದಾಖಲಾತಿ ಜೊತೆಗೆ ಆರೋಗ್ಯ ತಪಾಸಣೆಗೆ ಸಂಬಂಧಿಸಿದ ವೆಚ್ಚಗಳನ್ನು ಸಹ ಕವರ್ ಮಾಡುತ್ತವೆ.  


 
ಆಟೋಮ್ಯಾಟಿಕ್ ರಿಸ್ಟೋರೇಷನ್  


 
ನಿಮ್ಮ ವೈದ್ಯಕೀಯ ವೆಚ್ಚಗಳು ನಿಮ್ಮ ವಿಮಾ ಮೊತ್ತವನ್ನು ಮೀರಿದಾಗ, ಆಟೋಮ್ಯಾಟಿಕ್ ರಿಸ್ಟೋರೇಷನ್ ಪ್ರಯೋಜನವು ನಿಮ್ಮ ಹೆಲ್ತ್ ಇನ್ಶೂರೆನ್ಸ್‌ನ ವಿಮಾ ಮೊತ್ತವನ್ನು ಖಾಲಿಯಾದ ನಂತರ ಗರಿಷ್ಠ ಮಿತಿಗೆ ರಿಸ್ಟೋರ್  ಮಾಡಲು ಸಹಾಯ ಮಾಡುತ್ತದೆ.

 

 

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ನಲ್ಲಿ ಹೊರಗಿಡುವಿಕೆಗಳು  

 

ಸಾಮಾನ್ಯವಾಗಿ, ಮೆಡಿಕಲ್ ಅಥವಾ ಹೆಲ್ತ್ ಪಾಲಿಸಿಯು ಪಾಲಿಸಿಯ ಕವರೇಜ್ ವಿವರಗಳೊಂದಿಗೆ ವಿಮಾದಾತರ ನಿರ್ದಿಷ್ಟ ಕರಾರುಗಳು ಮತ್ತು ಷರತ್ತುಗಳನ್ನು ಹೊಂದಿರುತ್ತದೆ. ಇದು ಪಾವತಿಸದಿರುವ ಹೊರಗಿಡುವಿಕೆಗಳನ್ನು ಸಹ ಸೇರಿಸುತ್ತದೆ, ಅಂದರೆ, ವಿನಾಯಿತಿಗಳ ಅಡಿಯಲ್ಲಿ ಪಟ್ಟಿ ಮಾಡಲಾದ ವೈದ್ಯಕೀಯ ಕ್ಲೈಮ್ ಅನ್ನು ಪಾಲಿಸಿದಾರರು ಸಲ್ಲಿಸಲು ಸಾಧ್ಯವಿಲ್ಲ. 

 

1. ಸ್ಟಾರ್ ಹೆಲ್ತ್ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಅನ್ನು 5 ಸರಳ ಹಂತಗಳಲ್ಲಿ ಆನ್‌ಲೈನ್‌ನಲ್ಲಿ ಖರೀದಿಸುವುದು   

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಆನ್‌ಲೈನ್‌ನಲ್ಲಿ ಖರೀದಿಸುವುದು ಅನುಕೂಲಕರ ಪ್ರಕ್ರಿಯೆಯಾಗಿದೆ.
ಭಾರತದ ಮೊದಲ ಅದ್ವಿತೀಯ ಹೆಲ್ತ್ ಇನ್ಶೂರೆನ್ಸ್ ಕಂಪನಿಯಾಗಿ, ಸ್ಟಾರ್ ಹೆಲ್ತ್ ಪ್ರಸವ ಸಮಯದ ಪ್ರಯೋಜನಗಳು, ನಗದು ರಹಿತ ಆಸ್ಪತ್ರೆ ಸೌಲಭ್ಯಗಳು, ವೈದ್ಯಕೀಯ ಪೂರ್ವ ಮತ್ತು ನಂತರದ ಕವರೇಜ್ ಯೋಜನೆಗಳು ಮತ್ತು ಇನ್ನಷ್ಟನ್ನು ಒಳಗೊಂಡಂತೆ ಕುಟುಂಬಗಳಿಗಾಗಿಯೇ ಕಸ್ಟಮೈಸ್ ಮಾಡಿದ ಸಮಗ್ರ ಆರೋಗ್ಯ ಯೋಜನೆಗಳನ್ನು ಒದಗಿಸುತ್ತದೆ. 

ಸ್ಟಾರ್ ಹೆಲ್ತ್ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಖರೀದಿಸಲು 5 ಸರಳ ಹಂತಗಳು ಇಲ್ಲಿವೆ:

ಹಂತ 1: ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಪೇಜ್ ಮೇಲಿನ ಬಲ ಮೂಲೆಯಲ್ಲಿ ನ್ಯಾವಿಗೇಟ್ ಮಾಡಿ ಮತ್ತು 'ಈಗಲೇ ಖರೀದಿಸಿ' ಬಟನ್ ಕ್ಲಿಕ್ ಮಾಡಿ.
ಹಂತ 3: ಹೆಸರು, ಇಮೇಲ್ ಐಡಿ, ಪಿನ್ ಕೋಡ್ ಮತ್ತು ಮೊಬೈಲ್ ಸಂಖ್ಯೆಯಂತಹ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ
ಹಂತ 4: ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಇನ್ಶೂರೆನ್ಸ್ ಯೋಜನೆಯನ್ನು ಆಯ್ಕೆಮಾಡಿ ಮತ್ತು ಪ್ರೀಮಿಯಂ ಪಾವತಿಸಿ.
ಹಂತ 5: ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ನಾವು ಪಾಲಿಸಿ ದಾಖಲೆಗಳನ್ನು ಕಳುಹಿಸುತ್ತೇವೆ.

 

2. ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸುವ ಮೊದಲು ಮೌಲ್ಯಮಾಪನ ಮಾಡಬೇಕಾದ ಅಂಶಗಳು

ಕುಟುಂಬಕ್ಕೆ ಹೆಲ್ತ್ ಇನ್ಶೂರೆನ್ಸ್ ರಕ್ಷಣೆಯು ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ವೆಚ್ಚವನ್ನು ನಿಭಾಯಿಸಲು ಉತ್ತಮ ಮಾರ್ಗವಾಗಿದೆ. ಇನ್ಶೂರೆನ್ಸ್ ಯೋಜನೆಯು ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತದೆ ಮತ್ತು ವೈದ್ಯಕೀಯ ಅನಿಶ್ಚಿತತೆಯಿಂದ ಕುಟುಂಬದ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಯೋಜನೆಯನ್ನು ಖರೀದಿಸುವ ಮೊದಲು ಮೌಲ್ಯಮಾಪನ ಮಾಡಬೇಕಾದ ಕೆಲವು ಅಂಶಗಳಿವೆ:

  • ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳು - ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಲಾಗದ ಪರಿಸ್ಥಿತಿಗಳು ಮತ್ತು ಇನ್ಶೂರೆನ್ಸ್ ಯೋಜನೆಯ ಕವರೇಜ್ ಕುರಿತು ಸಂಪೂರ್ಣ ಸ್ಪಷ್ಟತೆಯನ್ನು ಹೊಂದಿರಬೇಕು.
  • ಸರಿಯಾದ ಕಂಪನಿಯನ್ನು ಆಯ್ಕೆ ಮಾಡುವುದು - ಸಮಗ್ರ ಆರೋಗ್ಯ ಕವರೇಜ್ ಆಯ್ಕೆಗಳನ್ನು ನೀಡುವ ಅತ್ಯುತ್ತಮ ಮತ್ತು ಅತ್ಯಂತ ವಿಶ್ವಾಸಾರ್ಹ ಹೆಲ್ತ್ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡುವುದು ಅತ್ಯಗತ್ಯ.
  • ಪಾಲಿಸಿ ಕರಾರುಗಳು ಮತ್ತು ವಿಮಾ ಮೊತ್ತ - ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಪಾಲಿಸಿ ಪ್ರೀಮಿಯಂಗಳು ಮತ್ತು ವಿಮಾ ಮೊತ್ತದ ವಿವರಗಳ ಸಂಪೂರ್ಣ ಜ್ಞಾನವನ್ನು ಪಡೆದುಕೊಳ್ಳಬೇಕು.

 


ಸ್ವಯಂ-ಹಾನಿ


 
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಉದ್ದೇಶಪೂರ್ವಕ ಸ್ವಯಂ-ಹಾನಿ ಅಥವಾ ಆತ್ಮಹತ್ಯೆ ಪ್ರಯತ್ನಗಳು, ಮದ್ಯಪಾನ, ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ. 


 
ಕಾಸ್ಮೆಟಿಕ್ ಚಿಕಿತ್ಸೆಗಳು  


 
ಕಾಸ್ಟೆಟಿಕ್ ಶಸ್ತ್ರ ಚಿಕಿತ್ಸೆ ಅಥವಾ ಚಿಕಿತ್ಸೆಗಳು ಸಾಮಾನ್ಯವಾಗಿ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುವುದಿಲ್ಲ. 


 
ಸಾಹಸಮಯ ಕ್ರೀಡೆಗಳು  


 
ಫ್ಯಾಮಿಲಿ ಫ್ಲೋಟರ್ ಇನ್ಶೂರೆನ್ಸ್ ಪ್ಲ್ಯಾನ್ ರಾಕ್ ಕ್ಲೈಂಬಿಂಗ್, ಪ್ಯಾರಾಸೈಲಿಂಗ್, ಪ್ಯಾರಾಗ್ಲೈಡಿಂಗ್ ಮುಂತಾದ ಸಾಹಸ ಕ್ರೀಡೆಗಳಲ್ಲಿ ತೊಡಗಿರುವಾಗ ಉಂಟಾಗುವ ಗಾಯಗಳಿಗೆ ಬೇಕಾದ ವೆಚ್ಚಗಳನ್ನು ಕವರ್ ಮಾಡುವುದಿಲ್ಲ. 


 
ವೇಟಿಂಗ್ ಅವಧಿ   


 
ವೇಟಿಂಗ್ ಅವಧಿಯಲ್ಲಿ ಚಿಕಿತ್ಸೆಗಳಿಗೆ ವಿಮಾಗಾರರು ಕವರೇಜ್ ಒದಗಿಸುವುದಿಲ್ಲ. ಪಾಲಿಸಿಯಲ್ಲಿ ತಿಳಿಸಿರುವಂತೆ ಪೂರ್ವಾಸ್ತಿತ್ವದಲ್ಲಿರುವ ಕಾಯಿಲೆಗಳು ಅಥವಾ ಅನಾರೋಗ್ಯಕ್ಕೆ ವೇಟಿಂಗ್ ಅವಧಿಯು ಅನ್ವಯಿಸುತ್ತದೆ.

 

 

ಶಿಫಾರಸು ಮಾಡಲಾದ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು

 

ಯಂಗ್‌ ಸ್ಟಾರ್ ಇನ್ಶೂರೆನ್ಸ್ ಪಾಲಿಸಿ (UIN: SHAHLIP23164V072223)

 

ಯಂಗ್‌ ಸ್ಟಾರ್ ಇನ್ಶೂರೆನ್ಸ್ ಪಾಲಿಸಿ ಯು ಬೆಳೆಯುತ್ತಿರುವ, ಜವಾಬ್ದಾರಿಯುತ ಮಿಲೇನಿಯಲ್‌ಗಳಿಗಾಗಿ ರಚಿತವಾಗಿದ್ದು, ತಮ್ಮ ಕುಟುಂಬಕ್ಕೆ ಆರೋಗ್ಯಕರ ಜೀವನವನ್ನು ಒದಗಿಸಲು ಬಯಸುವ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗಾಗಿ ಮಾಡಲಾಗಿದೆ. ವಿಮಾದಾರ ಕುಟುಂಬವು ಈ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ನೊಂದಿಗೆ ಆಸ್ಪತ್ರೆಗೆ ದಾಖಲಾದಾಗ ಉಂಟಾಗುವ ಎಲ್ಲಾ ಆರೋಗ್ಯ ವೆಚ್ಚಗಳನ್ನು ಭರಿಸಬಹುದು. ಇದು ಆಟೋಮ್ಯಾಟಿಕ್ ರಿಸ್ಟೋರೇಷನ್, ಆಧುನಿಕ ಚಿಕಿತ್ಸೆಯ ಕವರ್, ಮತ್ತು ಹೆಚ್ಚುವರಿ ಇನ್ಶೂರೆನ್ಸ್‌ನಂತಹ ರಸ್ತೆ ಟ್ರಾಫಿಕ್ ಅಪಘಾತ (RTA), ಡೆಲಿವರಿ ವೆಚ್ಚಗಳು (ಗೋಲ್ಡ್ ಪ್ಲ್ಯಾನ್ ಅಡಿಯಲ್ಲಿ) ಇತ್ಯಾದಿ ವಿಶೇಷ ಫೀಚರ್‌ಗಳನ್ನು ಒಳಗೊಂಡಿದೆ. ಈ ಇನ್ಶೂರೆನ್ಸ್ ಪಾಲಿಸಿಯು 18 ರಿಂದ 40 ವರ್ಷ ವಯಸ್ಸಿನ ಜನರಿಗೆ ಲಭ್ಯವಿದೆ.



ಈ ಪಾಲಿಸಿಯನ್ನು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಪಡೆಯಬಹುದು. ಫ್ಲೋಟರ್ ಆಧಾರದ ಅಡಿಯಲ್ಲಿ, ಪಾಲಿಸಿಯು, ಜೀವನ ಪರ್ಯಂತ ನವೀಕರಣ ಸೌಲಭ್ಯದೊಂದಿಗೆ ಸ್ವಯಂ, ಸಂಗಾತಿ ಮತ್ತು ಮೂರು ಅವಲಂಬಿತ ಮಕ್ಕಳ (2 ವಯಸ್ಕರು + 3 ಮಕ್ಕಳು) ಕವರ್ ಅನ್ನು ಒಳಗೊಂಡಿರುತ್ತದೆ. 91 ದಿನದಿಂದ 25 ವರ್ಷದೊಳಗಿನ ಅವಲಂಬಿತ ಮಕ್ಕಳನ್ನು ಸೇರಿಸಿಕೊಳ್ಳಬಹುದು.



ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿಯು ವೈಯಕ್ತಿಕ ಆಧಾರದ ಮೇಲೆ ₹ 3 ಲಕ್ಷಗಳ ದೊಡ್ಡ ವಿಮಾ ಮೊತ್ತದ ಆಯ್ಕೆಯನ್ನು ಹಾಗೂ ವೈಯಕ್ತಿಕ ಮತ್ತು ಫ್ಲೋಟರ್ ಆಧಾರದ ಮೇಲೆ ₹ 5 / 10 / 15 / 20 / 25 / 50 / 75 / 100 ಲಕ್ಷಗಳ ಆಯ್ಕೆಯನ್ನು ಒದಗಿಸುತ್ತದೆ. ಪಾಲಿಸಿ ಅವಧಿಯು 1 ವರ್ಷಗಳು/2 ವರ್ಷಗಳು/3 ವರ್ಷಗಳು. ಪ್ರೀಮಿಯಂ ಅನ್ನು ತ್ರೈಮಾಸಿಕ ಮತ್ತು ಅರ್ಧವಾರ್ಷಿಕವಾಗಿ ಪಾವತಿಸಬಹುದು. ಪ್ರೀಮಿಯಂ ಅನ್ನು ವಾರ್ಷಿಕ, ದ್ವೈವಾರ್ಷಿಕ (2 ವರ್ಷಗಳಿಗೊಮ್ಮೆ) ಮತ್ತು ತ್ರೈವಾರ್ಷಿಕ (3 ವರ್ಷಗಳಿಗೊಮ್ಮೆ)ವಾಗಿಯೂ ಪಾವತಿಸಬಹುದು.

 

ಫ್ಯಾಮಿಲಿ ಹೆಲ್ತ್ ಒಪ್ಟಿಮಾ ಇನ್ಶೂರೆನ್ಸ್ ಪ್ಲ್ಯಾನ್ (UIN: SHAHLIP23164V072223)

 

ಫ್ಯಾಮಿಲಿ ಹೆಲ್ತ್ ಒಪ್ಟಿಮಾ ಇನ್ಶೂರೆನ್ಸ್ ಪ್ಲ್ಯಾನ್ 18 ರಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿಗಳಿಗೆ ಲಭ್ಯವಿರುತ್ತದೆ. ಈ ಪಾಲಿಸಿಯು ಸ್ವಯಂ, ಸಂಗಾತಿ, ಮೂರಕ್ಕಿಂತ ಹೆಚ್ಚಿಲ್ಲದ ಅವಲಂಬಿತ ಮಕ್ಕಳು, ಅವಲಂಬಿತ ಪೋಷಕರು, ಅವಲಂಬಿತ ಅತ್ತೆ-ಮಾವ ಸೇರಿದಂತೆ ವಿಶಾಲ ವ್ಯಾಪ್ತಿಯಲ್ಲಿ ಕುಟುಂಬ ಕವರೇಜ್ ಅನ್ನು ಒದಗಿಸುತ್ತದೆ. 



ಈ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಒದಗಿಸಲಾದ ವಿಮಾ ಮೊತ್ತವು ₹ 3 / 4 / 5 / 10 / 15 / 20 / 25 ಲಕ್ಷಗಳದ್ದಾಗಿರುತ್ತದೆ. ಪಾಲಿಸಿಯಲ್ಲಿ ನಮೂದಿಸಲಾದ ಮಿತಿಗಳವರೆಗೆ ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ಆರೋಗ್ಯ ತಪಾಸಣೆಯನ್ನು ಒಳಗೊಂಡಿರುತ್ತದೆ. ಈ ಪಾಲಿಸಿಯು, ಪಾಲಿಸಿ ಅವಧಿಯಲ್ಲಿ, ಕವರೇಜ್‌ನ ಮಿತಿಯು ಪ್ರತಿ ಬಾರಿಯೂ ಸಂಪೂರ್ಣವಾಗಿ ಖಾಲಿಯಾದಾಗ 3 ಬಾರಿ 100% ರಷ್ಟು ವಿಮಾ ಮೊತ್ತದ  ಆಟೋಮ್ಯಾಟಿಕ್ ರಿಸ್ಟೋರೇಷನ್‌ ಸೌಲಭ್ಯದೊಂದಿಗೆ ಬರುತ್ತದೆ.



ಇದಲ್ಲದೆ, ಈ ಹೆಲ್ತ್ ಇನ್ಶೂರೆನ್ಸ್ ಯೋಜನೆಯು ಎಲ್ಲಾ ಡೇ-ಕೇರ್ ಕಾರ್ಯವಿಧಾನಗಳಿಗೆ ಕವರ್, ತವರಿಗೆ ಮೃತದೇಹ ರವಾನೆ, ಸಂಬಂಧಿಕರಿಗೆ ಕೃಪಾ ಪ್ರಯಾಣ, ವೈದ್ಯಕೀಯ ಉದ್ದೇಶಕ್ಕಾಗಿ ಸ್ವದೇಶಕ್ಕೆ ತುರ್ತು ವರ್ಗಾವಣೆ, ಮನೆಯಲ್ಲಿಯೇ ಚಿಕಿತ್ಸೆ, ಅಂಗಾಂಗ ಕಸಿಗಾಗಿ ದಾನಿಗಳ ವೆಚ್ಚಗಳು, ನವಜಾತ ಶಿಶುವಿನ ರಕ್ಷಣೆಯಂತಹ ವಿಶಿಷ್ಟ ವೈಶಿಷ್ಟ್ಯಗಳ ಶ್ರೇಣಿಯನ್ನು ನೀಡುತ್ತದೆ. ಹುಟ್ಟಿದ 16ನೇ ದಿನ, ರೀಚಾರ್ಜ್ ಪ್ರಯೋಜನ, ರಸ್ತೆ ಅಪಘಾತಗಳಿಗೆ ಹೆಚ್ಚುವರಿ ವಿಮಾ ಮೊತ್ತ, ನೆರವಿನ ನೆರವು ಸಹಿತ ಗರ್ಭಧಾರಣೆ ಚಿಕಿತ್ಸೆ ಮತ್ತು ಇನ್ನೂ ಅನೇಕ ವೈಶಿಷ್ಟ್ಯಗಳ ಶ್ರೇಣಿಯನ್ನು ಒದಗಿಸುತ್ತದೆ.

 

ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ (UIN: SHAHLIP22028V072122)

 

ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ  ಯು ₹ 1 ಕೋಟಿಯವರೆಗೆ ರಕ್ಷಣೆಯನ್ನು ಒದಗಿಸುತ್ತದೆ. ವೈದ್ಯಕೀಯ ವೆಚ್ಚಗಳು ಹೆಚ್ಚುತ್ತಿರುವ ಕಾರಣದಿಂದ, ಈ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಪಾಲಿಸಿದಾರರಿಗೆ ಹಣಕಾಸಿನ ನೆರವು ಒದಗಿಸುತ್ತದೆ. ಇದು ಸಂಪೂರ್ಣ ಕುಟುಂಬದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಒಂದು ವಿಮಾ ಮೊತ್ತದ ಅಡಿಯಲ್ಲಿ ಕುಟುಂಬ ಸದಸ್ಯರೆಲ್ಲರಿಗೂ ಕವರೇಜ್ ಒದಗಿಸುತ್ತದೆ.



ಅವಲಂಬಿತ ಮಕ್ಕಳನ್ನು ಒಳಗೊಂಡಂತೆ ಕುಟುಂಬದ ಸದಸ್ಯರು 3 ತಿಂಗಳ ವಯಸ್ಸಿನಿಂದ 65 ವರ್ಷ ವಯಸ್ಸಿನವರೆಗೆ ಈ ಪಾಲಿಸಿ ಅಡಿಯಲ್ಲಿ ರಕ್ಷಣೆ ಪಡಯಬಹುದು. ಅವಲಂಬಿತ ಮಕ್ಕಳಿಗೆ 25 ವರ್ಷ ತುಂಬುವವರೆಗೆ ರಕ್ಷಣೆ ನೀಡಲಾಗುತ್ತದೆ. ಜೀವನಪರ್ಯಂತ ನವೀಕರಣ ಸಾಧ್ಯತೆಗಳನ್ನು ಇದರಲ್ಲಿ ಖಾತರಿಪಡಿಸಲಾಗಿದೆ. 



ಈ ಪಾಲಿಸಿಯು ನಿಮ್ಮ ಕುಟುಂಬದ ವೈದ್ಯಕೀಯ ಅಗತ್ಯಗಳಿಗಾಗಿ ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ನೀಡುತ್ತದೆ. ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯು ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸಾ ವಿಧಾನಗಳು, ನಾರ್ಮಲ್ ಹಾಗೂ ಸಿಸೇರಿಯನ್ ಡೆಲಿವರಿ ವೆಚ್ಚಗಳು, ನವಜಾತ ಶಿಶುವಿನ ರಕ್ಷಣೆ, ಮನೆಯಲ್ಲಿಯೇ ಚಿಕಿತ್ಸೆ, ಹೊರರೋಗಿಯಾಗಿ ವೈದ್ಯಕೀಯ ಸಮಾಲೋಚನೆ, ಆಸ್ಪತ್ರೆಯ ನಗದು ಪ್ರಯೋಜನಗಳು ಮತ್ತು ಇನ್ನೂ ಅಧಿಕ ವೈದ್ಯಕೀಯ ವೆಚ್ಚಗಳನ್ನು ಒಳಗೊಂಡಿದೆ. ಈ ಪಾಲಿಸಿಯು ಅಪಘಾತದಿಂದ ಮರಣ ಮತ್ತು ಶಾಶ್ವತ ಸಂಪೂರ್ಣ ಅಂಗವೈಕಲ್ಯಕ್ಕೆ ವಿಶ್ವಾದ್ಯಂತ ರಕ್ಷಣೆಯನ್ನು ಒದಗಿಸುತ್ತದೆ .

 

ಆರೋಗ್ಯ ಸಂಜೀವನಿ ಪಾಲಿಸಿ, ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶೂರೆನ್ಸ್ ಕಂ. ಲಿ. (UIN: SHAHLIP22027V032122)

 

ಆರೋಗ್ಯ ಸಂಜೀವಿನಿ ಪಾಲಿಸಿ, ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶೂರೆನ್ಸ್ ಕಂ. ಲಿಮಿಟೆಡ್ ಎಂಬುದು IRDAI ನಿಂದ ಕಡ್ಡಾಯಗೊಳಿಸಲಾದ ಪ್ರಮಾಣಿತ ಪಾಲಿಸಿಯಾಗಿದ್ದು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆರ್ಥಿಕ ರಕ್ಷಣೆ ನೀಡುವ ಗುರಿಯನ್ನು ಹೊಂದಿದೆ. ಫ್ಯಾಮಿಲಿ ಫ್ಲೋಟರ್ ಪ್ಲ್ಯಾನ್ 18 ರಿಂದ 65 ವರ್ಷ ವಯಸ್ಸಿನ ಜನರಿಗೆ ಜೀವನಪರ್ಯಂತ ನವೀಕರಣವನ್ನು ಒದಗಿಸುತ್ತದೆ. 3 ತಿಂಗಳಿಂದ 25 ವರ್ಷದವರೆಗಿನ ಅವಲಂಬಿತ ಮಕ್ಕಳು ಪಾಲಿಸಿಯ ವ್ಯಾಪ್ತಿಗೆ ಒಳಪಡುತ್ತಾರೆ.



ಆರೋಗ್ಯ ಸಂಜೀವಿನಿ ಪಾಲಿಸಿಯಲ್ಲಿ ನೀವು, ನಿಮ್ಮ ಸಂಗಾತಿ, ಅವಲಂಬಿತ ಮಕ್ಕಳು ಮತ್ತು ಪೋಷಕರು/ಅತ್ತೆ-ಮಾವಂದಿರು ₹ 50,000 ದಿಂದ ₹ 10 ಲಕ್ಷದವರೆಗಿನ (ರೂ. 50,000/-ಗುಣಿಸಲ್ಪಟ್ಟು) ಒಳಪಟ್ಟಿರುತ್ತಾರೆ. ಸರಳವೆನಿಸಿದರೂ ಅಗತ್ಯವಿರುವ ಪ್ರಯೋಜನಗಳಿಂದ ಕೂಡಿರುವ ಈ ಪಾಲಿಸಿಯು ಕುಟುಂಬಕ್ಕೆ ಉತ್ತಮ ಆಯ್ಕೆಯಾಗಿದೆ. ಇದರ ಕವರೇಜ್ ಒಳರೋಗಿಗಳ ಆಸ್ಪತ್ರೆ ದಾಖಲಾತಿ, ಡೇ-ಕೇರ್ ಕಾರ್ಯವಿಧಾನಗಳು, ಆಯುಷ್ ಚಿಕಿತ್ಸೆ, ರಸ್ತೆ ಆಂಬ್ಯುಲೆನ್ಸ್ ವೆಚ್ಚಗಳು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಆಧುನಿಕ ಚಿಕಿತ್ಸೆ ಮತ್ತು ಮುಂತಾದವುಗಳನ್ನು ಒಳಗೊಂಡಿರುತ್ತದೆ. ಈ ಪಾಲಿಸಿಯು ಗ್ರಾಮೀಣ ಜನರಿಗೆ ಪ್ರೀಮಿಯಂನಲ್ಲಿ 20% ರಿಯಾಯಿತಿಯನ್ನು ಒದಗಿಸುತ್ತದೆ.

 

ಸೀನಿಯರ್ ಸಿಟಿಜನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ (UIN: SHAHLIP22199V062122)

 

ಸೀನಿಯರ್ ಸಿಟಿಜನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ₹ 1 / 2 / 3 / 4 / 5 / 7.5 / 10 / 15 / 20 / 25 ಲಕ್ಷಗಳ ಮೊತ್ತದ ವಿಮಾ ಆಯ್ಕೆಗಳೊಂದಿಗೆ 60 ರಿಂದ 75 ವರ್ಷ ವಯಸ್ಸಿನ ಹಿರಿಯ ನಾಗರಿಕರಿಗೆ ನೀಡಲಾಗುವ ಪಾಲಿಸಿಯಾಗಿದೆ. ಜೀವನ ಪರ್ಯಂತ ನವೀಕರಣವನ್ನು ಇದು ಹೊಂದಿದೆ. ಈ ಪ್ಲ್ಯಾನ್ ಜಾರಿಯಲ್ಲಿದ್ದು ವೃದ್ಧರು ತಮ್ಮ ವೈದ್ಯಕೀಯ ವೆಚ್ಚವನ್ನು ಸುಲಭವಾಗಿ ಭರಿಸಬಹುದು.



ಈ ಪಾಲಿಸಿಯು ವಿಮಾ ಪೂರ್ವ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ, ಡೇ-ಕೇರ್ ಕಾರ್ಯವಿಧಾನಗಳಿಗೆ ಕವರೇಜ್, ಮೊದಲೇ ಅಸ್ತಿತ್ವದಲ್ಲಿರುವ ರೋಗಗಳು(12 ತಿಂಗಳ ವೇಟಿಂಗ್ ಅವಧಿಯಿಂದ ಕವರ್ ಆಗಿದೆ) ಆಧುನಿಕ ಚಿಕಿತ್ಸೆಗಳು ಮತ್ತು ಪ್ರೀಮಿಯಂಗಳು ವಯಸ್ಸನ್ನು ಲೆಕ್ಕಿಸದೇ ಸ್ಥಿರವಾಗಿರುತ್ತವೆ, ಇಂತಹ ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ. ಈ ಪಾಲಿಸಿಯು 1,2 ಅಥವಾ 3 ವರ್ಷಗಳ ಅವಧಿಗೆ ಲಭ್ಯವಿದೆ.

 

ಸ್ಟಾರ್ ಸೂಪರ್ ಸರ್‌ಪ್ಲಸ್ (ಫ್ಲೋಟರ್) ಇನ್ಶೂರೆನ್ಸ್ ಪಾಲಿಸಿ (UIN: SHAHLIP22034V062122)

 

 ಸ್ಟಾರ್ ಸೂಪರ್ ಸರ್‌ಪ್ಲಸ್ (ಫ್ಲೋಟರ್) ಇನ್ಶೂರೆನ್ಸ್ ಪಾಲಿಸಿ ಯು ಕುಟುಂಬಕ್ಕೆ ರಕ್ಷಣೆ ಒದಗಿಸುವ ಟಾಪ್-ಅಪ್ ಪ್ಲ್ಯಾನ್ ಆಗಿದ್ದು, ನಿಮ್ಮ ಮೂಲ ಪಾಲಿಸಿಯ ವಿಮಾ ಮೊತ್ತದ ಮಿತಿಗಿಂತ ಹೆಚ್ಚಿನ ಹಣಕಾಸಿನ ನೆರವನ್ನು ನೀಡಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಕೈಗೆಟಕುವ ಪ್ರೀಮಿಯಂನಲ್ಲಿ ಹೆಚ್ಚಿನ ವಿಮಾ ಮೊತ್ತವನ್ನು ಒದಗಿಸುವುದು ಇದರ ಉದ್ದೇಶಲಾಗಿದೆ. ನಿಮ್ಮ ಅಸ್ತಿತ್ವದಲ್ಲಿರುವ ವಿಮಾ ಯೋಜನೆಯು ಕಡಿಮೆಯಾದಾಗ ನಿಮ್ಮ ಬಿಲ್‌ಗಳನ್ನು ಕವರ್ ಮಾಡುವ ಟಾಪ್-ಅಪ್ ಪ್ಲ್ಯಾನ್ ಇದಾಗಿದೆ. 



ಪಾಲಿಸಿಯು 18 ರಿಂದ 65 ವರ್ಷ ವಯಸ್ಸಿನವರಿಗೆ ಫ್ಲೋಟರ್ ಆಧಾರದ ಮೇಲೆ ಲಭ್ಯವಿದೆ ಮತ್ತು 91 ದಿನಗಳಿಂದ 25 ವರ್ಷ ವಯಸ್ಸಿನ ಅವಲಂಬಿತ ಮಕ್ಕಳನ್ನು ಒಳಗೊಂಡಿದೆ.



ಪಾಲಿಸಿ ಆಯ್ಕೆಗಳು ಸಿಲ್ವರ್ ಮತ್ತು ಗೋಲ್ಡ್ ಪ್ಲ್ಯಾನ್‌ಗಳನ್ನು ಒಂದು/ಎರಡು ವರ್ಷಗಳ ಪಾಲಿಸಿ ಅವಧಿಯೊಂದಿಗೆ ಮತ್ತು ಜೀವನಪರ್ಯಂತ ನವೀಕರಣ ಸಾಧ್ಯತೆಗಳನ್ನು ಒಳಗೊಂಡಿರುತ್ತದೆ. ಈ ಪ್ಲ್ಯಾನ್‌, ಪ್ರಮುಖ ಕವರೇಜ್, ಡೇ-ಕೇರ್ ಕಾರ್ಯವಿಧಾನಗಳು, ಒಳರೋಗಿಗಳ ಆಸ್ಪತ್ರೆ ದಾಖಲಾತಿ, ಆಧುನಿಕ ಚಿಕಿತ್ಸೆ ಇತ್ಯಾದಿಗಳು ಒಳಗೊಂಡಿರುತ್ತದೆ. ಗೋಲ್ಡ್ ಪ್ಲ್ಯಾನ್ ಡೆಲಿವರಿ ವೆಚ್ಚಗಳು, ಅಂಗ ದಾನಿ ವೆಚ್ಚಗಳು, ಏರ್ ಆಂಬ್ಯುಲೆನ್ಸ್ ಕವರ್, ರೀಚಾರ್ಜ್ ಪ್ರಯೋಜನಗಳನ್ನು ಇದು ಒಳಗೊಂಡಿದೆ.

 

ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಹೂಡಿಕೆ ಮಾಡುವ ಪ್ರಯೋಜನಗಳನ್ನು ತಿಳಿದುಕೊಳ್ಳಿ

 

‘ಆರೋಗ್ಯವೇ ಭಾಗ್ಯ’, ಬಹುಶಃ ಇದು ನಾವು ಜೀವನದುದ್ದಕ್ಕೂ ನಾವು ಕೇಳಿರುವ ಅತ್ಯಂತ ಸಾಮಾನ್ಯ ಮಾತು. ಜೀವನದಲ್ಲಿ ಆರೋಗ್ಯವಾಗಿರುವುದೆಷ್ಟು ಮುಖ್ಯವೋ ಹೆಲ್ತ್ ಇನ್ಶೂರೆನ್ಸ್ ಸಹ ಅಷ್ಟೇ ಮುಖ್ಯವಾಗಿದೆ. ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ನಮ್ಮ ವೈದ್ಯಕೀಯ ತುರ್ತು ಸ್ಥಿತಿಗಳನ್ನು ಸರಾಗಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಮತ್ತು ಇವು ಮುಂಚಿತವಾಗಿ ತಯಾರಾಗದಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಕಷ್ಟವಾಗಬಹುದು. ಹಾಗಾಗಿ, ಸ್ಟಾರ್ ಹೆಲ್ತ್ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ನೀಡುವ ಕೆಲವು ಪ್ರಯೋಜನಗಳು ಇಲ್ಲಿವೆ

 

  1. ಒಳರೋಗಿ ಆಸ್ಪತ್ರೆ ದಾಖಲಾತಿ 
  2. ಆಸ್ಪತ್ರೆ ದಾಖಲಾತಿ ಪೂರ್ವ 
  3. ಆಸ್ಪತ್ರೆ ದಾಖಲಾತಿ ನಂತರ
  4. ಮನೆಯಲ್ಲೇ ಚಿಕಿತ್ಸೆ
  5. ಆಂಬ್ಯುಲೆನ್ಸ್ ವೆಚ್ಚಗಳು
  6. ಡೇ ಕೇರ್ ಚಿಕಿತ್ಸೆಗಳು
  7. ಆಯುಷ್ ಚಿಕಿತ್ಸೆಗಳು
  8. ಎರಡನೇ ವೈದ್ಯಕೀಯ ಅಭಿಪ್ರಾಯ
  9. ಡೆಲಿವರಿ ಮತ್ತು ನವಜಾತ ಶಿಶುವಿನ ರಕ್ಷಣೆ
  10. ಅಂಗದಾನಿಗಳ ವೆಚ್ಚಗಳು
  11. ಆಧುನಿಕ ಚಿಕಿತ್ಸೆಗಳು
  12. ರಸ್ತೆ ಟ್ರಾಫಿಕ್ ಅಪಘಾತಗಳು (RTA)
  13. ಕಣ್ಣಿನ ಪೊರೆ ಚಿಕಿತ್ಸೆ
  14. ಬ್ಯಾರಿಯಾಟ್ರಿಕ್ (ತೂಕ ಇಳಿಸುವಿಕೆ) ಶಸ್ತ್ರಚಿಕಿತ್ಸೆ
  15. ವೈಯಕ್ತಿಕ ಅಪಘಾತ ಕವರ್
  16. ಏರ್ ಆಂಬ್ಯುಲೆನ್ಸ್
  17. ಸಂಬಂಧಿಕರಿಗೆ ಕೃಪಾ ಪ್ರಯಾಣ
  18. ಹಂಚಿಕೊಂಡ ವಸತಿ ಪ್ರಯೋಜನ
  19. ಆಟೋಮ್ಯಾಟಿಕ್ ರಿಸ್ಟೊರೇಷನ್
  20. ಹೊರ-ರೋಗಿ ವೈದ್ಯಕೀಯ ಕನ್ಸಲ್ಟೇಷನ್
  21. ಹೊರ-ರೋಗಿ ದಂತ ಮತ್ತು ನೇತ್ರ ಚಿಕಿತ್ಸೆಗಳು
  22. ಆಸ್ಪತ್ರೆ ನಗದು ಪ್ರಯೋಜನ
  23. ವಾರ್ಷಿಕ ಆರೋಗ್ಯ ತಪಾಸಣೆ
  24. ಆರೋಗ್ಯ ರಿವಾರ್ಡ್
  25. ಟೆಲಿಮೆಡಿಸಿನ್ ಸೇವೆ – ಸ್ಟಾರ್ ಜೊತೆ ಮಾತನಾಡಿ

 

ಸರಿಯಾದ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಆಯ್ಕೆ ಮಾಡುವುದು ಹೇಗೆ

 

ಅನೇಕ ಆಯ್ಕೆಗಳಲ್ಲಿ, ಸರಿಯಾದ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಆಯ್ಕೆ ಮಾಡುವುದು ಕಠಿಣ ಕೆಲಸವಾಗಿದೆ. ಹೆಲ್ತ್ ಕವರ್ ತೆಗೆದುಕೊಳ್ಳುವ ಮೊದಲು ಪರಿಶೀಲಿಸಬೇಕಾದ ಪ್ರಮುಖ ಪಟ್ಟಿಗಳು ಇಲ್ಲವೆ.

 

  • ಪಾಲಿಸಿಗಳನ್ನು ಹೋಲಿಕೆ ಮಾಡಿ
  • ಆಂತರಿಕ ಕ್ಲೈಮ್-ಪ್ರಕ್ರಿಯೆಯನ್ನು ಪರಿಶೀಲಿಸಿ
  • ಕ್ಲೈಮ್ ಸೆಟಲ್‌ಮೆಂಟ್ ಅನುಪಾತವನ್ನು ಪರಿಶೀಲಿಸಿ
  • ನಿಮ್ಮ ವಸತಿಯ ಪಿನ್‌ಕೋಡ್ ತಿಳಿಯಿರಿ
  • ನಿಮ್ಮ ಕುಟುಂಬದ ಗಾತ್ರವನ್ನು ತಿಳಿಯಿರಿ
  • ಕುಟುಂಬ ಸದಸ್ಯರ ಅಧಿಕ ವಯಸ್ಸನ್ನು ಲೆಕ್ಕಹಾಕಿ
  • ನಿಮ್ಮ ಅವಶ್ಯಕತೆಗೆ ಸರಿಹೊಂದುವ ವಿಮಾ ಮೊತ್ತವನ್ನು ಗುರುತಿಸಿ
  • ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಒಂದನ್ನು ಆಯ್ಕೆ ಮಾಡಿ

 

ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳು ಮತ್ತು ದಿನದಿಂದ ದಿನಕ್ಕೆ ಬರುತ್ತಿರುವ ಅಪಾಯದ ಕಾರಣದಿಂದಾಗಿ, ಫ್ಯಾಮಿಲಿ ಮೆಡಿಕ್ಲೈಮ್ ಪಾಲಿಸಿಗಳನ್ನು ಖರೀದಿಸುವುದು ಪ್ರತಿ ಕುಟುಂಬಕ್ಕೂ ಅನಿವಾರ್ಯವಾಗಿದೆ. ಆರೋಗ್ಯ ತುರ್ತುಸ್ಥಿತಿಗಳು ಪೂರ್ವ ಎಚ್ಚರಿಕೆಯೊಂದಿಗೆ ಬರುವುದಿಲ್ಲ ಮತ್ತು ಅದರ ಚಿಕಿತ್ಸೆಯ ವೆಚ್ಚವು ನಿಮ್ಮ ಸಂಪೂರ್ಣ ಜೀವನದ ಉಳಿತಾಯವನ್ನು ತಿಂದುಹಾಕುತ್ತವೆ. ಇದಕ್ಕಾಗಿಯೇ ಮೆಡಿಕ್ಲೈಮ್ ಪಾಲಿಸಿಗಳು ಇಂದು ಸಂಪೂರ್ಣ ಅವಶ್ಯಕತೆಯಾಗಿದೆ ಮತ್ತು ಆದ್ದರಿಂದ ನೀವು ಮತ್ತು ನಿಮ್ಮ ಕುಟುಂಬವು ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ರಕ್ಷಿತಗೊಂಡಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ.

 

ಪಾಲಿಸಿಯನ್ನು ಪಡೆಯಲು ಅರ್ಹತಾ ಮಾನದಂಡಗಳು

 

ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ, ನಮ್ಮ ಕುಟುಂಬದ ಎಲ್ಲಾ ಸದಸ್ಯರು ಅರ್ಹತೆ ಹೊಂದಿದ್ದಾರೆಯೇ ಎಂದು ನಾವು ಆಗಾಗ ನಾವು ಯೋಚಿಸುತ್ತೇವೆ. ವಿಮಾ ಅರ್ಹತೆಯನ್ನು ಪ್ರಾಥಮಿಕವಾಗಿ ಈ ಕೆಳಗಿನವುಗಳಿಂದ ನಿರ್ಧರಿಸಲಾಗುತ್ತದೆ: 

 

  • ವಯಸ್ಸು

18 ರಿಂದ 65 ವರ್ಷ ವಯಸ್ಸಿನ ಯಾವುದೇ ವಯಸ್ಕರು ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯಬಹುದು. ಆದಾಗ್ಯೂ, ಅವಲಂಬಿತ ಮಕ್ಕಳಿಗೆ 16 ದಿನಗಳಿಂದ 25 ವರ್ಷ ವಯಸ್ಸಿನವರೆಗೆ ರಕ್ಷಣೆ ನೀಡಲಾಗುತ್ತದೆ.

 

  • ಹಿಂದಿನ ವೈದ್ಯಕೀಯ ಪರಿಸ್ಥಿತಿಗಳು/ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳು

ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವಾಗ, ನಿಮ್ಮ ವೈದ್ಯಕೀಯ ಇತಿಹಾಸವನ್ನು ನೀವು ಬಹಿರಂಗಪಡಿಸಬೇಕು. ಕೆಲವು ಈಗಾಗಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ವೇಟಿಂಗ್ ಅವಧಿಯ ನಂತರ ಕವರ್ ಮಾಡಬಹುದು ಆದರೆ, ಇತರೆ ಕಾರ್ಡಿಯಾಕ್ ಆರೈಕೆ, ಡಯಾಬಿಟಿಸ್ ಸೇಫ್, ಕ್ಯಾನ್ಸರ್ ಆರೈಕೆ ಮತ್ತು ಆಟಿಸಂ ಮಗುವಿನ ವಿಶೇಷ ಆರೈಕೆಯು ವಿಶೇಷ ಪ್ರೊಡಕ್ಟ್ ಅಡಿಯಲ್ಲಿ ಕವರ್ ಆಗಬಹುದು.

 

ನಿಮ್ಮ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡುವುದು ಹೇಗೆ

 

ಎಲ್ಲಾ ಸೆಟಲ್‌ಮೆಂಟ್‌ಗಳನ್ನು ಸಮಯಕ್ಕೆ ಸರಿಯಾಗಿ ಪ್ರಕ್ರಿಯೆಗೊಳಿಸುವ ಜಂಜಾಟ-ರಹಿತ, ಗ್ರಾಹಕ-ಸ್ನೇಹಿ ಕ್ಲೈಮ್ ಪ್ರಕ್ರಿಯೆಯನ್ನು ನಾವು ಒದಗಿಸುತ್ತೇವೆ. ಹೆಲ್ತ್ ಇನ್ಶೂರೆನ್ಸ್ ತಜ್ಞರಾಗಿ, ನಾವು ಭಾರತದಾದ್ಯಂತ ನಮ್ಮ ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಆಸ್ಪತ್ರೆಗಳಲ್ಲಿ ನಗದು ರಹಿತ ಸೌಲಭ್ಯಗಳನ್ನು ಒದಗಿಸುತ್ತೇವೆ. ಗ್ರಾಹಕ ಸೇವೆ, ಗಮನ, ವೇಗ ಮತ್ತು ದಕ್ಷತೆಯಿಂದ ಕೂಡಿದ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಗ್ರಾಹಕರ ಪ್ರತಿಕ್ರಿಯೆ ನಮಗೆ ಮುಖ್ಯವಾಗಿದೆ ಮತ್ತು ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ನಾವು ಸದಾಕಾಲ ಪ್ರಯತ್ನಿಸುತ್ತೇವೆ.

 

ವೇಗವಾಗಿ ಕ್ಲೈಮ್ ಪಡೆಯುವುದು ಹೇಗೆ?

 

  • ಸ್ಟಾರ್ ಹೆಲ್ತ್ ವೆಬ್‌ಸೈಟ್ ಒಪ್ಪಿದ ನೆಟ್‌ವರ್ಕ್ ಆಸ್ಪತ್ರೆಗಳನ್ನು ಒಳಗೊಂಡಂತೆ ನೆಟ್‌ವರ್ಕ್ ಆಸ್ಪತ್ರೆಗಳ ಪಟ್ಟಿಯನ್ನು ಒಳಗೊಂಡಿದೆ.
  • ನಮ್ಮ ವೆಬ್‌ಸೈಟ್‌ನಲ್ಲಿ (https://www.starhealth.in/network-hospitals), ನೆಟ್‌ವರ್ಕ್ ಆಸ್ಪತ್ರೆ ಪಟ್ಟಿಯನ್ನು ಬಳಸಿ. ನಿಮ್ಮ ನಿವಾಸದ ಸಮೀಪದಲ್ಲಿರುವ ನೆಟ್‌ವರ್ಕ್ ಆಸ್ಪತ್ರೆಯನ್ನು ಹುಡುಕಿ.
  • ಯೋಜಿತ ದಾಖಲಾತಿಗಾಗಿ, ವಿಮಾದಾರರ ಪಾನ್‌ಕಾರ್ಡ್, ಆಧಾರ್ ಕಾರ್ಡ್ ಇತ್ಯಾದಿಗಳಂತಹ ಪಾಲಿಸಿ ನಕಲು, ಮತ್ತು ಐಡಿ ಪುರಾವೆಗಳೊಂದಿಗೆ ಆಸ್ಪತ್ರೆಯನ್ನು ಸಂಪರ್ಕಿಸಿ ಮತ್ತು ಅದನ್ನು ಪೂರ್ವದೃಢೀಕರಣ ಫಾರ್ಮ್‌ನೊಂದಿಗೆ ಕಳುಹಿಸಬೇಕು.
  • ಪೂರ್ವದೃಢೀಕರಣ ಫಾರ್ಮ್‌ನಲ್ಲಿ ನಿಮ್ಮ ಸಂಪರ್ಕ ಸಂಖ್ಯೆಯನ್ನು ಸೇರಿಸಬೇಕು.
  • ವಿವರಗಳು ಅಪೂರ್ಣವಾಗಿದ್ದರೆ ದೃಢೀಕರಣ ವಿನಂತಿಗಳು ವಿಳಂಬವಾಗಬಹುದು.

 

ನಗದು ರಹಿತ ಸೌಲಭ್ಯ ವಿಧಾನಗಳು:

 

ನೆಟ್‌ವರ್ಕ್ ಆಸ್ಪತ್ರೆಯಲ್ಲಿ ಇನ್ಶೂರೆನ್ಸ್ ಡೆಸ್ಕ್ ಸಂಪರ್ಕಿಸಿ. 1800 425 2255 / 1800 102 4477 ನಲ್ಲಿ ನಮ್ಮನ್ನು ಸಂಪರ್ಕಿಸುವ ಮೂಲಕ ಅಥವಾ support@starhealth.in ಗೆ ಮೇಲ್ ಕಳುಹಿಸುವ ಮೂಲಕ ಸೂಚನೆಯನ್ನು ಪಡೆಯಬಹುದು

 

  • ಕ್ಲೈಮ್ ಸಂಖ್ಯೆಯನ್ನು ಪಡೆಯಲು ಆಪರೇಟರ್‌ಗೆ ಮಾಹಿತಿ ನೀಡಿ
  • ಗ್ರಾಹಕ ಐಡಿ / ಪಾಲಿಸಿ ಸಂಖ್ಯೆ.
  • ಆಸ್ಪತ್ರೆಗೆ ದಾಖಲಾಗುವ ಕಾರಣ
  • ಆಸ್ಪತ್ರೆಯ ಹೆಸರು
  • ವಿಮಾದಾರ/ರೋಗಿಯ ಹೆಸರು

 

ಯೋಜಿತವಾಗಿ ಆಸ್ಪತ್ರೆಗೆ ದಾಖಲಾಗುವಿಕೆಯನ್ನು 7 ರಿಂದ 10 ದಿನಗಳ ಮುಂಚಿತವಾಗಿ ತಿಳಿಸಬಹುದು ಮತ್ತು ತುರ್ತಾಗಿ ಆಸ್ಪತ್ರೆಗೆ ದಾಖಲಾಗುವಿಕೆಯನ್ನು ಆಸ್ಪತ್ರೆಗೆ ದಾಖಲಾದ 24 ಗಂಟೆಗಳ ಒಳಗೆ ತಿಳಿಸಬಹುದು.

 

  • ಕ್ಲೈಮ್ ನೋಂದಣಿ.
  • ಇನ್ಶೂರೆನ್ಸ್ ಡೆಸ್ಕ್ ತಲುಪಿ ಮತ್ತು ನೆಟ್‌ವರ್ಕ್ ಆಸ್ಪತ್ರೆಯಲ್ಲಿ ದಾಖಲೆಗಳನ್ನು ಸಲ್ಲಿಸಿ. 
  • ದಾಖಲೆಗಳನ್ನು ಸ್ಟಾರ್ ಕ್ಲೈಮ್ಸ್ ತಂಡಕ್ಕೆ ಕಳುಹಿಸಲಾಗುತ್ತದೆ.
  • ನಮ್ಮ ಆಂತರಿಕ ಕ್ಲೈಮ್ ಪ್ರಕ್ರಿಯೆ ತಂಡದಿಂದ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ.
  • ಅನುಮೋದನೆ/ಪ್ರಶ್ನೆ/ನಗದು ರಹಿತ ನಿರಾಕರಣೆ/ನಿರಾಕರಣೆಯ ನಿರ್ಧಾರವನ್ನು 2 ಗಂಟೆಗಳ ಒಳಗೆ ನೆಟ್‌ವರ್ಕ್ ಆಸ್ಪತ್ರೆಗೆ ರವಾನಿಸಲಾಗುತ್ತದೆ.
  • ಅನುಮೋದನೆಯಾದರೆ, ಪಾಲಿಸಿ ಷರತ್ತುಗಳ ಪ್ರಕಾರ ಕ್ಲೈಮ್ ಅನ್ನು ಇತ್ಯರ್ಥಗೊಳಿಸಲಾಗುತ್ತದೆ.
  • ಪಾವತಿಯು ನೆಟ್‌ವರ್ಕ್ ಆಸ್ಪತ್ರೆಗೆ ತಲುಪುತ್ತದೆ.

 

ಕ್ಲೈಮ್ ಮರುಪಾವತಿ ಪ್ರಕ್ರಿಯೆಗಳು:

 

ವಿಮಾದಾರರಿಗೆ (ವಿಮಾ ಕಂಪನಿ) ಚಿಕಿತ್ಸೆಯ ಬಗ್ಗೆ ಮುಂಚಿತವಾಗಿ ಸೂಚನೆಯನ್ನು ನೀಡಲಾಗುತ್ತದೆ. ಡಿಸ್‌ಚಾರ್ಜ್ ಆದ ನಂತರ ವಿಮಾದಾರರು 15 ದಿನಗಳಲ್ಲಿ ಆ ವೆಚ್ಚಗಳಿಗೆ ಮರುಪಾವತಿಯನ್ನು ಕ್ಲೈಮ್ ಮಾಡುತ್ತಾರೆ.

 

ಮರುಪಾವತಿ ಕ್ಲೈಮ್‌ಗಾಗಿ ಮೂಲ ದಾಖಲೆಗಳನ್ನು ಸಲ್ಲಿಸಬೇಕು:

 

  • ಕ್ಲೈಮ್ ಫಾರ್ಮ್‌ನ ಭಾಗ B ಯಲ್ಲಿ ಚಿಕಿತ್ಸೆ ನೀಡುವ ವೈದ್ಯರ ಸೀಲ್ ಮತ್ತು ಸೈನ್ ಜೊತೆಗೆ ಸರಿಯಾಗಿ ಭರ್ತಿ ಮಾಡಲಾದ ಕ್ಲೈಮ್ ಫಾರ್ಮ್
  • ದಾಖಲಾತಿಗೂ ಮುನ್ನ ನಡೆದ ತನಿಖೆಗಳು ಮತ್ತು ಚಿಕಿತ್ಸೆಯ ಪೇಪರ್‌ಗಳು
  • ಆಸ್ಪತ್ರೆಯ ಡಿಸ್‌ಚಾರ್ಜ್ ಸಾರಾಂಶ
  • ವಿವರವಾದ ಬ್ರೇಕಪ್‌ನೊಂದಿಗಿನ ಅಂತಿಮ ಬಿಲ್
  • ಆಸ್ಪತ್ರೆ ಮತ್ತು ಮೆಡಿಕಲ್ ಅಂಗಡಿಯಿಂದ ನಗದು ರಶೀದಿಗಳು
  • ನಡೆಸಿದ ಪರೀಕ್ಷೆಗಳ ನಗದು ರಶೀದಿಗಳು
  • ವೈದ್ಯರು, ಶಸ್ತ್ರಚಿಕಿತ್ಸಕರು ಮತ್ತು ಅರಿವಳಿಕೆ ತಜ್ಞರಿಂದ ರಶೀದಿಗಳು
  • ರೋಗನಿರ್ಣಯವನ್ನು ಕೈಗೊಂಡ ವೈದ್ಯರಿಂದ ಪ್ರಮಾಣಪತ್ರ
  • ಪಾನ್ ಕಾರ್ಡ್‌ ನಕಲು, ರದ್ದುಪಡಿಸಲಾದ ಚೆಕ್ ಅಥವಾ ಪ್ರಪೋಸರ್‌ನ NEFT ವಿವರಗಳು.

 

ನಿಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ನಮ್ಮ 24/7 ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಬಹುದು.

 

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಖರೀದಿಸುವ ಪ್ರಯೋಜನಗಳು

 

ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ನಿಮ್ಮ ಪ್ರೀತಿಪಾತ್ರರನ್ನು ಜತೆಯಾಗಿರಿಸಲು ಸಹಾಯ ಮಾಡುತ್ತದೆ. ಇದು ಮಾನಸಿಕ ಆತಂಕವನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುವುದು ಮಾತ್ರವಲ್ಲದೆ ನಿಮ್ಮ ಮತ್ತು ನಿಮ್ಮ ಆಪ್ತರ ಜೀವನದ ಗುಣಮಟ್ಟವನ್ನು ಕಡಿಮೆ ಮಾಡುವ ದೈಹಿಕ ಕಾಯಿಲೆಗಳನ್ನು ಎದುರಿಸಲು ನಿಮ್ಮನ್ನು ಸಿದ್ಧಪಡಿಸುತ್ತದೆ. ಸರಳವಾಗಿ ಹೇಳುವುದಾದರೆ, ಇದು ನಿಮ್ಮ ಪ್ರೀತಿಪಾತ್ರರ ಸುಧಾರಣೆಯ ಮೇಲೆ ನೀವು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.  

 

ನಿಮ್ಮ ಕುಟುಂಬಕ್ಕೆ ಜೀವನದಲ್ಲಿ ಅತ್ಯುತ್ತಮವಾದುದನ್ನು ನೀಡಲು ನೀವು ಬಯಸುತ್ತೀರಿ ಎಂದು ನಮಗೆ ತಿಳಿದಿದೆ. ಇದು ಅವರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಕಾರ್ಯಸಾಧ್ಯವಾದ ಚಿಕಿತ್ಸೆಯನ್ನು ಒದಗಿಸಲು ನಿಮ್ಮನ್ನು ತಯಾರಾಗಿಸುತ್ತದೆ.

 

ಸ್ಟಾರ್ ಹೆಲ್ತ್ ಫ್ಯಾಮಿಲಿ ಪ್ಲ್ಯಾನ್‌ಗಳ ಪ್ರಯೋಜನಗಳು ಉದ್ಯಮದಲ್ಲೇ ಮುಂಚೂಣಿಯಲ್ಲಿವೆ ಮತ್ತು ವಿವಿಧ ಕೊಡುಗೆಗಳ ಮೂಲಕ ನಿಮ್ಮ ಅಗತ್ಯತೆಗಳನ್ನು ಪೂರೈಸುತ್ತವೆ.

 

ಒಳರೋಗಿ ಆಸ್ಪತ್ರೆ ದಾಖಲಾತಿ

 

ಕೊಠಡಿಯ ಬಾಡಿಗೆ, ICU ಶುಲ್ಕಗಳು, ವೈದ್ಯರ ಶುಲ್ಕಗಳು, ಶುಶ್ರೂಷೆಯ ಶುಲ್ಕಗಳು, ಅರಿವಳಿಕೆ ಮತ್ತು ಇನ್ನೂ ಹೆಚ್ಚಿನದನ್ನು ಒಳಗೊಂಡಿರುವ ಒಳರೋಗಿ ಆಸ್ಪತ್ರೆ ದಾಖಲಾತಿಗೆ ನಮ್ಮ ಯೋಜನೆಗಳು ರಕ್ಷಣೆಯನ್ನು ಒದಗಿಸುತ್ತವೆ. ನಮ್ಮ ಆಸ್ಪತ್ರೆಯ ನೆಟ್‌ವರ್ಕ್‌ನಲ್ಲಿ ಭಾರತದಾದ್ಯಂತ ನಗದು ರಹಿತ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದೆ.

 

ಡೆಲಿವರಿ ಮತ್ತು ನವಜಾತ ಶಿಶುವಿನ ರಕ್ಷಣೆ  

 

ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಪ್ರಸವಪೂರ್ವ ಮತ್ತು ನಂತರದ ವೆಚ್ಚಗಳು, ಸಾಮಾನ್ಯ ಹೆರಿಗೆ ಮತ್ತು ಸಿಸೇರಿಯನ್ ವಿಭಾಗದ ವೆಚ್ಚಗಳಿಗೆ ರಕ್ಷಣೆ ಒದಗಿಸುತ್ತವೆ. ಅಂತಹ ಪಾಲಿಸಿಗಳ ಅಡಿಯಲ್ಲಿ, ಡೆಲಿವರಿಗಾಗಿ ಪಾವತಿಸಿದರೆ ಮತ್ತು ಪಾಲಿಸಿ ಅವಧಿಯಲ್ಲಿ ಸಂಭವಿಸಿದರೆ ನವಜಾತ ಶಿಶುವಿಗೆ ಚಿಕಿತ್ಸೆಗಳು, ವ್ಯಾಕ್ಸಿನೇಷನ್ ಮತ್ತು ಯಾವುದೇ ತೊಂದರೆಗಳಿದ್ದಲ್ಲಿ 1 ನೇ ದಿನದಿಂದ ಪಾಲಿಸಿ ಅವಧಿಯು ಮುಕ್ತಾಯವಾಗುವವರೆಗೆ ಯಾವುದೇ ಹೆಚ್ಚುವರಿ ಪ್ರೀಮಿಯಂ ಇಲ್ಲದೇ ನಿರ್ದಿಷ್ಟಪಡಿಸಿದ ಮಿತಿಗಳವರೆಗೆ ರಕ್ಷಣೆಯನ್ನು ಒದಗಿಸಲಾಗುತ್ತದೆ. 

 

ಹೊರ-ರೋಗಿ ದಂತ ಮತ್ತು ನೇತ್ರ ಚಿಕಿತ್ಸೆಗಳು

 

ನಮ್ಮ ವಿಶೇಷ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಅನಾರೋಗ್ಯದಿಂದ ಕ್ಲಿನಿಕ್‌ಗೆ ವಿಮಾದಾರರ ಭೇಟಿ, ಸಮಾಲೋಚನೆ ಶುಲ್ಕ ಮತ್ತು ಚುಚ್ಚುಮದ್ದು, ಗಾಯದ ಡ್ರೆಸಿಂಗ್ ಮುಂತಾದ ಇತರ ಸೇವೆಗಳ ವೆಚ್ಚವನ್ನು ಒಳಗೊಂಡಿರುತ್ತವೆ. ಅಂತೆಯೇ ಇದು ಮೆಡಿಕಲ್ ಅಂಗಡಿಗಳ ಔಷಧಿಗಳು, ಎಕ್ಸ್-ರೇಗಳು, ರಕ್ತ ಪರೀಕ್ಷೆಗಳಂತಹ ರೋಗ ನಿರ್ಣಯ ಪರೀಕ್ಷೆಗಳು, ಪ್ರಯೋಗಾಲಯದಲ್ಲಿ ಮತ್ತು ನೀವು ಆಸ್ಪತ್ರೆಗೆ ದಾಖಲಾಗುವುದರ ಅಗತ್ಯವಿಲ್ಲದ ಸಣ್ಣ ಕಾರ್ಯವಿಧಾನಗಳ ವೆಚ್ಚಗಳನ್ನು ಭರಿಸಲಾಗುತ್ತದೆ. ನಮ್ಮ ಫ್ಯಾಮಿಲಿ ಮೆಡಿಕ್ಲೈಮ್ ಪಾಲಿಸಿಗಳ ಅಡಿಯಲ್ಲಿ, ನಿರ್ದಿಷ್ಟ ವೇಟಿಂಗ್ ಅವಧಿಯ ನಂತರ ನಿಗದಿತ ಮಿತಿಯವರೆಗೆ ಹೊರರೋಗಿಯಾಗಿ ನೀವು ದಂತ ಮತ್ತು ನೇತ್ರ ಚಿಕಿತ್ಸೆಗಳನ್ನು ಪಡೆಯಬಹುದು.

 

ಅಂಗದಾನಿಗಳ ವೆಚ್ಚಗಳು  

 

ಸ್ಟಾರ್ ಹೆಲ್ತ್ ವಿವಿಧ ಪಾಲಿಸಿಗಳೊಂದಿಗೆ ನಿಮ್ಮ ಅಂಗದಾನಿ ವೆಚ್ಚಗಳನ್ನು ನಿರ್ವಹಿಸಬಹುದು. ವಿಮಾದಾರರಿಗೆ ಅಂಗಾಂಗ ಕಸಿಗಳ ಅಗತ್ಯವಿದ್ದಾಗ, ನಮ್ಮ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳು ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಮತ್ತು ಅಂಗವನ್ನು ಕಸಿ ಮಾಡುವ ವೆಚ್ಚವನ್ನು ಪಾಲಿಸಿ ಷರತ್ತುಗಳಲ್ಲಿ ನಮೂದಿಸಲಾದ ನಿರ್ದಿಷ್ಟ ಮೊತ್ತದವರೆಗೆ ಭರಿಸಲಾಗುತ್ತದೆ.

 

ಆರೋಗ್ಯ ತಪಾಸಣೆ  

 

“ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮವಾಗಿದೆ”. ನಮ್ಮ ಫ್ಯಾಮಿಲಿ ಮೆಡಿಕ್ಲೈಮ್ ಪಾಲಿಸಿಗಳೊಂದಿಗೆ ಪ್ರತಿ ಕ್ಲೈಮ್ ರಹಿತ ವರ್ಷದ ನಂತರ ನಿಮ್ಮ ಆರೋಗ್ಯ ತಪಾಸಣೆ ವೆಚ್ಚವನ್ನು ನೀವು ಪಡೆದುಕೊಳ್ಳಬಹುದು.

 

ಎರಡನೇ ವೈದ್ಯಕೀಯ ಅಭಿಪ್ರಾಯಕ್ಕಾಗಿ ಆಯ್ಕೆಗಳು  

 

ಸ್ಟಾರ್ ಹೆಲ್ತ್‌ನ ವೈದ್ಯರ ನೆಟ್‌ವರ್ಕ್‌ನಲ್ಲಿರುವ ಇತರ ವೈದ್ಯರಿಂದ ಎರಡನೇ ಅಭಿಪ್ರಾಯವನ್ನು ಪಡೆಯಲು ಪಾಲಿಸಿದಾರರಿಗೆ ಅನುವು ಮಾಡಿಕೊಡಲಾಗುತ್ತದೆ.  

 

ಆಯುಷ್ ಚಿಕಿತ್ಸೆಗಳು  

 

ನಮ್ಮ ಪ್ಲ್ಯಾನ್‌ಗಳು ಕೆಳಗಿನ ಚಿಕಿತ್ಸೆಗಳಿಗಾಗಿ ನಿಮ್ಮ ಕುಟುಂಬ ಸದಸ್ಯರ ಒಳ-ರೋಗಿ ಆಸ್ಪತ್ರೆ ವೆಚ್ಚಗಳ ವ್ಯಾಪ್ತಿಯನ್ನು ಒಳಗೊಂಡಿದೆ, ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ/ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಆನ್ ಹೆಲ್ತ್‌ನಿಂದ ಮಾನ್ಯತೆ ಪಡೆದ ಸರ್ಕಾರಿ ಆಸ್ಪತ್ರೆಗಳು ಮತ್ತು/ಅಥವಾ ಸರ್ಕಾರಿ/ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಚಿಕಿತ್ಸೆ ತೆಗೆದುಕೊಳ್ಳಲಾಗುತ್ತದೆ. ಪಾಲಿಸಿಯಲ್ಲಿ ನಮೂದಿಸಲಾದ ಮಿತಿಗಳವರೆಗೆ ಈ ಕೆಳಗಿನ ಚಿಕಿತ್ಸೆಯನ್ನು ಪಾವತಿಸಲಾಗುತ್ತದೆ.

 

1. ಆಯುರ್ವೇದ 

2. ಯುನಾನಿ

3. ಸಿದ್ಧ

4. ಹೋಮಿಯೋಪತಿ

 

ವೈಯಕ್ತಿಕ ಅಪಘಾತ ಕವರ್

 

ನಮ್ಮ ಪ್ಲ್ಯಾನ್‌ಗಳು ವೈಯಕ್ತಿಕ ಅಪಘಾತದ ಕವರ್ ಅನ್ನು ಒದಗಿಸುತ್ತವೆ. ಇದು ಪಾಲಿಸಿಯಲ್ಲಿ ನಿರ್ದಿಷ್ಟಪಡಿಸಿದಂತೆ ಅಪಘಾತದಿಂದ ವಿಮಾದಾರರ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯದ ಸಂದರ್ಭದಲ್ಲಿ ಒಟ್ಟು ಮೊತ್ತದ ಪ್ರಯೋಜನವನ್ನು ಒದಗಿಸುತ್ತದೆ . 

 

ಸ್ಟಾರ್ ವೆಲ್‌ನೆಸ್ ಪ್ರೋಗ್ರಾಂ

 

ವೆಲ್‌ನೆಸ್ ಪ್ರೋಗ್ರಾಂ ಪಾಲಿಸಿದಾರರಿಗೆ ಸಕ್ರಿಯ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಪ್ರಾರಂಭಿಸಲು, ಸುಧಾರಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮ ಹೆಚ್ಚಿನ ಪಾಲಿಸಿಗಳು ನೀಡುವ ಸ್ಟಾರ್ ವೆಲ್‌ನೆಸ್ ಪ್ರೋಗ್ರಾಂ ಅನ್ನು ನಮ್ಮ ವಿಮಾದಾರರು ಬಳಸಿಕೊಳ್ಳಬಹುದು. 

 

ಈ ಪ್ರೋಗ್ರಾಂ ಮೂಲಕ, ನಾವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸಕ್ರಿಯ ಜೀವನ ನಡೆಸುವಂತೆ ಪ್ರೇರೇಪಿಸುತ್ತೇವೆ. ಆದ್ದರಿಂದ ನಮ್ಮ ಪಾಲಿಸಿಗಳಲ್ಲಿ, ಸ್ಟಾರ್ ವೆಲ್‌ನೆಸ್ ಪ್ರೋಗ್ರಾಂನಲ್ಲಿ ಭಾಗವಹಿಸುವ ಮೂಲಕ ಗಳಿಸಿದ ವೆಲ್‌ನೆಸ್ ಪಾಯಿಂಟ್‌ಗಾಗಿ ನಾವು ಪ್ರೀಮಿಯಂನಲ್ಲಿ ನವೀಕರಣ ರಿಯಾಯಿತಿಯನ್ನು ನೀಡುತ್ತೇವೆ.  

 

ಆನ್‌ಲೈನ್‌ನಲ್ಲಿ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಅನುಕೂಲಗಳೇನು?

 

  • ಸಮಯ ಉಳಿತಾಯ

ಯಾವುದೇ ಜಂಜಾಟವಿಲ್ಲದೇ ನೀವು ಆನ್‌ಲೈನ್‌ನಲ್ಲಿ ಸೂಕ್ತವಾದ ವಿಮಾ ಪಾಲಿಸಿಯನ್ನು ಖರೀದಿಸಬಹುದು. ಇದು ಸುಲಭವಾದ ಆನ್‌ಲೈನ್ ನವೀಕರಣಗಳನ್ನು ಸಹ ಸುಲಭಗೊಳಿಸುತ್ತದೆ. ನೀವು ಕಡಿಮೆ ಸಮಯದಲ್ಲಿ ಇಂಟರ್‌ನೆಟ್ ಮೂಲಕ ನೇರವಾಗಿ ಕೋಟ್‌ಗಳನ್ನು ಸ್ವೀಕರಿಸಬಹುದು.  

 

  • ಸರಳ ಹೋಲಿಕೆಗಳು 

ಇಂದಿನ ಡಿಜಿಟಲ್ ಯುಗದಲ್ಲಿ, ಆನ್‌ಲೈನ್‌ನಲ್ಲಿ ಅನೇಕ ಪಾಲಿಸಿಗಳ ನಡುವೆ ಹೋಲಿಕೆ ಮಾಡುವುದು ಸುಲಭವಾಗಿದೆ. ಸಾಮಾನ್ಯವಾಗಿ ಪ್ರತಿ ವಿಮಾದಾರರು ತಮ್ಮ ವೆಬ್‌ಸೈಟ್‌ನಲ್ಲಿ ವಿವರವಾದ ಮಾಹಿತಿಯನ್ನು ಒದಗಿಸುತ್ತಾರೆ.

 

  • ಉತ್ತಮ ನಿರ್ಧಾರಗಳು

ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು, ವಿವಿಧ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಸಲು ಸುಲಭವಾಗುವಂತೆ ಪಾಲಿಸಿಯ ಉಲ್ಲೇಖಗಳು, ಅದರಲ್ಲಿನ ಪ್ರಯೋಜನಗಳು, ಹೊರತುಪಡಿಸುವಿಕೆಯ ಪಟ್ಟಿ ಮತ್ತು ಕರಾರುಗಳು ಹಾಗೂ ಷರತ್ತುಗಳಂತಹ ಎಲ್ಲಾ ಅಗತ್ಯ ಮಾಹಿತಿಗಳನ್ನು ನೋಡಬಹುದು. ಇಂಟರ್‌ನೆಟ್‌ನಲ್ಲಿ ಹೋಲಿಕೆಯ ಮಾಡಿ ಅಧ್ಯಯನ ಮಾಡುವ ಮೂಲಕ, ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಕುರಿತು ಉತ್ತಮ ಮಾಹಿತಿಯನ್ನು ಪಡೆಯುತ್ತೀರಿ ಹಾಗೂ ಇದು ಉತ್ತಮ ನಿರ್ಧಾರಕ್ಕೆ ಕಾರಣವಾಗುತ್ತದೆ.

 

  • 24x7 ಮಾಹಿತಿ 

24 ಗಂಟೆಗಳ ಯಾವುದೇ ಸಮಯದಲ್ಲಾದರೂ ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ. 

 

  • ರಿಯಾಯಿತಿಗಳು

ನೀವು ಇನ್ಶೂರೆನ್ಸ್ ಪೂರೈಕೆದಾರರ ವೆಬ್‌ಸೈಟ್‌ನಿಂದ ಆನ್‌ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಿದಾಗ ನೀವು ಆಗಾಗ ರಿಯಾಯಿತಿಗಳನ್ನು ಪಡೆಯಬಹುದು. ಹೆಚ್ಚಿನ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವವರಿಗೆ 5% ರಿಯಾಯಿತಿಗಳನ್ನು ನೀಡುತ್ತೇವೆ.