ಪಾಲಿಸಿಯ ವಿಧಈ ಪಾಲಿಸಿಯು ಫ್ಲೋಟರ್ ಆಧಾರದ ಮೇಲೆ ಮಾತ್ರ ಪ್ರಯೋಜನಗಳನ್ನು ಒದಗಿಸುತ್ತದೆ. |
ಪ್ರವೇಶ ವಯಸ್ಸು18 ರಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆಯಬಹುದು. ಅವಲಂಬಿತ ಮಕ್ಕಳಿಗೆ ಜನನದ ನಂತರ 16 ದಿನದಿಂದ 25 ವರ್ಷಗಳವರೆಗೆ ರಕ್ಷಣೆ ನೀಡಲಾಗುತ್ತದೆ. |
ಕುಟುಂಬದ ಗಾತ್ರಈ ಪಾಲಿಸಿಯು ಸ್ವಯಂ, ಸಂಗಾತಿ, ಅವಲಂಬಿತ ಮಕ್ಕಳು (ಗರಿಷ್ಠ 3) ಪೋಷಕರು ಮತ್ತು ಅತ್ತೆ-ಮಾವ ಸೇರಿದಂತೆ ಕುಟುಂಬದ ಸದಸ್ಯರಿಗೆ ವಿಶಾಲವಾದ ವ್ಯಾಪ್ತಿಯ ಕವರೇಜ್ ಒದಗಿಸುತ್ತದೆ. |
ಒಳರೋಗಿ ಆಸ್ಪತ್ರೆ ದಾಖಲಾತಿಅನಾರೋಗ್ಯ, ಗಾಯ ಮತ್ತು ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ವೆಚ್ಚಗಳನ್ನು ಒಳಗೊಂಡಿರುತ್ತದೆ. |
ಆಸ್ಪತ್ರೆ ದಾಖಲಾತಿಗೂ ಮೊದಲುಒಳರೋಗಿ ಆಸ್ಪತ್ರೆ ದಾಖಲಾತಿಯ ಜೊತೆಗೆ, ಆಸ್ಪತ್ರೆಗೆ ದಾಖಲಾದ ದಿನಾಂಕದ 60 ದಿನಗಳ ಮೊದಲು ತಗಲುವ ವೈದ್ಯಕೀಯ ಪೆಚ್ಚವನ್ನು ಸಹ ಒಳಗೊಂಡಿದೆ. |
ಆಸ್ಪತ್ರೆ ದಾಖಲಾತಿ ನಂತರಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಿಂದ 90 ದಿನಗಳವರೆಗೆ ಆಸ್ಪತ್ರೆ ದಾಖಲಾತಿ ನಂತರದ ವೆಚ್ಚಗಳನ್ನು ಭರಿಸಲಾಗುತ್ತದೆ. |
ಹಂಚಿಕೆಯ ವಸತಿವಿಮಾದಾರರು ಹಂಚಿಕೆಯ ವಸತಿಯನ್ನು ಪಡೆಯಲು ಉಂಟಾದ ವೆಚ್ಚಗಳನ್ನುಪಾಲಿಸಿ ಷರತ್ತುಗಳಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಭರಿಸಲಾಗುತ್ತದೆ. |
ರೋಡ್ ಆ್ಯಂಬ್ಯುಲೆನ್ಸ್ಖಾಸಗಿ ಆ್ಯಂಬುಲೆನ್ಸ್‌ನಿಂದ ವಿಮಾದಾರರನ್ನು ಸಾಗಿಸಲು ಆ್ಯಂಬುಲೆನ್ಸ್ ಶುಲ್ಕಗಳು ಪ್ರತಿ ಆಸ್ಪತ್ರೆಗೆ ರೂ. 750/- ಮತ್ತು ಪ್ರತಿ ಪಾಲಿಸಿ ಅವಧಿಗೆ ರೂ. 1500/- ವರೆಗೆ ಕವರ್ ಆಗುತ್ತದೆ. |
ಏರ್ ಆ್ಯಂಬ್ಯುಲೆನ್ಸ್ಏರ್ ಆ್ಯಂಬ್ಯುಲೆನ್ಸ್ ವೆಚ್ಚಗಳನ್ನು ಸಂಪೂರ್ಣ ಪಾಲಿಸಿ ಅವಧಿಗೆ ವಿಮಾ ಮೊತ್ತದ 10% ವರೆಗೆ ಕವರ್ ಮಾಡಲಾಗುತ್ತದೆ. |
ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್ಪಾಲಿಸಿ ಅವಧಿಯಲ್ಲಿ ಕವರೇಜ್‌ನ ಮಿತಿ ಮುಗಿದ ನಂತರ, ವಿಮಾ ಮೊತ್ತದ 100% ಅನ್ನು ಅದೇ ಪಾಲಿಸಿ ವರ್ಷದಲ್ಲಿ 3 ಪಟ್ಟು ರಿಸ್ಟೋರ್ ಮಾಡಲಾಗುತ್ತದೆ. |
ಸಂಚಿತ ಬೋನಸ್ರೂ. 3,00,000/- ಮತ್ತು ಅದಕ್ಕಿಂತ ಹೆಚ್ಚಿನ ವಿಮಾ ಮೊತ್ತದ ಆಯ್ಕೆಗಾಗಿ, ಸಂಚಿತ ಬೋನಸ್ ಎರಡನೇ ವರ್ಷ ಮುಕ್ತಾಯವಾಗುವ ವಿಮಾ ಮೊತ್ತದ 25% ಮತ್ತು ನಂತರದ ವರ್ಷಗಳಲ್ಲಿ ಅವಧಿ ಮುಗಿಯುವ ವಿಮಾ ಮೊತ್ತದ ಹೆಚ್ಚುವರಿ 10% ಲಭ್ಯವಿದೆ. ಅನುಮತಿಸಲಾಗುವ ಗರಿಷ್ಠ ಬೋನಸ್ 100% ಮೀರಬಾರದು. |
ರಸ್ತೆ ಅಪಘಾತಕ್ಕೆ (RTA) ಹೆಚ್ಚುವರಿ ವಿಮಾ ಮೊತ್ತವಿಮಾದಾರರಿಗೆ ರಸ್ತೆ ಅಪಘಾತವು ಸಂಭವಿಸಿದರೆ ಮತ್ತು ಅದರಿಂದ ಅವರು ಒಳರೋಗಿ ಆಸ್ಪತ್ರೆಗೆ ದಾಖಲಾದರೆ, ಗರಿಷ್ಠ ರೂ.5,00,000/- ಕ್ಕೆ ಒಳಪಟ್ಟು ವಿಮಾ ಮೊತ್ತವನ್ನು 25% ಹೆಚ್ಚಿಸಲಾಗುತ್ತದೆ. |
ನೆರವು ಸಹಿತ ಗರ್ಭಧಾರಣೆ ಚಿಕಿತ್ಸೆಕಂಪನಿಯು ಫಲವತ್ತತೆ ಸಮಸ್ಯೆಗಾಗಿ ಸೂಚಿಸಲಾದ ನೆರವು ಸಹಿತ ಗರ್ಭಧಾರಣೆ ಚಿಕಿತ್ಸೆಗೆ ಉಂಟಾಗುವ ವೈದ್ಯಕೀಯ ವೆಚ್ಚಭರಿಸುವಿಕೆಯನ್ನು ನೀಡುತ್ತದೆ. 1. ಈ ಪಾಲಿಸಿಯ ಮೊದಲ ಆರಂಭದ ದಿನಾಂಕದಿಂದ 36 ತಿಂಗಳ ವೇಟಿಂಗ್ ಅವಧಿಯು ಅನ್ವಯಿಸುತ್ತದೆ. 2. ಅಂತಹ ಚಿಕಿತ್ಸೆಗಾಗಿ ಕಂಪನಿಯ ಗರಿಷ್ಠ ಹೊಣೆಗಾರಿಕೆಯು ರೂ.5 ಲಕ್ಷದ ವಿಮಾ ಮೊತ್ತಕ್ಕೆ ರೂ. 1 ಲಕ್ಷ ಸೀಮಿತವಾಗಿರುತ್ತದೆ ಮತ್ತು ರೂ. 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ವಿಮಾ ಮೊತ್ತಕ್ಕೆ ಪ್ರತಿ 36 ತಿಂಗಳ ಬ್ಲಾಕ್‌ಗೆ ರೂ. 2 ಲಕ್ಷ ಅನ್ವಯಿಸುತ್ತದೆ. |
ನವಜಾತ ಶಿಶುವಿನ ಚಿಕಿತ್ಸೆಗಾಗಿ ಆಸ್ಪತ್ರೆಯ ವೆಚ್ಚಗಳುಜನನದ ನಂತರ 16 ನೇ ದಿನದಿಂದ ಕವರ್ ಪ್ರಾರಂಭವಾಗುತ್ತದೆ ಮತ್ತು ವಿಮಾ ಮೊತ್ತದ 10% ಅಥವಾ ಐವತ್ತು ಸಾವಿರ ರೂ.ಗಳ ಮಿತಿಗೆ ಒಳಪಟ್ಟಿರುತ್ತದೆ, ಯಾವುದು ಕಡಿಮೆಯೋ ಅದನ್ನು ಪಾಲಿಸಿಯ ಅಡಿಯಲ್ಲಿ ತಾಯಿಯು ವಿಮಾದಾರರಾಗಿದ್ದರೆ ಯಾವುದೇ ವಿರಾಮವಿಲ್ಲದೇ 12 ತಿಂಗಳ ನಿರಂತರ ಅವಧಿಗೆ ಪಾವತಿಸಲಾಗುತ್ತದೆ. ಗಮನಿಸಿ : ಹೊರಗಿಡುವಿಕೆಗಳು ಸಂಖ್ಯೆ.1(ಕೋಡ್ Excl 01), ಹೊರಗಿಡುವಿಕೆಗಳು ಸಂಖ್ಯೆ.2(ಕೋಡ್ Excl 02), ಹೊರಗಿಡುವಿಕೆಗಳು ಸಂಖ್ಯೆ.3(ಕೋಡ್ Excl 03) ಮತ್ತು ನವಜಾತ ಶಿಶುವಿನ ಜನ್ಮಜಾತ ಆಂತರಿಕ ಕಾಯಿಲೆ/ದೋಷಗಳಿಗೆ ಸಂಬಂಧಿಸಿದ ಚಿಕಿತ್ಸೆಗಳಿಗೆ ಮೇಲಿನ ಪಾವತಿಯ ನಿಯಮಗಳು ಅನ್ವಯಿಸುವುದಿಲ್ಲ. |
ಆಯುಷ್ ಚಿಕಿತ್ಸೆಆಯುಷ್ ಆಸ್ಪತ್ರೆಗಳಲ್ಲಿ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಔಷಧಗಳ ಅಡಿಯಲ್ಲಿ ಚಿಕಿತ್ಸೆಗಾಗಿ ತಗಲುವ ವೆಚ್ಚವನ್ನು ಒಳಗೊಂಡಿದೆ. |
ವೈದ್ಯಕೀಯ ಉದ್ದೇಶಕ್ಕಾಗಿ ಸ್ವದೇಶಕ್ಕೆ ತುರ್ತು ವರ್ಗಾವಣೆಪಾಲಿಸಿ ಷರತ್ತಿನಲ್ಲಿ ತಿಳಿಸಲಾದ ಮಿತಿಗಳ ಪ್ರಕಾರ ಚಿಕಿತ್ಸೆಗಾಗಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ವಿಮಾದಾರರನ್ನು ಸಾಗಿಸಲು ತಗಲುವ ವೆಚ್ಚವನ್ನು ಇದು ಒಳಗೊಂಡಿರುತ್ತದೆ. |
ಸಂಬಂಧಿಕರಿಗೆ ಕೃಪಾ ಪ್ರಯಾಣವಿಮಾದಾರರು ತಮ್ಮ ವಾಸಸ್ಥಳದಿಂದ ದೂರವಿರುವ ಸಂದರ್ಭದಲ್ಲಿ ಜೀವಕ್ಕೆ ಅಪಾಯಕಾರಿಯಾದ ತುರ್ತು ಸಮಯದಲ್ಲಿ ವಿಮಾದಾರರು ಆಸ್ಪತ್ರೆಗೆ ದಾಖಲಾದಾಗ ಅವರ ತಕ್ಷಣದ ಕುಟುಂಬ ಸದಸ್ಯರಿಗೆ ರೂ. 5000/- ವರೆಗೆ ವಿಮಾನ ಸಾರಿಗೆ ವೆಚ್ಚವನ್ನು ಪಾವತಿಸಲಾಗುತ್ತದೆ. |
ಎರಡನೇ ವೈದ್ಯಕೀಯ ಅಭಿಪ್ರಾಯಕಂಪನಿಯ ವೈದ್ಯಕೀಯ ವೃತ್ತಿಗಾರರ ನೆಟ್‌ವರ್ಕ್‌ನಲ್ಲಿರುವ ವೈದ್ಯರಿಂದ ವಿಮಾದಾರರು ಎರಡನೇ ವೈದ್ಯಕೀಯ ಅಭಿಪ್ರಾಯವನ್ನು ಪಡೆಯಬಹುದು. |
ಆಧುನಿಕ ಚಿಕಿತ್ಸೆಆಧುನಿಕ ಚಿಕಿತ್ಸಾ ವೆಚ್ಚಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಪಾವತಿಸಲಾಗುತ್ತದೆ. |
ರೀಚಾರ್ಜ್ ಪ್ರಯೋಜನಮಿತಿಗಳವರೆಗೆ ಲಭ್ಯವಿದೆ. |
ಡೇ ಕೇರ್ ಕಾರ್ಯವಿಧಾನಗಳುತಾಂತ್ರಿಕ ಪ್ರಗತಿಯಿಂದಾಗಿ ಆಸ್ಪತ್ರೆಗೆ ದಾಖಲಾದ 24 ಗಂಟೆಗಳಿಗಿಂತ ಕಡಿಮೆ ಅವಧಿಯ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರ ಚಿಕಿತ್ಸಾ ವಿಧಾನಗಳು ಕವರ್ ಆಗುತ್ತವೆ. |
ಮನೆಯಲ್ಲೇ ಚಿಕಿತ್ಸೆಮೂರು ದಿನಗಳಿಗಿಂತ ಹೆಚ್ಚಿನ ಅವಧಿಗೆ ವೈದ್ಯರ ಸಲಹೆಯ ಮೇರೆಗೆ ಆಯುಷ್ ಸೇರಿದಂತೆ ಮನೆಯಲ್ಲಿಯೇ ತೆಗೆದುಕೊಂಡ ಚಿಕಿತ್ಸೆಯ ವೆಚ್ಚಗಳನ್ನು ಭರಿಸಲಾಗುತ್ತದೆ. |
ಅಂಗಾಂಗ ದಾನಿಗಳ ವೆಚ್ಚಗಳುಅಂಗಾಂಗ ಕಸಿ ಮಾಡುವಿಕೆಗೆ ತಗಲುವ ವೆಚ್ಚಗಳು ಗರಿಷ್ಠ ರೂ. 1,00,000/- ಮತ್ತು ವಿಮಾ ಮೊತ್ತದ 10% ರಷ್ಟು ಮಿತಿಯಲ್ಲಿ ಯಾವುದು ಕಡಿಮೆಯೋ ಅದನ್ನು ಪಾವತಿಸಲಾಗುತ್ತದೆ. |
ತವರಿಗೆ ಮೃತದೇಹ ರವಾನೆವಿಮಾದಾರರ ಮೃತದೇಹವನ್ನು ಸ್ವದೇಶಕ್ಕೆ ತರಲು ಉಂಟಾಗುವ ವೆಚ್ಚಗಳು ಪ್ರತಿ ಪಾಲಿಸಿ ಅವಧಿಗೆ ರೂ.5,000/- ವರಗೆ ಕವರ್ ಆಗುತ್ತವೆ. |
ಕಣ್ಣಿನ ಪೊರೆ ಚಿಕಿತ್ಸೆಕಣ್ಣಿನ ಪೊರೆ ಚಿಕಿತ್ಸೆಗಾಗಿ ತಗಲುವ ವೆಚ್ಚವನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ಮೌಲ್ಯಯುತ ಸೇವಾ ಪೂರೈಕೆದಾರರಲ್ಲಿ ಚಿಕಿತ್ಸೆಕಂಪನಿಯು ಸೂಚಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರೆ, ಪ್ರತಿ ಪಾಲಿಸಿ ಅವಧಿಗೆ ಗರಿಷ್ಠ ರೂ. 5,000/- ಕ್ಕೆ ಒಳಪಟ್ಟು ವಿಮಾ ಮೊತ್ತದ 1% ಅನ್ನು ಇಡಿಗಂಟಾಗಿ ಪಾವತಿಸಲಾಗುತ್ತದೆ. |
ಆರೋಗ್ಯ ತಪಾಸಣೆನೆಟ್ವರ್ಕ್ ಆಸ್ಪತ್ರೆಗಳಲ್ಲಿ ಉಂಟಾಗುವ ಆರೋಗ್ಯ ತಪಾಸಣೆ ವೆಚ್ಚಗಳನ್ನು ಪ್ರತಿ-ಕ್ಲೈಮ್ ಮುಕ್ತ ವರ್ಷಕ್ಕೆ ನಿಗದಿತ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ಸಹ-ಪಾವತಿಈ ಪಾಲಿಸಿಯು ಹೊಸದಾಗಿ ಪಾಲಿಸಿ ಮಾಡುವವರ ಹಾಗೆಯೇ ಪ್ರವೇಶ ಸಮಯದಲ್ಲಿ 61 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವಿಮಾದಾರರಾಗಿದ್ದರೆ ನವೀಕರಣದ ಸಮಯದಲ್ಲಿಯೂ ಪ್ರತಿ ಕ್ಲೈಮ್ ಮೊತ್ತದ 20% ರಷ್ಟು ಸಹ-ಪಾವತಿಗೆ ಒಳಪಟ್ಟಿರುತ್ತದೆ. |
ಕಂತಿನ ಆಯ್ಕೆಗಳುಪ್ರೀಮಿಯಂ ಅನ್ನು ತ್ರೈಮಾಸಿಕ ಮತ್ತು ಅರ್ಧವಾರ್ಷಿಕವಾಗಿ ಪಾವತಿಸಬಹುದು. ಪ್ರೀಮಿಯಂ ಅನ್ನು ವಾರ್ಷಿಕವಾಗಿ ಮತ್ತು ದ್ವೈವಾರ್ಷಿಕ (2 ವರ್ಷಗಳಿಗೊಮ್ಮೆ) ಪಾವತಿಸಬಹುದು. ಗಮನಿಸಿ: 2 ವರ್ಷಗಳ ಅವಧಿಯ ಪಾಲಿಸಿಗಳಿಗೆ ಕಂತು ಸೌಲಭ್ಯವನ್ನು ಆಯ್ದುಕೊಂಡರೆ, 2 ವರ್ಷಗಳ ಅವಧಿಗೆ ಅನ್ವಯವಾಗುವ ಸಂಪೂರ್ಣ ಪ್ರೀಮಿಯಂ ಅನ್ನು ಮೊದಲ ವರ್ಷದ ಮುಕ್ತಾಯದೊಳಗೆ ತ್ರೈಮಾಸಿಕ ಅಥವಾ ಅರ್ಧವಾರ್ಷಿಕವಾಗಿ ಪಾವತಿಸಬೇಕು. |
ಮುಂಗಡ ರಿಯಾಯಿತಿಈ ಪಾಲಿಸಿಯ ಪ್ರಾರಂಭದಲ್ಲಿ ಜೀವನಶೈಲಿ ಮತ್ತು ಅಭ್ಯಾಸಗಳಿಗೆ ಸಂಬಂಧಿಸಿದ ಪ್ರಶ್ನಾವಳಿಗಳನ್ನು ಭರ್ತಿ ಮಾಡಲು 5% ರಿಯಾಯಿತಿ ನೀಡಲಾಗುತ್ತದೆ. |
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.