ಪ್ರವೇಶ ವಯಸ್ಸು5 ತಿಂಗಳಿನಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿಯು |
ಒಳರೋಗಿ ಆಸ್ಪತ್ರೆ ದಾಖಲಾತಿಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಒಳಗೊಂಡಿದೆ. |
ಆಸ್ಪತ್ರೆ ದಾಖಲಾತಿಗೂ ಮೊದಲುಒಳರೋಗಿ ಆಸ್ಪತ್ರೆಗೆ ಸೇರಿಸುವುದರ ಜೊತೆಗೆ, ಆಸ್ಪತ್ರೆಗೆ ದಾಖಲಾದ ದಿನಾಂಕದ 30 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ವೆಚ್ಚಗಳನ್ನು ಸಹ ಕವರ್ ಮಾಡಲಾಗುತ್ತದೆ. |
ಆಸ್ಪತ್ರೆ ದಾಖಲಾತಿ ನಂತರಪಾಲಿಸಿ ಷರತ್ತಿನಲ್ಲಿ ತಿಳಿಸಲಾದ ಮಿತಿಗಳ ಪ್ರಕಾರ ಆಸ್ಪತ್ರೆ ದಾಖಲಾತಿ ನಂತರದ ವೈದ್ಯಕೀಯ ವೆಚ್ಚಗಳನ್ನು ಡಿಸ್‌ಚಾರ್ಜ್ ಮಾಡಲಾದ ದಿನಾಂಕದಿಂದ 60 ದಿನಗಳವರೆಗೆ ಕವರ್ ಮಾಡಲಾಗುತ್ತದೆ. |
ಕೊಠಡಿ ಬಾಡಿಗೆಒಳರೋಗಿಯು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಉಂಟಾಗುವ ಕೊಠಡಿ, ಬೋರ್ಡಿಂಗ್ ಮತ್ತು ಶುಶ್ರೂಷೆ ವೆಚ್ಚಗಳು ದಿನಕ್ಕೆ ರೂ. 5000/- ಮತ್ತು ಮೂಲ ವಿಮಾ ಮೊತ್ತದ 2% ವರೆಗೆ ಕವರ್ ಮಾಡಲಾಗುತ್ತದೆ. |
ರೋಡ್ ಆ್ಯಂಬ್ಯುಲೆನ್ಸ್ಖಾಸಗಿ ಆ್ಯಂಬುಲೆನ್ಸ್‌ನಿಂದ ವಿಮಾದಾರರನ್ನು ಸಾಗಿಸಲು ಆ್ಯಂಬುಲೆನ್ಸ್ ಶುಲ್ಕಗಳು ಪ್ರತಿ ಆಸ್ಪತ್ರೆಗೆ ರೂ. 750/- ಮತ್ತು ಪ್ರತಿ ಪಾಲಿಸಿ ಅವಧಿಗೆ ರೂ. 1500/- ವರೆಗೆ ಕವರ್ ಆಗುತ್ತದೆ. |
ಡೇ ಕೇರ್ ಕಾರ್ಯವಿಧಾನಗಳುತಾಂತ್ರಿಕ ಪ್ರಗತಿಯಿಂದಾಗಿ ಆಸ್ಪತ್ರೆಗೆ ದಾಖಲಾದ 24 ಗಂಟೆಗಳಿಗಿಂತ ಕಡಿಮೆ ಅವಧಿಯ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರ ಚಿಕಿತ್ಸಾ ವಿಧಾನಗಳು ಕವರ್ ಆಗುತ್ತವೆ. |
ಆಧುನಿಕ ಚಿಕಿತ್ಸೆಓರಲ್ ಕಿಮೋಥೆರಪಿ, ಇಂಟ್ರಾ ವಿಟ್ರಿಯಲ್ ಇಂಜೆಕ್ಷನ್‌ಗಳು, ರೋಬೋಟಿಕ್ ಸರ್ಜರಿಗಳು ಮುಂತಾದ ಆಧುನಿಕ ಚಿಕಿತ್ಸೆಗಳಿಗೆ ತಗಲುವ ವೆಚ್ಚಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ಅಲೋಪತಿಯಲ್ಲದ ಚಿಕಿತ್ಸೆ / ಆಯುಷ್ಆಯುಷ್ ಆಸ್ಪತ್ರೆಗಳಲ್ಲಿ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಪದ್ಧತಿಯ ಚಿಕಿತ್ಸೆಯ ವೆಚ್ಚಗಳು ಪಾಲಿಸಿ ಅವಧಿಯಲ್ಲಿ ಗರಿಷ್ಠ ರೂ.25000 ಕ್ಕೆ ಒಳಪಟ್ಟು ವಿಮಾ ಮೊತ್ತದ 25% ವರೆಗೆ ಕವರ್ ಆಗುತ್ತದೆ. |
ಕಣ್ಣಿನ ಪೊರೆ ಚಿಕಿತ್ಸೆಕಣ್ಣಿನ ಪೊರೆ ಚಿಕಿತ್ಸೆಗಾಗಿ ತಗಲುವ ವೆಚ್ಚವನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ಮೂಲ ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್ಪಾಲಿಸಿ ಅವಧಿಯಲ್ಲಿ ಕವರೇಜ್ ಮಿತಿ ಮುಗಿದ ನಂತರ, ಮೂಲ ವಿಮಾ ಮೊತ್ತದ 200% ಪಾಲಿಸಿ ವರ್ಷದಲ್ಲಿ ಒಮ್ಮೆ ರಿಸ್ಟೋರ್ ಮಾಡಲಾಗುತ್ತದೆ ಅದನ್ನು ಅನಾರೋಗ್ಯ ಅಥವಾ ಕಾಯಿಲೆ, ಅಥವಾ ಕ್ಲೈಮ್ ಮಾಡಿದ ಕಾಯಿಲೆಗೆ ಸಂಬಂಧಿಸದ ರೋಗಕ್ಕೆ ಬಳಸಿಕೊಳ್ಳಬಹುದು. |
ಮನೋವೈದ್ಯಕೀಯ ಮತ್ತು ಮನೋದೈಹಿಕ ಕವರೇಜ್ವಿಮಾದಾರರು ಸತತ 5 ದಿನಗಳವರೆಗೆ ಆಸ್ಪತ್ರೆಯಲ್ಲಿದ್ದರೆ ಮೊದಲ ಬಾರಿಗೆ ಮನೋವೈದ್ಯಕೀಯ ಮತ್ತು ಮನೋದೈಹಿಕ ಅಸ್ವಸ್ಥತೆಗಳ ಚಿಕಿತ್ಸೆಗಾಗಿ ತಗಲುವ ವೆಚ್ಚವನ್ನು ಕವರ್ ಮಾಡಲಾಗುತ್ತದೆ. |
ಕುಟುಂಬ ಪ್ಯಾಕೇಜ್ ಪ್ಲ್ಯಾನ್5 ತಿಂಗಳಿನಿಂದ 45 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಲಭ್ಯವಿದೆ. ವಿಮಾ ಮೊತ್ತವನ್ನು ವಿಮಾದಾರ ಕುಟುಂಬ ಸದಸ್ಯರ ನಡುವೆ ಸಮಾನವಾಗಿ ಹಂಚಲಾಗುತ್ತದೆ. ಆರೋಗ್ಯ ತಪಾಸಣೆಯ ಪ್ರಯೋಜನಗಳನ್ನು ವಿಮಾ ಮೊತ್ತದ ಮೇಲೆ ಲೆಕ್ಕಹಾಕಲಾಗುತ್ತದೆಮತ್ತು ಎಲ್ಲಾ ವಿಮಾದಾರರಿಗೆ ಸಮಾನವಾಗಿ ಹಂಚಲಾಗುತ್ತದೆ. |
ಸಂಚಿತ ಬೋನಸ್ಮೂಲ ವಿಮಾ ಮೊತ್ತದ ಗರಿಷ್ಠ 25% ನಂತೆ ಪ್ರತಿ ಕ್ಲೈಮ್-ಮುಕ್ತ ವರ್ಷಕ್ಕೆ ಮೂಲ ವಿಮಾ ಮೊತ್ತದ 5% ನಂತೆ ವಿಮಾದಾರರು ಸಂಚಿತ ಬೋನಸ್‌ಗೆ ಅರ್ಹರಾಗಿರುತ್ತಾರೆ. |
ಆರೋಗ್ಯ ತಪಾಸಣೆಆರೋಗ್ಯ ತಪಾಸಣೆಗೆ ತಗಲುವ ವೆಚ್ಚಗಳು ರೂ. 2,00,000/- ಮತ್ತು ಅದಕ್ಕಿಂತ ಹೆಚ್ಚಿನ ಮೂಲ ವಿಮಾ ಮೊತ್ತಕ್ಕೆ ಗರಿಷ್ಠ ರೂ. 5000/-ಕ್ಕೆ ಒಳಪಟ್ಟು ಮೂಲ ವಿಮಾ ಮೊತ್ತದ 1% ವರೆಗೆ ಕವರ್ ಆಗುತ್ತದೆ. ನಿರಂತರ ಕವರೇಜ್ ಒಳಪಟ್ಟಿರುವ ನಾಲ್ಕು ಕ್ಲೈಮ್ ಮುಕ್ತ ವರ್ಷಗಳ ಪ್ರತಿ ಬ್ಲಾಕ್‌ನ ನಂತರ ವಿಮಾದಾರರು ಈ ಪ್ರಯೋಜನಕ್ಕೆ ಅರ್ಹರಾಗುತ್ತಾರೆ. |
ಸಹ-ಪಾವತಿಈ ಪಾಲಿಸಿಯು ಹೊಸದಾಗಿ ಪಾಲಿಸಿ ಮಾಡುವವರ ಹಾಗೆಯೇ ಪ್ರವೇಶ ಸಮಯದಲ್ಲಿ 61 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವಿಮಾದಾರರಾಗಿದ್ದರೆ ನವೀಕರಣದ ಸಮಯದಲ್ಲಿಯೂ ಪ್ರತಿ ಕ್ಲೈಮ್ ಮೊತ್ತದ 10% ರಷ್ಟು ಸಹ-ಪಾವತಿಗೆ ಒಳಪಟ್ಟಿರುತ್ತದೆ. |
ಪ್ರವೇಶ ವಯಸ್ಸುಗೋಲ್ಡ್ ಪ್ಲ್ಯಾನ್ ಅಡಿಯಲ್ಲಿ, 16 ದಿನಗಳಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆಯಬಹುದು. |
ಒಳರೋಗಿ ಆಸ್ಪತ್ರೆ ದಾಖಲಾತಿಅನಾರೋಗ್ಯ, ಗಾಯ ಮತ್ತು ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚಿನ ಅವಧಿಗೆ ತಗಲುವ ಆಸ್ಪತ್ರೆಯ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ. |
ಆಸ್ಪತ್ರೆ ದಾಖಲಾತಿಗೂ ಮೊದಲುಒಳರೋಗಿ ಆಸ್ಪತ್ರೆಗೆ ಸೇರಿಸುವುದರ ಜೊತೆಗೆ, ಆಸ್ಪತ್ರೆಗೆ ದಾಖಲಾದ ದಿನಾಂಕದ 30 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ವೆಚ್ಚಗಳನ್ನು ಸಹ ಕವರ್ ಮಾಡಲಾಗುತ್ತದೆ. |
ಆಸ್ಪತ್ರೆ ದಾಖಲಾತಿಯ ನಂತರಆಸ್ಪತ್ರೆಯಿಂದ ಬಿಡುಗಡೆಯಾದ ದಿನಾಂಕದಿಂದ 60 ದಿನಗಳವರೆಗೆ ಆಸ್ಪತ್ರೆಗೆ ದಾಖಲಾದ ನಂತರದ ವೈದ್ಯಕೀಯ ವೆಚ್ಚಗಳನ್ನು ಒಳಗೊಂಡಿದೆ. |
ಕೊಠಡಿ ಬಾಡಿಗೆಒಳರೋಗಿಯು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಉಂಟಾಗುವ ಕೊಠಡಿ, ಬೋರ್ಡಿಂಗ್ ಮತ್ತು ಶುಶ್ರೂಷೆ ವೆಚ್ಚಗಳು ದಿನಕ್ಕೆ ರೂ. 5000/- ಮತ್ತು ಮೂಲ ವಿಮಾ ಮೊತ್ತದ 2% ವರೆಗೆ ಕವರ್ ಮಾಡಲಾಗುತ್ತದೆ. |
ರೋಡ್ ಆ್ಯಂಬ್ಯುಲೆನ್ಸ್ಖಾಸಗಿ ಆ್ಯಂಬ್ಯುಲೆನ್ಸ್ ಸೇವೆಯ ಮೂಲಕ ವಿಮಾದಾರರನ್ನು ಸಾಗಿಸಲು ಪ್ರತಿ ಆಸ್ಪತ್ರೆಗೆ ರೂ. 2,000/- ವರೆಗಿನ ಆ್ಯಂಬ್ಯುಲೆನ್ಸ್ ಶುಲ್ಕವನ್ನು ಕವರ್ ಮಾಡಲಾಗುತ್ತದೆ. |
ಡೇಕೇರ್ ಕಾರ್ಯವಿಧಾನಗಳುತಾಂತ್ರಿಕ ಪ್ರಗತಿಯಿಂದಾಗಿ ಆಸ್ಪತ್ರೆಗೆ ದಾಖಲಾದ 24 ಗಂಟೆಗಳಿಗಿಂತ ಕಡಿಮೆ ಅವಧಿಯ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರ ಚಿಕಿತ್ಸಾ ವಿಧಾನಗಳು ಕವರ್ ಆಗುತ್ತವೆ. |
ಆಧುನಿಕ ಚಿಕಿತ್ಸೆಓರಲ್ ಕಿಮೋಥೆರಪಿ, ಇಂಟ್ರಾ ವಿಟ್ರಿಯಲ್ ಇಂಜೆಕ್ಷನ್‌ಗಳು, ರೋಬೋಟಿಕ್ ಸರ್ಜರಿಗಳು ಮುಂತಾದ ಆಧುನಿಕ ಚಿಕಿತ್ಸೆಗಳಿಗೆ ತಗಲುವ ವೆಚ್ಚಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ಕಣ್ಣಿನ ಪೊರೆ ಚಿಕಿತ್ಸೆಕಣ್ಣಿನ ಪೊರೆ ಚಿಕಿತ್ಸೆಗಾಗಿ ತಗಲುವ ವೆಚ್ಚವನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ಮನೋವೈದ್ಯಕೀಯ ಮತ್ತು ಮನೋದೈಹಿಕ ಕವರೇಜ್ವಿಮಾದಾರರು ಸತತ 5 ದಿನಗಳವರೆಗೆ ಆಸ್ಪತ್ರೆಯಲ್ಲಿದ್ದರೆ ಮೊದಲ ಬಾರಿಗೆ ಮನೋವೈದ್ಯಕೀಯ ಮತ್ತು ಮನೋದೈಹಿಕ ಅಸ್ವಸ್ಥತೆಗಳ ಚಿಕಿತ್ಸೆಗಾಗಿ ತಗಲುವ ವೆಚ್ಚವನ್ನು ಕವರ್ ಮಾಡಲಾಗುತ್ತದೆ. |
ಆರೋಗ್ಯ ತಪಾಸಣೆಆರೋಗ್ಯ ತಪಾಸಣೆಗೆ ತಗಲುವ ವೆಚ್ಚಗಳು ರೂ. 2,00,000/- ಮತ್ತು ಅದಕ್ಕಿಂತ ಹೆಚ್ಚಿನ ಮೂಲ ವಿಮಾ ಮೊತ್ತಕ್ಕೆ ಗರಿಷ್ಠ ರೂ. 5000/-ಕ್ಕೆ ಒಳಪಟ್ಟು ಮೂಲ ವಿಮಾ ಮೊತ್ತದ 1% ವರೆಗೆ ಕವರ್ ಆಗುತ್ತದೆ. ನಿರಂತರ ಕವರೇಜ್ ಒಳಪಟ್ಟಿರುವ ನಾಲ್ಕು ಕ್ಲೈಮ್ ಮುಕ್ತ ವರ್ಷಗಳ ಪ್ರತಿ ಬ್ಲಾಕ್‌ನ ನಂತರ ವಿಮಾದಾರರು ಈ ಪ್ರಯೋಜನಕ್ಕೆ ಅರ್ಹರಾಗುತ್ತಾರೆ. |
ಸಂಚಿತ ಬೋನಸ್ಪ್ರತಿ ಕ್ಲೈಮ್ ಮುಕ್ತ ವರ್ಷಕ್ಕೆ, ವಿಮಾದಾರರು ಎರಡನೇ ವರ್ಷದಲ್ಲಿ ಮೂಲ ವಿಮಾ ಮೊತ್ತದ 25% ನಲ್ಲಿ ಲೆಕ್ಕಾಚಾರ ಹಾಕಿದ ಸಂಚಿತ ಬೋನಸ್‌ಗೆ ಅರ್ಹರಾಗಿರುತ್ತಾರೆ ಮತ್ತು ನಂತರದ ಪ್ರತಿ ವರ್ಷಕ್ಕೆ ಮೂಲ ವಿಮಾ ಮೊತ್ತದ 20% ಹೆಚ್ಚುವರಿಯು ಗರಿಷ್ಠ 100% ಗೆ ಒಳಪಟ್ಟಿರುತ್ತದೆ. |
ಮೂಲ ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್ಪಾಲಿಸಿ ಅವಧಿಯಲ್ಲಿ ಕವರೇಜ್‌ನ ಮಿತಿ ಮುಗಿದ ನಂತರ, ಮೂಲ ವಿಮಾ ಮೊತ್ತದ 200% ಅನ್ನು ಪಾಲಿಸಿ ವರ್ಷದಲ್ಲಿ ಒಮ್ಮೆ ರಿಸ್ಟೋರ್ ಮಾಡಲಾಗುತ್ತದೆ ಅದನ್ನು ಅನಾರೋಗ್ಯ ಅಥವಾ ಕಾಯಿಲೆ ಅಥವಾ ಕ್ಲೈಮ್‌ಗಳನ್ನು ಮಾಡಿರದ ಕಾಯಿಲೆಗೆ ಸಂಬಂಧಿಸದ ರೋಗಕ್ಕೆ ಬಳಸಿಕೊಳ್ಳಬಹುದು. |
ಸೂಪರ್ ರಿಸ್ಟೋರೇಷನ್ಪಾಲಿಸಿ ಅವಧಿಯಲ್ಲಿ ಕವರೇಜ್‌ನ ಮಿತಿ ಮುಗಿದ ನಂತರ, ಗೋಲ್ಡ್ ಪ್ಲ್ಯಾನ್ ಅಡಿಯಲ್ಲಿ, ವಿಮಾ ಮೊತ್ತದ 100% ಅನ್ನು ಉಳಿದ ಪಾಲಿಸಿ ವರ್ಷಕ್ಕೆ ಒಮ್ಮೆ ರಿಸ್ಟೋರೇಷನ್ ಮಾಡಲಾಗುತ್ತದೆ, ಅದನ್ನು ಎಲ್ಲಾ ಕ್ಲೈಮ್‌ಗಳಿಗೆ ಬಳಸಿಕೊಳ್ಳಬಹುದು. |
ಮನೆಯಲ್ಲೇ ಚಿಕಿತ್ಸೆಮೂರು ದಿನಗಳಿಗಿಂತ ಹೆಚ್ಚಿನ ಅವಧಿಗೆ ವೈದ್ಯರ ಸಲಹೆಯ ಮೇರೆಗೆ ಆಯುಷ್ ಸೇರಿದಂತೆ ಮನೆಯಲ್ಲಿಯೇ ನೀಡುವ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಒಳಗೊಂಡಿದೆ. |
ಹಂಚಿಕೆ ವಸತಿವಿಮಾದಾರರು ನೆಟ್‌ವರ್ಕ್ ಆಸ್ಪತ್ರೆಯಲ್ಲಿ ಹಂಚಿಕೆ ವಸತಿಯನ್ನು ಆರಿಸಿಕೊಂಡರೆ, ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಿದಂತೆ ಆಯ್ಕೆ ಮಾಡಿದ ವಿಮಾ ಮೊತ್ತಕ್ಕೆ ನಗದು ಪ್ರಯೋಜನವನ್ನು ಒದಗಿಸಲಾಗುತ್ತದೆ. |
ಅಂಗಾಂಗ ದಾನಿ ವೆಚ್ಚಗಳುಸ್ವೀಕರಿಸುವವರು ವಿಮಾದಾರರಾಗಿದ್ದರೆ, ಅಂಗಾಂಗ ಕಸಿ ಮಾಡುವಿಕೆಗೆ ತಗಲುವ ಆಸ್ಪತ್ರೆಯ ವೆಚ್ಚವನ್ನು ಕವರ್ ಮಾಡಲಾಗುತ್ತದೆ. |
ರಸ್ತೆ ಅಪಘಾತಕ್ಕೆ (RTA)ಹೆಚ್ಚುವರಿ ಮೂಲ ವಿಮಾ ಮೊತ್ತಮೂಲ ವಿಮಾ ಮೊತ್ತವು ಖಾಲಿಯಾದರೆ, ರಸ್ತೆ ಅಪಘಾತಗಳು ಸಂಭವಿಸಿದಾಗ ಆಸ್ಪತ್ರೆಗೆ ದಾಖಲಾಗಲು, ಅದನ್ನು 50% ನಷ್ಟು ಹೆಚ್ಚಿಸಲಾಗುತ್ತದೆ. |
ನವಜಾತ ಶಿಶುವಿನ ಚಿಕಿತ್ಸೆಗಾಗಿ ಆಸ್ಪತ್ರೆಯ ವೆಚ್ಚಗಳುಜನನದ ನಂತರ 16 ನೇ ದಿನದಿಂದ ಕವರ್ ಪ್ರಾರಂಭವಾಗುತ್ತದೆ ಮತ್ತು ವಿಮಾ ಮೊತ್ತದ 10% ಅಥವಾ ಐವತ್ತು ಸಾವಿರ ರೂ.ಗಳ ಮಿತಿಗೆ ಒಳಪಟ್ಟಿರುತ್ತದೆ, ಯಾವುದು ಕಡಿಮೆಯೋ ಅದನ್ನು ಪಾಲಿಸಿಯ ಅಡಿಯಲ್ಲಿ ತಾಯಿಯು ವಿಮಾದಾರರಾಗಿದ್ದರೆ ಯಾವುದೇ ವಿರಾಮವಿಲ್ಲದೇ 12 ತಿಂಗಳ ನಿರಂತರ ಅವಧಿಗೆ ಪಾವತಿಸಲಾಗುತ್ತದೆ. |
ಅಲೋಪತಿಯಲ್ಲದ ಚಿಕಿತ್ಸೆ / ಆಯುಷ್ಆಯುಷ್ ಆಸ್ಪತ್ರೆಗಳಲ್ಲಿ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಪದ್ಧತಿಯ ಚಿಕಿತ್ಸೆಯ ವೆಚ್ಚಗಳು ಪಾಲಿಸಿ ಅವಧಿಯಲ್ಲಿ ಗರಿಷ್ಠ ರೂ.25000 ಕ್ಕೆ ಒಳಪಟ್ಟು ವಿಮಾ ಮೊತ್ತದ 25% ವರೆಗೆ ಕವರ್ ಆಗುತ್ತದೆ. |
ರೋಗಿಗಳ ಆರೈಕೆಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ತಕ್ಷಣ ವಿಮಾದಾರರ ನಿವಾಸದಲ್ಲಿ ಒಬ್ಬ ಅಟೆಂಡೆಂಟ್‌ಗೆ ತಗಲುವ ವೆಚ್ಚವನ್ನು ಚಿಕಿತ್ಸೆ ನೀಡಿದ ವೈದ್ಯರು ಶಿಫಾರಸು ಮಾಡುತ್ತಾರೆ. ಅಂತಹ ವೆಚ್ಚಗಳನ್ನು ಪ್ರತಿ ಸಲ 5 ದಿನಗಳವರೆಗೆ ಮತ್ತು ಪ್ರತಿ ಪಾಲಿಸಿ ಅವಧಿಗೆ 14 ದಿನಗಳವರೆಗೆ ಪೂರ್ಣಗೊಂಡ ಪ್ರತಿ ದಿನಕ್ಕೆ ರೂ. 400/- ವರೆಗೆ ಪಾವತಿಸಲಾಗುತ್ತದೆ. |
ಆಸ್ಪತ್ರೆ ನಗದು ಪ್ರಯೋಜನಆಸ್ಪತ್ರೆ ವಾಸದ ಪ್ರತಿ ದಿನಕ್ಕೆ ರೂ 1000/- ನಗದು ಪ್ರಯೋಜನವನ್ನು ಪ್ರತಿ ಆಸ್ಪತ್ರೆಗೆ ಗರಿಷ್ಠ 7 ದಿನಗಳವರೆಗೆ ಮತ್ತು ಪಾಲಿಸಿ ಅವಧಿಗೆ 14 ದಿನಗಳವರೆಗೆ ಒದಗಿಸಲಾಗುತ್ತದೆ. |
ಸಹ-ಪಾವತಿtಈ ಪಾಲಿಸಿಯು ಹೊಸದಾಗಿ ಪಾಲಿಸಿ ಮಾಡುವವರ ಹಾಗೆಯೇ ಪ್ರವೇಶ ಸಮಯದಲ್ಲಿ 61 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವಿಮಾದಾರರಾಗಿದ್ದರೆ ನವೀಕರಣದ ಸಮಯದಲ್ಲಿಯೂ ಪ್ರತಿ ಕ್ಲೈಮ್ ಮೊತ್ತದ 10% ರಷ್ಟು ಸಹ-ಪಾವತಿಗೆ ಒಳಪಟ್ಟಿರುತ್ತದೆ. |
ಕುಟುಂಬ ರಿಯಾಯಿತಿಒಂದು ಕುಟುಂಬದಲ್ಲಿ 2 ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರು ಈ ಪಾಲಿಸಿ ಅವಧಿಯನ್ನು ಸ್ವೀಕರಿಸಿದರೆ ಪ್ರೀಮಿಯಂನಲ್ಲಿ 5% ರಿಯಾಯಿತಿ ಲಭ್ಯವಿದೆ. |
ಪ್ರಮುಖ ಅಂಗದಾನಿಗಳ ರಿಯಾಯಿತಿವಿಮಾದಾರರು ಪ್ರಮುಖ ಅಂಗವನ್ನು ದಾನಿ ಮಾಡಿದ್ದಾರೆ ಎಂಬುದಕ್ಕೆ ಪುರಾವೆ ಸಲ್ಲಿಸಿದರೆ, ನವೀಕರಣದ ಸಮಯದಲ್ಲಿ ಪ್ರೀಮಿಯಂನ 25% ರಷ್ಟು ರಿಯಾಯಿತಿ ಲಭ್ಯವಿದೆ. ಈ ರಿಯಾಯಿತಿಯು ನಂತರದ ನವೀಕರಣಗಳಿಗೆ ಸಹ ಲಭ್ಯವಿದೆ. |
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.