Star Health Logo
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್

ಮೆಟರ್ನಿಟಿ ಹೆಲ್ತ್ ಇನ್ಶೂರೆನ್ಸ್

ನಿಮ್ಮ ಡೆಲಿವರಿ ಖರ್ಚುಗಳು ಕವರ್ ಆಗುವಂತೆ ಮಾಡಿ

ಪ್ರಸವ ಸಂಬಂಧಿತ ಹೆಲ್ತ್ ಇನ್ಶೂರೆನ್ಸ್ ಆಸ್ಪತ್ರೆಯ ವೆಚ್ಚಗಳು, ಹೆರಿಗೆ (ಸಹಜ ಮತ್ತು ಸಿ-ಸೆಕ್ಷನ್), ಪೂರ್ವ ಮತ್ತು ನಂತರದ ಆರೈಕೆ, ವೈದ್ಯಕೀಯ ಪರೀಕ್ಷೆಗಳು ಮತ್ತು ನವಜಾತ ಶಿಶುವಿನ ವೆಚ್ಚಗಳು ಸೇರಿದಂತೆ ಎಲ್ಲಾ ಗರ್ಭಾವಸ್ಥೆಯ ಸಂಬಂಧಿತ ವೈದ್ಯಕೀಯ ವೆಚ್ಚಗಳಿಗೆ ವ್ಯಾಪಕ ಕವರೇಜ್ ಅನ್ನು ಒದಗಿಸುವ ಹೆಲ್ತ್ ಪಾಲಿಸಿಯಾಗಿದೆ. ಹೆರಿಗೆ ವಿಮೆಯು ಆರ್ಥಿಕ ಸ್ಥಿರತೆಯನ್ನು ನೀಡುತ್ತದೆ ಮತ್ತು ಮಹಿಳೆಯರು ತಮ್ಮ ಮಗುವನ್ನು ಬೆಳೆಸುವುದಕ್ಕಾಗಿ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಇತ್ತೀಚಿನ ದಿನಗಳಲ್ಲಿ, ಕಾರ್ಪೊರೇಟ್‌ಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ಪ್ರಯೋಜನಗಳನ್ನು ರೈಡರ್ ಆಗಿ ಅಥವಾ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಭಾಗವಾಗಿ ಸೇರಿಸುತ್ತಾರೆ.  ಭಾರತದಲ್ಲಿ, ಇನ್ಶೂರೆನ್ಸ್ ಪೂರೈಕೆದಾರರನ್ನು ಅವಲಂಬಿಸಿ, ಪ್ರಸವ ಇನ್ಶೂರೆನ್ಸ್ ಪಾಲಿಸಿಗಳು 9 ತಿಂಗಳಿಂದ 6 ವರ್ಷಗಳವರೆಗೆ ಕಾಯುವಿಕೆ ಅವಧಿಯನ್ನು ಹೊಂದಿರುತ್ತವೆ. ನಿರೀಕ್ಷಿತ ತಾಯಂದಿರು ಗುಣಮಟ್ಟದ ಆರೋಗ್ಯ ಸೌಲಭ್ಯಗಳನ್ನು ಪಡೆಯಬಹುದು ಮತ್ತು ಅವರ ವಿತರಣಾ ವೆಚ್ಚವನ್ನು ಪ್ರಸವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಒಳಗೊಂಡಿದೆ.

*I hereby authorise Star Health Insurance to contact me. It will override my registry on the NCPR.

 

ಭಾರತದಲ್ಲಿ ಮೆಟರ್ನಿಟಿ ಹೆಲ್ತ್ ಇನ್ಶೂರೆನ್ಸ್

 

ಹೊಸದಾಗಿ ಪೋಷಕರಾಗುವುದು ಮತ್ತು ಜಗತ್ತಿಗೆ ಹೊಸ ಜೀವಕ್ಕೆ ಜನ್ಮ ನೀಡುವುದು ಉಲ್ಲಾಸ, ಸಂತೋಷ ಮತ್ತು ಉತ್ಸಾಹಕ್ಕೆ ದಾರಿಮಾಡಿಕೊಡುತ್ತದೆ. "ಹೆಚ್ಚಿನ ಸಾಮರ್ಥ್ಯದ ಜೊತೆಗೆ ಹೆಚ್ಚಿನ ಜವಾಬ್ದಾರಿಯೂ ಬರುತ್ತದೆ" ಎಂಬ ಉಲ್ಲೇಖದಂತೆಯೇ, ಪೋಷಕರಾಗುವುದು ಪುಟ್ಟ ಜೀವವೊಂದನ್ನು ಆರೈಕೆ ಮಾಡುವ ಜವಾಬ್ದಾರಿಯೊಂದಿಗೆ ಬೆಸೆದುಕೊಂಡಿದೆ. ಇದು ಜೀವನದ ರೋಮಾಂಚಕಾರಿ ಹಂತವಾಗಿದ್ದರೂ, ಅನಿಶ್ಚಿತತೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಅದಕ್ಕಾಗಿ ಯಾವಾಗಲೂ ಸಿದ್ಧರಾಗಿರುವುದು ಉತ್ತಮ.

 

ಹೆಚ್ಚುತ್ತಿರುವ ವೈದ್ಯಕೀಯ ಹಣದುಬ್ಬರ ಮತ್ತು ಹೆಚ್ಚುತ್ತಿರುವ ಆಸ್ಪತ್ರೆಯ ಖರ್ಚುಗಳು ದಂಪತಿಗಳ ಹಣಕಾಸು ಪರಿಸ್ಥಿತಿಯ ಮೇಲೆ ಒತ್ತಡವನ್ನು ಹೇರುತ್ತಿವೆ ಎಂಬುದರ ಅರಿವು ನಮಗಿದೆ. ಅದಕ್ಕಾಗಿ, ಮೆಟರ್ನಿಟಿ ಹೆಲ್ತ್ ಇನ್ಸೂರೆನ್ಸ್ ಪಾಲಿಸಿಗಳನ್ನು ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಒದಗಿಸುತ್ತಿದೆ, ಆದ್ದರಿಂದ ನೀವು ಇನ್ನು ಮುಂದೆ ಹೆಚ್ಚುತ್ತಿರುವ ವೈದ್ಯಕೀಯ ಖರ್ಚುಗಳ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.

 

IRDAI ಪ್ರಕಾರ ಮೆಟರ್ನಿಟಿ ಖರ್ಚುಗಳೆಂದರೆ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ನಾರ್ಮಲ್ ಅಥವಾ ಸಿಸೇರಿಯನ್ ಸೆಕ್ಷನ್ ಅನ್ನು ಒಳಗೊಂಡ ಡೆಲಿವರಿಯ ವೈದ್ಯಕೀಯ ಚಿಕಿತ್ಸಾ ಖರ್ಚುಗಳಾಗಿವೆ. ಇದು ಪಾಲಿಸಿ ಅವಧಿಯಲ್ಲಿ ಕಾನೂನುಬದ್ಧ ಗರ್ಭಪಾತದ ಖರ್ಚುಗಳನ್ನು ಒಳಗೊಂಡಿರುತ್ತದೆ.

 

ಪ್ರಸವಪೂರ್ವ ಆರೈಕೆ, ವೈದ್ಯರ ಭೇಟಿಗಳು, ಹೆರಿಗೆ ಮತ್ತು ಪ್ರಸವ ನಂತರದ ಆರೈಕೆಗೆ ಸಂಬಂಧಿಸಿದಂತೆ ವಿಶೇಷವಾಗಿ ಹೆಚ್ಚುವ ಖರ್ಚುಗಳನ್ನು ಪೂರೈಸಲು ಡೆಲಿವರಿ ಪ್ರಯೋಜನಗಳನ್ನು ಹೊಂದಿರುವ ವೈದ್ಯಕೀಯ ಪಾಲಿಸಿ ಅತ್ಯಗತ್ಯವಾಗಿದೆ. 

 

ಗರ್ಭಾವಸ್ಥೆ ಸಮಯದಲ್ಲಿ, ವಿಶೇಷವಾಗಿ ಹೆರಿಗೆ ಸಮಯದಲ್ಲಿ ಮತ್ತು ಮಗುವಿನ ಜೀವನದ ಆರಂಭಿಕ ದಿನಗಳಲ್ಲಿ ಯಾವುದೇ ತೊಡಕುಗಳು ಉಂಟಾದರೆ, ಡೆಲಿವರಿ ಪ್ರಯೋಜನಗಳನ್ನು ಹೊಂದಿರುವ ಮೆಡಿಕಲ್ ಪಾಲಿಸಿಯು ತಾಯಿ ಮತ್ತು ಮಗುವಿನ ಸುರಕ್ಷತೆಯ ಕಾಳಜಿವಹಿಸುತ್ತದೆ.

 

ನಿಮ್ಮ ರೆಗ್ಯುಲರ್ ಹೆಲ್ತ್ ಇನ್ಶೂರೆನ್ಸ್ ಭಾಗವಾಗಿ ನಿಮಗೆ ಡೆಲಿವರಿ ಖರ್ಚಿನ ಕವರೇಜ್ ಏಕೆ ಅಗತ್ಯವಾಗಿದೆ?

 

WHO ದ ನವಜಾತ ಸಾವು ಮತ್ತು ಅನಾರೋಗ್ಯದ ವರದಿಯ ಪ್ರಕಾರ, "ಐದು ವರ್ಷದೊಳಗೆ ಉಂಟಾಗುವ ನವಜಾತ ಶಿಶುಗಳ ಒಟ್ಟಾರೆ ಸಾವುಗಳಲ್ಲಿ ಸುಮಾರು 41% ಸಾವುಗಳು ಅವುಗಳ ಜನನದ ಮೊದಲ 28 ದಿನಗಳೊಳಗೆ ಅಥವಾ ಶಿಶುಗಳ ನವಜಾತ ಶಿಶು ಅವಧಿಯಲ್ಲಿ ಸಂಭವಿಸುತ್ತವೆ."

 

ನಾರ್ಮಲ್ ಅಥವಾ ಸಿ-ಸೆಕ್ಷನ್ ಡೆಲಿವರಿಗಳ ಸರಾಸರಿ ಖರ್ಚು ಹೆಚ್ಚುತ್ತಿದೆ ಮತ್ತು ಭಾರತದ ಹೆಚ್ಚಿನ ನಗರಗಳಲ್ಲಿ ಅದರ ಖರ್ಚು ₹2 ಲಕ್ಷಗಳು ಮತ್ತು ಅದಕ್ಕಿಂತ ಹೆಚ್ಚಾಗಿದೆ.

 

ಭಾರತದಲ್ಲಿ ಸೀಮಿತ ಮೆಟರ್ನಿಟಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿದ್ದರೂ, ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನ ವೈಯಕ್ತಿಕ ಮತ್ತು ಫ್ಯಾಮಿಲಿ ಫ್ಲೋಟರ್ ಪಾಲಿಸಿಗಳ ಒಂದು ಪ್ರಮುಖ ಪ್ರಯೋಜನವೆಂದರೆ ಅವು ಡೆಲಿವರಿ ಸಮಯದ ಮತ್ತು ನವಜಾತ ಶಿಶುವಿನ ಖರ್ಚುಗಳನ್ನು ಭರಿಸುತ್ತವೆ.

 

ನಿಮ್ಮ ಸಂಗಾತಿ ಅಥವಾ ನಿಮ್ಮ ಕುಟುಂಬ ಸದಸ್ಯರ ಡೆಲಿವರಿ ಖರ್ಚಿನ  ಕವರೇಜ್ ಇರುವ ಮೆಡಿಕ್ಲೈಮ್ ಪ್ಲ್ಯಾನ್ ಅನ್ನು ಖರೀದಿಸುವ ಬಯಕೆಯನ್ನು ನೀವು ಹೊಂದಿರುವುದು  ಉತ್ತಮ ಆಲೋಚನೆ ಆಗಿದೆ. ನಿಮ್ಮ ಹೆಲ್ತ್ ಇನ್ಶೂರೆನ್ಸ್‌ನ ಭಾಗವಾಗಿ ಒದಗಿಸಲಾದ ಮೆಟರ್ನಿಟಿ ಕವರ್ ನಾರ್ಮಲ್ ಡೆಲಿವರಿ ಅಥವಾ ಸಿಸೇರಿಯನ್ ಡೆಲಿವರಿ ಮತ್ತು/ಅಥವಾ ಯಾವುದೇ ವೈದ್ಯಕೀಯ ತೊಡಕುಗಳ ಕಾರಣದಿಂದಾಗಿ ಮಗುವನ್ನು ಆಸ್ಪತ್ರೆಗೆ ಸೇರಿಸಿದರೆ ಉಂಟಾಗುವ ಖರ್ಚುಗಳನ್ನು ಭರಿಸುತ್ತದೆ.

 

ನೀವು ಡೆಲಿವರಿ ಪ್ರಯೋಜನಗಳನ್ನು ಹೊಂದಿರುವ ಮೆಡಿಕ್ಲೈಮ್ ಪಾಲಿಸಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ ಅಥವಾ ನೀವು ಫ್ಯಾಮಿಲಿ ಪಾಲಿಸಿಗೆ ಬದಲಾಗಲು ಬಯಸುತ್ತಿದ್ದರೆ, ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಶೀಘ್ರದಲ್ಲೇ ಪೋಷಕರಾಗುವವರಿಗೆ ಸೂಕ್ತವಾದ ಮೆಡಿಕಲ್ ಇನ್ಶೂರೆನ್ಸ್ ಅನ್ನು ನೀಡುವ ಮೂಲಕ ಅವರು ಆರೋಗ್ಯಕರ ಮತ್ತು ಸಂತೋಷದಾಯಕ ಗರ್ಭಧಾರಣೆಯನ್ನು ಹೊಂದಲು ಅಗತ್ಯವಿರುವ ಬೆಂಬಲವನ್ನು ಒದಗಿಸುತ್ತದೆ.

 

ಮಗುವೊಂದು ಸಂತೋಷಗಳು ಮತ್ತು ವೆಚ್ಚಗಳೊಂದಿಗೆ ಜನಿಸುತ್ತದೆ ಎನ್ನುವುದು ನಮಗೆ ತಿಳಿದಿದೆ. ಮತ್ತು ಈ ವೆಚ್ಚಗಳ ಸುಂಕ ಹೊಸ ಪೋಷಕರ ಹಣಕಾಸು ಮತ್ತು ಯೋಗಕ್ಷೇಮವಾಗಿರಬಹುದು.

 

ಆದ್ದರಿಂದ, ಗರ್ಭಾವಸ್ಥೆಯ ಮುಂಚಿತವಾಗಿ ಮೆಟರ್ನಿಟಿಗೆ ಸಂಬಂಧಿಸಿದ ಖರ್ಚುಗಳನ್ನು ಒಳಗೊಂಡಿರುವ ಮೆಡಿಕಲ್ ಇನ್ಸೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಮುಖ್ಯವಾಗಿದೆ. 

 

ಡೆಲಿವರಿಯ ಖರ್ಚುಗಳನ್ನು ಒಳಗೊಂಡಿರುವ ಸ್ಟಾರ್ ಹೆಲ್ತ್ ಪಾಲಿಸಿಗಳು ಯಾವುವು?

 

ಪ್ರಸವ ಸಂಬಂಧಿತ ಹೆಲ್ತ್ ಪ್ಲ್ಯಾನ್‌ಗಳೊಂದಿಗೆ, ಗರ್ಭಾವಸ್ಥೆಯಲ್ಲಿ ಉಂಟಾಗುವ ವೆಚ್ಚಗಳಿಂದ ನೀವು ಆರ್ಥಿಕವಾಗಿ ರಕ್ಷಿಸಿಕೊಳ್ಳಬಹುದು. ಗರ್ಭಿಣಿಯರಿಗೆ ಸ್ಟಾರ್ ಹೆಲ್ತ್ ನೀಡುವ ವಿವಿಧ ಯೋಜನೆಗಳನ್ನು ಕುರಿತು ತಿಳಿಸುವ ವಿವರವಾದ ಟೇಬಲ್ ಇಲ್ಲಿದೆ, ಜೊತೆಗೆ ವಿಮೆ ಮಾಡಿದ ಮೊತ್ತ ಮತ್ತು ಕಾಯುವ ಅವಧಿಯು ಈ ಕೆಳಗಿನಂತಿರುತ್ತದೆ:

 

ಪಾಲಿಸಿ ಹೆಸರುಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿ (ಗೋಲ್ಡ್ ಪ್ಲ್ಯಾನ್)ಸ್ಟಾರ್ ವುಮೆನ್ ಕೇರ್ ಇನ್ಶೂರೆನ್ಸ್ ಪಾಲಿಸಿಸೂಪರ್ ಸರ್‌ಪ್ಲಸ್ ಇನ್ಶೂರೆನ್ಸ್ ಪಾಲಿಸಿ (ಗೋಲ್ಡ್ ಪ್ಲ್ಯಾನ್)ಸ್ಟಾರ್ ಸೂಪರ್ ಸರ್‌ಪ್ಲಸ್ (ಫ್ಲೋಟರ್) ಇನ್ಶೂರೆನ್ಸ್ ಪಾಲಿಸಿ (ಗೋಲ್ಡ್ ಪ್ಲ್ಯಾನ್)
ಪ್ರವೇಶ ವಯಸ್ಸುವಯಸ್ಕರು18-65 ವರ್ಷಗಳು18-40 ವರ್ಷಗಳು18 - 75 ವರ್ಷಗಳು18-65 ವರ್ಷಗಳು18-65 ವರ್ಷಗಳು
ಅವಲಂಬಿತ ಮಗು91 ದಿನಗಳಿಂದ 25 ವರ್ಷಗಳವರೆಗೆ91 ದಿನಗಳಿಂದ 25 ವರ್ಷಗಳವರೆಗೆ91 ದಿನಗಳಿಂದ 25 ವರ್ಷಗಳವರೆಗೆ91 ದಿನಗಳಿಂದ 25 ವರ್ಷಗಳವರೆಗೆ91 ದಿನಗಳಿಂದ 25 ವರ್ಷಗಳವರೆಗೆ
ಮಗಳು ಅವಿವಾಹಿತೆ ಆಗಿದ್ದರೆ / ಸಂಪಾದಿಸುತ್ತಿಲ್ಲವಾದರೆ - 30 ವರ್ಷಗಳವರೆಗೆ.
ಪ್ರಾಡಕ್ಟ್ ವಿಧವೈಯಕ್ತಿಕ / ಫ್ಲೋಟರ್ವೈಯಕ್ತಿಕ / ಫ್ಲೋಟರ್ವೈಯಕ್ತಿಕ / ಫ್ಲೋಟರ್ವೈಯಕ್ತಿಕಫ್ಲೋಟರ್
ಪಾಲಿಸಿ ಅವಧಿ1/2/3 - ವರ್ಷಗಳು1/2/3 - ವರ್ಷಗಳು1/2/3 - ವರ್ಷಗಳು1/2- ವರ್ಷಗಳು1/2- ವರ್ಷಗಳು
ವಿಮಾ ಮೊತ್ತ (S.I.) ರೂ. (ಲಕ್ಷಗಳು)5 / 7.5/ 10/ 15 / 20/ 25 / 50 / 75 / 100 ಲಕ್ಷಗಳುವೈಯಕ್ತಿಕ - 3 ಲಕ್ಷ5 / 10 / 15 / 20 / 25 / 50 / 100 ಲಕ್ಷಗಳುSI: 5 / 7 / 10 / 15 / 20 / 25 / 50 / 75 / 100 ಲಕ್ಷಗಳುSI: 5 / 10 / 15 / 20 / 25 / 50 / 75 / 100 ಲಕ್ಷಗಳು
ವ್ಯಾಖ್ಯಾನಿತ ಮಿತಿ: 3 ಲಕ್ಷಗಳುವ್ಯಾಖ್ಯಾನಿತ ಮಿತಿ: 3 / 5 / 10 / 15 / 20 / 25 ಲಕ್ಷಗಳು
ವೈಯಕ್ತಿಕ ಮತ್ತು ಫ್ಲೋಟರ್ - 5 /10 / 15 /20 /25 / 50 / 75 / 100 ಲಕ್ಷಗಳುSI: 5 / 10 / 15 / 20 / 25 / 50 / 75 / 100 ಲಕ್ಷಗಳು 
ವ್ಯಾಖ್ಯಾನಿತ ಮಿತಿ: 5 / 10 / 15 / 20 / 25 ಲಕ್ಷಗಳು 
ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ಸಂಚಿತ ಬೋನಸ್100% S.I. ವರೆಗೆ100% S.I. ವರೆಗೆ 100% S.I. ವರೆಗೆಶೂನ್ಯಶೂನ್ಯ
ಮೆಟರ್ನಿಟಿ ಕವರೇಜ್ ಮತ್ತು ವೇಟಿಂಗ್ ಅವಧಿಹೌದು & 24 ತಿಂಗಳುಗಳು  ಹೌದು & 36 ತಿಂಗಳುಗಳುಹೌದು,ಹೌದು & 12 ತಿಂಗಳುಗಳುಹೌದು & 12 ತಿಂಗಳುಗಳು
5/10 ಲಕ್ಷ S.I. ಗೆ 24 ತಿಂಗಳುಗಳು
15 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ S.I. ಗೆ 12 ತಿಂಗಳುಗಳು
ಮಧ್ಯಂತರ ಸೇರ್ಪಡೆಲಭ್ಯವಿದೆಲಭ್ಯವಿದೆಲಭ್ಯವಿದೆಅಲ್ಲ ಲಭ್ಯವಿದೆಅಲ್ಲ ಲಭ್ಯವಿದೆ

 

ಡೆಲಿವರಿ ಕವರ್‌ನೊಂದಿಗೆ ಸ್ಟಾರ್ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ

 

ಹೆಸರೇ ಸೂಚಿಸುವಂತೆ, ನಿಮ್ಮ ಎಲ್ಲಾ ವೈದ್ಯಕೀಯ ವೆಚ್ಚಗಳಿಗೆ ಸಮಗ್ರ ಮತ್ತು ಒಟ್ಟಾರೆ ಕವರ್ ಒದಗಿಸಲು ಸ್ಟಾರ್ ಕಾಂಪ್ರೆಹೆನ್ಸಿವ್ ಇನ್ಸೂರೆನ್ಸ್ ಪಾಲಿಸಿಯನ್ನು ವಿನ್ಯಾಸಗೊಳಿಸಲಾಗಿದೆ. ಸಹಜವಾಗಿ, ಪತಿ ಮತ್ತು ಪತ್ನಿ ಇಬ್ಬರೂ ಕಾಂಪ್ರೆಹೆನ್ಸಿವ್ ಇನ್ಸೂರೆನ್ಸ್ ಪಾಲಿಸಿಯ ಅಡಿಯಲ್ಲಿ ಒಳಗೊಂಡಿರುವಾಗ ಪ್ಲ್ಯಾನ್ ಅನೇಕ ವಿಶಿಷ್ಟವಾದ ಡೆಲಿವರಿ-ಸಂಬಂಧಿತ ಕವರೇಜ್ ಪ್ರಯೋಜನಗಳನ್ನು ಒದಗಿಸುತ್ತದೆ. ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಹೊಸದಾಗಿ ಮದುವೆಯಾದ ಸಂಗಾತಿಯ ಅಥವಾ ನವಜಾತ ಶಿಶುವಿನ ಮಧ್ಯಂತರ ಸೇರ್ಪಡೆಯನ್ನು ಮಾಡಬಹುದಾಗಿದೆ. ಕವರೇಜ್ ಪ್ರೀಮಿಯಂ ಪಾವತಿಯ ದಿನಾಂಕದಿಂದ ಪ್ರಾರಂಭವಾಗುತ್ತದೆ. ನಿರೀಕ್ಷಿತ ಪೋಷಕರು 24 ತಿಂಗಳ ವೇಟಿಂಗ್ ಅವಧಿಯ ನಂತರ ಒಳರೋಗಿಗಳ ಡೆಲಿವರಿ ಮತ್ತು ನವಜಾತ ಶಿಶುವಿನ ವೆಚ್ಚಗಳ ಕವರೇಜ್ ಅನ್ನು ಪಡೆದುಕೊಳ್ಳಬಹುದಾಗಿದೆ.

 

ಗಮನಿಸಿ: ಡೆಲಿವರಿ ಕ್ಲೈಮ್‌ನ ನಂತರ ಎರಡನೇ ಡೆಲಿವರಿಗೆ 24 ತಿಂಗಳ ವೇಟಿಂಗ್ ಅವಧಿಯು ಹೊಸದಾಗಿ ಅನ್ವಯಿಸುತ್ತದೆ.

 

ಕೆಳಗಿನ ಡೆಲಿವರಿ ಮತ್ತು ನವಜಾತ ಶಿಶುವಿನ ವೆಚ್ಚಗಳನ್ನು ಸ್ಟಾರ್ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗಿದೆ.   

 

  • ಪಾಲಿಸಿಯು ಸಕ್ರಿಯವಾಗಿರುವಾಗ ವಿಮಾದಾರರ ಜೀವಿತಾವಧಿಯಲ್ಲಿ ಗರಿಷ್ಠ ಎರಡು ಡೆಲಿವರಿಗಳವರೆಗೆ ಸಿಸೇರಿಯನ್ ಸೆಕ್ಷನ್ ಸೇರಿದಂತೆ ಡೆಲಿವರಿ ಸಮಯದಲ್ಲಿ ಉಂಟಾಗುವ ಖರ್ಚುಗಳು. 
  • ತಿಳಿಸಲಾದ ಮಿತಿಗಳವರೆಗೆ ಸಿಸೇರಿಯನ್ ಸೆಕ್ಷನ್ ಸೇರಿದಂತೆ ಡೆಲಿವರಿ ಪೂರ್ವ ಮತ್ತು ನಂತರದ ಖರ್ಚುಗಳು.
  • ನವಜಾತ ಶಿಶುವಿಗೆ ಯಾವುದೇ ಕಾಯಿಲೆ, ಯಾವುದೇ ಜನ್ಮಜಾತ ಅಸ್ವಸ್ಥತೆಗಳು ಮತ್ತು ಆಕಸ್ಮಿಕ ಗಾಯಗಳು ಸೇರಿದಂತೆ ಸೂಚಿಸಲಾದ ಮಿತಿಗಳೊಳಗೆ ಚಿಕಿತ್ಸೆಗಾಗಿ ಆಸ್ಪತ್ರೆ/ನರ್ಸಿಂಗ್ ಹೋಮ್‌ನಲ್ಲಿ ಉಂಟಾದ ಖರ್ಚುಗಳು.
  • ಮಗುವಿಗೆ ಒಂದು ವರ್ಷ ತುಂಬುವವರೆಗೆ ವ್ಯಾಕ್ಸಿನೇಷನ್ ಖರ್ಚುಗಳನ್ನು ಸೂಚಿಸಲಾದ ಮಿತಿಗಳೊಳಗೆ ಕವರ್ ಮಾಡಲಾಗುತ್ತದೆ.

 

ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿ (ಗೋಲ್ಡ್ ಪ್ಲ್ಯಾನ್)

 

ಆರೋಗ್ಯವಂತ ಯುವ ವಯಸ್ಕರಿಗೆ, ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವುದು ಅನಗತ್ಯವಾಗಿ ಕಾಣಿಸಬಹುದು. ಹಾಗಿದ್ದರೂ, ಇನ್ಶೂರೆನ್ಸ್ ಅನ್ನು ಹೊಂದಿರುವುದು ಅತ್ಯಗತ್ಯವಾಗಿದೆ, ಆಗ ನೀವು ಯಾವುದೇ ಅನಿರೀಕ್ಷಿತ ವೈದ್ಯಕೀಯ ಖರ್ಚುಗಳನ್ನು ಎದುರಿಸಲು, ವಿಶೇಷವಾಗಿ ತುರ್ತು ಪರಿಸ್ಥಿತಿಯಲ್ಲಿ ಸಮರ್ಥರಾಗುತ್ತೀರಿ.

 

18 ಮತ್ತು 40 ವರ್ಷ ವಯಸ್ಸಿನ ಯುವ ವಯಸ್ಕರು ತಮ್ಮ ನಿರ್ದಿಷ್ಟ ಆರೋಗ್ಯ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿ ಉತ್ತಮ ಆಯ್ಕೆಯಾಗಿದೆ. ಪ್ಲ್ಯಾನ್ ಇನ್ಸೆಂಟಿವ್-ಲೆಡ್ ವೆಲ್‌ನೆಸ್ ಪ್ರೋಗ್ರಾಂಗಳು, ಕಡಿಮೆ ವೇಟಿಂಗ್ ಅವಧಿಗಳು, ಆಸ್ಪತ್ರೆಯ ಪೂರ್ವ ಮತ್ತು ನಂತರದ ವೆಚ್ಚಗಳ ಕವರೇಜ್, ಸಂಚಿತ ಬೋನಸ್, ವಾರ್ಷಿಕ ಹೆಲ್ತ್ ಚೆಕ್ಅಪ್ ಮತ್ತು ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್‌ನಂತಹ ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ನೀಡುತ್ತದೆ.

 

ನಿಮ್ಮ ಗರ್ಭಧಾರಣೆಯುದ್ದಕ್ಕೂ ನಿಮಗೆ ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿ ಸಹಾಯ ಮಾಡುತ್ತದೆ. 36 ತಿಂಗಳ ನಿರಂತರ ಅವಧಿಯವರೆಗೆ ಪತಿ ಮತ್ತು ಪತ್ನಿ ಇಬ್ಬರೂ ಈ ಪಾಲಿಸಿಯಡಿಯಲ್ಲಿ ಒಳಗೊಂಡಿರುವಾಗ, ಗೋಲ್ಡ್ ಪ್ಲಾನ್ ಡೆಲಿವರಿ ಮತ್ತು ಡೆಲಿವರಿ-ಸಂಬಂಧಿತ ಕವರ್‌ನಂತಹ ಅನೇಕ ವಿಶಿಷ್ಟ ಪ್ರಯೋಜನಗಳನ್ನು ನೀಡುತ್ತದೆ. ಪಾಲಿಸಿ ಪ್ರಾರಂಭದ ದಿನಾಂಕದಿಂದ 36 ತಿಂಗಳ ವೇಟಿಂಗ್ ಅವಧಿಯ ನಂತರ ಡೆಲಿವರಿ ಮತ್ತು ನವಜಾತ ಶಿಶುಗಳ ಖರ್ಚುಗಳ ಕವರೇಜ್ ಪ್ರಾರಂಭವಾಗುತ್ತದೆ.

 

ಗಮನಿಸಿ: ಎರಡನೇ ಡೆಲಿವರಿ ಕ್ಲೈಮ್‌ಗಾಗಿ 24 ತಿಂಗಳ ವೇಟಿಂಗ್ ಅವಧಿಯು ಹೊಸದಾಗಿ ಅನ್ವಯಿಸುತ್ತದೆ.

 

ಕೆಳಗಿನ ಡೆಲಿವರಿ ಖರ್ಚುಗಳು ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿ (ಗೋಲ್ಡ್ ಪ್ಲ್ಯಾನ್) ಅಡಿಯಲ್ಲಿ ಒಳಗೊಂಡಿವೆ

 

  • ಪ್ರತಿ ಡೆಲಿವರಿಗೆ ₹30000 ವರೆಗೆ ಸಿಸೇರಿಯನ್ ಸೆಕ್ಷನ್ ಸೇರಿದಂತೆ ನಾರ್ಮಲ್ ಡೆಲಿವರಿಯ ಸಮಯದಲ್ಲಿ ಉಂಟಾಗುವ ಖರ್ಚುಗಳು ಮತ್ತು ಈ ಪ್ರಯೋಜನವು ಪಾಲಿಸಿಯು ಸಕ್ರಿಯವಾಗಿರುವಾಗ ವಿಮಾದಾರರ ಜೀವಿತಾವಧಿಯಲ್ಲಿ ಗರಿಷ್ಠ ಎರಡು ಡೆಲಿವರಿಗಳವರೆಗೆ ಅನ್ವಯಿಸುತ್ತದೆ.
  • ಸಿಸೇರಿಯನ್ ಸೆಕ್ಷನ್ ಸೇರಿದಂತೆ ರೂ. 30,000/- ವರೆಗಿನ ಪ್ರಸವಪೂರ್ವ ಮತ್ತು ನಂತರದ ಖರ್ಚುಗಳು
  • ನವಜಾತ ಶಿಶುವಿನ ಕವರೇಜ್ ಅವರ ಜನ್ಮದ 91 ನೇ ದಿನದಿಂದ ಪೂರ್ವ ಸೂಚನೆಯೊಂದಿಗೆ ಪಾಲಿಸಿಯ ಅಡಿಯಲ್ಲಿ ಅವರನ್ನು ಸೇರಿಸಿದ ನಂತರ ಪ್ರಾರಂಭವಾಗುತ್ತದೆ.

 

ಸ್ಟಾರ್ ವುಮೆನ್ ಕೇರ್ ಇನ್ಶೂರೆನ್ಸ್ ಪಾಲಿಸಿ

 

ಮಹಿಳೆಯರು ಮತ್ತು ಹುಡುಗಿಯರು ಆರೋಗ್ಯಕರ ಜೀವನವನ್ನು ನಡೆಸಿದಾಗ ಮತ್ತು ಅವರ ಸಾಮರ್ಥ್ಯವನ್ನು ಪ್ರದರ್ಶಿಸಿದಾಗ, ಇಡೀ ಸಮುದಾಯಕ್ಕೆ ಅದರಿಂದ ಪ್ರಯೋಜನಗಳಾಗುತ್ತವೆ. ಮಹಿಳೆಯರ ಆರೋಗ್ಯ ಕೇವಲ ಮಹಿಳೆಯರ ಸಮಸ್ಯೆಯಲ್ಲ. ಮಹಿಳೆಯರು ಕೇವಲ ಆರೈಕೆದಾರರು ಮತ್ತು ಗೃಹಿಣಿಯರಾಗಿರುವ ಹಿಂದಿನ ದಿನಗಳು ಕಳೆದುಹೋಗಿವೆ. ಸಮಯ ಕಳೆದಂತೆ, ಮಹಿಳೆಯರು ಜಾಗತಿಕ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ ಮತ್ತು ಸಬಲರಾರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಮಹಿಳೆಯರು ಕುಟುಂಬವನ್ನು ನೋಡಿಕೊಳ್ಳುವುದರೊಂದಿಗೆ ತಮ್ಮ ಉದ್ಯೋಗವನ್ನು ಅನಾಯಾಸವಾಗಿ ಸಮತೋಲನದಿಂದ ನಿರ್ವಹಿಸುತ್ತಿದ್ದಾರೆ. ಹೆಚ್ಚು ಹೆಚ್ಚು ಮಹಿಳೆಯರು ವೃತ್ತಿಯನ್ನು ಮಾಡುತ್ತಿದ್ದಾರೆ ಮತ್ತು ನಿರ್ಧಾರ-ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಹಿಳೆಯರ ಆರೋಗ್ಯದ ವಿಷಯಕ್ಕೆ ಬಂದಾಗ, ಅವರು ಸುರಕ್ಷತೆ ಮತ್ತು ರಕ್ಷಣೆಯನ್ನು ನಿರ್ಲಕ್ಷಿಸುತ್ತಾರೆ. ತೀವ್ರವಾದ ಅನಾರೋಗ್ಯ ಉಂಟಾದಾಗ, ಅವರು ತಮ್ಮ ಆರ್ಥಿಕ ಸ್ವಾತಂತ್ರ್ಯ ಮತ್ತು ವೃತ್ತಿಜೀವನವನ್ನು ತ್ಯಜಿಸುವ ಸ್ಥಿತಿ ಎದುರಾಗುತ್ತದೆ.

 

ಸ್ಟಾರ್ ವುಮೆನ್ ಕೇರ್ ಇನ್ಶೂರೆನ್ಸ್ ಪಾಲಿಸಿ  ಯು ಮಕ್ಕಳು ಮತ್ತು ಸಂಗಾತಿಗಳನ್ನು ಒಳಗೊಂಡಿರುವ ಮಹಿಳೆಯರ ಅಗತ್ಯತೆಗಳನ್ನು ಪೂರೈಸುವ ಮಹಿಳಾ ಕೇಂದ್ರಿತ ಪಾಲಿಸಿಯಾಗಿದೆ. ಈ ಪಾಲಿಸಿಯು 18 - 75 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಲಭ್ಯವಿದೆ. ಈ ಪಾಲಿಸಿ ಮೆಟರ್ನಿಟಿ, ನವಜಾತ ಶಿಶುವಿನ ಕವರ್, ಇನ್-ಯುಟೆರೋ ಫೀಟಲ್ ಶಸ್ತ್ರಚಿಕಿತ್ಸೆಗಳು, ಅಸಿಸ್ಟೆಡ್ ರಿಪ್ರೋಡಕ್ಷನ್ ಚಿಕಿತ್ಸೆಗಳು ಮತ್ತು ಇತ್ಯಾದಿಗಳಿಗೆ  ಹಣಕಾಸಿನ ನೆರವು ಒದಗಿಸಿ ಸ್ತ್ರೀ ಬೆಳವಣಿಗೆಯ ಕಾಳಜಿಯ ಒಂದು ಅಂಶವನ್ನು ರೂಪಿಸುತ್ತದೆ. ಫೀಮೇಲ್ ಚೈಲ್ಡ್ ಪ್ರಿವೈಲ್‌ಗಾಗಿ ಮೆಟರ್ನಿಟಿ ಮತ್ತು ಇತರವುಗಳಿಗಾಗಿ ವೇಟಿಂಗ್ ಅವಧಿಗಳಂತಹ ನವೀಕರಣ ಪ್ರಯೋಜನಗಳು.

 

ಕೆಳಗಿನ ಮೆಟರ್ನಿಟಿ ಖರ್ಚುಗಳನ್ನು ಸ್ಟಾರ್ ವುಮೆನ್ ಕೇರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಪಾವತಿಸಲಾಗುತ್ತದೆ.

 

  • ನಾರ್ಮಲ್ ಅಥವಾ ಸಿಸೇರಿಯನ್ ಡೆಲಿವರಿಯ ಖರ್ಚುಗಳು 25,000/- ನಿಂದ ರೂ. 1,00,000/- ವರೆಗೆ  
  • ಸಂತಾನಹೀನತೆಗೆ ನೆರವು ಸಹಿತ ಗರ್ಭಧಾರಣೆ ಚಿಕಿತ್ಸೆಯನ್ನು ಕವರ್ ಮಾಡಲಾಗಿದೆ.
  • ಇನ್ -ಯುಟೆರೋ ಫೀಟಲ್ ಶಸ್ತ್ರಚಿಕಿತ್ಸೆಗಳಿಗೆ ವಿಮಾ ಮೊತ್ತದವರೆಗೆ ಪಾವತಿಸಲಾಗುತ್ತದೆ
  • ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆಗಳಿಗೆ ವಿಮಾ ಮೊತ್ತದವರೆಗೆ ಪಾವತಿಸಲಾಗುತ್ತದೆ
  • ಪ್ರತಿ ಕನ್ಸಲ್ಟೇಷನ್‌ಗೆ ರೂ. 500/- ರಂತೆ ವರ್ಷಕ್ಕೆ ನಾಲ್ಕು ಮಕ್ಕಳ ಕನ್ಸಲ್ಟೇಷನ್‌ಗಳಿಗೆ ಮಗುವಿಗೆ 12 ವರ್ಷ ವಯಸಾಗುವವರೆಗೆ ಪಾವತಿಸಲಾಗುತ್ತದೆ.
  • ನವಜಾತ ಶಿಶುವಿನ ಮೆಟಬಾಲಿಕ್ ಸ್ಕ್ರೀನಿಂಗ್‌ಗೆ ಒಂದು ಬಾರಿ 3500/- ವರೆಗೆ ಪಾವತಿಸಲಾಗುತ್ತದೆ
  • ಪ್ರಸವಪೂರ್ವ ಆರೈಕೆಗಾಗಿ ಹೊರರೋಗಿ ಕನ್ಸಲ್ಟೇಷನ್ ಮೂಲಕ ಗರ್ಭಧಾರಣೆಯ ದೃಢೀಕರಣಕ್ಕೆ ಲಭ್ಯವಿದೆ.

 

 

ಸೂಪರ್ ಸರ್‌ಪ್ಲಸ್ ಇನ್ಶೂರೆನ್ಸ್ ಪಾಲಿಸಿ (ಗೋಲ್ಡ್ ಪ್ಲ್ಯಾನ್)

 

ಸೂಪರ್ ಸರ್‌ಪ್ಲಸ್ ಇನ್ಶೂರೆನ್ಸ್ ಪಾಲಿಸಿ ಯು ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು ಅದು ನಿಮ್ಮ ಡೀಫಾಲ್ಟ್ ಇನ್ಶೂರೆನ್ಸ್ ಪ್ಲ್ಯಾನ್ ನಿಮ್ಮ ಆಸ್ಪತ್ರೆಯ ಖರ್ಚುಗಳನ್ನು ಪೂರ್ತಿಯಾಗಿ ಪಾವತಿಸಲು ವಿಫಲವಾದಾಗ ಅದನ್ನು ಸರಿದೂಗಿಸಲು ಸಹಾಯ ಮಾಡುತ್ತದೆ. ಗೋಲ್ಡ್ ಪ್ಲ್ಯಾನ್‌ನ ಪಾಲಿಸಿ ಅವಧಿಯು 1 ವರ್ಷದಿಂದ 2 ವರ್ಷಗಳು ಮತ್ತು ಜೀವನಪರ್ಯಂತ ನವೀಕರಣ ಲಭ್ಯವಿದೆ. ಈ ಟಾಪ್-ಅಪ್ ಪ್ಲ್ಯಾನ್ ಅಡಿಯಲ್ಲಿ ಪ್ರಮುಖ ಪ್ರಯೋಜನಗಳು ಎಲ್ಲಾ ಡೇಕೇರ್ ಕಾರ್ಯವಿಧಾನಗಳು, ಒಳರೋಗಿಗಳಾಗಿ ಆಸ್ಪತ್ರೆಗೆ ಸೇರುವುದು, ಡೆಲಿವರಿ ಖರ್ಚುಗಳು, ಅಂಗ ದಾನಿಗಳ ಖರ್ಚುಗಳು ಮತ್ತು ಏರ್ ಆಂಬ್ಯುಲೆನ್ಸ್ ಕವರ್‌ಗಳಿಗೆ ಖರ್ಚುಗಳ ಕವರೇಜ್ ಅನ್ನು ಒಳಗೊಂಡಿರುತ್ತದೆ.

 

ಸೂಪರ್ ಸರ್‌ಪ್ಲಸ್ ಇನ್ಶೂರೆನ್ಸ್ ಪಾಲಿಸಿ (ಗೋಲ್ಡ್ ಪ್ಲ್ಯಾನ್) ಡೆಲಿವರಿ-ಸಂಬಂಧಿತ ಖರ್ಚುಗಳನ್ನು ಒಳಗೊಳ್ಳುತ್ತದೆ ಮತ್ತು ಡೆಲಿವರಿ ಸಮಯದಲ್ಲಿ ಹಣಕಾಸಿನ ನೆರವನ್ನು ನೀಡುತ್ತದೆ. 18 ರಿಂದ 65 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಈ ಪಾಲಿಸಿ ಲಭ್ಯವಿದೆ. ಹೆಚ್ಚಿನ ಪ್ರೀಮಿಯಂ ಪಾವತಿಸದೆ ತಮ್ಮ ವಿಮಾ ಮೊತ್ತವನ್ನು ಹೆಚ್ಚಿಸಿಕೊಳ್ಳಲು ಬಯಸುವ ಜನರಿಗೆ ಈ ಪ್ಲ್ಯಾನ್ ಉತ್ತಮ ಆಯ್ಕೆಯಾಗಿದೆ.

 

ಕೆಳಗಿನ ಡೆಲಿವರಿ ಖರ್ಚುಗಳನ್ನು ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗಿದೆ.

 

  • ಸಿಸೇರಿಯನ್ ಸೆಕ್ಷನ್ ಸೇರಿದಂತೆ ನಾರ್ಮಲ್ ಡೆಲಿವರಿ ಸಮಯದಲ್ಲಿ ಉಂಟಾಗುವ ಖರ್ಚುಗಳಿಗೆ ಪ್ರತಿ ಪಾಲಿಸಿ ಅವಧಿಗೆ ₹ 50000 ವರೆಗೆ ಮತ್ತು ಈ ಪ್ರಯೋಜನವು ಪಾಲಿಸಿ ಸಕ್ರಿಯವಾಗಿರುವಾಗ ವಿಮಾದಾರರ ಜೀವಿತಾವಧಿಯಲ್ಲಿ ಗರಿಷ್ಠ ಎರಡು ಡೆಲಿವರಿಗಳಿಗೆ ಅನ್ವಯಿಸುತ್ತದೆ.
  • ಸಿಸೇರಿಯನ್ ಸೆಕ್ಷನ್ ಸೇರಿದಂತೆ ರೂ. 50,000/- ವರೆಗೆ ಪ್ರಸವಪೂರ್ವ ಮತ್ತು ನಂತರದ ಖರ್ಚುಗಳು
  • ಕಾನೂನುಬದ್ಧ ಗರ್ಭಪಾತದ ಸಮಯದಲ್ಲಿ ಉಂಟಾಗುವ ಖರ್ಚುಗಳು.

 

ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಏನನ್ನು ಸೇರಿಸಲಾಗಿದೆ:

 

  • ಸಿ-ಸೆಕ್ಷನ್ ಮತ್ತು ನವಜಾತ ಶಿಶುವಿನ ಖರ್ಚುಗಳನ್ನು ಒಳಗೊಂಡಂತೆ ಡೆಲಿವರಿ ಪಾಲಿಸಿಯಲ್ಲಿ ನೀತಿಯಲ್ಲಿ ನಿರ್ದಿಷ್ಟಪಡಿಸಿದ ಮಿತಿಗಳೊಳಗೆ.
  • ಡೆಲಿವರಿ ಪೂರ್ವ ಮತ್ತು ನಂತರದ ಖರ್ಚುಗಳು.
  • ಯಾವುದೇ ವೈದ್ಯಕೀಯ ತೊಡಕುಗಳಿಂದಾಗಿ ನವಜಾತ ಶಿಶುವನ್ನು ಆಸ್ಪತ್ರೆಗೆ ಸೇರಿಸುವ ಶುಲ್ಕವನ್ನು ಒಳಗೊಂಡಿದೆ
  • ಪಾಲಿಸಿಯಲ್ಲಿ ನಮೂದಿಸಲಾದ ಮಿತಿಗಳವರೆಗೆ ನವಜಾತ ಶಿಶುವಿಗೆ ಒಂದು ವರ್ಷದವರೆಗೆ ವ್ಯಾಕ್ಸಿನೇಷನ್.
  • ಕಾನೂನುಬದ್ಧ ಗರ್ಭಪಾತದ ಸಮಯದ ಖರ್ಚುಗಳು.

 

ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಏನನ್ನು ಸೇರಿಸಲಾಗಿಲ್ಲ:

 

  • ವಿಶ್ರಾಂತಿ ಚಿಕಿತ್ಸೆ, ಪುನರ್ವಸತಿ ಮತ್ತು ವಿಶ್ರಾಂತಿ ಆರೈಕೆ
  • ಬೊಜ್ಜು ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಖರ್ಚುಗಳು
  • ಲಿಂಗ ಬದಲಾವಣೆಯ ಚಿಕಿತ್ಸೆಗಳು
  • ಕಾಸ್ಮೆಟಿಕ್ ಅಥವಾ ಪ್ಲಾಸ್ಟಿಕ್ ಸರ್ಜರಿ
  • ಅಪಾಯಕಾರಿ ಅಥವಾ ಸಾಹಸ ಕ್ರೀಡೆಗಳು
  • ಯಾವುದೇ ಆಸ್ಪತ್ರೆಯಲ್ಲಿ ಅಥವಾ ಯಾವುದೇ ವೈದ್ಯಕೀಯ ವೈದ್ಯರು ಅಥವಾ ವಿಮಾದಾರರಿಂದ ನಿರ್ದಿಷ್ಟವಾಗಿ ಹೊರಗಿಡಲಾದ ಮತ್ತು ಅದರ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಿದ ಯಾವುದೇ ಇತರ ಪೂರೈಕೆದಾರರ ಚಿಕಿತ್ಸೆಗಾಗಿ ತಗಲುವ ಖರ್ಚುಗಳು
  • ಮದ್ಯಪಾನ, ಮಾದಕ ದ್ರವ್ಯ ಅಥವಾ ಮಾದಕ ದ್ರವ್ಯ ಸೇವನೆ ಅಥವಾ ಯಾವುದೇ ವ್ಯಸನಕಾರಿ ಸ್ಥಿತಿ ಮತ್ತು ಅದರ ಪರಿಣಾಮಗಳ ಚಿಕಿತ್ಸೆ

 

ಅರ್ಹತಾ ಮಾನದಂಡ

 

ಮೆಟರ್ನಿಟಿ ಪ್ರಯೋಜನಗಳನ್ನು ಹೊಂದಿರುವ ಮೆಡಿಕಲ್ ಪಾಲಿಸಿಯು ಡೆಲಿವರಿ-ಸಂಬಂಧಿತ ಖರ್ಚುಗಳನ್ನು ಕವರ್ ಮಾಡುತ್ತದೆ, ಅದು ವೇಟಿಂಗ್ ಅವಧಿಗಳಿಗೆ ಒಳಪಟ್ಟಿರುತ್ತದೆ. ಫ್ಯಾಮಿಲಿ ಪ್ಲ್ಯಾನಿಂಗ್ ಅನ್ನು ಮುಂಚಿತವಾಗಿ ಮಾಡಲು ಮತ್ತು ಮೆಟರ್ನಿಟಿ ಕವರ್ ಖರೀದಿಸಲು ನಾವು ಶಿಫಾರಸು ಮಾಡುತ್ತೇವೆ. ಹೆಚ್ಚಿನ ಇನ್ಶೂರೆನ್ಸ್ ಪಾಲಿಸಿಗಳು ಡೆಲಿವರಿ ಖರ್ಚುಗಳನ್ನು ಭರಿಸಲು 12-36 ತಿಂಗಳುಗಳವರೆಗಿನ ವೇಟಿಂಗ್ ಅವಧಿಯನ್ನು ಹೊಂದಿರುತ್ತವೆ.

 

 

ಡೆಲಿವರಿ ಪ್ರಯೋಜನಗಳನ್ನು ಹೊಂದಿರುವ ಮೆಡಿಕಲ್ ಪಾಲಿಸಿ ಏಕೆ ಅಗತ್ಯವಾಗಿದೆ?

 

ಗರ್ಭಾವಸ್ಥೆ ಮತ್ತು ಪ್ರಸವ ವೇದನೆ ಮಹಿಳೆಯರ ಜೀವನದ ಪ್ರಮುಖ ಹಂತಗಳಾಗಿವೆ. ಪೋಷಕರಾಗುವ ಸಂತೋಷವು ಖಂಡಿತವಾಗಿಯೂ ಇರುತ್ತದೆಯಾದರೂ, ಹೆಚ್ಚಿನ ಮಹಿಳೆಯರು ಅದರೊಂದಿಗೆ ಆತಂಕವನ್ನು ಸಹ ಅನುಭವಿಸುತ್ತಾರೆ. ಆದ್ದರಿಂದ ಈ ಸಮಯದಲ್ಲಿ ನೀವು ಚಿಂತಿಸಬಾರದ ಒಂದು ವಿಷಯವೆಂದರೆ ಆಸ್ಪತ್ರೆಯ ಖರ್ಚುಗಳು. ನೀವು ಮೆಟರ್ನಿಟಿ ಖರ್ಚುಗಳಿಗೆ ಕವರ್ ಒದಗಿಸುವ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ಖರ್ಚುಗಳ ಬಗ್ಗೆ ಯಾವುದೇ ಯೋಚನೆಯಿಲ್ಲದೇ ವಿಶ್ರಾಂತಿ ಮತ್ತು ಸಂತೋಷದಿಂದ ನಿಮ್ಮ ಗರ್ಭಾವಸ್ಥೆಯನ್ನು ಆನಂದಿಸಬಹುದು.

ದೇಶಾದ್ಯಂತ ಹೆಚ್ಚುತ್ತಿರುವ ವೈದ್ಯಕೀಯ ಖರ್ಚುಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಡೆಲಿವರಿ ಖರ್ಚುಗಳ  ಹೆಚ್ಚಳದೊಂದಿಗೆ, ಡೆಲಿವರಿ ಇನ್ಶೂರೆನ್ಸ್ ಕವರ್ ಮತ್ತು ಫ್ಯಾಮಿಲಿ ಮೆಡಿಕಲ್ ಪಾಲಿಸಿಯನ್ನು ಹೊಂದಿರುವುದು ಖರ್ಚುಗಳನ್ನು ನಿರ್ವಹಿಸುವ ಉತ್ತಮ ವಿಧಾನವಾಗಿದೆ.

 

ಡೆಲಿವರಿ ಪ್ರಯೋಜನಗಳನ್ನು ಹೊಂದಿರುವ ಮೆಡಿಕಲ್ ಪಾಲಿಸಿಯ ಖರೀದಿಯ ಪ್ರಯೋಜನಗಳು

 

ಹಣಕಾಸಿನ ನೆರವು 

 

ಮೆಟರ್ನಿಟಿ ಇನ್ಶೂರೆನ್ಸ್ ನಾರ್ಮಲ್ ಅಥವಾ ಸಿಸೇರಿಯನ್ ಡೆಲಿವರಿ ಸಮಯದಲ್ಲಿ ಉಂಟಾಗುವ ಖರ್ಚುಗಳನ್ನು ಒಳಗೊಂಡಿದೆ. ನಿಮಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದರೂ, ನೀವು  ಚಿಂತಿಸಬೇಕಾಗಿಲ್ಲ. ಅಷ್ಟೇ ಅಲ್ಲದೇ, ಮೆಟರ್ನಿಟಿ ಪ್ಲ್ಯಾನ್‌ಗಳನ್ನು ಹೊಂದಿರುವ ಪಾಲಿಸಿಗಳು ಪ್ರಸವಪೂರ್ವ ಮತ್ತು ನಂತರದ ಖರ್ಚುಗಳನ್ನು ಒಳಗೊಂಡಿರುತ್ತವೆ.

 

ನವಜಾತ ಶಿಶುವನ್ನು ಕವರ್ ಮಾಡುತ್ತದೆ

 

ನಮ್ಮ ಪ್ಲ್ಯಾನ್‌ಗಳಾದ ಸ್ಟಾರ್ ಕಾಂಪ್ರಹೆನ್ಸಿವ್, ಯಂಗ್ ಸ್ಟಾರ್ (ಗೋಲ್ಡ್) ಮತ್ತು ಸೂಪರ್ ಸರ್‌ಪ್ಲಸ್ ಗೋಲ್ಡ್ ಪ್ಲ್ಯಾನ್‌ಗಳು ನವಜಾತ ಶಿಶುಗಳಿಗೆ ಮೊದಲ ದಿನದಿಂದ ಕವರೇಜ್ ಒದಗಿಸುತ್ತವೆ. ಇದು ವೈದ್ಯಕೀಯ ತುರ್ತುಸ್ಥಿತಿಗಳು ಮತ್ತು ವ್ಯಾಕ್ಸಿನೇಷನ್‌ಗಳ ವೆಚ್ಚವನ್ನು ಒಳಗೊಂಡಿರುತ್ತದೆ.

 

ಡೆಲಿವರಿ ಖರ್ಚುಗಳನ್ನು ಕವರ್ ಮಾಡುತ್ತದೆ

 

ಮೆಟರ್ನಿಟಿ ಪ್ರಯೋಜನಗಳನ್ನು ಹೊಂದಿರುವ ಮೆಡಿಕ್ಲೈಮ್ ಪ್ಲ್ಯಾನ್ ಅನ್ನು ಖರೀದಿಸುವುದರಿಂದ ಗರ್ಭಾವಸ್ಥೆಯಲ್ಲಿ ಆರ್ಥಿಕ ರಕ್ಷಣೆ ದೊರೆಯುತ್ತದೆ. ಇದು ನಾರ್ಮಲ್ ಅಥವಾ ಸಿಸೇರಿಯನ್ ಡೆಲಿವರಿ ಎರಡೂ ಸಂದರ್ಭಗಳಲ್ಲಿ ಪ್ರಸವಪೂರ್ವ ಮತ್ತು ನಂತರದ ಖರ್ಚುಗಳು, ಆಂಬ್ಯುಲೆನ್ಸ್ ಶುಲ್ಕಗಳು, ಡೆಲಿವರಿ ಖರ್ಚುಗಳನ್ನು ಒಳಗೊಂಡಿದೆ

 

ಮೆಟರ್ನಿಟಿ ಪ್ರಯೋಜನಗಳನ್ನು ಹೊಂದಿರುವ ಮೆಡಿಕ್ಲೈಮ್ ಪ್ಲ್ಯಾನ್ ಅನ್ನು ಖರೀದಿಸುವ ಮೊದಲು ನೀವು ಏನನ್ನು ಪರಿಗಣಿಸಬೇಕು?

 

ಪ್ರತಿಯೊಬ್ಬ ಪೋಷಕರು ಡೆಲಿವರಿ ಖರ್ಚುಗಳನ್ನು ಕವರ್ ಮಾಡುವಂತಹ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್  ಪಾಲಿಸಿಯನ್ನು ಹೊಂದಲು ಅರ್ಹರಾಗಿದ್ದಾರೆ. ಮೆಡಿಕಲ್ ಪಾಲಿಸಿ ಇಲ್ಲದೆಯೇ ಹೆಚ್ಚಿನ ಮೆಟರ್ನಿಟಿ ಆರೈಕೆ ಖರ್ಚುಗಳನ್ನು ನಿಭಾಯಿಸುವುದು ಪೋಷಕರಿಬ್ಬರಿಗೂ ಕಠಿಣವಾಗಬಹುದು. ಹಾಗಾಗಿ, ನಿಮ್ಮ ಹಣಕಾಸುಗಳನ್ನು ನಿರ್ವಹಿಸುವ ಉತ್ತಮ ವಿಧಾನವೆಂದರೆ ಮೆಟರ್ನಿಟಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು  ಖರೀದಿಸುವುದು, ಮತ್ತು ಪೋಷಕರ ಜವಾಬ್ದಾರಿಯನ್ನು ಆರೋಗ್ಯಕರ ಮತ್ತು ಆಹ್ಲಾದಕವಾಗಿ ನಿಭಾಯಿಸುವುದಾಗಿದೆ.

 

ಮೆಟರ್ನಿಟಿ ಪ್ರಯೋಜನಗಳನ್ನು ಹೊಂದಿರುವ ಮೆಡಿಕಲ್ ಪಾಲಿಸಿಯನ್ನು ಆಯ್ಕೆಮಾಡುವಾಗ ಪರಿಗಣಿಸಬೇಕಾದ ಕೆಲವು ಅಂಶಗಳನ್ನು ಕೆಳಗೆ ನೀಡಲಾಗಿದೆ

 

  • ಆಸ್ಪತ್ರೆಯ ಖರ್ಚುಗಳು ಮಾತ್ರವಲ್ಲದೆ ವಿವಿಧ ವೈದ್ಯಕೀಯ ಬಿಲ್‌ಗಳಿಂದ ನಿಮ್ಮನ್ನು ರಕ್ಷಿಸುವ ಅತ್ಯುತ್ತಮ ಮೆಟರ್ನಿಟಿ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ದುಕೊಳ್ಳಿ.
  • ಪ್ರತಿಯೊಂದು ಮನೆಯಲ್ಲಿಯೂ ಹಣದ ಉಳಿತಾಯ ಮಹತ್ವದ್ದಾಗಿದೆ. ಹಾಗಾಗಿ, ನಿಮಗೆ ಪ್ರಯೋಜನವಾಗಬಹುದಾದ ಪ್ರೀಮಿಯಂ ಉಳಿತಾಯವನ್ನು ಪರಿಶೀಲಿಸಿ.
  • ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಗದು ರಹಿತ ಸೌಲಭ್ಯವನ್ನು ನೀವು ಸುಲಭವಾಗಿ ಪಡೆದುಕೊಳ್ಳಲು ಸಾಧ್ಯವಾಗುವಂತೆ ಕ್ಯಾಶ್‌ಲೆಸ್ ನೆಟ್‌ವರ್ಕ್ ಆಸ್ಪತ್ರೆಗಳ ಪಟ್ಟಿಯನ್ನು ಬ್ರೌಸ್ ಮಾಡಿ.
  • ಪಾಲಿಸಿ ದಾಖಲೆಗಳನ್ನು ಓದುವ ಮೂಲಕ ಪಾಲಿಸಿಯ ಸೇರ್ಪಡೆಗಳು, ಹೊರಗಿಡುವಿಕೆಗಳು, ಉಪ-ಮಿತಿಗಳು ಮತ್ತು ವೇಟಿಂಗ್ ಅವಧಿಯನ್ನು ಅರ್ಥಮಾಡಿಕೊಳ್ಳಿ.

 

ಗರಿಷ್ಠ ಕವರೇಜ್ ಮತ್ತು ಫೀಚರ್‌ಗಳನ್ನು ಹೊಂದಿರುವ ಸೂಕ್ತವಾದ ಪಾಲಿಸಿಯನ್ನು ಎಚ್ಚರಿಕೆಯಿಂದ ಹೋಲಿಸಿ ಮತ್ತು ಆಯ್ಕೆ ಮಾಡುವ ಮೂಲಕ, ನಿಮ್ಮ ಕೈಗೆಟುಕುವ ವೆಚ್ಚದಲ್ಲಿ ಮೆಟರ್ನಿಟಿ ಕವರೇಜ್ ಅನ್ನು ಪಡೆದುಕೊಳ್ಳಬಹುದು.

 

ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನ ಪಾಲಿಸಿಯನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು?

 

ಪ್ರಸವಪೂರ್ವ ಮತ್ತು ನಂತರದ ಆರೈಕೆ 

 

ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರು ಪ್ರಸವಪೂರ್ವ ಮತ್ತು ನಂತರದ ಡೆಲಿವರಿ ಖರ್ಚುಗಳನ್ನು  ಕವರ್ ಮಾಡುವುದಿಲ್ಲ. ನಿಮ್ಮ ಪ್ರಸವಪೂರ್ವ ಮತ್ತು ನಂತರದ ಖರ್ಚುಗಳಿಗೆ ನೆರವಾಗುವ ಇದು ನಿಜವಾಗಿಯೂ ಸ್ಟಾರ್ ಹೆಲ್ತ್ ಕವರೇಜ್‌ನ ಪ್ರಯೋಜನವಾಗಿದೆ.

 

ನಗದು ರಹಿತ ಸೌಲಭ್ಯ

 

ಮಗುವಿನ ನಿರೀಕ್ಷೆಯಲ್ಲಿರುವ ತಾಯಂದಿರು ದೇಶಾದ್ಯಂತ 14,000+ ನೆಟ್‌ವರ್ಕ್ ಆಸ್ಪತ್ರೆಗಳಿಂದ ನಗದು ರಹಿತ ಸೌಲಭ್ಯವನ್ನು ಪಡೆದುಕೊಳ್ಳಬಹುದು.

 

ತ್ವರಿತ ಮತ್ತು ತೊಂದರೆ-ರಹಿತ ಕ್ಲೈಮ್‌ಗಳ ಸೆಟಲ್‌ಮೆಂಟ್ 

 

ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿದಾರರು 14000+ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಪ್ರಾಂಪ್ಟ್ ಕ್ಲೈಮ್ ಸೆಟಲ್‌ಮೆಂಟ್ ಅನ್ನು ಪಡೆದುಕೊಳ್ಳಬಹುದಾಗಿದೆ, ಇದು ಡೆಲಿವರಿ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರನ್ನು ಗುಣಪಡಿಸಲು ಮತ್ತು ಕಾಳಜಿ ವಹಿಸಲು ಸಮಯವನ್ನು ನೀಡಲು ಸಾಧ್ಯವಾಗಿಸುವ ಪ್ರಮುಖ ಪ್ರಯೋಜನವಾಗಿದೆ. ಸ್ಟಾರ್ ಹೆಲ್ತ್‌ನಲ್ಲಿ ಪಾಲಿಸಿ ಕರಾರುಗಳು ಮತ್ತು ಷರತ್ತುಗಳ ಪ್ರಕಾರ ಯಾವುದೇ TPA (ಥರ್ಡ್-ಪಾರ್ಟಿ ಅಡ್ಮಿನಿಸ್ಟ್ರೇಟರ್) ಒಳಗೊಳ್ಳುವಿಕೆ ಇಲ್ಲದೆ ನಿಮ್ಮ ಕ್ಲೈಮ್‌ಗಳನ್ನು ಜಂಜಾಟ-ರಹಿತ ರೀತಿಯಲ್ಲಿ ಸೆಟಲ್ ಮಾಡಲಾಗುತ್ತದೆ.

ಸಹಾಯವಾಣಿ ಕೇಂದ್ರ

ಗೊಂದಲದಲ್ಲಿದ್ದೀರಾ? ನಾವು ಉತ್ತರವನ್ನು ಕಂಡುಕೊಂಡಿದ್ದೇವೆ

ನಿಮ್ಮ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಸಂಬಂಧಿತ ಅನುಮಾನಗಳಿಗೆ ಉತ್ತರಗಳನ್ನು ಕಂಡುಕೊಳ್ಳಿ.

ದುರದೃಷ್ಟವಶಾತ್ ಇಲ್ಲ, ನೀವು ಗರ್ಭಿಣಿಯಾಗಿರುವಾಗ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು. ಮೆಟರ್ನಿಟಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಏಕೆಂದರೆ ಡೆಲಿವರಿ ಕವರೇಜ್ ಕನಿಷ್ಠ 12 ತಿಂಗಳ ವೇಟಿಂಗ್ ಅವಧಿಗೆ ಒಳಪಟ್ಟಿರುತ್ತದೆ (ಸೂಪರ್ ಸರ್‌ಪ್ಲಸ್ ಗೋಲ್ಡ್ ಪ್ಲಾನ್ ಅಡಿಯಲ್ಲಿ). ಸ್ಟಾರ್ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ ಮತ್ತು ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿಗಳು ಕ್ರಮವಾಗಿ 24 ತಿಂಗಳು ಮತ್ತು 36 ತಿಂಗಳುಗಳ ವೇಟಿಂಗ್ ಅವಧಿಯೊಂದಿಗೆ ಡೆಲಿವರಿ ಖರ್ಚುಗಳನ್ನು ಒಳಗೊಂಡಿವೆ.