ಮಾಹಿತಿ | ಗೋಲ್ಡ್ ಪ್ಲ್ಯಾನ್ | ಸಿಲ್ವರ್ ಪ್ಲ್ಯಾನ್ |
---|---|---|
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ. | ||
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಯ ಜೊತೆಗೆ, ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕದ 30 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ. | ||
ಆಸ್ಪತ್ರೆಗೆ ದಾಖಲಾಗುವಿಕೆ ನಂತರಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನಾಂಕದಿಂದ 60 ದಿನಗಳ ವರೆಗೆ ಆಸ್ಪತ್ರೆಗೆ ದಾಖಲಾದ ನಂತರದ ವೈದ್ಯಕೀಯ ವೆಚ್ಚಗಳನ್ನು ಆಸ್ಪತ್ರೆ ದಾಖಲಾತಿ ವೆಚ್ಚದ 7% ವರೆಗೆ, ಪ್ರತಿ ಆಸ್ಪತ್ರೆಗೆ ಗರಿಷ್ಠ ರೂ. 5000/- ವರೆಗೆ ಒಳಗೊಂಡಿರುತ್ತದೆ. | ||
ಕೊಠಡಿ ಬಾಡಿಗೆಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಸಮಯದಲ್ಲಿ ಕೊಠಡಿ, ಬೋರ್ಡಿಂಗ್ ಮತ್ತು ಶುಶ್ರೂಷೆ ಖರ್ಚುಗಳನ್ನು ವಿಮಾಮೊತ್ತದ 2% ಕ್ಕೆ ಒಳಪಟ್ಟು ಪ್ರತಿದಿನಕ್ಕೆ ಗರಿಷ್ಠ ರೂ.5000/- ರಂತೆ ಕವರ್ ಮಾಡುತ್ತದೆ. | ||
ರೋಡ್ ಆ್ಯಂಬ್ಯುಲೆನ್ಸ್ಖಾಸಗಿ ಆಂಬ್ಯುಲೆನ್ಸ್ ಸೇರಿದಂತೆ ವಿಮೆದಾರರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಉಂಟಾಗುವ ಆಂಬ್ಯುಲೆನ್ಸ್ ಶುಲ್ಕಗಳನ್ನು ಪ್ರತಿ ಆಸ್ಪತ್ರೆಗೆ ದಾಖಲಾಗುವಿಕೆಗೆ ರೂ. 750/- ಮತ್ತು ಪ್ರತಿ ಪಾಲಿಸಿ ಅವಧಿಗೆ ರೂ. 1500/- ರಂತೆ ಕವರ್ ಮಾಡಲಾಗುತ್ತದೆ. | ||
ಡೇ ಕೇರ್ ಕಾರ್ಯವಿಧಾನಗಳುತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿವರೆಗೆ ಆಸ್ಪತ್ರೆಗೆ ದಾಖಲಾಗುವಿಕೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಕವರ್ ಮಾಡುತ್ತದೆ. | ||
ಆಧುನಿಕ ಚಿಕಿತ್ಸೆಮೌಖಿಕ ಕಿಮೊಥೆರಪಿ, ಇಂಟ್ರಾ ವಿಟ್ರೆಲ್ ಇಂಜೆಕ್ಷನ್‌ಗಳು, ರೋಬೋಟಿಕ್ ಸರ್ಜರಿಗಳು ಮುಂತಾದ ಆಧುನಿಕ ಚಿಕಿತ್ಸೆಗಳಿಗೆ ತಗಲುವ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡುತ್ತದೆ. | ||
ಕಣ್ಣಿನ ಪೊರೆ ಚಿಕಿತ್ಸೆಕಣ್ಣಿನ ಪೊರೆ ಚಿಕಿತ್ಸೆಗಾಗಿ ತಗಲುವ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ನಮೂದಿಸಲಾದ ಮಿತಿಗಳವರೆಗೆ ಪಾವತಿಸಲಾಗುತ್ತದೆ. | ||
ಸಹ-ಪಾವತಿವಿಮೆದಾರರು 61 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಪಾಲಿಸಿಯನ್ನು ಖರೀದಿಸಿದರೆ ಅಥವಾ ನವೀಕರಿಸಿದರೆ, ಅವನು/ಅವಳು ಪ್ರತಿ ಕ್ಲೈಮ್ ಮೊತ್ತಕ್ಕೆ 10% ರಷ್ಟು ಸಹ-ಪಾವತಿಗೆ ಒಳಪಟ್ಟಿರುತ್ತಾರೆ. |
ಹೃದ್ರೋಗ ಕಾಯಿಲೆಗಳು (ಶಸ್ತ್ರಚಿಕಿತ್ಸೆ/ಕಾರ್ಯ ನಿರ್ವಹಣೆ, ವೈದ್ಯಕೀಯ ನಿರ್ವಹಣೆ)ಈ ಪಾಲಿಸಿಯ ಗೋಲ್ಡ್ ಪ್ಲಾನ್ ಅಡಿಯಲ್ಲಿ ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಅಗತ್ಯವಿರುವ ಹೃದಯ ಸಂಬಂಧಿತ ತೊಡಕುಗಳ ಜೊತೆಗೆ ವಿಭಾಗ I ರಲ್ಲಿ ಉಲ್ಲೇಖಿಸಲಾದ ಎಲ್ಲಾ ಫೀಚರ್‌ಗಳನ್ನು ಕವರ್ ಮಾಡುತ್ತದೆ. |
ಹೃದ್ರೋಗ ಕಾಯಿಲೆಗಳು (ಕೇವಲ ಶಸ್ತ್ರಚಿಕಿತ್ಸೆ/ಕಾರ್ಯ ನಿರ್ವಹಣೆ)ಈ ಪಾಲಿಸಿಯ ಸಿಲ್ವರ್ ಪ್ಲಾನ್ ಅಡಿಯಲ್ಲಿ ಶಸ್ತ್ರಚಿಕಿತ್ಸೆ ಅಥವಾ ಕಾರ್ಯ ಅಗತ್ಯವಿರುವ ಹೃದಯ ಸಂಬಂಧಿತ ತೊಡಕುಗಳ ಜೊತೆಗೆ ವಿಭಾಗ I ನಲ್ಲಿ ತಿಳಿಸಲಾದ ಎಲ್ಲಾ ಫೀಚರ್‌ಗಳನ್ನು ಕವರ್ ಮಾಡುತ್ತದೆ. |
ಗೋಲ್ಡ್ ಪ್ಲ್ಯಾನ್ | ಸಿಲ್ವರ್ ಪ್ಲ್ಯಾನ್ | |
---|---|---|
ಹೊರರೋಗಿಗಳ ಖರ್ಚುಗಳುಭಾರತದಲ್ಲಿನ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಸೂಕ್ತವಾಗಿ ಮತ್ತು ಅಗತ್ಯವಾಗಿ ಹೊರರೋಗಿ ಖರ್ಚುಗಳನ್ನು ಪ್ರತಿ ಪಾಲಿಸಿ ಅವಧಿಗೆ ಗರಿಷ್ಠ ರೂ. 1500/- ಗೆ ಒಳಪಟ್ಟು ಪ್ರತಿ ಈವೆಂಟ್‌ಗೆ ರೂ. 500/- ರಂತೆ ಕವರ್ ಮಾಡುತ್ತದೆ. |
ಗೋಲ್ಡ್ ಪ್ಲ್ಯಾನ್ | ಸಿಲ್ವರ್ ಪ್ಲ್ಯಾನ್ | |
---|---|---|
ವೈಯಕ್ತಿಕ ಅಪಘಾತ ಕವರ್ಪಾಲಿಸಿಯ ಅವಧಿಯಲ್ಲಿ ಅಪಘಾತಗಳಿಂದಾಗಿ ವಿಮೆದಾರರ ದುರದೃಷ್ಟಕರ ಮರಣದ ಸಂದರ್ಭದಲ್ಲಿ ವಿಶ್ವವ್ಯಾಪಿ ವೈಯಕ್ತಿಕ ಅಪಘಾತ ಕವರ್ ಅನ್ನು ಒದಗಿಸಲಾಗುತ್ತದೆ. |
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.
ನಿಮ್ಮ ಸಮಯ ಮತ್ತು ಹಣವನ್ನು ಉಳಿಸಲು ಮತ್ತು ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಕಂಡುಕೊಳ್ಳಲು ತುಂಬಾ ಕಷ್ಟಕರವಾಗಿಸುವ ತೊಂದರೆಗಳನ್ನು ತೊಡೆದುಹಾಕಲು ನಾವು ಬದ್ಧರಾಗಿದ್ದೇವೆ.
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.
ಭಾರತದಲ್ಲಿ ಹೃದ್ರೋಗಗಳು ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಹೃದ್ರೋಗಗಳ ಚಿಕಿತ್ಸೆ ದುಬಾರಿಯಾಗಿವೆ. ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಮತ್ತು ಆರೋಗ್ಯ ವ್ಯವಸ್ಥೆಯ ಹೆಚ್ಚುತ್ತಿರುವ ಖರ್ಚುಗಳು ಹೃದ್ರೋಗಗಳಿಗೆ ಸಂಬಂಧಿಸಿದ ಹೆಲ್ತ್ ಇನ್ಶೂರೆನ್ಸ್‌ನ ಪ್ರಾಮುಖ್ಯತೆಯನ್ನು ಅರ್ಥಮಾಡಿಸಿವೆ. ಆದ್ದರಿಂದ ಹೃದ್ರೋಗಗಳ ಅಪಾಯದಿಂದ ಆರ್ಥಿಕವಾಗಿ ನಿಮ್ಮನ್ನು ರಕ್ಷಿಸುವ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಹೊಂದಿರುವುದು ಅತ್ಯಗತ್ಯವಾಗಿದೆ. ಈ ಉದ್ದೇಶಕ್ಕಾಗಿ, ಸ್ಟಾರ್ ಹೆಲ್ತ್ ಸ್ಟಾರ್ ಕಾರ್ಡಿಯಾಕ್ ಕೇರ್ ಇನ್ಶೂರೆನ್ಸ್ ಪಾಲಿಸಿಯನ್ನು ಪ್ರಸ್ತುತಪಡಿಸಿದೆ, ಇದು ಹೃದಯ ಶಸ್ತ್ರಚಿಕಿತ್ಸೆ, ಬೈಪಾಸ್ ಅಥವಾ ಸ್ಟೆಂಟಿಂಗ್ ಕಾರ್ಯವಿಧಾನಗಳಿಗೆ ಒಳಗಾದ ವ್ಯಕ್ತಿಗಳಿಗಾಗಿ ವಿನ್ಯಾಸಗೊಳಿಸಲಾದ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಆಗಿದೆ.
ಕಾರ್ಡಿಯಾಕ್ ಕೇರ್ ಇನ್ಶೂರೆನ್ಸ್ ಹೃದ್ರೋಗ ಮತ್ತು ಹೃದ್ರೋಗೇತರ ಚಿಕಿತ್ಸೆಗಳಿಗೆ ಸಂಪೂರ್ಣ ಕವರ್ ಅನ್ನು ಒದಗಿಸುವ ಇನ್ಶೂರೆನ್ಸ್ ಕ್ಷೇತ್ರದಲ್ಲಿ ಲಭ್ಯವಿರುವ ಪಾಲಿಸಿಗಳಲ್ಲಿ ಒಂದಾಗಿದೆ. ಇದು ಹೃದ್ರೋಗಿಗಳಿಗೆ ಹೆಲ್ತ್ ಇನ್ಶೂರೆನ್ಸ್ ಅನ್ನು ಒದಗಿಸುತ್ತದೆ ಮತ್ತು ಅವರ ಎಲ್ಲಾ ಹೃದಯ ಸಂಬಂಧಿ ಅಗತ್ಯಗಳಿಗೆ ಕವರೇಜ್ ಅನ್ನು ಖಾತ್ರಿಗೊಳಿಸುತ್ತದೆ. ಇದು ಹೃದಯ ಸಂಬಂಧಿ ಮತ್ತು ನಿಯಮಿತ ಆಸ್ಪತ್ರೆಗೆ ದಾಖಲಾಗುವಿಕೆಯ ಅಗತ್ಯಗಳ ಸಂಯೋಜನೆಯಾಗಿದೆ.
ಇದು ಪುನರಾವರ್ತಿತ ಹೃದ್ರೋಗಗಳಿಗೆ ಚಿಕಿತ್ಸೆ ಅಗತ್ಯವಾಗಿರುವವರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಖರ್ಚುಗಳಿಗೆ ಸಾಕಷ್ಟು ಕವರೇಜ್ ಅನ್ನು ಒದಗಿಸುತ್ತದೆ.
ಈ ಪಾಲಿಸಿಯು ವಿವಿಧ ಹೃದಯ ಸ್ಥಿತಿಗಳಿಗೆ ಬಹು ಕ್ಲೈಮ್‌ಗಳನ್ನು ಸಹ ಒಳಗೊಂಡಿದೆ. ಆದರೆ, ಈ ಕ್ಲೈಮ್‌ಗಳು ವಿಮಾ ಮೊತ್ತಕ್ಕೆ ಒಳಪಟ್ಟಿರುತ್ತವೆ. ಕಾರ್ಡಿಯಾಕ್ ಕೇರ್ ಇನ್ಶೂರೆನ್ಸ್ ಪಾಲಿಸಿಯು ಶಸ್ತ್ರಚಿಕಿತ್ಸಾ, ಶಸ್ತ್ರಚಿಕಿತ್ಸಾ ರಹಿತ ಚಿಕಿತ್ಸೆಗಳು ಮತ್ತು ಆಧುನಿಕ ಚಿಕಿತ್ಸೆಗಳಿಗೆ ಕವರ್, ಹೊರರೋಗಿಗಳ ಆರೈಕೆ ಮತ್ತು ಅಪಘಾತದಿಂದಾಗುವ ಮರಣಕ್ಕೆ ವೈಯಕ್ತಿಕ ಅಪಘಾತದ ಕವರ್‌ನಂತಹ ಪ್ರಯೋಜನಗಳನ್ನು ಒದಗಿಸುತ್ತದೆ.
ವಿಭಾಗ | ಗೋಲ್ಡ್ ಪ್ಲ್ಯಾನ್ | ಸಿಲ್ವರ್ ಪ್ಲ್ಯಾನ್ |
---|---|---|
1 | ಅಪಘಾತ ಮತ್ತು ಹೃದ್ರೋಗೇತರ ಕಾಯಿಲೆಗಳಿಗೆ ಅನ್ವಯಿಸುತ್ತದೆ | ಅಪಘಾತ ಮತ್ತು ಹೃದ್ರೋಗಗಳಿಗೆ ಅನ್ವಯಿಸುತ್ತದೆ |
2 | ಹೃದ್ರೋಗಗಳು ಮತ್ತು ತೊಡಕುಗಳಿಗೆ ಅನ್ವಯಿಸುತ್ತದೆ. ಶಸ್ತ್ರಚಿಕಿತ್ಸಾ ಕಾತ್ಯ ಮತ್ತು ವೈದ್ಯಕೀಯ ನಿರ್ವಹಣೆ ಎರಡಕ್ಕೂ ಕವರ್ ಲಭ್ಯವಿದೆ. | ಹೃದಯ ಸಂಬಂಧಿ ಕಾಯಿಲೆಗಳು ಮತ್ತು ತೊಡಕುಗಳಿಗೆ ಅನ್ವಯಿಸುತ್ತದೆ. ಶಸ್ತ್ರಚಿಕಿತ್ಸಾ ಕಾರ್ಯಕ್ಕೆ ಮಾತ್ರ ಕವರ್ ಲಭ್ಯವಿದೆ. |
3 | ನೆಟ್‌ವರ್ಕ್ ಸೌಲಭ್ಯದಲ್ಲಿ ಹೊರರೋಗಿ ಖರ್ಚುಗಳು | ನೆಟ್‌ವರ್ಕ್ ಸೌಲಭ್ಯದಲ್ಲಿ ಹೊರರೋಗಿ ಖರ್ಚುಗಳು |
4 | ವೈಯಕ್ತಿಕ ಅಪಘಾತ: ಆಯ್ಕೆಮಾಡಿದ ವಿಮಾ ಮೊತ್ತಕ್ಕೆ ಸಮನಾದ ಮರಣದ ಕವರ್ ಮಾತ್ರ | ವೈಯಕ್ತಿಕ ಅಪಘಾತ: ಆಯ್ಕೆಮಾಡಿದ ವಿಮಾ ಮೊತ್ತಕ್ಕೆ ಸಮನಾದ ಮರಣದ ಕವರ್ ಮಾತ್ರ |
ಹೃದಯ ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಕಾಯುವಿಕೆ ಅವಧಿಯು 90 ದಿನಗಳು ಮಾತ್ರ. |
ಕಾರ್ಡಿಯಾಕ್ ಇನ್ಶೂರೆನ್ಸ್ ಹೃದ್ರೋಗ ಮತ್ತು ಹೃದ್ರೋಗೇತರ ಕಾಯಿಲೆಗಳಿಗೆ ವಿಶಾಲವಾದ ಕವರೇಜ್ ಅನ್ನು ಒದಗಿಸುತ್ತದೆ. ಈ ಪಾಲಿಸಿಯ ಪ್ರಮುಖ ಲಕ್ಷಣವೆಂದರೆ ಇದು ಈಗಾಗಲೇ ಹೃದಯ ಸ್ಥಿತಿ ಅಥವಾ ಕಾರ್ಯವಿಧಾನವನ್ನು ಹೊಂದಿರುವ ಜನರನ್ನು ಕವರ್ ಮಾಡುತ್ತದೆ. ನೀವು ಕಳೆದ 7 ವರ್ಷಗಳಲ್ಲಿ ಹೃದಯ ಶಸ್ತ್ರಚಿಕಿತ್ಸೆ ಅಥವಾ ಕಾರ್ಯವಿಧಾನಕ್ಕೆ ಒಳಗಾಗಿದ್ದರೆ, ನೀವು ಹೃದಯ ಸಂಬಂಧಿ ಕಾಯಿಲೆಗಳ ಹೆಚ್ಚಿನ ಅಪಾಯವನ್ನು ಹೊಂದಿರುವ ಕಾರಣ ಕಾರ್ಡಿಯಾಕ್ ಕೇರ್ ಪಾಲಿಸಿಯನ್ನು ಖರೀದಿಸಲು ಸಲಹೆ ನೀಡಲಾಗುತ್ತದೆ.
ಪಾಲಿಸಿ ಅವಧಿಯಲ್ಲಿ ಕನಿಷ್ಠ 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ವಿಮೆದಾರರು ಆಸ್ಪತ್ರೆಗೆ ದಾಖಲಾಗುವಿಕೆಗೆ ಸ್ಟಾರ್ ಕಾರ್ಡಿಯಾಕ್ ಕೇರ್ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ. ಪ್ಲ್ಯಾನ್ ಈ ಕೆಳಗಿನ ಖರ್ಚುಗಳನ್ನು ಕವರ್ ಮಾಡುತ್ತದೆ:
ಪಾಲಿಸಿ ನಿಯಮಗಳ ಪ್ರಕಾರ 24 ಗಂಟೆಗಳಿಗಿಂತ ಕಡಿಮೆ ಆಸ್ಪತ್ರೆಗೆ ದಾಖಲಾಗುವಿಕೆ ಅಗತ್ಯವಿರುವ ಎಲ್ಲಾ ಡೇಕೇರ್ ಕಾರ್ಯವಿಧಾನಗಳು, ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸೆಗಳ ಖರ್ಚುಗಳನ್ನು ಪಾಲಿಸಿ ಕವರ್ ಮಾಡುತ್ತದೆ.
ಈ ಪಾಲಿಸಿಯು ಸಂಪೂರ್ಣ ಪಾಲಿಸಿ ಅವಧಿಯಲ್ಲಿ ₹30,000 ವರೆಗಿನ ಕಣ್ಣಿನ ಪೊರೆ ಚಿಕಿತ್ಸೆಗಾಗಿ ಮಾಡಿದ ಖರ್ಚುಗಳನ್ನು ಕವರ್ ಮಾಡುತ್ತದೆ.
ಯಾವುದೇ ಇನ್ಶೂರೆನ್ಸ್ ಪೂರ್ವ ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ. ಪ್ರಸ್ತಾಪ ಫಾರ್ಮ್‌ನೊಂದಿಗೆ ಇತ್ತೀಚಿನ ಚಿಕಿತ್ಸೆಯ ವಿವರಗಳನ್ನು ಒಳಗೊಂಡ ಹಿಂದಿನ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಬೇಕು.
ವೈಯಕ್ತಿಕ ಅಪಘಾತ ಕವರೇಜ್: ಸ್ಟಾರ್ ಹೆಲ್ತ್ ಕಾರ್ಡಿಯಾಕ್ ಕೇರ್ ಇನ್ಶೂರೆನ್ಸ್ ವಿಶ್ವವ್ಯಾಪಿ ಕವರ್ ಅನ್ನು ಒದಗಿಸುತ್ತದೆ ಮತ್ತು ವಿಮೆದಾರರು ಆಯ್ಕೆ ಮಾಡಿದ ವಿಮಾಮೊತ್ತವನ್ನು ಸಮನಾದ ಆಕಸ್ಮಿಕ ಮರಣ ಸಂದರ್ಭದಲ್ಲಿ ಒದಗಿಸುತ್ತದೆ.
ಕೆಲವು ಆಧುನಿಕ ಚಿಕಿತ್ಸೆಗಳನ್ನು ಸ್ಟಾರ್ ಕಾರ್ಡಿಯಾಕ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗಿದೆ. ಕವರೇಜ್ ವಿವರಗಳು ಕೆಳಕಂಡಂತಿವೆ: ಮಿತಿಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾಗಿದೆ .
ಕೆಳಗಿನವು ಪಾಲಿಸಿಯ ಹೊರಗಿಡುವಿಕೆಗಳ ಭಾಗಶಃ ಪಟ್ಟಿಯಾಗಿದೆ. ಎಲ್ಲಾ ಹೊರಗಿಡುವಿಕೆಗಳ ವಿವರವಾದ ಪಟ್ಟಿಯನ್ನು ಪಾಲಿಸಿ ದಾಖಲೆಯಲ್ಲಿ ಸೇರಿಸಲಾಗಿದೆ.
ಸ್ಟಾರ್ ಹೆಲ್ತ್ ಕಾರ್ಡಿಯಾಕ್ ಕೇರ್ ಪಾಲಿಸಿಯು ಹೃದ್ರೋಗ ಮತ್ತು ಹೃದ್ರೋಗೇತರ ಕಾಯಿಲೆಗಳಿಗೆ ಕಾಂಪ್ರೆಹೆನ್ಸಿವ್ ಕವರೇಜ್ ಅನ್ನು ನೀಡುತ್ತದೆ, ಆದರೆ ಕೆಲವು ಹೊರಗಿಡುವಿಕೆಗಳು ಈ ಪಾಲಿಸಿಯ ವ್ಯಾಪ್ತಿಯಲ್ಲಿ ಬರುತ್ತವೆ. ಈ ಹೊರಗಿಡುವಿಕೆಗಳು ಕೆಳಕಂಡಂತಿವೆ: