ಅಸ್ತಿತ್ವದಲ್ಲಿರುವ ನಿಮ್ಮ ಪಾಲಿಸಿಯ ಮಿತಿಯನ್ನು ಈ ಕವರ್ ಹೆಚ್ಚಿಸುತ್ತದೆ. ಮೂಲ ಪಾಲಿಸಿಯ ಪ್ರಾರಂಭದ ಸಮಯದಲ್ಲಿ ಅಥವಾ ನವೀಕರಣದ ಸಮಯದಲ್ಲಿ ಇದನ್ನು ಖರೀದಿಸಬಹುದು.
ಅರ್ಹತೆ
ಫ್ಯಾಮಿಲಿ ಹೆಲ್ತ್ ಆಪ್ಟಿಮಾ ವಿಮಾ ಯೋಜನೆ / ಸ್ಟಾರ್ ಸಮಗ್ರ ವಿಮಾ ಪಾಲಿಸಿ / ಮೆಡಿ ಕ್ಲಾಸಿಕ್ ಇನ್ಶುರೆನ್ಸ್ ಪಾಲಿಸಿ (ವೈಯಕ್ತಿಕ), ಕನಿಷ್ಠ ವಿಮಾ ಮೊತ್ತದ ರೂ. 10,00,000/- ಈ ಆಡ್ ಆನ್ ಕವರ್ ಅನ್ನು ಪಡೆಯಬಹುದು.
ಪಾಲಿಸಿ ಅವಧಿ
ಈ ಆ್ಯಡ್ ಆನ್ ಕವರ್ನ ಪಾಲಿಸಿ ಅವಧಿಯು ಆಯ್ಕೆ ಮಾಡಿದ ಮೂಲ ಪಾಲಿಸಿಯಂತೆಯೇ ಇರುತ್ತದೆ.
ವಯಸ್ಸು ಮತ್ತು ಕುಟುಂಬದ ಗಾತ್ರ
ಈ ಆ್ಯಡ್ ಆನ್ ಕವರ್ನ ಪ್ರವೇಶ ವಯಸ್ಸು ಮತ್ತು ಕುಟುಂಬದ ಗಾತ್ರವು ಆಯ್ಕೆ ಮಾಡಿದ ಮೂಲ ಪಾಲಿಸಿಯಂತೆಯೇ ಇರುತ್ತದೆ.
DETAILED LIST
ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ
ವಿಭಾಗ I
ವರ್ಧಿತ ಕೊಠಡಿ ಬಾಡಿಗೆ
ಈ ಕವರ್ ಪಾಲಿಸಿ ಷರತ್ತಿನಲ್ಲಿ ತಿಳಿಸಲಾದ ಮಿತಿಗಳ ಪ್ರಕಾರ ಹೆಚ್ಚುವರಿ ಕೊಠಡಿ, ಬೋರ್ಡಿಂಗ್ ಮತ್ತು ಶೂಶ್ರೂಷೆಯ ವೆಚ್ಚಗಳನ್ನು ಭರಿಸುತ್ತದೆ.
ಕ್ಲೈಮ್ ಗಾರ್ಡ್ (ವೈದ್ಯಕೀಯೇತರ ವಸ್ತುಗಳಿಗೆ ಕವರೇಜ್)
ಮೂಲ ಪಾಲಿಸಿಯ ಅಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್ ಇದ್ದರೆ, ಈ ಆ್ಯಡ್ ಆನ್ ಕವರ್ನಲ್ಲಿ ನಿರ್ದಿಷ್ಟಪಡಿಸಿದ ವೈದ್ಯಕೀಯೇತರ ವೆಚ್ಚಗಳನ್ನು ಭರಿಸಲಾಗುತ್ತದೆ.
ಆಧುನಿಕ ಚಿಕಿತ್ಸೆಗಳಿಗೆ ವರ್ಧಿತ ಮಿತಿ
ಪಾಲಿಸಿ ಷರತ್ತಿನಲ್ಲಿ ಪಟ್ಟಿಮಾಡಲಾದ ಆಧುನಿಕ ಚಿಕಿತ್ಸೆಗಳು ಮೂಲ ಪಾಲಿಸಿಯಲ್ಲಿ ಒಳಗೊಂಡಿದ್ದರೆ, ಅಂತಹ ಚಿಕಿತ್ಸೆಗಳು ಮೂಲ ಪಾಲಿಸಿಯ ವಿಮಾ ಮೊತ್ತದವರೆಗೆ ಕವರ್ ಆಗುತ್ತದೆ.
ಆಯುಷ್ ಚಿಕಿತ್ಸೆಗಾಗಿ ವರ್ಧಿತ ಮಿತಿ
ಆಯುಷ್ ಆಸ್ಪತ್ರೆಗಳಲ್ಲಿ ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ ಔಷಧಿಗಳ ಅಡಿಯಲ್ಲಿ ದಾಖಲಾದ ಒಳರೋಗಿ ಆಸ್ಪತ್ರೆಯ ವೆಚ್ಚವನ್ನು ಮೂಲ ಪಾಲಿಸಿಯ ವಿಮಾ ಮೊತ್ತಕ್ಕೆ ಒಳಪಡಿಸಲಾಗುತ್ತದೆ.
ಮನೆಯಲ್ಲಿಯೇ ಚಿಕಿತ್ಸೆ
ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ಪರಿಸ್ಥಿತಿಗಳಿಗೆ ಮನೆಯಲ್ಲಿಯೇ ನೀಡಲಾಗುವ ಚಿಕಿತ್ಸೆಯ ವೆಚ್ಚಗಳನ್ನು ಪಾಲಿಸಿ ವರ್ಷದಲ್ಲಿ ಗರಿಷ್ಠ ರೂ. 5,00,000/- ಕ್ಕೆ ಒಳಪಟ್ಟು ಮೂಲ ಪಾಲಿಸಿಯ ವಿಮಾಮೊತ್ತದ 10% ವರೆಗೆ ಕವರ್ ಮಾಡಲಾಗುತ್ತದೆ.
ಬೋನಸ್ ಗಾರ್ಡ್
1) ಬೋನಸ್ ಅನ್ನು ಬಳಸದ ಹೊರತು ಮೂಲ ಪಾಲಿಸಿಯ ಅಡಿಯಲ್ಲಿ ನೀಡಲಾದ ಸಂಚಿತ ಬೋನಸ್ ಅನ್ನು ನವೀಕರಣದ ಸಮಯದಲ್ಲಿ ಕಡಿತಗೊಳಿಸಲಾಗುವುದಿಲ್ಲ.
2) ವಿಮಾ ಮೊತ್ತದ ಸಂಪೂರ್ಣ ಬಳಕೆ ಮತ್ತು ಸಂಚಿತ ಬೋನಸ್ನ ಶೂನ್ಯ ಬಳಕೆಯ ಮೇಲೆ, ನವೀಕರಣದ ಸಮಯದಲ್ಲಿ ಮೂಲ ಪಾಲಿಸಿಯ ಅಡಿಯಲ್ಲಿ ನೀಡಲಾದ ಸಂಚಿತ ಬೋನಸ್ ಅನ್ನು ಕಡಿತಗೊಳಿಸಲಾಗುವುದಿಲ್ಲ.
3) ವಿಮಾ ಮೊತ್ತದ ಸಂಪೂರ್ಣ ಬಳಕೆ ಮತ್ತು ಸಂಚಿತ ಬೋನಸ್ನ ಭಾಗಶಃ ಬಳಕೆಯ ಮೇಲೆ, ನವೀಕರಣದ ಸಮಯದಲ್ಲಿ ಮೂಲ ಪಾಲಿಸಿಯ ಅಡಿಯಲ್ಲಿ ನೀಡಲಾದ ಸಂಚಿತ ಬೋನಸ್ ಲಭ್ಯವಿರುವ ಸಂಚಿತ ಬೋನಸ್ ಆಗಿರುತ್ತದೆ.
4) ವಿಮಾಮೊತ್ತ ಮತ್ತು ಸಂಚಿತ ಬೋನಸ್ನ ಸಂಪೂರ್ಣ ಬಳಕೆಯ ಮೇಲೆ, ನವೀಕರಣದ ಮೂಲ ಪಾಲಿಸಿಯ ಅಡಿಯಲ್ಲಿ ನೀಡಲಾದ ಸಂಚಿತ ಬೋನಸ್ ಶೂನ್ಯವಾಗಿರುತ್ತದೆ.
ವಿಭಾಗ II
ಒಟ್ಟು ಕಡಿತಗೊಳಿಸಬಹುದಾದ ಆಯ್ಕೆಗಳು
ವಿಮಾದಾರರು ಪಾಲಿಸಿ ಷರತ್ತಿನಲ್ಲಿ ಪಟ್ಟಿಮಾಡಲಾದ ಯಾವುದೇ ಕಡಿತಗೊಳಿಸುವಿಕೆಯನ್ನು ಆಯ್ದುಕೊಂಡರೆ ಪ್ರೀಮಿಯಂನಲ್ಲಿ ರಿಯಾಯಿತಿ ಲಭ್ಯವಿರುತ್ತದೆ.
ಪಾಲಿಸಿ ವಿವರಗಳು ಹಾಗೂ ಕರಾರುಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ದಾಖಲೆಯನ್ನು ಓದಿ.
A. ವರ್ಧಿತ ಕೊಠಡಿ ಬಾಡಿಗೆ: ಕೊಠಡಿ, ಬೋರ್ಡಿಂಗ್, ಶುಶ್ರೂಷೆ ವೆಚ್ಚಗಳು ಎಲ್ಲವನ್ನೂ ಒಳಗೊಂಡಂತೆ ಆಸ್ಪತ್ರೆ/ನರ್ಸಿಂಗ್ ಹೋಮ್ ಒದಗಿಸಿದ ಮಿತಿಗಳನ್ನು ಈ ಕೆಳಗೆ ನೀಡಲಾಗಿದೆ:
ಲಕ್ಷದಲ್ಲಿ ವಿಮಾ ಮೊತ್ತ (ರೂ.)
10,00,000/- ಇಂದ 20,00,000/- (ಮೂಲ ಪಾಲಿಸಿಯ ಪ್ರಕಾರ)
20,00,000/- ಮೇಲ್ಪಟ್ಟು (ಮೂಲ ಪಾಲಿಸಿಯ ಪ್ರಕಾರ)
ಕೊಠಡಿ ಬಾಡಿಗೆ ಅರ್ಹತೆ
ಯಾವುದೇ ಕೊಠಡಿ (ಸೂಟ್ ರೂಮ್ ಮತ್ತು ಅದಕ್ಕಿಂತ ಮೇಲಿನ ವರ್ಗವನ್ನು ಹೊರತುಪಡಿಸಿ)
ಯಾವುದೇ ಕೊಠಡಿ
B. ಕ್ಲೈಮ್ ಗಾರ್ಡ್ (ವೈದ್ಯಕೀಯೇತರ ವಸ್ತುಗಳ ಕವರೇಜ್ಗಳು (ಉಪಯೋಗಿಬಲ್ಲವುಗಲು)): ಮೂಲ ಪಾಲಿಸಿಯ ಅಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್ ಇದ್ದರೆ, ಕೆಳಗಿನ ವಸ್ತುಗಳಿಗೆ ವೆಚ್ಚಗಳನ್ನು ಭರಿಸಲಾಗುತ್ತದೆ.
ಕ್ರಮ ಸಂಖ್ಯೆ
ವಸ್ತು
1
ಶಿಶುವಿನ ಆಹಾರ
2
ಶಿಶುವಿನ ಯುಟಿಲಿಟಿ ಶುಲ್ಕಗಳು
3
ಸೌಂದರ್ಯ ಸೇವೆಗಳು
4
ಬೆಲ್ಟ್ಗಳು/ಕಟ್ಟುಪಟ್ಟಿಗಳು
5
ಬಡ್ಗಳು
6
ಕೋಲ್ಡ್ ಪ್ಯಾಕ್/ಹಾಟ್ ಪ್ಯಾಕ್
7
ಕ್ಯಾರಿ ಬ್ಯಾಗ್ಗಳು
8
ಇಮೇಲ್/ಇಂಟರ್ನೆಟ್ ಚಾರ್ಜ್ಗಳು
9
ಆಹಾರ ಶುಲ್ಕಗಳು (ಆಸ್ಪತ್ರೆಯಲ್ಲಿ ನೀಡಲಾಗುವ ರೋಗಿಗಳ ಆಹಾರವನ್ನು ಹೊರತುಪಡಿಸಿ)
10
ಲೆಗ್ಗಿಂಗ್ಗಳು
11
ಲಾಂಡ್ರಿ ಶುಲ್ಕಗಳು
12
ಮಿನರಲ್ ವಾಟರ್
13
ಸ್ಯಾನಿಟರಿ ಪ್ಯಾಡ್
14
ದೂರವಾಣಿ ಶುಲ್ಕಗಳು
15
ಅತಿಥಿ ಸೇವೆಗಳು
16
ಕ್ರೆಪ್ ಬ್ಯಾಂಡೇಜ್
17
ಯಾವುದೇ ರೀತಿಯ ಡೈಪರ್
18
ಐಲೆಟ್ ಕಾಲರ್
19
ಸ್ಲಿಂಗ್ಗಳು
20
ರಕ್ತದ ಗುಂಪು ಮತ್ತು ದಾನಿಗಳ ಮಾದರಿಗಳ ಕ್ರಾಸ್ ಮ್ಯಾಚಿಂಗ್
21
ಶುಶ್ರೂಷೆ ಶುಲ್ಕಗಳನ್ನು ಸಹ ವಿಧಿಸಲಾಗುವ ಸೇವಾ ಶುಲ್ಕಗಳು
22
ಟಿವಿ ಶುಲ್ಕಗಳು
23
ಸರ್ಚಾರ್ಜ್ಗಳು
24
ಅಟೆಂಡೆಂಟ್ ಶುಲ್ಕಗಳು
25
ರೋಗಿಯ ಹೆಚ್ಚುವರಿ ಆಹಾರ (ಬೆಡ್ ಚಾರ್ಜ್ ಅನ್ನು ಹೊರತುಪಡಿಸಿ)
26
ಜನನ ಪ್ರಮಾಣ ಪತ್ರ
27
ಪ್ರಮಾಣ ಪತ್ರದ ಶುಲ್ಕಗಳು
28
ಕೋರಿಯರ್ ಶುಲ್ಕಗಳು
29
ಸಾಗಣೆ ಶುಲ್ಕಗಳು
30
ವೈದ್ಯಕೀಯ ಪ್ರಮಾಣಪತ್ರ
31
ವೈದ್ಯಕೀಯ ದಾಖಲೆಗಳು
32
ಫೋಟೋಕಾಪಿಗಳ ಶುಲ್ಕಗಳು
33
ಶವಾಗಾರ ಶುಲ್ಕಗಳು
34
ವಾಕಿಂಗ್ ಏಡ್ಸ್ ಶುಲ್ಕಗಳು
35
ಆಕ್ಸಿಜನ್ ಸಿಲಿಂಡರ್ (ಆಸ್ಪತ್ರೆಯ ಹೊರಗಿನ ಬಳಕೆಗೆ)
36
ಸ್ಪೇಸರ್
37
ಸ್ಪೈರೋಮೀಟರ್
38
ನೆಬುಲೈಸರ್ ಕಿಟ್
39
ಸ್ಟೀಮ್ ಇನ್ಹೇಲರ್
40
ಆರ್ಮ್ಸ್ಲಿಂಗ್
41
ಥರ್ಮಾಮೀಟರ್
42
ಸರ್ವಿಕಲ್ ಕಾಲರ್
43
ಸ್ಪಿಂಟ್
44
ಮಧುಮೇಹಿಗಳ ಚಪ್ಪಲಿ
45
ಮೊಣಕಾಲು ಕಟ್ಟುಪಟ್ಟಿಗಳು (ಉದ್ದ/ಚಿಕ್ಕ/ಕೀಲು)
46
ಮೊಣಕಾಲಿನ ಇಮ್ಮೊಬಿಲೈಸರ್ / ಭುಜದ ಇಮ್ಮೊಬಿಲೈಸರ್
47
ಲಂಬೋ ಸ್ಯಾಕ್ರಲ್ ಬೆಲ್ಟ್
48
ನಿಂಬಸ್ ಬೆಡ್ ಅಥವಾ ವಾಟರ್ ಅಥವಾ ಏರ್ ಬೆಡ್ ಶುಲ್ಕಗಳು
49
ಆ್ಯಂಬ್ಯುಲೆನ್ಸ್ ಕಾಲರ್
50
ಆ್ಯಂಬ್ಯುಲೆನ್ಸ್ ಸಲಕರಣೆ
51
ಕಿಬ್ಬೊಟ್ಟೆಯ ಬೈಂಡರ್
52
ಖಾಸಗಿ ನರ್ಸ್ಗಳ ಶುಲ್ಕಗಳು- ವಿಶೇಷ ಶುಶ್ರೂಷಾ ಶುಲ್ಕಗಳು
53
ಸಕ್ಕರೆ ರಹಿತ ಮಾತ್ರೆಗಳು
54
ಕ್ರೀಮ್ಗಳು ಪೌಡರ್ಗಳು ಲೋಷನ್ಗಳು (ಪ್ರಸಾದನಗಳನ್ನು ಪಾವತಿಸಲಾಗುವುದಿಲ್ಲ, ಶಿಫಾರಸು ಮಾಡಲಾದ ವೈದ್ಯಕೀಯ ಔಷಧಗಳನ್ನು ಮಾತ್ರ ಪಾವತಿಸಲಾಗುತ್ತದೆ)
55
ಇಸಿಜಿ ಎಲೆಕ್ಟ್ರೋಡ್ಗಳು
56
ಕೈಗವಸುಗಳು
57
ನೆಬ್ಯುಲೈಸೇಷನ್ ಕಿಟ್
58
ಯಾವುದೇ ವಿವರಣೆಯಿಲ್ಲದ ಕಿಟ್ (ಡೆಲಿವರಿ ಕಿಟ್, ಆರ್ಥೋಕಿಟ್, ರಿಕವರಿ ಕಿಟ್ ಇತ್ಯಾದಿ)
59
ಕಿಡ್ನಿ ಟ್ರೇ
60
ಮಾಸ್ಕ್
61
ಔನ್ಸ್ ಗ್ಲಾಸ್
62
ಆಕ್ಸಿಜನ್ ಮಾಸ್ಕ್
63
ಪೆಲ್ವಿಕ್ ಟ್ರ್ಯಾಕ್ಷನ್ ಬೆಲ್ಟ್
64
ಪ್ಯಾನ್ ಕ್ಯಾನ್
65
ಟ್ರಾಲಿ ಕವರ್
66
ಯೂರೋಮೀಟರ್, ಯೂರಿನ್ ಜಗ್
67
ಆ್ಯಂಬ್ಯುಲೆನ್ಸ್
68
ವಾಸೋಫಿಕ್ಸ್ ಸುರಕ್ಷತೆ
ಈ ಷರತ್ತಿನ ಅಡಿಯಲ್ಲಿ ಪಾವತಿಸಬೇಕಾದ ಮೊತ್ತವು ಮೂಲ ಪಾಲಿಸಿಯ ಅಡಿಯಲ್ಲಿ ವಿಮಾ ಮೊತ್ತದ ಭಾಗವಾಗಿರಬೇಕು ಮತ್ತು ಅದರ ಸೇರ್ಪಡೆಯಾಗಿರಬಾರದು.
C. ಆಧುನಿಕ ಚಿಕಿತ್ಸೆಗಳಿಗೆ ವರ್ಧಿತ ಮಿತಿ: ಉಪ-ಮಿತಿಗಳೊಂದಿಗೆ ಮೂಲ ಪಾಲಿಸಿಯ ಅಡಿಯಲ್ಲಿ ಒಳಗೊಂಡಿರುವ ಈ ಕೆಳಗಿನ ಕಾರ್ಯವಿಧಾನಗಳು ಮೂಲ ಪಾಲಿಸಿಯ ವಿಮಾ ಮೊತ್ತಕ್ಕೆ ಕವರ್ ಆಗುತ್ತವೆ.
1.ಗರ್ಭಾಶಯದ ನರ ಎಂಬೊಲೈಸೇಷನ್ ಮತ್ತು HIFU
2. ಬಲೂನ್ ಸಿನುಪ್ಲಾಸ್ಟಿ
3. ಆಳದ ಮೆದುಳು ಪ್ರಚೋದನೆ
4. ಓರಲ್ ಕಿಮೋಥೆರಪಿ
5. ಇಮ್ಯುನೋಥೆರಪಿ - ಇಂಜೆಕ್ಷನ್ ರೀತಿಯಲ್ಲಿ ನೀಡಬೇಕಾದ ಮೊನೊಕ್ಲಾನಲ್ ಪ್ರತಿಕಾಯ
6. ಇಂಟ್ರಾ ವಿಟ್ರಿಯಲ್ ಇಂಜೆಕ್ಷನ್ಗಳು
7. ರೊಬೊಟಿಕ್ ಶಸ್ತ್ರಚಿಕಿತ್ಸೆಗಳು
8. ಸ್ಟೀರಿಯೋಟಾಕ್ಟಿಕ್ ರೇಡಿಯೋ ಶಸ್ತ್ರಿಚಿಕಿತ್ಸೆಗಳು
9. ಶ್ವಾಸನಾಳದ ಥರ್ಮೋಪ್ಲಾಸ್ಟಿ
10. ಪ್ರಾಸ್ಟೇಟ್ ವೇಪರೈಸೇಷನ್ (ಹಸಿರು ಲೇಸರ್ ಚಿಕಿತ್ಸೆ ಅಥವಾ ಹೋಲ್ಮಿಯಂ ಲೇಸರ್ ಚಿಕಿತ್ಸೆ)
11. IONM - (ಇಂಟ್ರಾ ಆಪರೇಟಿವ್ ನ್ಯೂರೋ ಮಾನಿಟರಿಂಗ್)
12. ಸ್ಟೆಮ್ ಸೆಲ್ ಥೆರಪಿ: ಹೊಮಟೊಲಾಜಿಕಲ್ ಸ್ಥಿತಿಗಳಿಗೆ ಮೂಳೆ ಮಜ್ಜೆಯ ಕಸಿಗಾಗಿ ಮಾಡುವ ಹೆಮಟೊಪಯಟಿಕ್ ಸ್ಟೆಮ್ ಸೆಲ್ಗಳು
ಈ ಷರತ್ತಿನ ಅಡಿಯಲ್ಲಿ ಪಾವತಿಸಬೇಕಾದ ಮೊತ್ತವು ಮೂಲ ಪಾಲಿಸಿಯ ಅಡಿಯಲ್ಲಿ ವಿಮಾ ಮೊತ್ತದ ಭಾಗವಾಗಿರಬೇಕು ಮತ್ತು ಅದರ ಸೇರ್ಪಡೆಯಾಗಿರಬಾರದು.
D. ಆಯುಷ್ ಚಿಕಿತ್ಸೆಗಾಗಿ ವರ್ಧಿತ ಮಿತಿ: ಆಯುಷ್ ಆಸ್ಪತ್ರೆಯಲ್ಲಿ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಔಷಧಿಗಳ ಅಡಿಯಲ್ಲಿ ಚಿಕಿತ್ಸೆಗಾಗಿ ಒಳರೋಗಿ ಆಸ್ಪತ್ರೆ ದಾಖಲಾತಿ ವೈದ್ಯಕೀಯ ವೆಚ್ಚವನ್ನು ಮೂಲಪಾಲಿಸಿಯ ವಿಮಾ ಮೊತ್ತದವರೆಗೆ ಪಾವತಿಸಲಾಗುತ್ತದೆ.
ಗಮನಿಸಿ: ಆಯುಷ್ ಚಿಕಿತ್ಸೆಯ ಕವರೇಜ್ನ ವ್ಯಾಪ್ತಿಯು ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಳನ್ನು ಒಳಗೊಂಡಿಲ್ಲ. ಈ ಷರತ್ತಿನ ಅಡಿಯಲ್ಲಿ ಪಾವತಿಸಬೇಕಾದ ಮೊತ್ತವು ಮೂಲ ಪಾಲಿಸಿಯ ಅಡಿಯಲ್ಲಿ ವಿಮಾ ಮೊತ್ತದ ಭಾಗವಾಗಿರಬೇಕು ಮತ್ತು ಅದರ ಸೇರ್ಪಡೆಯಾಗಿರಬಾರದು.
E. ಮನೆಯಲ್ಲಿಯೇ ಚಿಕಿತ್ಸೆ: ವಿಮಾದಾರರು ಮನೆಯಲ್ಲಿ ಪಡೆಯುವ ಚಿಕಿತ್ಸೆಗಾಗಿ ಮೂಲ ಪಾಲಿಸಿಯ ವಿಮಾ ಮೊತ್ತದ 10% ವರೆಗೆ ಪಾವತಿಸಲಾಗುತ್ತದೆ, ಇದು ಒಂದು ಪಾಲಿಸಿ ವರ್ಷದಲ್ಲಿ ರೂ.5 ಲಕ್ಷದವರೆಗೆ ಒಳಪಟ್ಟಿರುತ್ತದೆ, ಕೆಳಗೆ ತಿಳಿಸಲಾದ ನಿರ್ದಿಷ್ಟ ಪರಿಸ್ಥಿತಿಗಳಿಗೆ ಮಾತ್ರ, ಸಾಮಾನ್ಯ ಕೋರ್ಸ್ನಲ್ಲಿ ಆಸ್ಪತ್ರೆಯಲ್ಲಿ ಆರೈಕೆಯ ಅಗತ್ಯವಿರುತ್ತದೆ ಆದರೆ ಅದನ್ನು ಮನೆಯಲ್ಲಿ ಒದಗಿಸಲಾಗುತ್ತದೆ:
ವೈದ್ಯರು ವಿಮಾದಾರರಿಗೆ ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳಲು ಸಲಹೆ ನೀಡುತ್ತಾರೆ
ಮನೆಯಲ್ಲಿಯೇ ಚಿಕಿತ್ಸೆ ನೀಡುವ ಅವಧಿಯಲ್ಲಿ ಪ್ರತಿದಿನವೂ ವೈದ್ಯರಿಂದ ಆರೋಗ್ಯ ಸ್ಥಿತಿಯ ನಿರಂತರ ಮೇಲ್ವಿಚಾರಣೆ ಮಾಡಲಾಗುತ್ತದೆ
ಚಿಕಿತ್ಸೆ ನೀಡುವ ವೈದ್ಯರಿಂದ ಸರಿಯಾಗಿ ಸಹಿ ಮಾಡಲಾದ ಚಿಕಿತ್ಸೆಯ ದಾಖಲೆಗಳನ್ನು ಒಳಗೊಂಡಂತೆ ದಿನನಿತ್ಯದ ಮಾನಿಟರಿಂಗ್ ಚಾರ್ಟ್ ಅನ್ನು ನಿರ್ವಹಿಸಲಾಗುತ್ತದೆ
ನಮ್ಮ ವೆಬ್ಸೈಟ್ನಲ್ಲಿ “www.starhealth.in” ನಲ್ಲಿ ನೀಡಲಾದ ನಮ್ಮ ನೆಟ್ವರ್ಕ್ ಸೇವಾ ಪೂರೈಕೆದಾರರಿಂದ ಪಡೆದರೆ, ವಿಮಾದಾರರು ನಗದು ರಹಿತ/ವೆಚ್ಚಭರಿಸುವಿಕೆ ಆಧಾರದ ಮೇಲೆ “ಮನೆಯಲ್ಲಿಯೇ ಚಿಕಿತ್ಸೆ” ಯನ್ನು ಪಡೆಯಬಹುದು
ಮನೆಯಲ್ಲಿಯೇ ಚಿಕಿತ್ಸೆ ಅಡಿಯಲ್ಲಿ ಒಳಗೊಂಡಿರುವ ಚಿಕಿತ್ಸೆಗಳು/ಪರಿಸ್ಥಿತಿಗಳು:
ಒಳರೋಗಿಯಾಗಿ ನಿರ್ವಹಿಸಬಹುದಾದ ಜ್ವರ ಮತ್ತು ಸಾಂಕ್ರಾಮಿಕ ರೋಗಗಳು
ಪ್ಯಾರೆನ್ಟೆರಲ್ ಆ್ಯಂಟಿಬಯೋಟಿಕ್ಗಳ ಅಗತ್ಯವಿರುವ ಆದರೆ ಕಠಿಣವಲ್ಲದ ಮೂತ್ರದ ಸೋಂಕುಗಳು
ಹೋಮ್ ನೆಬ್ಯುಲೈಸೇಷನ್ನ ಅಗತ್ಯವಿರುವ ಆಸ್ತಮಾ ಮತ್ತು ಸ್ವಲ್ಪ ಮಟ್ಟಿಗಿನ ಉಲ್ಭಣಗೊಂಡ COPD
ತೀವ್ರವಾದ ಜಠರದ ಉರಿತ/ಗ್ಯಾಸ್ಟ್ರೋಎಂಟರೈಟಿಸ್
I.V. ಕಿಮೋಥೆರಪಿ [ವೈದ್ಯರು ಸಲಹೆ ನೀಡಿದಲ್ಲಿ]
ವೈದ್ಯಕೀಯ ನೆರವಿನಿಂದ ಉಪಶಮನಗೊಳಿಸಬಹುದಾದ ಕ್ಯಾನ್ಸರ್ ಆರೈಕೆ
ತೀವ್ರವಾದ ತಲೆತಿರುವುವಿಕೆ (ವರ್ಟಿಗೋ)
ಮಧುಮೇಹದ ಕಾಲು ಮತ್ತು ಸೆಲ್ಯುಲೈಟಿಸ್
IVDP [ಗರ್ಭಕಂಠದ ಮತ್ತು ಸೊಂಟದ ಡಿಸ್ಕ್ ಕಾಯಿಲೆಗಳು]
ಪ್ರಮುಖ ಶಸ್ತ್ರಚಿಕಿತ್ಸೆಗಳು/ಆರ್ತ್ರೋಪ್ಲ್ಯಾಸ್ಟಿಗಳ ಪರಿಸ್ಥಿತಿಗಳಲ್ಲಿ ಡಿಸ್ಚಾರ್ಜ್ ನಂತರದ ಅಗತ್ಯವಿರುವ IV ಆ್ಯಂಟಿಬಯೋಟಿಕ್ಸ್
ಡಿಸ್ಚಾರ್ಜ್ ನಂತರ ಮೆದುಳು ಮತ್ತು ಬೆನ್ನುಮೂಳೆ ಗಾಯದ ಪ್ರಕರಣಗಳಿಗೆ ತೆಗೆದುಕೊಳ್ಳುವ ಆರೈಕೆ
ಡಿಸ್ಚಾರ್ಜ್ ಆದ ಮೇಲೆ ಮನೆಯಲ್ಲಿಯೇ ತೆಗೆದುಕೊಳ್ಳಲಾಗುವ ನಂತರದ CVA ಕೇರ್
ಈ ಷರತ್ತಿನ ಅಡಿಯಲ್ಲಿ ಪಾವತಿಸಬೇಕಾದ ಮೊತ್ತವು ಮೂಲ ಪಾಲಿಸಿಯ ಅಡಿಯಲ್ಲಿ ವಿಮಾ ಮೊತ್ತದ ಭಾಗವಾಗಿರಬೇಕು ಮತ್ತು ಅದರ ಸೇರ್ಪಡೆಯಾಗಿರಬಾರದು.
F. ಬೋನಸ್ ಗಾರ್ಡ್:
ಬೋನಸ್ ಅನ್ನು ಬಳಸದ ಹೊರತು ಮೂಲ ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ಸಂಚಿತ ಬೋನಸ್ ಅನ್ನು ನವೀಕರಣದ ಸಮಯದಲ್ಲಿ ಕಡಿತಗೊಳಿಸಲಾಗುವುದಿಲ್ಲ.
ವಿಮಾ ಮೊತ್ತದ ಸಂಪೂರ್ಣ ಬಳಕೆಯ ಮೇಲೆ ಮತ್ತು ಸಂಚಿತ ಬೋನಸ್ನ ಶೂನ್ಯ ಬಳಕೆಯ ಮೇಲೆ, ಮೂಲ ಪಾಲಿಸಿಯ ಅಡಿಯಲ್ಲಿ ನೀಡಲಾದ ಅಂತಹ ಸಂಚಿತ ಬೋನಸ್ ಅನ್ನು ಕಡಿತಗೊಳಿಸಲಾಗುವುದಿಲ್ಲ
ವಿಮಾ ಮೊತ್ತದ ಸಂಪೂರ್ಣ ಬಳಕೆ ಮತ್ತು ಸಂಚಿತ ಬೋನಸ್ನ ಭಾಗಶಃ ಬಳಕೆಯ ಮೇಲೆ, ನವೀಕರಣದ ಮೂಲ ಪಾಲಿಸಿಯ ಅಡಿಯಲ್ಲಿ ನೀಡಲಾದ ಸಂಚಿತ ಬೋನಸ್ ಲಭ್ಯವಿರುವ ಸಂಚಿತ ಬೋನಸ್ ಆಗಿರುತ್ತದೆ
ವಿಮಾ ಮೊತ್ತದ ಸಂಪೂರ್ಣ ಬಳಕೆ ಮತ್ತು ಸಂಚಿತ ಬೋನಸ್ನ ಸಂಪೂರ್ಣ ಬಳಕೆಯ ಮೇಲೆ, ನವೀಕರಣದ ಮೂಲ ಪಾಲಿಸಿಯ ಅಡಿಯಲ್ಲಿ ನೀಡಲಾಗುವ ಸಂಚಿತ ಬೋನಸ್ “ಶೂನ್ಯ” ಆಗಿರುತ್ತದೆ
ವಿಭಾಗಕ್ಕೆ ಪ್ರೀಮಿಯಂ ವಿವರಗಳು-I
ಉತ್ಪನ್ನದ ಹೆಸರು
ಕುಟುಂಬ ಆರೋಗ್ಯ ಆಪ್ಟಿಮಾ ವಿಮಾ ಯೋಜನೆ
ಮೆಡಿ ಕ್ಲಾಸಿಕ್ ವಿಮಾ ಪಾಲಿಸಿ (ವೈಯಕ್ತಿಕ)
ಸ್ಟಾರ್ ಸಮಗ್ರ ವಿಮಾ ಪಾಲಿಸಿ
ಬೇಸ್ ಪಾಲಿಸಿ ಪ್ರೀಮಿಯಂನಲ್ಲಿ ಶೇ
15%
15%
15%
ವಿಭಾಗ - II
A. ಒಟ್ಟು ಕಡಿತಗೊಳಿಸಬಹುದಾದ ಆಯ್ಕೆ: ವಿಮಾದಾರರು ಈ ಕೆಳಗಿನ ಯಾವದೇ ಕಡಿತಗಳನ್ನು ಆಯ್ದುಕೊಂಡರೆ, ಕಂಪನಿಯು ಪ್ರೀಮಿಯಂನಲ್ಲಿ ರಿಯಾಯಿತಿಯನ್ನು ನೀಡುತ್ತದೆ.
ವಿಮಾಮೊತ್ತ (ಲಕ್ಷಗಳಲ್ಲಿ ರೂ.)
ಒಟ್ಟು ಕಡಿತಗೊಳಿಸಬಹುದಾದ ಆಯ್ಕೆಗಳು(ರೂ.)
ಪ್ರೀಮಿಯಂನಲ್ಲಿ ರಿಯಾಯಿತಿ ನೀಡಲಾಗುತ್ತದೆ
ಫ್ಯಾಮಿಲಿ ಹೆಲ್ತ್ ಆಪ್ಟಿಮಾ ಇನ್ಶೂರೆನ್ಸ್ ಪ್ಲ್ಯಾನ್
ಮೆಡಿಕ್ಲಾಸಿಕ್ ಇನ್ಶೂರೆನ್ಸ್ ಪಾಲಿಸಿ (ವೈದ್ಯಕೀಯ)
ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ
10,00,000/- to 20,00,000/-
25,000
15%
15%
15%
50,000
20%
20%
20%
1,00,000
30%
30%
30%
20,00,000/- ಮೇಲ್ಪಟ್ಟು
25,000
12%
12%
12%
50,000
18%
18%
18%
1,00,000
25%
25%
25%
ಸ್ವೀಕಾರಾರ್ಹ ಕ್ಲೈಮ್/ಗಳು ಒಟ್ಟು ಕಡಿತಗೊಳಿಸಬಹುದಾದ ಮಿತಿಯನ್ನು ಮೀರಿದರೆ ಮಾತ್ರ ಕಂಪನಿಯು ಮೂಲ ಪಾಲಿಸಿಯ ಅಡಿಯಲ್ಲಿ ಜವಾಬ್ದಾರರಾಗಿರುತ್ತಾರೆ.
B. ಸಾಮಾನ್ಯ ಷರತ್ತುಗಳು (ವಿಭಾಗ I ಮತ್ತು ವಿಭಾಗ II ಎರಡಕ್ಕೂ ಅನ್ವಯಿಸುತ್ತದೆ):
ಆ್ಯಡ್ ಆನ್ ಕವರ್ ಅನ್ನು ಮೂಲ ಪಾಲಿಸಿಯೊಂದಿಗೆ ಮಾತ್ರ (ರೂ.10,00,000/- ಮತ್ತು ಅದಕ್ಕಿಂತ ಹೆಚ್ಚಿನ ವಿಮಾ ಮೊತ್ತದೊಂದಿಗೆ) ಆರಂಭದಲ್ಲಿ ಅಥವಾ ಮೂಲ ಪಾಲಿಸಿಯ ನವೀಕರಣದ ಸಮಯದಲ್ಲಿ ಖರೀದಿಸಬಹುದು.
ಮೂಲ ಪಾಲಿಸಿಯ ಪಟ್ಟಿಯಲ್ಲಿ ನಿರ್ದಿಷ್ಟವಾಗಿ ನಮೂದಿಸಿದ್ದರೆ ಮಾತ್ರ ಆ್ಯಡ್ ಆನ್ ಕವರ್ ಲಭ್ಯವಿರುತ್ತದೆ.
ಈ ಆ್ಯಡ್ ಆನ್ ಕವರ್ ಅಡಿಯಲ್ಲಿ ಯಾವುದೇ ಕ್ಲೈಮ್ ಮೂಲ ಪಾಲಿಸಿಯ ಅಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್ಗೆ ಒಳಪಟ್ಟಿರುತ್ತದೆ.
ಆ್ಯಡ್ ಆನ್ ಕವರ್ನಲ್ಲಿ (ವಿಭಾಗ I ಪ್ರಯೋಜನಗಳು) ಉಲ್ಲೇಖಿಸಲಾದ ಪ್ರಯೋಜನಗಳು ಮೂಲ ಪಾಲಿಸಿಯಲ್ಲಿ ಈಗಾಗಲೇ ಲಭ್ಯವಿದ್ದರೆ, ಆ್ಯಡ್ ಆನ್ ಕವರ್ ಪ್ರಯೋಜನಗಳು ಅಸ್ತಿತ್ವದಲ್ಲಿರುವ ಪ್ರಯೋಜನಗಳನ್ನು ರದ್ದುಗೊಳಿಸುತ್ತವೆ.
ಆ್ಯಡ್ ಆನ್ ಕವರ್ ಅಡಿಯಲ್ಲಿರುವ ಮಿತಿಗಳು ಮೂಲ ಪಾಲಿಸಿಯ ಅಡಿಯಲ್ಲಿರುವ ಮಿತಿಗಳಿಗೆ ಹೆಚ್ಚುವರಿಯಾಗಬಾರದು.
ಆ್ಯಡ್ ಆನ್ ಕವರ್ನಲ್ಲಿ ಉಲ್ಲೇಖಿಸಲಾದ ಪ್ರಯೋಜನಗಳು ಮೂಲ ಪಾಲಿಸಿಯಲ್ಲಿ ಲಭ್ಯವಿರದಿದ್ದರೆ, ಆ್ಯಡ್ ಆನ್ ಕವರ್ ಪ್ರಯೋಜನಗಳನ್ನು ಮೂಲ ಪಾಲಿಸಿಯ ಅಸ್ತಿತ್ವದಲ್ಲಿರುವ ಪ್ರಯೋಜನಗಳಿಗೆ ಸೇರಿಸಲಾಗುತ್ತದೆ.
ನವೀಕರಣದ ಸಮಯದಲ್ಲಿ, ವಿಮಾದಾರರು ಮೂಲ ಪಾಲಿಸಿಯ ಮೊತ್ತವನ್ನು ರೂ.10,00,000/- ಕ್ಕಿಂತ ಕಡಿಮೆಗೊಳಿಸಿದರೆ, ಆ್ಯಡ್ ಆನ್ ಕವರ್ ಲಭ್ಯವಿರುವುದಿಲ್ಲ.
ಒಂದು ವೇಳೆ ವಿಮಾದಾರರು ಅಸ್ತಿತ್ವದಲ್ಲಿರುವ ಮೂಲ ಪಾಲಿಸಿಯಿಂದ ಕಂಪನಿಯ ನೀಡುವ ಇತರ ಉತ್ಪನ್ನವನ್ನು ಆಯ್ದುಕೊಂಡರೆ, ಆ್ಯಡ್ ಆನ್ ಕವರ್ ಅನ್ನು ಒದಗಿಸುವುದು ನಂತರ ಆಯ್ದುಕೊಂಡ ಉತ್ಪನ್ನದಲ್ಲಿನ ಆ್ಯಡ್ ಆನ್ ಕವರ್ನ ಲಭ್ಯತೆಗೆ ಒಳಪಟ್ಟಿರುತ್ತದೆ.
ಆ್ಯಡ್ ಆನ್ ಕವರ್ನಲ್ಲಿನ ವಿಭಾಗ I ಅನ್ನು ಆಯ್ಕೆ ಮಾಡಿದರೆ, ವಿಮಾ ಮೊತ್ತವು ರೂ.10,00,000/- ಮತ್ತು ಅದಕ್ಕಿಂತ ಹೆಚ್ಚಿನದಾಗಿದ್ದರೆ, ನವೀಕರಣದ ಸಮಯದಲ್ಲಿ ವಿಮಾದಾರರು ಅದೇ ಆಯ್ಕೆಯನ್ನು ಮಾಡಲು ಸಾಧ್ಯವಿಲ್ಲ.
ಮುಕ್ತ ಲುಕ್ ಅವಧಿ
ಮುಕ್ತ ಲುಕ್ ಅವಧಿಯು ಹೊಸ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಅನ್ವಯಿಸುತ್ತದೆ ಮತ್ತು ನವೀಕರಣಗಳು ಅಥವಾ ಪಾಲಿಸಿಯನ್ನು ಪೋರ್ಟ್ ಮಾಡುವ/ವಲಸೆ ಮಾಡುವ ಸಮಯದಲ್ಲಿ ಅಲ್ಲ. ಪಾಲಿಸಿಯ ಕರಾರುಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ಮತ್ತು ಸ್ವೀಕಾರಾರ್ಹವಲ್ಲದಿದ್ದಲ್ಲಿ ಅದನ್ನು ಹಿಂತಿರುಗಿಸಲು ಪಾಲಿಸಿ ದಾಖಲೆಯನ್ನು ಸ್ವೀಕರಿಸಿದ ದಿನಾಂಕದಿಂದ ಹದಿನೈದು ದಿನಗಳ ಮುಕ್ತ ಲುಕ್ ಅವಧಿಯನ್ನು ವಿಮಾದಾರರಿಗೆ ನೀಡಲಾಗುತ್ತದೆ.
ಮುಕ್ತ ಲುಕ್ ಅವಧಿಯಲ್ಲಿ ವಿಮಾದಾರರು ಯಾವುದೇ ಕ್ಲೈಮ್ ಮಾಡದಿದ್ದಲ್ಲಿ, ವಿಮಾದಾರರು ಈ ಕೆಳಗಿನವುಗಳಿಗೆ ಅರ್ಹರಾಗುತ್ತಾರೆ.
1. ವಿಮಾದಾರರ ವೈದ್ಯಕೀಯ ಪರೀಕ್ಷೆ ಮತ್ತು ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳು ಅಥವಾ ಕಂಪನಿಯು ಮಾಡಿದ ಯಾವುದೇ ವೆಚ್ಚಗಳನ್ನು ಕಡಿಮೆ ಪಾವತಿಸಿದ ಪ್ರೀಮಿಯಂನ ಮರುಪಾವತಿ ಅಥವಾ
2. ಅಪಾಯವು ಈಗಾಗಲೇ ಪ್ರಾರಂಭವಾಗಿದ್ದರೆ ಮತ್ತು ವಿಮಾದಾರರು ಪಾಲಿಸಿಯ ವಾಪಸಾತಿಯನ್ನು ಬಯಸಿದರೆ, ಕವರ್ ಅವಧಿಗೆ ಅನುಪಾತದ ಅಪಾಯದ ಪ್ರೀಮಿಯಂಗೆ ಕಡಿತ ಅಥವಾ
3. ವಿಮಾ ರಕ್ಷಣೆಯ ಕೇವಲ ಒಂದು ಭಾಗ ಮಾತ್ರ ಆರಂಭವಾಗಿದ್ದರೆ, ಅಂತಹ ಸಮಯದ ವಿಮಾರಕ್ಷಣೆಗೆ ಅನುಗುಣವಾಗಿ ಅನುಪಾತದ ಪ್ರೀಮಿಯಂ.
ಸ್ಟಾರ್ ಹೆಲ್ತ್
ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಏಕೆ ನಮ್ಮ ಆಯ್ಕೆಯಾಗಿರಬೇಕು?
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್ಮೆಂಟ್ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್ವರ್ಕ್ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.
ಸ್ವಾಸ್ಥ್ಯ ಕಾರ್ಯಕ್ರಮ
ನಮ್ಮ ಸ್ವಾಸ್ಥ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತ್ತು ಆರೋಗ್ಯಕರವಾಗಿರುವುದಕ್ಕಾಗಿ ರಿವಾರ್ಡ್ಗಳನ್ನು ಗಳಿಸಿ. ನವೀಕರಣ ಡಿಸ್ಕೌಂಟ್ಗಳನ್ನು ಪಡೆಯಲು ಆ ರಿವಾರ್ಡ್ಗಳನ್ನು ರಿಡೀಮ್ ಮಾಡಿಕೊಳ್ಳಿ.
ಡಯಾಗ್ನೋಸ್ಟಿಕ್ ಕೇಂದ್ರಗಳು
ಮನೆಯಿಂದಲೇ ಲ್ಯಾಬ್ ಸ್ಯಾಂಪಲ್ಗಳ ಪಿಕಪ್ ಮತ್ತು ಮನೆ ಬಾಗಿಲಿಗೆ ಆರೋಗ್ಯ ತಪಾಸಣೆಯೊಂದಿಗೆ ಭಾರತದಾದ್ಯಂತ 1,635 ಡಯಾಗ್ನೋಸ್ಟಿಕ್ ಕೇಂದ್ರಗಳಿಗೆ ಪ್ರವೇಶ ಪಡೆಯಿರಿ.
ಇ-ಫಾರ್ಮಸಿ
ರಿಯಾಯಿತಿ ದರದಲ್ಲಿ ಔಷಧಗಳನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿ. 2780 ನಗರಗಳಲ್ಲಿ ಹೋಮ್ ಡೆಲಿವರಿ ಮತ್ತು ಸ್ಟೋರ್ ಪಿಕಪ್ಗಳು ಲಭ್ಯವಿದೆ.
24*7 ಗ್ರಾಹಕ ಸೇವೆ
ಕ್ಲೈಮ್ ಮಾಹಿತಿ, ಟೆಲಿಹೆಲ್ತ್ ಸೇವೆಗಳು ಮತ್ತು ನಿಮ್ಮ ಪ್ರಶ್ನೆಗಳಿಗೆ ಪರಿಹಾರಕ್ಕಾಗಿ 1800-425-2255 ಗೆ ನಮಗೆ ಕರೆ ಮಾಡಿ.
ಇನ್-ಹೌಸ್ ಕ್ಲೈಮ್ ಸೆಟಲ್ಮೆಂಟ್
ನಾವು TPA ಇಲ್ಲದೆಯೇ ಅರ್ಹ ಇನ್-ಹೌಸ್ ತಂಡದೊಂದಿಗೆ ಕ್ಲೈಮ್ಗಳನ್ನು ಸೆಟಲ್ ಮಾಡುವ ಪ್ರಪ್ರಥಮ ಸ್ವತಂತ್ರ ಹೆಲ್ತ್ ಇನ್ಶೂರೆನ್ಸ್ ಕಂಪನಿಯಾಗಿದ್ದೇವೆ.
ಕ್ಲೈಮ್ ಸೆಟಲ್ಮೆಂಟ್
ನಮ್ಮ ಕ್ಯಾಶ್ಲೆಸ್ಗೆ ಸಂಬಂಧಿಸಿದ 90% ಕ್ಲೈಮ್ಗಳನ್ನು 2 ಗಂಟೆಗಳೊಳಗೆ ಸೆಟಲ್ ಮಾಡಲಾಗುತ್ತದೆ ಮತ್ತು ವೆಚ್ಚ ಭರಿಸುವಿಕೆಗೆ ಸಂಬಂಧಿಸಿದ 92% ಕ್ಲೈಮ್ಗಳನ್ನು 7 ದಿನಗಳೊಳಗೆ ಸೆಟಲ್ ಮಾಡಲಾಗುತ್ತದೆ.
ಆಸ್ಪತ್ರೆಗಳು
ಗುಣಮಟ್ಟದ ಚಿಕಿತ್ಸೆಗಾಗಿ ನಮ್ಮ ಮೌಲ್ಯಯುತ ಸೇವಾದಾತರು, ಒಪ್ಪಿಕೊಂಡ ನೆಟ್ವರ್ಕ್ ಮತ್ತು ನೆಟ್ವರ್ಕ್ ಆಸ್ಪತ್ರೆಗಳ ಅಡಿಯಲ್ಲಿ ನಾವು ನಿಮ್ಮನ್ನು ಕವರ್ ಮಾಡುತ್ತೇವೆ.
ಪ್ರಶಸ್ತಿಗಳು
ನಮ್ಮ ನವೀನ ಪ್ರಾಡಕ್ಟ್, ಅತ್ಯುತ್ತಮ ಕ್ಲೈಮ್ ಸೆಟಲ್ಮೆಂಟ್ ಮತ್ತು ಅತ್ಯುತ್ತಮ ಸೇವಾದಾತರಿಗೆ ಹೆಸರಾಂತ ಸಮೀಕ್ಷೆ ಸಂಸ್ಥೆಗಳಿಂದ ಪ್ರಶಸ್ತಿ ಲಭಿಸಿದೆ.
ನೆಟ್ವರ್ಕ್ ಆಸ್ಪತ್ರೆಗಳು
ಸ್ಟಾರ್ ಹೆಲ್ತ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳು ತಡೆರಹಿತ ಕ್ಯಾಶ್ಲೆಸ್ ಸೌಲಭ್ಯಗಳನ್ನು ಒದಗಿಸುತ್ತವೆ. ಅನುಮೋದನೆ ಪ್ರಕ್ರಿಯೆಯು ತ್ವರಿತ ಮತ್ತು ಆರಾಮದಾಯಕವಾಗಿದೆ.
ಒಪ್ಪಿಕೊಂಡ ನೆಟ್ವರ್ಕ್ ಆಸ್ಪತ್ರೆಗಳು
ಶಸ್ತ್ರಚಿಕಿತ್ಸಾ ಮತ್ತು ವೈದ್ಯಕೀಯ ಕಾರ್ಯವಿಧಾನಗಳಿಗೆ ಮಿತವ್ಯಯಿ ಪ್ಯಾಕೇಜ್ ದರಗಳನ್ನು ಒದಗಿಸಲು ಸ್ಟಾರ್ ಹೆಲ್ತ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳು.
ಮೌಲ್ಯಯುತ ಸೇವಾದಾತರು
ಈ ಆಸ್ಪತ್ರೆಗಳನ್ನು ಸ್ಟಾರ್ ಹೆಲ್ತ್ ಗುರುತಿಸುತ್ತದೆ ಮತ್ತು ಅವರ ಪ್ರಯತ್ನಗಳು, ಸೇವೆಗಳು ಮತ್ತು ಗುಣಮಟ್ಟಕ್ಕಾಗಿ ವಿಶೇಷ ಮನ್ನಣೆ ನೀಡಲಾಗುತ್ತದೆ.
ನೆಟ್ವರ್ಕ್ ಹೊರತಾದ ಆಸ್ಪತ್ರೆಗಳು
ನೆಟ್ವರ್ಕ್ ಹೊರತಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳನ್ನು ಪಡೆಯಲು (ಸ್ಟಾರ್ ಹೆಲ್ತ್ನೊಂದಿಗೆ ಒಪ್ಪಂದ ಮಾಡಿಕೊಳ್ಳದ), ನೀವು ವೆಚ್ಚ ಭರಿಸುವಿಕೆ ಕ್ಲೈಮ್ಗಳನ್ನು ಪಡೆಯಬಹುದಾಗಿದೆ.
ಹೊರಗಿಡಲಾದ ಸೇವಾದಾತರು
ಕ್ಲೈಮ್ಗಳು ಸ್ವೀಕಾರಾರ್ಹವಲ್ಲದ ಆಸ್ಪತ್ರೆಗಳು. ಆದರೆ ಮಾರಣಾಂತಿಕ ಪರಿಸ್ಥಿತಿ/ಅಪಘಾತದ ಖರ್ಚುಗಳನ್ನು ಸ್ಥಿರೀಕರಣದವರೆಗೆ ಕವರ್ ಮಾಡಲಾಗುತ್ತದೆ.
ಬೇರೆ ಏನನ್ನಾದರೂ ಹುಡುಕುತ್ತಿದ್ದೀರಾ?
ಪ್ರಾರಂಭಿಸಿ
ಅತ್ಯುತ್ತಮವಾದುದರ ಖಾತರಿ ಹೊಂದಿರಿ
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.
ಹೆಚ್ಚಿನ ಮಾಹಿತಿ ಬೇಕೆ?
ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?
Disclaimer: Health Insurance Coverage for pre-existing medical conditions is subject to underwriting review and may involve additional requirements, loadings, or exclusions. Please disclose your medical history in the proposal form for a personalised assessment. The information provided on this page is for general informational purposes only. Availability and terms of health insurance plans may vary based on geographic location and other factors. Consult a licensed insurance agent or professional for specific advice. T&C Apply. For further detailed information or inquiries, feel free to reach out via email at marketing.d2c@starhealth.in