18 ರಿಂದ 65 ವರ್ಷ ವಯಸ್ಸಿನ ಜನರು ಈ ಪಾಲಿಸಿಯನ್ನು ಪಡೆಯಬಹುದು.
ಅನನ್ಯ ಕವರ್
ಇದು 37 ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಇಡಿಗಂಟಿನ ಕವರ್ ಅನ್ನು ವೈಯುಕ್ತಿಕ ಆಧಾರದ ಮೇಲೆ ಒದಗಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಪಾಲಿಸಿಯಾಗಿದೆ.
ಕಂತು ಸೌಲಭ್ಯ
ಪಾಲಿಸಿ ಪ್ರೀಮಿಯಂ ಅನ್ನು ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು. ಪ್ರೀಮಿಯಂ ಅನ್ನು ವಾರ್ಷಿಕ ದ್ವೈವಾರ್ಷಿಕ ಅಥವಾ ತ್ರೈವಾರ್ಷಿಕ ಆಧಾರದ ಮೇಲೆ ಸಹ ಪಾವತಿಸಬಹುದು.
ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮ
ವಿವಿಧ ಸ್ವಾಸ್ಥ್ಯ ಚಟುವಟಿಕೆಗಳ ಮೂಲಕ ವಿಮೆದಾರರ ಜೀವನಶೈಲಿ ಆರೋಗ್ಯಕರವಾಗಿರುವುದನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ಸ್ವಾಸ್ಥ್ಯ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
DETAILED LIST
ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ
ಪ್ರಮುಖ ಮುಖ್ಯಾಂಶಗಳು
ಪಾಲಿಸಿ ಅವಧಿ
ಈ ಪಾಲಿಸಿಯನ್ನು ಒಂದು, ಎರಡು ಅಥವಾ ಮೂರು ವರ್ಷಗಳ ಅವಧಿಗೆ ಪಡೆಯಬಹುದು.
ಪೂರ್ವ ವೈದ್ಯಕೀಯ ಪರೀಕ್ಷೆ
50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ಪಾಲಿಸಿಯನ್ನು ಪಡೆಯಲು ಪೂರ್ವ ಸ್ವೀಕಾರ ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ. ಆದಾಗ್ಯೂ, 50 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಪ್ರತಿಕೂಲ ವೈದ್ಯಕೀಯ ಇತಿಹಾಸ ಹೊಂದಿರುವವರು ಪೂರ್ವ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕಾಗುತ್ತದೆ.
ವಿಮಾ ಮೊತ್ತ
ಈ ಪಾಲಿಸಿಯ ಕನಿಷ್ಠ ವಿಮಾ ಮೊತ್ತ ರೂ. 5,00,000/- ಮತ್ತು ಗರಿಷ್ಠ ರೂ. 25,00,000/- (ರೂ. 1,00,000/- ಗುಣಕಗಳಲ್ಲಿ).
1) ಸಂಪಾದಿಸುವ ವ್ಯಕ್ತಿಗಳಿಗೆ - 18 ರಿಂದ 35 ವರ್ಷ ವಯಸ್ಸಿನವರಿಗೆ ವಾರ್ಷಿಕ ಆದಾಯದ 12 ಪಟ್ಟು ಮತ್ತು 35 ವರ್ಷಕ್ಕಿಂತ ಮೇಲ್ಪಟ್ಟವರಿಗೆ ವಾರ್ಷಿಕ ಆದಾಯದ 10 ಪಟ್ಟು. ಗರಿಷ್ಠ ವಿಮಾ ಮೊತ್ತವು ರೂ.25 ಲಕ್ಷಗಳನ್ನು ಮೀರುವಂತಿಲ್ಲ.
2) ಸಂಪಾದಿಸದ ವ್ಯಕ್ತಿಗಳಿಗೆ - ಗರಿಷ್ಠ 15 ಲಕ್ಷದವರೆಗೆ. ಸಂಪಾದಿಸದ ವಿಮಾ ಮೊತ್ತವು ಪ್ರಾಥಮಿಕ ಸದಸ್ಯರಿಗೆ ವಿಮಾ ಮೊತ್ತಕ್ಕಿಂತ ಹೆಚ್ಚಿರುವಂತಿಲ್ಲ.
ವಿಶಾಲ ಗಂಭೀರ ಕಾಯಿಲೆ ಕವರ್
ಈ ಪಾಲಿಸಿಯು ನಾಲ್ಕು ವರ್ಗಗಳಾಗಿ ವರ್ಗೀಕರಿಸಲಾದ ಪ್ರಮುಖ ಗಂಭೀರ ಕಾಯಿಲೆಗಳಿಗೆ ವಿಶಾಲ ಕವರ್ ಅನ್ನು ಒದಗಿಸುತ್ತದೆ.
ಕ್ಯಾನ್ಸರ್ ಕವರ್
ಈ ಪಾಲಿಸಿಯು ಕ್ಯಾನ್ಸರ್ ಸಂಬಂಧಿತ ಪ್ರಮುಖ ಕಾಯಿಲೆಗಳಿಗೆ ಇಡಿಗಂಟು ಕವರ್ ಅನ್ನು ಒದಗಿಸುತ್ತದೆ.
ಹೃದ್ರೋಗ ಕವರ್
ಈ ಪಾಲಿಸಿಯು ಪ್ರಮುಖ ಹೃದಯ ಸಂಬಂಧಿ ಸ್ಥಿತಿಗಳಿಗೆ ಇಡಿಗಂಟು ಕವರ್ ಅನ್ನು ಒದಗಿಸುತ್ತದೆ.
ಮೆದುಳು ಮತ್ತು ನರವ್ಯೂಹ
ಈ ಪಾಲಿಸಿಯು ಮೆದುಳು ಮತ್ತು ನರವ್ಯೂಹಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳಿಗೆ ಇಡಿಗಂಟು ಕವರ್ ಅನ್ನು ಒದಗಿಸುತ್ತದೆ.
ಪ್ರಮುಖ ಅಂಗ ಮತ್ತು ಇತರ ಪರಿಸ್ಥಿತಿಗಳು
ಈ ಪಾಲಿಸಿಯು ಪ್ರಮುಖ ಅಂಗಗಳು ಮತ್ತು ಇತರ ಪರಿಸ್ಥಿತಿಗಳಿಗೆ ಸಂಬಂಧಿಸಿದ ಗಂಭೀರ ಕಾಯಿಲೆಗಳಿಗೆ ಇಡಿಗಂಟು ಕವರ್ ಅನ್ನು ಒದಗಿಸುತ್ತದೆ.
ಕಂತು ಆಯ್ಕೆಗಳು
ಪಾಲಿಸಿ ಪ್ರೀಮಿಯಂ ಅನ್ನು ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು. ಇದನ್ನು ವಾರ್ಷಿಕ, ದ್ವೈವಾರ್ಷಿಕ (2 ವರ್ಷಗಳಿಗೊಮ್ಮೆ) ಮತ್ತು ತ್ರೈವಾರ್ಷಿಕ (3 ವರ್ಷಗಳಿಗೊಮ್ಮೆ) ಆಧಾರದ ಮೇಲೆ ಕೂಡ ಪಾವತಿಸಬಹುದು.
ಪಾಲಿಸಿ ವಿವರಗಳು ಹಾಗೂ ಕರಾರುಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ದಾಖಲೆಯನ್ನು ಓದಿ.
ಈ ಕಾರ್ಯಕ್ರಮ ವಿವಿಧ ಸ್ವಾಸ್ಥ್ಯ ಚಟುವಟಿಕೆಗಳ ಮೂಲಕ ವಿಮೆದಾರರ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ, ಪ್ರೋತ್ಸಾಹಿಸುವ ಮತ್ತು ರಿವಾರ್ಡ್ ನೀಡುವ ಉದ್ದೇಶವನ್ನು ಹೊಂದಿದೆ. ಕೆಳಗೆ ನೀಡಲಾದ ಸ್ವಾಸ್ಥ್ಯ ಚಟುವಟಿಕೆಗಳನ್ನು ವಿಮೆದಾರರಿಗೆ ಸ್ವಾಸ್ಥ್ಯ ರಿವಾರ್ಡ್ ಪಾಯಿಂಟ್ಗಳನ್ನು ಗಳಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ, ಅದನ್ನು ಕಂಪನಿಯು ಟ್ರ್ಯಾಕ್ ಮಾಡುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ. ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ವಿಮೆದಾರರು ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳನ್ನು ಪ್ರೀಮಿಯಂನಲ್ಲಿ ಡಿಸ್ಕೌಂಟ್ ಅನ್ನು ಪಡೆಯಲು ಬಳಸಿಕೊಳ್ಳಬಹುದು. ಈ ಸ್ವಾಸ್ಥ್ಯ ಕಾರ್ಯಕ್ರಮವನ್ನು ಸ್ಟಾರ್ ವೆಲ್ನೆಸ್ ಪ್ಲಾಟ್ಫಾರ್ಮ್ (ಡಿಜಿಟಲ್ ಪ್ಲಾಟ್ಫಾರ್ಮ್) ನೆರವಿನಿಂದ ಆನ್ಲೈನ್ನಲ್ಲಿ ದೊರೆಯುವಂತೆ ಮಾಡಲಾಗಿದೆ ಮತ್ತು ನಿರ್ವಹಿಸಲಾಗುತ್ತದೆ.
ಗಮನಿಸಿ: ಕೆಳಗಿನ ಕೋಷ್ಟಕದಲ್ಲಿ ಉಲ್ಲೇಖಿಸಲಾದ ಸ್ವಾಸ್ಥ್ಯ ಚಟುವಟಿಕೆಗಳು (ಕ್ರಮ ಸಂಖ್ಯೆ 1 ರಿಂದ 5 ರವರೆಗೆ) 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಿಮೆದಾರರಿಗೆ ಮಾತ್ರ ಅನ್ವಯಿಸುತ್ತವೆ.
ಕೆಳಗಿನ ಕೋಷ್ಟಕದಲ್ಲಿ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಲಭ್ಯವಿರುವ ನವೀಕರಣ ಪ್ರೀಮಿಯಂ ಮೇಲಿನ ಡಿಸ್ಕೌಂಟ್ ಅನ್ನು ನೀಡಲಾಗಿದೆ:
ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳು
ಪ್ರೀಮಿಯಂನಲ್ಲಿ ಡಿಸ್ಕೌಂಟ್
200 ರಿಂದ 350
2%
351 ರಿಂದ 600
5%
601 ರಿಂದ 750
7%
751 ರಿಂದ 1000
10%
ಸ್ವಾಸ್ಥ್ಯ ಸೇವೆಗಳು ಮತ್ತು ಚಟುವಟಿಕೆಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ:
ಕ್ರಮ ಸಂಖ್ಯೆ
ಚಟುವಟಿಕೆ
ಪಾಲಿಸಿ ವರ್ಷದಲ್ಲಿ ಪ್ರತಿ ಚಟುವಟಿಕೆಯ ಅಡಿಯಲ್ಲಿ ಗಳಿಸಬಹುದಾದ ಗರಿಷ್ಠ ಸಂಖ್ಯೆಯ ಸ್ವಾಸ್ಥ್ಯ ಪಾಯಿಂಟ್ಗಳು
1.
ಆರೋಗ್ಯವನ್ನು ಕಾಯ್ದುಕೊಳ್ಳಿ ಮತ್ತು ಟ್ರ್ಯಾಕ್ ಮಾಡಿ
a) ಆನ್ಲೈನ್ ಆರೋಗ್ಯ ಅಪಾಯದ ಮೌಲ್ಯಮಾಪನ (HRA)
50
b) ಮುನ್ನೆಚ್ಚರಿಕಾ ಅಪಾಯದ ಮೌಲ್ಯಮಾಪನ
200
2.
ಸ್ವಾಸ್ಥ್ಯ ಮೈತ್ರಿ
a) ವಾಕಥಾನ್, ಮ್ಯಾರಥಾನ್, ಸೈಕ್ಲೋಥಾನ್ ಮತ್ತು ಅಂತಹುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದು
100
b) ಹೆಲ್ತ್ ಕ್ಲಬ್ನ ಸದಸ್ಯತ್ವ (1 ವರ್ಷ ಅಥವಾ ಅದಕ್ಕಿಂತ ಹೆಚ್ಚು)
100
3.
ಸಕ್ರಿಯರಾಗಿರಿ - ವಿಮೆದಾರರು ಮೊಬೈಲ್ ಆ್ಯಪ್ನಲ್ಲಿ ಸ್ಟೆಪ್ ಎಣಿಕೆ ಗುರಿಯನ್ನು ಸಾಧಿಸಿದರೆ
200
4(a).
ತೂಕ ನಿಯಂತ್ರಣಾ ಕಾರ್ಯಕ್ರಮ (ಅಧಿಕ ತೂಕ / ಬೊಜ್ಜು ಹೊಂದಿರುವ ವಿಮೆದಾರರಿಗೆ)
100
4(b).
ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮದ ಮೂಲಕ ವಿಮೆದಾರರು ಫಿಟ್ನೆಸ್ ಯಶಸ್ಸಿನ ಕಥೆಯನ್ನು ಹಂಚಿಕೊಳ್ಳುವುದು (ಅತಿಯಾದ / ಬೊಜ್ಜು ಹೊಂದಿರದ ವಿಮೆದಾರರಿಗೆ)
50
5(a).
ದೀರ್ಘಕಾಲಿಕ ತೀವ್ರಸ್ಥಿತಿ ನಿರ್ವಹಣಾ ಕಾರ್ಯಕ್ರಮ (ದೀರ್ಘಕಾಲಿಕ ತೀವ್ರಸ್ಥಿತಿ - ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಅಥವಾ ಆಸ್ತಮಾದಿಂದ ಬಳಲುತ್ತಿರುವ ವಿಮೆದಾರರಿಗೆ)
250
5(b).
ಒತ್ತಡ ನಿವಾರಣೆ ಮತ್ತು ಮನಸ್ಸು ದೇಹ ಹೀಲಿಂಗ್ ಕಾರ್ಯಕ್ರಮ ಪೂರ್ಣಗೊಂಡ ನಂತರ (ದೀರ್ಘಕಾಲಿಕ ತೀವ್ರಸ್ಥಿತಿ - ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಸಂಬಂಧಿ ಕಾಯಿಲೆ ಅಥವಾ ಆಸ್ತಮಾದಿಂದ ಬಳಲುತ್ತಿರುವ ವಿಮೆದಾರರಿಗೆ)
125
ಹೆಚ್ಚುವರಿ ಸ್ವಾಸ್ಥ್ಯ ಸೇವೆಗಳು
6.
ವರ್ಚುವಲ್ ಸಮಾಲೋಚನಾ ಸೇವೆ
7.
ವೈದ್ಯಕೀಯ ಪ್ರಾಶಸ್ತ್ಯದ ಸೇವೆಗಳು
8.
ಋತುಚಕ್ರ ಮತ್ತು ಫಲವತ್ತತೆಯ ಟ್ರ್ಯಾಕರ್
9.
ಡಿಜಿಟಲ್ ಹೆಲ್ತ್ ವಾಲ್ಟ್
10.
ಸ್ವಾಸ್ಥ್ಯ ವಿಷಯ
11.
ಹೆಲ್ತ್ ಕ್ವಿಜ್ & ಗೇಮಿಫಿಕೇಷನ್
12.
ಶಸ್ತ್ರಚಿಕಿತ್ಸೆ ನಂತರದ ಆರೈಕೆ
13.
ನೆಟ್ವರ್ಕ್ ಸೇವಾದಾತರಿಂದ ಡಿಸ್ಕೌಂಟ್ಗಳು
1. ಆರೋಗ್ಯವನ್ನು ಕಾಯ್ದುಕೊಳ್ಳಿ ಮತ್ತು ಟ್ರ್ಯಾಕ್ ಮಾಡಿ:
(a) ಆನ್ಲೈನ್ ಆರೋಗ್ಯ ಅಪಾಯದ ಮೌಲ್ಯಮಾಪನ (HRA) ಅನ್ನು ಪೂರ್ಣಗೊಳಿಸುವುದು:
ಆರೋಗ್ಯ ಅಪಾಯದ ಮೌಲ್ಯಮಾಪನ (HRA) ಪ್ರಶ್ನಾವಳಿಯು ವಿಮೆದಾರರ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವ ಆನ್ಲೈನ್ ಸಾಧನವಾಗಿದೆ. ಇದು ವಿಮೆದಾರರಿಗೆ ಅವನ/ಅವಳ ವೈಯಕ್ತಿಕ ಜೀವನಶೈಲಿಯನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ. ವಿಮೆದಾರರು www.starhealth.in ವೆಬ್ಸೈಟ್ ಮೂಲಕ ಅವನ/ಅವಳ ಖಾತೆಗೆ ಲಾಗ್ ಇನ್ ಮಾಡಬಹುದು ಮತ್ತು HRA ಪ್ರಶ್ನಾವಳಿಯನ್ನು ಪೂರ್ಣಗೊಳಿಸಬಹುದು. ವಿಮೆದಾರರು ಪ್ರತಿ ಪಾಲಿಸಿ ವರ್ಷಕ್ಕೆ ಒಂದು ಬಾರಿ ಇದನ್ನು ತೆಗೆದುಕೊಳ್ಳಬಹುದಾಗಿದೆ.
ಆನ್ಲೈನ್ HRA ಪ್ರಶ್ನಾವಳಿಯನ್ನು ಪೂರ್ಣಗೊಳಿಸಿದ ನಂತರ, ವಿಮೆದಾರರು 50 ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ.
ಉಪಕ್ರಮ
ಸ್ವಾಸ್ಥ್ಯ ಪಾಯಿಂಟ್ಗಳು
a.
ವಾಕಥಾನ್, ಮ್ಯಾರಥಾನ್, ಸೈಕ್ಲೋಥಾನ್ ಮತ್ತು ಅಂತಹುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದು
100
ಈವೆಂಟ್ನಲ್ಲಿ ಭಾಗವಹಿಸಲು ತೆಗೆದುಕೊಂಡ ಪ್ರವೇಶ ಟಿಕೆಟ್ನ ವಿವರಗಳೊಂದಿಗೆ BIB ಸಂಖ್ಯೆಯನ್ನು ಸಲ್ಲಿಸಿದ ನಂತರ.
b.
ಹೆಲ್ತ್ ಕ್ಲಬ್ನಲ್ಲಿ ಸದಸ್ಯತ್ವ (1 ವರ್ಷ ಅಥವಾ ಅದಕ್ಕಿಂತ ಹೆಚ್ಚು) - ಜಿಮ್ / ಯೋಗ ಕೇಂದ್ರ / ಜುಂಬಾ ತರಗತಿಗಳು / ಏರೋಬಿಕ್ ವ್ಯಾಯಾಮ / ಸ್ಪೋರ್ಟ್ಸ್ ಕ್ಲಬ್ / ಪೈಲೇಟ್ಸ್ ತರಗತಿಗಳು / ಈಜು / ತೈ ಚಿ / ಮಾರ್ಷಲ್ ಆರ್ಟ್ಸ್ / ಜಿಮ್ನಾಸ್ಟಿಕ್ಸ್ / ನೃತ್ಯ ತರಗತಿಗಳಲ್ಲಿ
100
ಗಮನಿಸಿ:
ವಿಮೆದಾರರು ಯಾವುದೇ ಹೆಲ್ತ್ ಕ್ಲಬ್ನ ಸದಸ್ಯರಲ್ಲದಿದ್ದರೆ, ಪಾಲಿಸಿ ಅಪಾಯದ ಪ್ರಾರಂಭದ ದಿನಾಂಕದಿಂದ 3 ತಿಂಗಳೊಳಗೆ ಅವನು/ಅವಳು ಕ್ಲಬ್ಗೆ ಸೇರಬೇಕು. ವಿಮೆದಾರರು ಹೆಲ್ತ್ ಕ್ಲಬ್ ಸದಸ್ಯತ್ವವನ್ನು ಸಲ್ಲಿಸಬೇಕು.
ಗಮನಿಸಿ: HRA ಅಡಿಯಲ್ಲಿ ನಮೂದಿಸಲಾದ ಸ್ವಾಸ್ಥ್ಯ ಪಾಯಿಂಟ್ಗಳನ್ನು ಪಡೆದುಕೊಳ್ಳಲು, ವಿಮೆದಾರರು HRA ಚಟುವಟಿಕೆಯನ್ನು ಪ್ರಾರಂಭಿಸಿದ ಒಂದು ತಿಂಗಳೊಳಗೆ ಸಂಪೂರ್ಣ HRA ಅನ್ನು ಪೂರ್ಣಗೊಳಿಸಬೇಕು.
(b) ಮುನ್ನೆಚ್ಚರಿಕಾ ಅಪಾಯದ ಮೌಲ್ಯಮಾಪನ:
ವಿಮೆದಾರರು ಪಾಲಿಸಿ ವರ್ಷದಲ್ಲಿ ಡಯಗ್ನೋಸ್ಟಿಕ್ / ಮುನ್ನೆಚ್ಚರಿಕಾ ಪರೀಕ್ಷೆಗಳಿಗೆ ಒಳಗಾಗುವ ಮೂಲಕ ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸಬಹುದು. ಈ ಪರೀಕ್ಷೆಗಳು ಕೆಳಕಂಡ ನಾಲ್ಕು ಕಡ್ಡಾಯ ಪರೀಕ್ಷೆಗಳನ್ನು ಒಳಗೊಂಡಿರಬೇಕು. ವಿಮೆದಾರರು ಈ ಪರೀಕ್ಷೆಗಳನ್ನು ಯಾವುದೇ ಡಯಗ್ನೋಸ್ಟಿಕ್ ಕೇಂದ್ರದಲ್ಲಿ ವಿಮೆದಾರರ ಸ್ವಂತ ಖರ್ಚಿನಲ್ಲಿ ಮಾಡಿಸಿಕೊಳ್ಳಬಹುದು.
ಸಲ್ಲಿಸಿದ ಪರೀಕ್ಷಾ ವರದಿಗಳ ಎಲ್ಲಾ ಫಲಿತಾಂಶಗಳು ನಾರ್ಮಲ್ ರೇಂಜ್ನಲ್ಲಿದ್ದರೆ, ವಿಮೆದಾರರು 200 ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ.
ಪ್ರಯೋಗಾಲಯದ ವರದಿಯಲ್ಲಿ ನಿರ್ದಿಷ್ಟಪಡಿಸಿದಂತೆ ಯಾವುದೇ ಒಂದು ಪರೀಕ್ಷೆಯ ಫಲಿತಾಂಶವು ನಾರ್ಮಲ್ ರೇಂಜ್ನಲ್ಲಿ ಇಲ್ಲದಿದ್ದರೆ, ವಿಮೆದಾರರು 150 ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ.
ಎರಡು ಅಥವಾ ಹೆಚ್ಚಿನ ಪರೀಕ್ಷಾ ಫಲಿತಾಂಶಗಳು ನಾರ್ಮಲ್ ರೇಂಜ್ನಲ್ಲಿ ಇಲ್ಲದಿದ್ದರೆ, ವಿಮೆದಾರರು ಕೇವಲ 100 ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ.
ಮುನ್ನೆಚ್ಚರಿಕಾ ಅಪಾಯದ ಮೌಲ್ಯಮಾಪನದ ಅಡಿಯಲ್ಲಿ ಕಡ್ಡಾಯ ಪರೀಕ್ಷೆಗಳ ಪಟ್ಟಿ
1. ಸಂಪೂರ್ಣ ಹಿಮೋಗ್ರಾಮ್ ಪರೀಕ್ಷೆ
2. ರಕ್ತದ ಸಕ್ಕರೆ (ಆಹಾರಸೇವನೆ ಪೂರ್ವದಲ್ಲಿ ರಕ್ತದಲ್ಲಿ ಸಕ್ಕರೆ (FBS) + ಆಹಾರ ಸೇವನೆಯ ನಂತರದ ಪರೀಕ್ಷೆ (PP) [ಅಥವಾ] HbA1c)
ಗಮನಿಸಿ: ಈ ಪರೀಕ್ಷೆಗಳ ವರದಿಗಳನ್ನು ಅಂತಹ ಆರೋಗ್ಯ ತಪಾಸಣೆಗೆ ಒಳಗಾದ ದಿನಾಂಕದಿಂದ 30 ದಿನಗಳ ಒಳಗೆ ಒಟ್ಟಿಗೆ ಸಲ್ಲಿಸಬೇಕು.
2. ಸ್ವಾಸ್ಥ್ಯ ಮೈತ್ರಿ:
ಕೆಳಗೆ ನೀಡಿರುವ ಯಾವುದೇ ಫಿಟ್ನೆಸ್ ಮತ್ತು ಆರೋಗ್ಯ ಸಂಬಂಧಿತ ಚಟುವಟಿಕೆಗಳನ್ನು ಕೈಗೊಂಡಿದ್ದಕ್ಕಾಗಿ ವಿಮೆದಾರರು ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ. ಫಿಟ್ನೆಸ್ ಉಪಕ್ರಮಗಳು ಮತ್ತು ಸ್ವಾಸ್ಥ್ಯ ಪಾಯಿಂಟ್ಗಳ ಪಟ್ಟಿ:
3. ಸಕ್ರಿಯರಾಗಿರಿ:
ಕೆಳಗೆ ತಿಳಿಸಿದಂತೆ ಸ್ಟಾರ್ ಮೊಬೈಲ್ ಅಪ್ಲಿಕೇಶನ್ನಲ್ಲಿ ಸ್ಟೆಪ್ ಎಣಿಕೆ ಗುರಿಯನ್ನು ಸಾಧಿಸಿದ್ದಕ್ಕಾಗಿ ವಿಮೆದಾರರು ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ:
ಪಾಲಿಸಿ ವರ್ಷದಲ್ಲಿ ಪ್ರತಿ ದಿನಕ್ಕೆ ಸರಾಸರಿ ಸ್ಟೆಪ್ಗಳ ಸಂಖ್ಯೆ
ಸ್ವಾಸ್ಥ್ಯ ಪಾಯಿಂಟ್ಗಳು
ಪಾಲಿಸಿ ವರ್ಷದಲ್ಲಿ ಪ್ರತಿ ದಿನದ ಸರಾಸರಿ ಸ್ಟೆಪ್ಗಳ ಸಂಖ್ಯೆ 5000 ರಿಂದ 7999 ಆಗಿದ್ದರೆ
100
ಪಾಲಿಸಿ ವರ್ಷದಲ್ಲಿ ಪ್ರತಿ ದಿನದ ಸರಾಸರಿ ಸ್ಟೆಪ್ಗಳ ಸಂಖ್ಯೆ 8000 ರಿಂದ 9999 ಆಗಿದ್ದರೆ
150
ಪಾಲಿಸಿ ವರ್ಷದಲ್ಲಿ ಪ್ರತಿ ದಿನದ ಸರಾಸರಿ ಸ್ಟೆಪ್ಗಳ ಸಂಖ್ಯೆ 10000 ಮತ್ತು ಅದಕ್ಕಿಂತ ಹೆಚ್ಚು ಆಗಿದ್ದರೆ
200
ಗಮನಿಸಿ:
ಸಕ್ರಿಯರಾಗಿರಿ ಅಡಿಯಲ್ಲಿ ಪ್ರತಿ ದಿನದ ಸರಾಸರಿ ಸ್ಟೆಪ್ಗಳ ಲೆಕ್ಕಾಚಾರಕ್ಕಾಗಿ ಪ್ರತಿ ಪಾಲಿಸಿ ವರ್ಷದ ಮೊದಲ ತಿಂಗಳು ಮತ್ತು ಕೊನೆಯ ತಿಂಗಳುಗಳನ್ನು ಪರಿಗಣಿಸಲಾಗುವುದಿಲ್ಲ.
ಈ ಪ್ರಯೋಜನವನ್ನು ಪಡೆದುಕೊಳ್ಳಲು ಪಾಲಿಸಿ ಅಪಾಯದ ಪ್ರಾರಂಭ ದಿನಾಂಕದ 30 ದಿನಗಳ ಒಳಗೆ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
ವಿಮೆದಾರರು ಪೂರ್ಣಗೊಳಿಸಿದ ಸರಾಸರಿ ಸ್ಟೆಪ್ ಎಣಿಕೆಯನ್ನು ಸ್ಟಾರ್ ಸ್ವಾಸ್ಥ್ಯ ಮೊಬೈಲ್ ಅಪ್ಲಿಕೇಶನ್ನಲ್ಲಿ ಟ್ರ್ಯಾಕ್ ಮಾಡಲಾಗುತ್ತದೆ.
4. (a) ತೂಕ ನಿಯಂತ್ರಣ ಕಾರ್ಯಕ್ರಮ:
ಈ ಕಾರ್ಯಕ್ರಮವು ಅಧಿಕ ತೂಕ ಮತ್ತು ಬೊಜ್ಜು ಹೊಂದಿರುವ ವಿಮೆದಾರರು ತಮ್ಮ ಬಾಡಿ ಮಾಸ್ ಇಂಡೆಕ್ಸ್ (BMI) ಅನ್ನು ಪಟ್ಟಿಮಾಡಿದ ಸ್ವಾಸ್ಥ್ಯ ತಜ್ಞರ ಮೂಲಕ ನಿಯಂತ್ರಿಸಲು ಸಹಾಯ ಮಾಡುತ್ತದೆ, ಸ್ವಾಸ್ಥ್ಯ ತಜ್ಞರು ಹೆಚ್ಚಿನ ತೂಕವನ್ನು ಕಳೆದುಕೊಳ್ಳಲು ಮತ್ತು ಅವರ BMI ಅನ್ನು ಕಾಪಾಡಿಕೊಳ್ಳಲು ವಿಮೆದಾರರಿಗೆ ಮಾರ್ಗದರ್ಶನ ನೀಡುತ್ತಾರೆ.
ತೂಕ ನಿಯಂತ್ರಣಾ ಕಾರ್ಯಕ್ರಮದ ಸ್ವೀಕೃತಿಯ ನಂತರ, ವಿಮೆದಾರರು 50 ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ.
ಕೆಳಗೆ ತಿಳಿಸಿದಂತೆ ಫಲಿತಾಂಶಗಳನ್ನು ಸಾಧಿಸಿದರೆ ಮತ್ತು ಕಾಯ್ದುಕೊಂಡರೆ ಹೆಚ್ಚುವರಿ 50 ಸ್ವಾಸ್ಥ್ಯ ಪಾಯಿಂಟ್ಗಳನ್ನು ನೀಡಲಾಗುತ್ತದೆ.
ಕ್ರಮ ಸಂಖ್ಯೆ.
ಕಾಯಿಲೆಯ ಹೆಸರು
ಸಲ್ಲಿಸಬೇಕಾದ ಮೌಲ್ಯಗಳು
ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸಲು ಮಾನದಂಡ
1.
ಬೊಜ್ಜು (BMI 29 ಕ್ಕಿಂತ ಹೆಚ್ಚಿದ್ದರೆ)
ಎತ್ತರ ಮತ್ತು ತೂಕ (BMI ಕಂಡುಹಿಡಿಯಲು)
18 ಮತ್ತು 29 ರ ನಡುವಿನ BMI ಅನ್ನು ಸಾಧಿಸುವುದು ಮತ್ತು ಕಾಯ್ದುಕೊಳ್ಳುವುದು
2.
ಅಧಿಕ ತೂಕ (BMI 25 ಮತ್ತು 29 ರ ನಡುವೆ ಇದ್ದರೆ)
ಎತ್ತರ ಮತ್ತು ತೂಕ (BMI ಕಂಡುಹಿಡಿಯಲು)
BMI ಅನ್ನು ಎರಡು ಪಾಯಿಂಟ್ ಕಡಿಮೆ ಮಾಡುವುದು ಮತ್ತು ಪಾಲಿಸಿ ವರ್ಷದಲ್ಲಿ ಅದೇ BMI ಅನ್ನು ಕಾಯ್ದುಕೊಳ್ಳುವುದು
ಮೌಲ್ಯಗಳನ್ನು (BMI ಗಾಗಿ) ಪ್ರತಿ 2 ತಿಂಗಳಿಗೊಮ್ಮೆ ಸಲ್ಲಿಸಬೇಕು (ಪ್ರತಿ ಪಾಲಿಸಿ ವರ್ಷದಲ್ಲಿ 5 ಬಾರಿ)
(b) ವಿಮೆದಾರರು ಅಧಿಕ ತೂಕ / ಬೊಜ್ಜು ಹೊಂದಿಲ್ಲದಿದ್ದರೆ, ವಿಮೆದಾರರು ತನ್ನ ಫಿಟ್ನೆಸ್ ಯಶಸ್ಸಿನ ಕಥೆಯನ್ನು ನಮಗೆ ಸಲ್ಲಿಸಬಹುದು, ವಿಮೆದಾರರು ಸ್ಟಾರ್ ಸ್ವಾಸ್ಥ್ಯ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವನ/ಅವಳ "ಸಕ್ರಿಯ/ಆರೋಗ್ಯಕರ ಜೀವನಶೈಲಿಯನ್ನು" ಹೇಗೆ ಪ್ರಾರಂಭಿಸಿದರು / ಸುಧಾರಿಸಿಕೊಂಡರು / ಕಾಯ್ದುಕೊಳ್ಳುತ್ತಿದ್ದಾರೆ ಎಂಬುದರ ಕುರಿತು ನಮ್ಮೊಂದಿಗೆ ಹಂಚಿಕೊಳ್ಳಬಹುದು.
ಸ್ಟಾರ್ ಸ್ವಾಸ್ಥ್ಯ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಫಿಟ್ನೆಸ್ ಯಶಸ್ಸಿನ ಕಥೆಯನ್ನು ಸಲ್ಲಿಸಿದಾಗ, ವಿಮೆದಾರರು 50 ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ.
5. (a). ದೀರ್ಘಕಾಲಿಕ ತೀವ್ರಸ್ಥಿತಿ ನಿರ್ವಹಣಾ ಕಾರ್ಯಕ್ರಮ:
ಈ ಕಾರ್ಯಕ್ರಮವು ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಅಥವಾ ಆಸ್ತಮಾದಿಂದ ಬಳಲುತ್ತಿರುವ ವಿಮೆದಾರರಿಗೆ ಆರೋಗ್ಯ ಸ್ಥಿತಿಯನ್ನು ಕಾಪಾಡಿಕೊಳ್ಳಲು/ಸುಧಾರಿಸಲು ಪಟ್ಟಿಮಾಡಿದ ಸ್ವಾಸ್ಥ್ಯ ತಜ್ಞರಿಂದ ಮಾರ್ಗದರ್ಶನ ನೀಡುವ ಮೂಲಕ ಅವರ ಆರೋಗ್ಯವನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.
ದೀರ್ಘಕಾಲಿಕ ತೀವ್ರಸ್ಥಿತಿ ನಿರ್ವಹಣಾ ಕಾರ್ಯಕ್ರಮದ ಸ್ವೀಕೃತಿಯ ನಂತರ, ವಿಮೆದಾರರು 100 ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ
ವಿಮೆದಾರರು ಪ್ರತಿ 3 ತಿಂಗಳಿಗೊಮ್ಮೆ ಪರೀಕ್ಷಾ ಫಲಿತಾಂಶ ಮೌಲ್ಯಗಳನ್ನು ಪಾಲಿಸಿ ವರ್ಷದಲ್ಲಿ ಗರಿಷ್ಠ 3 ಬಾರಿ ಸಲ್ಲಿಸಬೇಕು
ಪರೀಕ್ಷಾ ಫಲಿತಾಂಶದ ಮೌಲ್ಯಗಳು ಕೆಳಗೆ ನೀಡಲಾದ ಮೌಲ್ಯಗಳ +/- 10% ವ್ಯಾಪ್ತಿಯಲ್ಲಿದ್ದರೆ, ಪಾಲಿಸಿ ವರ್ಷದಲ್ಲಿ ಕನಿಷ್ಠ 2 ಬಾರಿ, ಹೆಚ್ಚುವರಿ 150 ಸ್ವಾಸ್ಥ್ಯ ಪಾಯಿಂಟ್ಗಳನ್ನು ನೀಡಲಾಗುತ್ತದೆ.
ಈ ಪರೀಕ್ಷಾ ವರದಿಗಳನ್ನು ಆರೋಗ್ಯ ತಪಾಸಣೆಗೆ ಒಳಗಾದ ದಿನಾಂಕದಿಂದ 1 ತಿಂಗಳೊಳಗೆ ಸಲ್ಲಿಸಬೇಕು
ಕ್ರಮ ಸಂಖ್ಯೆ.
ಕಾಯಿಲೆಯ ಹೆಸರು
ಸಲ್ಲಿಸಬೇಕಾದ ಪರೀಕ್ಷೆ
ಹೆಚ್ಚುವರಿ ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸಲು ಮೌಲ್ಯಗಳ ಮಾನದಂಡ
1.
ಮಧುಮೇಹ (ವಿಮೆದಾರರು HbA1c ಪರೀಕ್ಷಾ ಮೌಲ್ಯವನ್ನು ಸಲ್ಲಿಸಬಹುದು (ಅಥವಾ) ಆಹಾರಸೇವನೆ ಪೂರ್ವದಲ್ಲಿ ರಕ್ತದಲ್ಲಿ ಸಕ್ಕರೆ (FBS) ರೇಂಜ್ ಮತ್ತು ಆಹಾರಸೇವನೆ ನಂತರದ ಪರೀಕ್ಷಾ ಮೌಲ್ಯ)
HbA1c
≤ 6.5
ಆಹಾರಸೇವನೆ ಪೂರ್ವದಲ್ಲಿ ರಕ್ತದಲ್ಲಿ ಸಕ್ಕರೆ (FBS) ರೇಂಜ್ ಮತ್ತು ಆಹಾರಸೇವನೆ ನಂತರದ ಪರೀಕ್ಷಾ ಮೌಲ್ಯ
100 ರಿಂದ 125 mg/dl 160 mg/dl ಗಿಂತ ಕಡಿಮೆ
2.
ಅಧಿಕ ರಕ್ತದೊತ್ತಡ
ಇದರಿಂದ ಅಳೆಯಲಾಗುತ್ತದೆ - ಬಿಪಿ ಉಪಕರಣ
ಸಿಸ್ಟೊಲಿಕ್ ರೇಂಜ್ - 110 ರಿಂದ 140 mmHg ಡಯಾಸ್ಟೊಲಿಕ್ ರೇಂಜ್ - 70 ರಿಂದ 90 mmHg
(b). ವಿಮೆದಾರರು ದೀರ್ಘಕಾಲಿಕ ತೀವ್ರಸ್ಥಿತಿ/ಗಳಿಂದ (ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಅಥವಾ ಆಸ್ತಮಾ) ಬಳಲುತ್ತಿಲ್ಲವಾದರೆ ಅವನು/ಅವಳು "ಒತ್ತಡ ನಿವಾರಣೆ ಮತ್ತು ಮನಸ್ಸು ದೇಹ ಹೀಲಿಂಗ್ ಕಾರ್ಯಕ್ರಮವನ್ನು" ಆಯ್ಕೆ ಮಾಡಿಕೊಳ್ಳಬಹುದು. ಈ ಕಾರ್ಯಕ್ರಮ ವಿಮೆದಾರರಿಗೆ ಆಂತರಿಕ (ಸ್ವಯಂ-ಉತ್ಪಾದಿತ) ಮತ್ತು ಬಾಹ್ಯ ಅಂಶಗಳಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಒತ್ತಡ ನಿವಾರಣೆ ಮತ್ತು ಮನಸ್ಸು ದೇಹ ಹೀಲಿಂಗ್ ಕಾರ್ಯಕ್ರಮದ ಸ್ವೀಕೃತಿಯ ನಂತರ ವಿಮೆದಾರರು 50 ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ.
ಒತ್ತಡ ನಿವಾರಣೆ ಮತ್ತು ಮನಸ್ಸು ದೇಹ ಹೀಲಿಂಗ್ ಕಾರ್ಯಕ್ರಮ ಪೂರ್ಣಗೊಳಿಸಿದ ನಂತರ ವಿಮೆದಾರರು ಹೆಚ್ಚುವರಿ 75 ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ.
ಗಮನಿಸಿ: ಇದು 10 ವಾರಗಳ ಕಾರ್ಯಕ್ರಮವಾಗಿದ್ದು, ಇದನ್ನು ವಿಮೆದಾರರು ಯಾವುದೇ ವಿರಾಮವಿಲ್ಲದೆ ಪೂರ್ಣಗೊಳಿಸಬೇಕಾಗುತ್ತದೆ.
6. ವರ್ಚುಯಲ್ ಸಮಾಲೋಚನಾ ಸೇವೆ:
ಆನ್ಲೈನ್ ಪೋರ್ಟಲ್, ಮೊಬೈಲ್ ಅಪ್ಲಿಕೇಶನ್ ಮೂಲಕ ಚಾಟ್ ಸೇವೆ, ಕರೆ ಅಥವಾ ಕಾಲ್ ಬ್ಯಾಕ್ ಸೇವೆಯ ಮೂಲಕ ವಿಮೆದಾರರಿಗೆ ನಮ್ಮ ಆಂತರಿಕ ವೈದ್ಯರು/ಪಟ್ಟಿಮಾಡಲಾದ ಸೇವಾದಾತರ ಮೂಲಕ 'ವೈದ್ಯಕೀಯ ಸಮಾಲೋಚನೆ' ಲಭ್ಯವಿದೆ. 'ಡಯಟ್ ಮತ್ತು ನ್ಯೂಟ್ರಿಷನ್' ಮತ್ತು 'ಎರಡನೇ ವೈದ್ಯಕೀಯ ಸಮಾಲೋಚನೆ' ಸೇರಿದಂತೆ ಸಮಾಲೋಚನೆಗಳು ಲಭ್ಯವಿವೆ.
7. ವೈದ್ಯಕೀಯ ಪ್ರಾಶಸ್ತ್ಯದ ಸೇವೆಗಳು:
ಈ ಕೆಳಗಿನ ಸೇವೆಗಳನ್ನು ಪಡೆದುಕೊಳ್ಳಲು ವಿಮೆದಾರರು ಸ್ಟಾರ್ ಹೆಲ್ತ್ ಅನ್ನು ಸಹ ಸಂಪರ್ಕಿಸಬಹುದು:
-ಹತ್ತಿರದ ಆಂಬ್ಯುಲೆನ್ಸ್ / ಆಸ್ಪತ್ರೆ / ರಕ್ತ ಬ್ಯಾಂಕ್ ಮುಂತಾದ ತುರ್ತು ಸಹಾಯ ಮಾಹಿತಿ.
8. ಋತುಚಕ್ರ ಮತ್ತು ಫಲವತ್ತತೆಯ ಟ್ರ್ಯಾಕರ್:
ಆನ್ಲೈನ್ ಈಸೀ ಟ್ರ್ಯಾಕಿಂಗ್ ಪ್ರೋಗ್ರಾಂ ಪ್ರತಿ ಮಹಿಳೆಗೆ ಅವರ ಋತುಚಕ್ರದ ಆರೋಗ್ಯ ಮತ್ತು ಫಲವತ್ತತೆಯ ಆರೈಕೆಗೆ ಸಹಾಯ ಮಾಡುತ್ತದೆ. ಪ್ರೋಗ್ರಾಂ ಋತುಚಕ್ರ ಮತ್ತು ಅಂಡೋತ್ಪತ್ತಿಗೆ ಸಂಬಂಧಿಸಿದಂತೆ ಟ್ರ್ಯಾಕರ್ಗಳಿಗೆ ಪ್ರವೇಶವನ್ನು ನೀಡುತ್ತದೆ, ಇದು ತಿಂಗಳುಗಳ ಕಾಲ ಚಕ್ರಗಳನ್ನು ಮ್ಯಾಪ್ ಮಾಡುತ್ತದೆ. ಇದು ಗರ್ಭಧಾರಣೆಯ ತಡೆಗಟ್ಟುವಿಕೆಯನ್ನು ಯೋಜಿಸಲು ಸಹಾಯ ಮಾಡುತ್ತದೆ ಮತ್ತು ಗರ್ಭಧಾರಣೆಯನ್ನು ಯೋಜಿಸಿದರೆ ಗರಿಷ್ಠ ಅಂಡೋತ್ಪತ್ತಿಯನ್ನು ಟ್ರ್ಯಾಕ್ ಮಾಡುತ್ತದೆ.
9. ಡಿಜಿಟಲ್ ಹೆಲ್ತ್ ವಾಲ್ಟ್:
ವಿಶ್ವಾಸಾರ್ಹ ಸ್ವೀಕೃತದಾರರೊಂದಿಗೆ ಆರೋಗ್ಯ ಡೇಟಾವನ್ನು ಸಂಗ್ರಹಿಸಲು/ಪ್ರವೇಶಿಸಲು ಮತ್ತು ಹಂಚಿಕೊಳ್ಳಲು ವಿಮೆದಾರರಿಗೆ ಸುರಕ್ಷಿತವಾದ ವೈಯಕ್ತಿಕ ಆರೋಗ್ಯ ದಾಖಲೆಗಳ ವ್ಯವಸ್ಥೆ. ಈ ಪೋರ್ಟಲ್ ಅನ್ನು ಬಳಸಿಕೊಂಡು, ವಿಮೆದಾರರು ತಮ್ಮ ಆರೋಗ್ಯ ದಾಖಲೆಗಳನ್ನು (ಪ್ರಿಸ್ಕ್ರಿಪ್ಷನ್ಗಳು, ಪ್ರಯೋಗಾಲಯ ವರದಿಗಳು, ಡಿಸ್ಚಾರ್ಜ್ ಸಾರಾಂಶಗಳು ಇತ್ಯಾದಿ) ಸಂಗ್ರಹಿಸಬಹುದು, ಆರೋಗ್ಯ ಡೇಟಾವನ್ನು ಟ್ರ್ಯಾಕ್ ಮಾಡಬಹುದು, ಕುಟುಂಬ ಸದಸ್ಯರನ್ನು ಸೇರಿಸಬಹುದಾಗಿದೆ.
10. ಸ್ವಾಸ್ಥ್ಯ ವಿಷಯ:
ಸ್ವಾಸ್ಥ್ಯ ಪೋರ್ಟಲ್ ಆರೋಗ್ಯ ಲೇಖನಗಳು, ಬ್ಲಾಗ್ಗಳು, ಸಲಹೆಗಳು ಮತ್ತು ಇತರ ಆರೋಗ್ಯ ಮತ್ತು ಸ್ವಾಸ್ಥ್ಯಕ್ಕೆ ಸಂಬಂಧಿಸಿದ ವಿಷಯಗಳ ಸಮೃದ್ಧ ಸಂಗ್ರಹವನ್ನು ಒದಗಿಸುತ್ತದೆ. ವಿಷಯಗಳ ಬಗ್ಗೆ ವಿವಿಧ ಕ್ಷೇತ್ರಗಳ ತಜ್ಞರು ಬರೆದಿರುತ್ತಾರೆ. ವಿವಿಧ ಆರೋಗ್ಯ ಅಂಶಗಳ ಬಗ್ಗೆ ಕಲಿಯಲು ಮತ್ತು ಧನಾತ್ಮಕ ಆರೋಗ್ಯ ಬದಲಾವಣೆಗಳನ್ನು ಸಂಯೋಜಿಸಲು ಏಕೈಕ ವಿಶ್ವಾಸಾರ್ಹ ಮೂಲವನ್ನು ಹೊಂದುವ ಪ್ರಯೋಜನವನ್ನು ವಿಮೆದಾರರು ಪಡೆಯುತ್ತಾರೆ.
11. ಹೆಲ್ತ್ ಕ್ವಿಜ್ ಮತ್ತು ಗೇಮಿಫಿಕೇಷನ್:
ಸ್ವಾಸ್ಥ್ಯ ಪೋರ್ಟಲ್ ಆರೋಗ್ಯ ಮತ್ತು ಸ್ವಾಸ್ಥ್ಯ ರಸಪ್ರಶ್ನೆಗಳನ್ನು ಒದಗಿಸುತ್ತದೆ. ಸ್ವಾಸ್ಥ್ಯ ರಸಪ್ರಶ್ನೆಗಳು ವಿಮೆದಾರರಿಗೆ ವಿಭಿನ್ನ ಆರೋಗ್ಯ ಆಯ್ಕೆಗಳ ಬಗ್ಗೆ ಹೆಚ್ಚು ಅರಿವು ಮೂಡಿಸಲು ಸಹಾಯ ಮಾಡುತ್ತವೆ.
ವಿನೋದ ಮತ್ತು ತೊಡಗಿಸಿಕೊಳ್ಳುವ ಆರೋಗ್ಯ ಮತ್ತು ಸ್ವಾಸ್ಥ್ಯ ಅನುಭವಗಳನ್ನು ರಚಿಸಲು ಗೇಮಿಫಿಕೇಶನ್ ಸಹಾಯ ಮಾಡುತ್ತದೆ. ಇದು ಬಳಕೆದಾರರಲ್ಲಿ ಸಾಧನೆಯ ಪ್ರಜ್ಞೆಯನ್ನು ಸೃಷ್ಟಿಸಲು ಸಹಾಯ ಮಾಡಿ ಪ್ರೇರಣೆಯ ಮಟ್ಟವನ್ನು ಹೆಚ್ಚಿಸುತ್ತದೆ.
12. ಶಸ್ತ್ರಚಿಕಿತ್ಸಾ ನಂತರದ ಆರೈಕೆ:
ವಿಮೆದಾರರ ವೈದ್ಯಕೀಯ ಪ್ರಶ್ನೆಗಳನ್ನು ಪರಿಹರಿಸಲು ಫಾಲೋ ಅಪ್ ಫೋನ್ ಕರೆಗಳ ಮೂಲಕ (ಪ್ರಾಥಮಿಕವಾಗಿ ಶಸ್ತ್ರಚಿಕಿತ್ಸಾ ಪ್ರಕರಣಗಳಿಗೆ) ಇದನ್ನು ಮಾಡಲಾಗುತ್ತದೆ.
13. ನೆಟ್ವರ್ಕ್ ಸೇವಾದಾತರು ನೀಡುವ ಡಿಸ್ಕೌಂಟ್ಗಳು:
ನಮ್ಮ ವೆಬ್ಸೈಟ್ನಲ್ಲಿ ಪ್ರದರ್ಶಿಸಲಾಗುವ ನಮ್ಮ ನೆಟ್ವರ್ಕ್ ಸೇವಾದಾತರು ಒದಗಿಸುವ ಸೇವೆಗಳಿಗೆ ವಿಮೆದಾರರು ಡಿಸ್ಕೌಂಟ್ಗಳನ್ನು ಪಡೆಯಬಹುದು.
ಸ್ವಾಸ್ಥ್ಯ ಚಟುವಟಿಕೆಯ ಕರಾರುಗಳು ಮತ್ತು ಷರತ್ತುಗಳು
ಈ ವಿಷಯಕ್ಕೆ ಸಂಬಂಧಿಸಿದಂತೆ ವಿಮೆದಾರರು ಒದಗಿಸಿದ ಯಾವುದೇ ಮಾಹಿತಿಯನ್ನು ಗೌಪ್ಯವಾಗಿಡಬೇಕು .
ಸ್ವಾಸ್ಥ್ಯ ರಿವಾರ್ಡ್ ಪಾಯಿಂಟ್ಗಳಿಗೆ ಯಾವುದೇ ಕ್ಯಾಶ್ ರಿಡೆಮ್ಷನ್ ಲಭ್ಯವಿಲ್ಲ.
ವಿಮೆದಾರರು ಅಂತಹ ಚಟುವಟಿಕೆ/ಪರೀಕ್ಷೆಯನ್ನು ಕೈಗೊಂಡ 1 ತಿಂಗಳೊಳಗೆ ವಿವಿಧ ಸ್ವಾಸ್ಥ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳು, ವರದಿಗಳು, ರಸೀದಿಗಳು ಇತ್ಯಾದಿಗಳನ್ನು ಘೋಷಿಸಬೇಕು ಮತ್ತು ಸಲ್ಲಿಸಬೇಕು.
ಪ್ರತಿ ಪಾಲಿಸಿ ವರ್ಷದ ಕೊನೆಯ ತಿಂಗಳಲ್ಲಿ ಯಾವುದೇ ಚಟುವಟಿಕೆ, ವರದಿ, ದಾಖಲೆ, ರಶೀದಿಯನ್ನು ಸಲ್ಲಿಸುವಂತಿಲ್ಲ.
ಪಟ್ಟಿಮಾಡಿದ ಸೇವಾದಾತರ ಮೂಲಕ ಒದಗಿಸಲಾದ ಸೇವೆಗಳಿಗೆ, ಸ್ಟಾರ್ ಹೆಲ್ತ್ ಕೇವಲ ಫೆಸಿಲಿಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದೆ; ಆದ್ದರಿಂದ ಯಾವುದೇ ಹೆಚ್ಚುತ್ತಿರುವ ಖರ್ಚುಗಳು ಅಥವಾ ಸೇವೆಗಳಿಗೆ ಜವಾಬ್ದಾರರಾಗಿರುವುದಿಲ್ಲ.
ಎಲ್ಲಾ ವೈದ್ಯಕೀಯ ಸೇವೆಗಳನ್ನು ಪಟ್ಟಿಮಾಡಿದ ಹೆಲ್ತ್ ಕೇರ್ ಸೇವಾದಾತರರಿಂದ ಒದಗಿಸಲಾಗುತ್ತಿದೆ. ಪಟ್ಟಿಯಲ್ಲಿ ಸೇರಿಸುವುದಕ್ಕೆ ಮೊದಲು ನಾವು ಸಂಪೂರ್ಣ ಜಾಗರೂಕರಾಗಿದ್ದರೂ ವಿಮೆದಾರರು ವೈದ್ಯಕೀಯ ಸಲಹೆ/ಸೇವೆಗಳನ್ನು ಪಡೆದುಕೊಳ್ಳುವ/ ತೆಗೆದುಕೊಳ್ಳುವ ಮೊದಲು ಅವನ/ಅವಳ ವೈದ್ಯರನ್ನು ಸಂಪರ್ಕಿಸಬೇಕು. ಈ ಸಲಹೆಗಳು/ಸೇವೆಗಳನ್ನು ಬಳಸಿಕೊಳ್ಳುವ ನಿರ್ಧಾರವು ವಿಮೆದಾರರ ವಿವೇಚನೆಗೆ ಸಂಬಂಧಿಸಿದೆ.
ಸ್ವಾಸ್ಥ್ಯ ರಿವಾರ್ಡ್ ಪಾಯಿಂಟ್ಗಳನ್ನು ಅನ್ಯಾಯವಾಗಿ ಗಳಿಸಲಾಗಿದೆ ಎಂದು ಕಂಡುಬಂದಲ್ಲಿ, ಅದನ್ನು ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.
ಸ್ವಾಸ್ಥ್ಯ ಕಾರ್ಯಕ್ರಮದಿಂದ ಮತ್ತು / ಅಥವಾ ರಿಂದ ಅನುಭವಿಸಿದ, ಸಹಿಸಿದ ಅಥವಾ ಉಂಟಾದ ಸದಸ್ಯರು ಕ್ಲೈಮ್ ಮಾಡಿದ ಯಾವುದೇ ಕ್ರಿಯೆಗಳು, ಹಕ್ಕುಗಳು, ಬೇಡಿಕೆಗಳು, ನಷ್ಟಗಳು, ಹಾನಿಗಳು, ವೆಚ್ಚಗಳು, ಶುಲ್ಕಗಳು ಮತ್ತು ಖರ್ಚುಗಳಿಗೆ ಸ್ಟಾರ್ ಹೆಲ್ತ್, ಅದರ ಗುಂಪು ಘಟಕಗಳು ಅಥವಾ ಅಂಗಸಂಸ್ಥೆಗಳು, ಅವರ ಆಯಾ ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು, ಏಜೆಂಟ್ಗಳು, ಮಾರಾಟಗಾರರು ಜವಾಬ್ದಾರರಾಗಿರುವುದಿಲ್ಲ.
ನೀಡಲಾಗುವ ಸೇವೆಗಳು ಕಾಲಕಾಲಕ್ಕೆ IRDAI ಹೊರಡಿಸಿದ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತವೆ.
ಪ್ರಯೋಜನಗಳ ವಿವರಣೆ:
"ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮದ" ಮೂಲಕ ವಿಮೆದಾರರು ಪ್ರೀಮಿಯಂನಲ್ಲಿ ಡಿಸ್ಕೌಂಟ್ ಅನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ
ಸನ್ನಿವೇಶ – 1
24 ವರ್ಷದ ವ್ಯಕ್ತಿ ರಮೇಶ್ 15ನೇ ಜುಲೈ, 2021 ರಂದು 25 ಲಕ್ಷ ವಿಮಾಮೊತ್ತದ ಸ್ಟಾರ್ ಕ್ರಿಟಿಕಲ್ ಇಲ್ನೆಸ್ ಮಲ್ಟಿಪೇ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದ್ದಾರೆ, ಅವರು ವಿವಿಧ ಸ್ವಾಸ್ಥ್ಯ ಚಟುವಟಿಕೆಗಳನ್ನು ಮಾಡುವ ಮೂಲಕ ಸ್ವಾಸ್ಥ್ಯ ಪಾಯಿಂಟ್ಗಳನ್ನು ಹೇಗೆ ಗಳಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳೋಣ. ರಮೇಶ್ ಅವರು ತಮ್ಮ ಬಾಡಿ ಮಾಸ್ ಇಂಡೆಕ್ಸ್ (BMI) ಅನ್ನು 25 ಎಂದು ಘೋಷಿಸಿದ್ದಾರೆ. ರಮೇಶ್ ಅವರು ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ನೋಂದಾಯಿಸಿಕೊಂಡರು ಮತ್ತು ಈ ಕೆಳಗಿನ ಸ್ವಾಸ್ಥ್ಯ ಚಟುವಟಿಕೆಗಳನ್ನು ಪೂರ್ಣಗೊಳಿಸಿದರು.
ಕ್ರಮ ಸಂಖ್ಯೆ
ಪಾಲಿಸಿ ಅವಧಿಯಲ್ಲಿ ನಡೆಸಲಾದ ಸ್ವಾಸ್ಥ್ಯ ಚಟುವಟಿಕೆ
ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳು
1
ಆನ್ಲೈನ್ ಆರೋಗ್ಯ ಅಪಾಯದ ಮೌಲ್ಯಮಾಪನವನ್ನು ಪೂರ್ಣಗೊಳಿಸಿದ್ದಾರೆ (HRA)
50
2
ಆರೋಗ್ಯ ತಪಾಸಣೆ ವರದಿ ಸಲ್ಲಿಸಿದ್ದಾರೆ(ಒಂದು ಪರೀಕ್ಷೆಯ ಪಲಿತಾಂಶದ ರೇಂಜ್ ನಾರ್ಮಲ್ ಇಲ್ಲ)
150
3
ವಾಕಥಾನ್ನಲ್ಲಿ ಭಾಗವಹಿಸಿದ್ದರು
100
4
ಯೋಗ ತರಗತಿಗಳಿಗೆ ಹಾಜರಾಗಿದ್ದರು
100
5
ಪಾಲಿಸಿ ವರ್ಷದಲ್ಲಿ ಪ್ರತಿ ದಿನಕ್ಕೆ ಸರಾಸರಿ 10,000 ಸ್ಟೆಪ್ಗಳನ್ನು ಸಾಧಿಸಿದ್ದಾರೆ
200
6
ರಮೇಶ್ ತೂಕ ನಿಯಂತ್ರಣಾ ಕಾರ್ಯಕ್ರಮವನ್ನು ಸ್ವೀಕರಿಸಿದರು ಮತ್ತು 23 BMI ಗೆ ತಲುಪಿದರು
100
7
ರಮೇಶ್ ಒತ್ತಡ ನಿವಾರಣೆ ಮತ್ತು ಮನಸ್ಸು ದೇಹ ಹೀಲಿಂಗ್ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದಾರೆ
125
ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳ ಒಟ್ಟು ಸಂಖ್ಯೆ
825
ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳ ಸಂಖ್ಯೆಯನ್ನು ಆಧರಿಸಿ ರಮೇಶ್ ನವೀಕರಣ ಪ್ರೀಮಿಯಂನಲ್ಲಿ 10% ಡಿಸ್ಕೌಂಟ್ ಪಡೆಯಲು ಅರ್ಹರಾಗಿದ್ದಾರೆ.
ಪ್ರಯೋಜನಗಳ ವಿವರಣೆ:
ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮದ" ಮೂಲಕ ವಿಮೆದಾರರು ಪ್ರೀಮಿಯಂನಲ್ಲಿ ಡಿಸ್ಕೌಂಟ್ ಅನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ
ಸನ್ನಿವೇಶ – 2
35 ವರ್ಷದ ಉಮೇಶ್ ಅವರು ಎರಡು ವರ್ಷಗಳ ಅವಧಿಗೆ 20 ಲಕ್ಷ ವಿಮಾ ಮೊತ್ತದ ಸ್ಟಾರ್ ಕ್ರಿಟಿಕಲ್ ಇಲ್ನೆಸ್ ಮಲ್ಟಿಪೇ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುತ್ತಾರೆ. ಅವರು ವಿವಿಧ ಸ್ವಾಸ್ಥ್ಯ ಚಟುವಟಿಕೆಗಳನ್ನು ಮಾಡುವ ಮೂಲಕ ಸ್ವಾಸ್ಥ್ಯ ಪಾಯಿಂಟ್ಗಳನ್ನು ಹೇಗೆ ಗಳಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳೋಣ. ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಉಮೇಶ್ ಅವರು ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ದಾಖಲಾಗಿದ್ದಾರೆ ಮತ್ತು ಈ ಕೆಳಗಿನ ಸ್ವಾಸ್ಥ್ಯ ಚಟುವಟಿಕೆಗಳನ್ನು ಪೂರ್ಣಗೊಳಿಸಿದ್ದಾರೆ.
ಕ್ರಮ ಸಂಖ್ಯೆ
ಪಾಲಿಸಿ ಅವಧಿಯಲ್ಲಿ ನಡೆಸಲಾದ ಸ್ವಾಸ್ಥ್ಯ ಚಟುವಟಿಕೆ
ಮೊದಲನೇ ವರ್ಷದಲ್ಲಿ ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳು
ಎರಡನೇ ವರ್ಷದಲ್ಲಿ ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳು
1
ಆನ್ಲೈನ್ ಆರೋಗ್ಯ ಅಪಾಯದ ಮೌಲ್ಯಮಾಪನವನ್ನು ಪೂರ್ಣಗೊಳಿಸಿದ್ದಾರೆ (HRA)
50
50
2
ಆರೋಗ್ಯ ತಪಾಸಣೆ ವರದಿ ಸಲ್ಲಿಸಿದ್ದಾರೆ
200
200
3
ವಾಕಥಾನ್ನಲ್ಲಿ ಭಾಗವಹಿಸಿದ್ದರು
100
100
4
ತೈ ಚಿ ತರಗತಿಗಳಿಗೆ ಹಾಜರಾಗಿದ್ದರು
100
-
5
ಪಾಲಿಸಿ ವರ್ಷದಲ್ಲಿ ಪ್ರತಿ ದಿನಕ್ಕೆ ಸರಾಸರಿ 10,000 ಸ್ಟೆಪ್ಗಳನ್ನು ಸಾಧಿಸಿದ್ದಾರೆ
200
200
6
ತಮ್ಮ ಫಿಟ್ನೆಸ್ ಯಶಸ್ಸಿನ ಕಥೆಯನ್ನು ಸಲ್ಲಿಸಿದ್ದಾರೆ
50
50
7
ದೀರ್ಘಕಾಲಿಕ ತೀವ್ರಸ್ಥಿತಿ ನಿರ್ವಹಣಾ ಕಾರ್ಯಕ್ರಮದ ಮೂಲಕ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಿದ್ದಾರೆ
250
250
ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳ ಒಟ್ಟು ಸಂಖ್ಯೆ
950
850
ಉಮೇಶ್ ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳ ಒಟ್ಟು ಸಂಖ್ಯೆ = 1800 (950+850) Cಎರಡು ವರ್ಷಗಳ ಪಾಲಿಸಿ ಷರತ್ತಿನ ಪ್ರಕಾರ ಸ್ವಾಸ್ಥ್ಯ ಪಾಯಿಂಟ್ಗಳ ಲೆಕ್ಕಾಚಾರ = 900 (1800/2)
ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳ ಸಂಖ್ಯೆಯನ್ನು ಆಧರಿಸಿ, ನವೀಕರಣ ಪ್ರೀಮಿಯಂನಲ್ಲಿ 10% ಡಿಸ್ಕೌಂಟ್ ಪಡೆಯಲು ಉಮೇಶ್ ಅರ್ಹರಾಗಿದ್ದಾರೆ
ಕವರೇಜ್
ಕೆಳಗಿನ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಿದ ಕಾಯಿಲೆಗೆ ವಿಮಾ ಮೊತ್ತವನ್ನು ಮೀರದ ಇಂಡಿಗಂಟನ್ನು ಕಂಪನಿಯು ವಿಮೆದಾರರಿಗೆ ಪಾವತಿಸುತ್ತದೆ:
ಕವರ್ ಮಾಡಲಾದ ಪ್ರಮುಖ ಕಾಯಿಲೆಗಳ ಪಟ್ಟಿ
ಗುಂಪು ಸಂಖ್ಯೆ ಅಥವಾ ವರ್ಗ
ಕಾಯಿಲೆಯ ಗುಂಪು
1. ನಿರ್ದಿಷ್ಟಪಡಿಸಿದ ತೀವ್ರತೆಯ ಕ್ಯಾನ್ಸರ್
1
ಕ್ಯಾನ್ಸರ್ ಸಂಬಂಧಿತ
2. ಅಸ್ಥಿಮಜ್ಜೆಯ ಕಸಿ
3. ಅಪ್ಲ್ಯಾಸ್ಟಿಕ್ ರಕ್ತಹೀನತೆ
4. ಹೃದಯಾಘಾತ
2
ಹೃಯ ಸಂಬಂಧಿತ ಸ್ಥಿತಿಗಳು
5. ತೆರೆದ ಹೃದಯ CABG
6. ಓಪನ್ ಹಾರ್ಟ್ ರಿಪ್ಲೇಸ್ಮೆಂಟ್ ಅಥವಾ ಹಾರ್ಟ್ ವಾಲ್ವ್ ರಿಪೇರ್
7. ಪ್ರಾಥಮಿಕ (ಇಡಿಯೋಪಥಿಕ್) ಶ್ವಾಸಕೋಶದ ಅಧಿಕ ರಕ್ತದೊತ್ತಡ
8. ಹೃದಯ ಕಸಿ
9. ಮಹಾಪಧಮನಿಯ ಶಸ್ತ್ರಚಿಕಿತ್ಸೆ
10. ಮಹಾಪಧಮನಿಯ ಊತದ ಛೇದನ
11. ಇತರ ಗಂಭೀರ ಪರಿಧಮನಿಯ ಕಾಯಿಲೆ
12. ನಿರ್ದಿಷ್ಟಪಡಿಸಿದ ತೀವ್ರತೆಯ ಕಾರ್ಡಿಯೊಮಯೋಪತಿ
13. ನಿರ್ದಿಷ್ಟಪಡಿಸಿದ ತೀವ್ರತೆಯ ಕೋಮಾ
3
ಮೆದುಳು ಮತ್ತು ನರವ್ಯೂಹ ಸಂಬಂಧಿತ ಸ್ಥಿತಿಗಳು
14. ಶಾಶ್ವತ ರೋಗಲಕ್ಷಣಗಳನ್ನುಂಟುಮಾಡುವ ಪರಿಣಾಮವಾಗಿ ಸ್ಟ್ರೋಕ್
15. ಅಂಗಗಳ ಶಾಶ್ವತ ಪಾರ್ಶ್ವವಾಯು
16. ಶಾಶ್ವತ ರೋಗಲಕ್ಷಣಗಳ ಮೋಟಾರ್ ನ್ಯೂರಾನ್ ಕಾಯಿಲೆ
17. ನಿರಂತರ ರೋಗಲಕ್ಷಣಗಳ ಮಲ್ಟಿಪಲ್ ಸ್ಕ್ಲೀರೋಸಿಸ್
18. ಬೆನಿಗ್ನ್ ಬ್ರೇನ್ ಟ್ಯೂಮರ್
19. ವಾಕ್ ನಷ್ಟ
20. ಮೇಜರ್ ಹೆಡ್ ಟ್ರಾಮಾ
21. ಆಲ್ಝೈಮರ್ ಕಾಯಿಲೆ
22. ಕ್ರೂಟ್ಜ್ಫೆಲ್ಡ್ಟ್-ಜಾಕೋಬ್ ಕಾಯಿಲೆ (CJD)
23. ಮೆದುಳು ಉರಿಯೂತ
24. ಮಸ್ಕ್ಯುಲರ್ ಡಿಸ್ಟ್ರೋಫಿ
25. ಬ್ಯಾಕ್ಟೀರಿಯಲ್ ಮೆನಿಂಜೈಟಿಸ್
26. ಬ್ರೈನ್ ಸರ್ಜರಿ
27. ಪ್ರೋಗ್ರೆಸ್ಸಿವ್ ಸುಪ್ರಾನ್ಯೂಕ್ಲಿಯರ್ ಪಾಲ್ಸಿ
28. ಅಪಾಲಿಕ್ ಸಿಂಡ್ರೋಮ್
29. ಪ್ರಮುಖ ಅಂಗ ಕಸಿ (ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ, ಮೇದೋಜೀರಕ ಗ್ರಂಥಿ)
1. ಈ ಪಾಲಿಸಿಯ ಅಡಿಯಲ್ಲಿ ಕವರ್ ಪ್ರಾರಂಭವಾದ 90 ದಿನಗಳ ನಂತರ ಮಾತ್ರ ಕವರ್ ಮಾಡಲಾದ ಪ್ರಮುಖ ಕಾಯಿಲೆಯ ಮೊದಲ ರೋಗನಿರ್ಣಯವನ್ನು ಮಾಡಬೇಕು.
2. ಅಂತಹ ಪ್ರಮುಖ ಕಾಯಿಲೆಯ ರೋಗನಿರ್ಣಯದ ದಿನಾಂಕದಿಂದ 15 ದಿನಗಳ ಬದುಕುಳಿಯುವವರ ಅವಧಿಯು ಅನ್ವಯವಾಗುತ್ತದೆ.
3. ಪ್ರತಿ ಷರತ್ತಿನ ಸಂಭವಿಸುವಿಕೆಯ ನಡುವೆ 12 ತಿಂಗಳ ವೇಟಿಂಗ್ ಅವಧಿ ಅನ್ವಯವಾಗುತ್ತದೆ.
ಸ್ಟಾರ್ ಹೆಲ್ತ್
ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಏಕೆ ನಮ್ಮ ಆಯ್ಕೆಯಾಗಿರಬೇಕು?
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್ಮೆಂಟ್ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್ವರ್ಕ್ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.
ಸ್ವಾಸ್ಥ್ಯ ಕಾರ್ಯಕ್ರಮ
ನಮ್ಮ ಸ್ವಾಸ್ಥ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತ್ತು ಆರೋಗ್ಯಕರವಾಗಿರುವುದಕ್ಕಾಗಿ ರಿವಾರ್ಡ್ಗಳನ್ನು ಗಳಿಸಿ. ನವೀಕರಣ ಡಿಸ್ಕೌಂಟ್ಗಳನ್ನು ಪಡೆಯಲು ಆ ರಿವಾರ್ಡ್ಗಳನ್ನು ರಿಡೀಮ್ ಮಾಡಿಕೊಳ್ಳಿ.
ಡಯಾಗ್ನೋಸ್ಟಿಕ್ ಕೇಂದ್ರಗಳು
ಮನೆಯಿಂದಲೇ ಲ್ಯಾಬ್ ಸ್ಯಾಂಪಲ್ಗಳ ಪಿಕಪ್ ಮತ್ತು ಮನೆ ಬಾಗಿಲಿಗೆ ಆರೋಗ್ಯ ತಪಾಸಣೆಯೊಂದಿಗೆ ಭಾರತದಾದ್ಯಂತ 1,635 ಡಯಾಗ್ನೋಸ್ಟಿಕ್ ಕೇಂದ್ರಗಳಿಗೆ ಪ್ರವೇಶ ಪಡೆಯಿರಿ.
ಇ-ಫಾರ್ಮಸಿ
ರಿಯಾಯಿತಿ ದರದಲ್ಲಿ ಔಷಧಗಳನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿ. 2780 ನಗರಗಳಲ್ಲಿ ಹೋಮ್ ಡೆಲಿವರಿ ಮತ್ತು ಸ್ಟೋರ್ ಪಿಕಪ್ಗಳು ಲಭ್ಯವಿದೆ.
24*7 ಗ್ರಾಹಕ ಸೇವೆ
ಕ್ಲೈಮ್ ಮಾಹಿತಿ, ಟೆಲಿಹೆಲ್ತ್ ಸೇವೆಗಳು ಮತ್ತು ನಿಮ್ಮ ಪ್ರಶ್ನೆಗಳಿಗೆ ಪರಿಹಾರಕ್ಕಾಗಿ 1800-425-2255 ಗೆ ನಮಗೆ ಕರೆ ಮಾಡಿ.
ಇನ್-ಹೌಸ್ ಕ್ಲೈಮ್ ಸೆಟಲ್ಮೆಂಟ್
ನಾವು TPA ಇಲ್ಲದೆಯೇ ಅರ್ಹ ಇನ್-ಹೌಸ್ ತಂಡದೊಂದಿಗೆ ಕ್ಲೈಮ್ಗಳನ್ನು ಸೆಟಲ್ ಮಾಡುವ ಪ್ರಪ್ರಥಮ ಸ್ವತಂತ್ರ ಹೆಲ್ತ್ ಇನ್ಶೂರೆನ್ಸ್ ಕಂಪನಿಯಾಗಿದ್ದೇವೆ.
ಕ್ಲೈಮ್ ಸೆಟಲ್ಮೆಂಟ್
ನಮ್ಮ ಕ್ಯಾಶ್ಲೆಸ್ಗೆ ಸಂಬಂಧಿಸಿದ 90% ಕ್ಲೈಮ್ಗಳನ್ನು 2 ಗಂಟೆಗಳೊಳಗೆ ಸೆಟಲ್ ಮಾಡಲಾಗುತ್ತದೆ ಮತ್ತು ವೆಚ್ಚ ಭರಿಸುವಿಕೆಗೆ ಸಂಬಂಧಿಸಿದ 92% ಕ್ಲೈಮ್ಗಳನ್ನು 7 ದಿನಗಳೊಳಗೆ ಸೆಟಲ್ ಮಾಡಲಾಗುತ್ತದೆ.
ಆಸ್ಪತ್ರೆಗಳು
ಗುಣಮಟ್ಟದ ಚಿಕಿತ್ಸೆಗಾಗಿ ನಮ್ಮ ಮೌಲ್ಯಯುತ ಸೇವಾದಾತರು, ಒಪ್ಪಿಕೊಂಡ ನೆಟ್ವರ್ಕ್ ಮತ್ತು ನೆಟ್ವರ್ಕ್ ಆಸ್ಪತ್ರೆಗಳ ಅಡಿಯಲ್ಲಿ ನಾವು ನಿಮ್ಮನ್ನು ಕವರ್ ಮಾಡುತ್ತೇವೆ.
ಪ್ರಶಸ್ತಿಗಳು
ನಮ್ಮ ನವೀನ ಪ್ರಾಡಕ್ಟ್, ಅತ್ಯುತ್ತಮ ಕ್ಲೈಮ್ ಸೆಟಲ್ಮೆಂಟ್ ಮತ್ತು ಅತ್ಯುತ್ತಮ ಸೇವಾದಾತರಿಗೆ ಹೆಸರಾಂತ ಸಮೀಕ್ಷೆ ಸಂಸ್ಥೆಗಳಿಂದ ಪ್ರಶಸ್ತಿ ಲಭಿಸಿದೆ.
ನೆಟ್ವರ್ಕ್ ಆಸ್ಪತ್ರೆಗಳು
ಸ್ಟಾರ್ ಹೆಲ್ತ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳು ತಡೆರಹಿತ ಕ್ಯಾಶ್ಲೆಸ್ ಸೌಲಭ್ಯಗಳನ್ನು ಒದಗಿಸುತ್ತವೆ. ಅನುಮೋದನೆ ಪ್ರಕ್ರಿಯೆಯು ತ್ವರಿತ ಮತ್ತು ಆರಾಮದಾಯಕವಾಗಿದೆ.
ಒಪ್ಪಿಕೊಂಡ ನೆಟ್ವರ್ಕ್ ಆಸ್ಪತ್ರೆಗಳು
ಶಸ್ತ್ರಚಿಕಿತ್ಸಾ ಮತ್ತು ವೈದ್ಯಕೀಯ ಕಾರ್ಯವಿಧಾನಗಳಿಗೆ ಮಿತವ್ಯಯಿ ಪ್ಯಾಕೇಜ್ ದರಗಳನ್ನು ಒದಗಿಸಲು ಸ್ಟಾರ್ ಹೆಲ್ತ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳು.
ಮೌಲ್ಯಯುತ ಸೇವಾದಾತರು
ಈ ಆಸ್ಪತ್ರೆಗಳನ್ನು ಸ್ಟಾರ್ ಹೆಲ್ತ್ ಗುರುತಿಸುತ್ತದೆ ಮತ್ತು ಅವರ ಪ್ರಯತ್ನಗಳು, ಸೇವೆಗಳು ಮತ್ತು ಗುಣಮಟ್ಟಕ್ಕಾಗಿ ವಿಶೇಷ ಮನ್ನಣೆ ನೀಡಲಾಗುತ್ತದೆ.
ನೆಟ್ವರ್ಕ್ ಹೊರತಾದ ಆಸ್ಪತ್ರೆಗಳು
ನೆಟ್ವರ್ಕ್ ಹೊರತಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳನ್ನು ಪಡೆಯಲು (ಸ್ಟಾರ್ ಹೆಲ್ತ್ನೊಂದಿಗೆ ಒಪ್ಪಂದ ಮಾಡಿಕೊಳ್ಳದ), ನೀವು ವೆಚ್ಚ ಭರಿಸುವಿಕೆ ಕ್ಲೈಮ್ಗಳನ್ನು ಪಡೆಯಬಹುದಾಗಿದೆ.
ಹೊರಗಿಡಲಾದ ಸೇವಾದಾತರು
ಕ್ಲೈಮ್ಗಳು ಸ್ವೀಕಾರಾರ್ಹವಲ್ಲದ ಆಸ್ಪತ್ರೆಗಳು. ಆದರೆ ಮಾರಣಾಂತಿಕ ಪರಿಸ್ಥಿತಿ/ಅಪಘಾತದ ಖರ್ಚುಗಳನ್ನು ಸ್ಥಿರೀಕರಣದವರೆಗೆ ಕವರ್ ಮಾಡಲಾಗುತ್ತದೆ.
ಬೇರೆ ಯಾವುದನ್ನಾದರೂ ಹುಡುಕುತ್ತಿರುವಿರಾ?
ಪ್ರಾರಂಭಿಸಿ
ಅತ್ಯುತ್ತಮವಾದುದರ ಖಾತರಿ ಹೊಂದಿರಿ
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.
ಹೆಚ್ಚಿನ ಮಾಹಿತಿ ಬೇಕೆ?
ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?
Disclaimer: Health Insurance Coverage for pre-existing medical conditions is subject to underwriting review and may involve additional requirements, loadings, or exclusions. Please disclose your medical history in the proposal form for a personalised assessment. The information provided on this page is for general informational purposes only. Availability and terms of health insurance plans may vary based on geographic location and other factors. Consult a licensed insurance agent or professional for specific advice. T&C Apply. For further detailed information or inquiries, feel free to reach out via email at marketing.d2c@starhealth.in