ಅನಾರೋಗ್ಯ ಅಥವಾ ಅಪಘಾತಗಳ ಕಾರಣದಿಂದ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳಿಗೆ ವಿನಾಯಿತಿ ನೀಡಲು ಅನನ್ಯವಾಗಿ ವಿನ್ಯಾಸಗೊಳಿಸಲಾದ ಇಂಡೆಮಿನಿಟಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ
ವೈಯುಕ್ತೀಕರಣ ಆಯ್ಕೆಗಳು
ಅನನ್ಯವಾಗಿ ರಚಿಸಲಾದ ಈ ಪಾಲಿಸಿಯು ಐದು ವಿಭಿನ್ನ ಐಚ್ಛಿಕ ಕವರ್ಗಳನ್ನು ಒದಗಿಸುವ ಮೂಲಕ ವಿಮೆದಾರರಿಗೆ ಅವರ ಆಯ್ಕೆಯ ಪ್ರಕಾರ ಪಾಲಿಸಿಯನ್ನು ವೈಯುಕ್ತೀಕರಿಸಲು ಅನುಮತಿಸುತ್ತದೆ.
ಮುಂಗಡ ಡಿಸ್ಕೌಂಟ್
ಜೀವನಶೈಲಿ ಮತ್ತು ಅಭ್ಯಾಸಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದರೆ, ಪಾಲಿಸಿಯನ್ನು ಮೊದಲ ಬಾರಿಗೆ ಖರೀದಿಸುವಾಗ ಪ್ರೀಮಿಯಂನಲ್ಲಿ 5% ಡಿಸ್ಕೌಂಟ್ ಲಭ್ಯವಾಗುತ್ತದೆ.
ವಾರ್ಷಿಕ ಆರೋಗ್ಯ ತಪಾಸಣೆ
ಕ್ಲೈಮ್ ಅನ್ನು ಲೆಕ್ಕಿಸದೆ ಪ್ರತಿ ಪಾಲಿಸಿ ವರ್ಷದಲ್ಲಿ ನಿಗದಿತ ಮಿತಿಗಳವರೆಗೆ ಆರೋಗ್ಯ ತಪಾಸಣೆಗೆ ತಗಲುವ ಖರ್ಚುಗಳನ್ನು ಕವರ್ ಮಾಡಲಾಗುತ್ತದೆ.
ಪಾಲಿಸಿ-ಪೂರ್ವ ವೈದ್ಯಕೀಯ ತಪಾಸಣೆ
ಈ ಪಾಲಿಸಿಯನ್ನು ಪಡೆದುಕೊಳ್ಳಲು ಯಾವುದೇ ಪಾಲಿಸಿ-ಪೂರ್ವ ವೈದ್ಯಕೀಯ ತಪಾಸಣೆ ಅಗತ್ಯವಾಗಿಲ್ಲ. ಆದರೆ, ಘೋಷಿತ ವೈದ್ಯಕೀಯ ಇತಿಹಾಸದ ಆಧಾರದ ಮೇಲೆ, ಕಂಪನಿಯು ಅರ್ಜಿದಾರರು ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಎಂದು ಹೇಳಬಹುದು ಮತ್ತು ಅಂತಹ ವೈದ್ಯಕೀಯ ಪರೀಕ್ಷೆಯ 100% ಖರ್ಚನ್ನು ಕಂಪನಿಯು ಭರಿಸುತ್ತದೆ
ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮ
ವಿವಿಧ ಸ್ವಾಸ್ಥ್ಯ ಚಟುವಟಿಕೆಗಳ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಹೊಂದುವಂತೆ ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ಸ್ವಾಸ್ಥ್ಯ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಅಷ್ಟೇ ಅಲ್ಲದೇ, ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳನ್ನು 20% ವರೆಗೆ ಡಿಸ್ಕೌಂಟ್ಗಳನ್ನು ಪಡೆದುಕೊಳ್ಳಲು ಬಳಸಿಕೊಳ್ಳಬಹುದಾಗಿದೆ.
DETAILED LIST
ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ
ಅರ್ಹತೆ
ವೈಯಕ್ತಿಕ ಪ್ರವೇಶ ವಯಸ್ಸು
18 ರಿಂದ 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆದುಕೊಳ್ಳಬಹುದಾಗಿದೆ.
ಫ್ಲೋಟರ್ ಪ್ರವೇಶದ ವಯಸ್ಸು
18 ರಿಂದ 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆದುಕೊಳ್ಳಬಹುದು. ಅವಲಂಬಿತ ಮಕ್ಕಳಿಗೆ 91 ನೇ ದಿನದಿಂದ 25 ವರ್ಷಗಳವರೆಗೆ ಕವರ್ ನೀಡಲಾಗುತ್ತದೆ.
ಪ್ರಮುಖ ಮುಖ್ಯಾಂಶಗಳು
ಪಾಲಿಸಿ ವಿಧ
ಈ ಪಾಲಿಸಿಯನ್ನು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಪಡೆದುಕೊಳ್ಳಬಹುದಾಗಿದೆ.
ಪಾಲಿಸಿ ಅವಧಿ
ಈ ಪಾಲಿಸಿಯನ್ನು ಒಂದು, ಎರಡು ಅಥವಾ ಮೂರು ವರ್ಷಗಳ ಅವಧಿಗೆ ಪಡೆದುಕೊಳ್ಳಬಹುದು.
ವಿಮಾ ಮೊತ್ತ
ಈ ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ವಿಮಾ ಮೊತ್ತದ ಆಯ್ಕೆಗಳೆಂದರೆ ರೂ.5,00,000/-, ರೂ.10,00,000/-, ರೂ.15,00,000/-, ರೂ.20,00,000/-, ರೂ.25,00,000/-, ರೂ.50,00,000/-, ರೂ.75,00,000/-, ಮತ್ತು ರೂ.1,00,00,000/- .
ದೀರ್ಘಕಾಲಿಕ ಡಿಸ್ಕೌಂಟ್
ಪಾಲಿಸಿ ಅವಧಿಯು ಒಂದು ವರ್ಷಕ್ಕಿಂತ ಹೆಚ್ಚಿದ್ದರೆ ಪ್ರೀಮಿಯಂನಲ್ಲಿ ಡಿಸ್ಕೌಂಟ್ ಲಭ್ಯವಿದೆ.
ಕುಟುಂಬದ ಗಾತ್ರ
ಫ್ಲೋಟರ್ ವಿಮಾ ಮೊತ್ತದ ಅಡಿಯಲ್ಲಿ ನೀವು ಸ್ವತಃ + ಸಂಗಾತಿ/ ಲಿವ್-ಇನ್ ಪಾಲುದಾರರು/ ಸಲಿಂಗ ಪಾಲುದಾರರು + ಅವಲಂಬಿತ ಮಕ್ಕಳನ್ನು ಸೇರಿಸಬಹುದಾಗಿದೆ. ಈ ಪಾಲಿಸಿಯು ಫ್ಲೋಟರ್ ವಿಮಾ ಮೊತ್ತದ ಅಡಿಯಲ್ಲಿ ಅಡಿಯಲ್ಲಿ 2 ವಯಸ್ಕರು + 3 ಮಕ್ಕಳ ಗರಿಷ್ಠ ಕುಟುಂಬದ ಗಾತ್ರವನ್ನು ಕವರ್ ಮಾಡುತ್ತದೆ.
ಪಾಲಿಸಿ ಪ್ರಯೋಜನಗಳು
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ
ಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ.
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಜೊತೆಗೆ, ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕಕ್ಕಿಂತ 60 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ.
ಆಸ್ಪತ್ರೆಗೆ ದಾಖಲಾಗುವಿಕೆ ನಂತರ
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನಾಂಕದಿಂದ 180 ದಿನಗಳವರೆಗಿನ ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಕವರ್ ಮಾಡುತ್ತದೆ.
ಕೊಠಡಿ ಬಾಡಿಗೆ
ಆಸ್ಪತ್ರೆಯಿಂದ ಒದಗಿಸಲಾದ ಕೊಠಡಿ (ಖಾಸಗಿ ಸಿಂಗಲ್ ಎ/ಸಿ ರೂಮ್), ಬೋರ್ಡಿಂಗ್ ಮತ್ತು ಶುಶ್ರೂಷಾ ಖರ್ಚುಗಳನ್ನು ಕವರ್ ಮಾಡುತ್ತದೆ.
ರೋಡ್ ಆ್ಯಂಬ್ಯುಲೆನ್ಸ್
ಈ ಪಾಲಿಸಿಯು ಆಸ್ಪತ್ರೆಗೆ ದಾಖಲಾಗುವಿಕೆ, ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಹಾಗೂ ಆಸ್ಪತ್ರೆಯಿಂದ ನಿವಾಸಕ್ಕೆ ಹೋಗಲು ತಗುಲುವ ಆ್ಯಂಬ್ಯುಲೆನ್ಸ್ ಶುಲ್ಕಗಳನ್ನು ಕವರ್ ಮಾಡುತ್ತದೆ.
ಏರ್ ಆ್ಯಂಬ್ಯುಲೆನ್ಸ್
ವಿಮೆದಾರರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಬೇಕೆನ್ನುವ ಪರಿಸ್ಥಿತಿ ಎದುರಾದರೆ, ಏರ್ ಆ್ಯಂಬ್ಯುಲೆನ್ಸ್ ಖರ್ಚುಗಳನ್ನು ಸಂಪೂರ್ಣ ಪಾಲಿಸಿ ಅವಧಿಗೆ ವಿಮಾ ಮೊತ್ತದ 10% ವರೆಗೆ ಕವರ್ ಮಾಡುತ್ತದೆ.
ಡೇ ಕೇರ್ ಕಾರ್ಯವಿಧಾನಗಳು
ತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾಗುವಿಕೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಕವರ್ ಮಾಡುತ್ತದೆ.
ಮನೆಯಲ್ಲೇ ಚಿಕಿತ್ಸೆ
ಮೂರು ದಿನಗಳಿಗಿಂತ ಹೆಚ್ಚಿನ ಅವಧಿಗೆ ವೈದ್ಯರ ಸಲಹೆಯ ಮೇರೆಗೆ ಆಯುಷ್ ಸೇರಿದಂತೆ ಮನೆಯಲ್ಲಿಯೇ ಚಿಕಿತ್ಸೆಗೆ ತಗಲುವ ಖರ್ಚುಗಳನ್ನು ಕವರ್ ಮಾಡುತ್ತದೆ.
ಹೋಮ್ಕೇರ್ ಚಿಕಿತ್ಸೆ
ಪಾಲಿಸಿ ವರ್ಷವೊಂದರಲ್ಲಿ ಗರಿಷ್ಠ ರೂ. 5 ಲಕ್ಷಕ್ಕೆ ಒಳಪಟ್ಟು ನಿರ್ದಿಷ್ಟ ಸ್ಥಿತಿಗಳ ಹೋಮ್ಕೇರ್ ಚಿಕಿತ್ಸೆಗಾಗಿ ಉಂಟಾಗುವ ವಿಮೆದಾರರ ಖರ್ಚನ್ನು ವಿಮಾ ಮೊತ್ತದ 10% ವರೆಗೆ ಕವರ್ ಮಾಡುತ್ತದೆ.
ಮಧ್ಯಂತರ ಸೇರ್ಪಡೆ
ನವ ವಿವಾಹಿತ ಸಂಗಾತಿ, ನವಜಾತ ಶಿಶು ಮತ್ತು/ಅಥವಾ ಕಾನೂನುಬದ್ಧವಾಗಿ ದತ್ತು ಪಡೆದ ಮಗುವನ್ನು ಪ್ರಮಾಣಬದ್ಧ ಪ್ರೀಮಿಯಂ ಅನ್ನು ಪಾವತಿಸುವ ಮೂಲಕ ಪಾಲಿಸಿಯಲ್ಲಿ ಸೇರಿಸಿಕೊಳ್ಳಬಹುದು.
ನವಜಾತ ಶಿಶುವಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು
ನವಜಾತ ಶಿಶುವಿನ ಚಿಕಿತ್ಸಾ ಖರ್ಚನ್ನು ಹುಟ್ಟಿದ 1 ನೇ ದಿನದಿಂದ ಪಾವತಿಸಲಾಗುತ್ತದೆ ಮತ್ತು ವಿಮಾ ಮೊತ್ತದ 10% ಮಿತಿ ಮತ್ತು ಗರಿಷ್ಠ ರೂ 2 ಲಕ್ಷಗಳಕ್ಕೆ ಒಳಪಟ್ಟಿರುತ್ತದೆ. ಜನ್ಮಜಾತ ಆಂತರಿಕ ಕಾಯಿಲೆ / ದೋಷಗಳಿಗೆ ಸಂಬಂಧಿಸಿದ ಚಿಕಿತ್ಸೆಗೆ ಇದು ಅನ್ವಯಿಸುವುದಿಲ್ಲ.
ಆಯುಷ್ ಚಿಕಿತ್ಸೆ
ಆಯುಷ್ ಆಸ್ಪತ್ರೆಗಳಲ್ಲಿ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಔಷಧಪದ್ಧತಿಗಳ ಅಡಿಯಲ್ಲಿ ಚಿಕಿತ್ಸೆಗಾಗಿ ತಗಲುವ ಖರ್ಚನ್ನು ಕವರ್ ಮಾಡುತ್ತದೆ.
ಆಧುನಿಕ ಚಿಕಿತ್ಸೆ
ಮಿದುಳಿನ ಆಳ ಪ್ರಚೋದನೆ, ಇಂಟ್ರಾ ವಿಟ್ರೆಲ್ ಇಂಜೆಕ್ಷನ್ಗಳು, ರೋಬೋಟಿಕ್ ಸರ್ಜರಿಗಳು ಮುಂತಾದ ಆಧುನಿಕ ಚಿಕಿತ್ಸೆಗಳಿಗೆ ಉಂಟಾಗುವ ಖರ್ಚನ್ನು ವಿಮಾ ಮೊತ್ತದವರೆಗೆ ಕವರ್ ಮಾಡುತ್ತದೆ.
ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್
ಪಾಲಿಸಿ ಅವಧಿಯಲ್ಲಿ ವಿಮಾ ಮೊತ್ತದ ಭಾಗಶಃ ಅಥವಾ ಪೂರ್ಣ ಬಳಕೆಯ ಮೇಲೆ, ವಿಮಾ ಮೊತ್ತದ 100% ಅನ್ನು ಪಾಲಿಸಿ ವರ್ಷದಲ್ಲಿ ಒಮ್ಮೆ ರಿಸ್ಟೋರ್ ಮಾಡಲಾಗುತ್ತದೆ ಮತ್ತು ಅದನ್ನು ಎಲ್ಲಾ ಕ್ಲೈಮ್ಗಳಿಗೆ ಬಳಸಿಕೊಳ್ಳಬಹುದು.
ಸಂಚಿತ ಬೋನಸ್
ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ವಿಮಾ ಮೊತ್ತದ ಗರಿಷ್ಠ 100% ಗೆ ಒಳಪಟ್ಟು ವಿಮಾ ಮೊತ್ತದ 50% ನಷ್ಟು ಸಂಚಿತ ಬೋನಸ್ ಅನ್ನು ಒದಗಿಸಲಾಗುತ್ತದೆ.
ಮೌಲ್ಯವರ್ಧಿತ ಸೇವೆಗಳು
ಈ ಪಾಲಿಸಿಯು ಸ್ಟಾರ್ ಟೆಲಿ-ಹೆಲ್ತ್ ಸೇವೆಗಳು, ವೈದ್ಯಕೀಯ ಪ್ರಾಶಸ್ತ್ಯದ ಸೇವೆ, ಡಿಜಿಟಲ್ ಹೆಲ್ತ್ ವಾಲ್ಟ್, ಸ್ವಾಸ್ಥ್ಯ ವಿಷಯ, ಪೋಸ್ಟ್ ಆಪರೇಟಿವ್ ಕೇರ್, ನೆಟ್ವರ್ಕ್ ಪೂರೈಕೆದಾರರಿಂದ ಡಿಸ್ಕೌಂಟ್ಗಳು ಸೇರಿದಂತೆ ಮೌಲ್ಯವರ್ಧಿತ ಸೇವೆಗಳನ್ನು ಒದಗಿಸುತ್ತದೆ.
ಐಚ್ಛಿಕ ಕವರ್ಗಳು (ಹೆಚ್ಚುವರಿ ಪ್ರೀಮಿಯಂ ಪಾವತಿಯ ಮೇಲೆ ಲಭ್ಯವಿದೆ)
ಸಂಚಿತ ಬೋನಸ್ ಬೂಸ್ಟರ್
ಈ ಐಚ್ಛಿಕ ಕವರ್ ವಿಮೆದಾರರಿಗೆ ವಿಮಾ ಮೊತ್ತದ ಗರಿಷ್ಠ 600% ಗೆ ಒಳಪಟ್ಟು ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ವಿಮಾ ಮೊತ್ತದ 50% ನಷ್ಟು ಹೆಚ್ಚುವರಿ ಸಂಚಿತ ಬೋನಸ್ ಅನ್ನು ಪಡೆಯಲು ಅರ್ಹತೆ ನೀಡುತ್ತದೆ. ಆಯ್ಕೆ ಮಾಡಿದ ವಿಮಾ ಮೊತ್ತವು ರೂ.10 ಲಕ್ಷ ಮತ್ತು ಹೆಚ್ಚಿನದಾಗಿದ್ದರೆ ಇದು ಅನ್ವಯಿಸುತ್ತದೆ.
ಕೊಠಡಿ ವರ್ಗದ ಮಾರ್ಪಾಡು
ಈ ಕವರ್ ವಿಮೆದಾರರಿಗೆ ಖಾಸಗಿ ಸಿಂಗಲ್ ಎ/ಸಿ ರೂಮ್ನಿಂದ ಯಾವುದೇ ರೂಮ್ / ಹಂಚಿಕೊಂಡ ವಸತಿಗೆ ಕೊಠಡಿ ವರ್ಗವನ್ನು ಹೆಚ್ಚಿಸಲು/ಕಡಿಮೆ ಮಾಡಲು ಅರ್ಹತೆ ನೀಡುತ್ತದೆ.
ಪೂರ್ವಾಸ್ತಿತ್ವದ ಕಾಯಿಲೆಗಳ ವೇಟಿಂಗ್ ಅವಧಿಯ ಕಡಿತ
ಈ ಐಚ್ಛಿಕ ಕವರ್ನ ಮೂಲಕ, ವಿಮೆದಾರರು ಪೂರ್ವಾಸ್ತಿತ್ವದ ಕಾಯಿಲೆಗಳ ವೇಟಿಂಗ್ ಅವಧಿಯನ್ನು 48 ತಿಂಗಳುಗಳಿಂದ 36/24/12 ತಿಂಗಳುಗಳಿಗೆ ಕಡಿಮೆ ಮಾಡಬಹುದು. ಇದು ಈ ಪಾಲಿಸಿಯ ಮೊದಲ ಖರೀದಿಗೆ ಮಾತ್ರ ಅನ್ವಯಿಸುತ್ತದೆ.
ವೈದ್ಯಕೀಯೇತರ ಐಟಂಗಳಿಗೆ ಕವರೇಜ್ (ಉಪಭೋಗ್ಯ ವಸ್ತುಗಳು)
ಪಾಲಿಸಿಯ ಅಡಿಯಲ್ಲಿ ಒಳರೋಗಿ / ಡೇ ಕೇರ್ ಚಿಕಿತ್ಸೆಗಾಗಿ ಕ್ಲೈಮ್ ಸ್ವೀಕಾರಾರ್ಹವಾಗಿದ್ದರೆ ಪಾಲಿಸಿ ವಿವರಪಟ್ಟಿಯ ಪಟ್ಟಿ I ರಲ್ಲಿ ನಿರ್ದಿಷ್ಟಪಡಿಸಿದ ವೈದ್ಯಕೀಯೇತರ ಐಟಂಗಳಿಗೆ ಕವರೇಜ್ ಅನ್ನು ಪಾವತಿಸಲಾಗುತ್ತದೆ.
ವಿಮಾ ಮೊತ್ತದ ಅನಿಯಮಿತ ಆಟೋಮ್ಯಾಟಿಕ್ ರಿಸ್ಟೋರೇಷನ್
ವಿಮಾ ಮೊತ್ತದ ಭಾಗಶಃ ಅಥವಾ ಪೂರ್ಣ ಬಳಕೆಯ ನಂತರ, ವಿಮಾ ಮೊತ್ತದ 100% ಅನ್ನು ಅನಿಯಮಿತ ಸಂಖ್ಯೆಯ ಬಾರಿ ಆಟೋಮ್ಯಾಟಿಕ್ ಆಗಿ ರಿಸ್ಟೋರ್ ಮಾಡಲಾಗುತ್ತದೆ, ಅದನ್ನು ನಂತರದ ಆಸ್ಪತ್ರೆಗೆ ದಾಖಲಾಗುವಿಕೆಗೆ ಬಳಸಿಕೊಳ್ಳಬಹುದು.
ಪಾಲಿಸಿ ವಿವರಗಳು ಹಾಗೂ ಕರಾರುಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ದಾಖಲೆಯನ್ನು ಓದಿ.
ದೀರ್ಘಕಾಲಿಕ ಡಿಸ್ಕೌಂಟ್: ಒಂದು ವೇಳೆ ಪಾಲಿಸಿ ಅವಧಿಯು 2 ವರ್ಷಗಳಾಗಿದ್ದರೆ, 2ನೇ ವರ್ಷದ ಪ್ರೀಮಿಯಂನಲ್ಲಿ 10% ಡಿಸ್ಕೌಂಟ್ ಲಭ್ಯವಿರುತ್ತದೆ ಮತ್ತು ಪಾಲಿಸಿ ಅವಧಿಯು 3 ವರ್ಷಗಳಾಗಿದ್ದರೆ, 3ನೇ ವರ್ಷದ ಪ್ರೀಮಿಯಂನಲ್ಲಿ 12.5% ಡಿಸ್ಕೌಂಟ್ ಲಭ್ಯವಿದೆ.
ಫ್ಲೋಟರ್ ಕವರ್ ಅಡಿಯಲ್ಲಿ, ಪ್ರತಿ ವಯಸ್ಕರಿಗೆ ವೈಯಕ್ತಿಕ ಪ್ರೀಮಿಯಂನಲ್ಲಿ 20% ಫ್ಲೋಟರ್ ಡಿಸ್ಕೌಂಟ್ ಅನ್ವಯಿಸುತ್ತದೆ ಮತ್ತು ಚೈಲ್ಡ್ ಪ್ರೀಮಿಯಂನಲ್ಲಿ ಈ ಫ್ಲೋಟರ್ ಡಿಸ್ಕೌಂಟ್ ಅನ್ವಯಿಸುವುದಿಲ್ಲ.
ವೈದ್ಯಕೀಯ ಅಂಡರ್ರೈಟಿಂಗ್ ಲೋಡಿಂಗ್ ಅನ್ನು ಪ್ರತಿಯೊಬ್ಬ ವ್ಯಕ್ತಿಗೆ (ವಯಸ್ಕ ಅಥವಾ ಮಗು) ಪ್ರತ್ಯೇಕವಾಗಿ ಅನ್ವಯಿಸಲಾಗುತ್ತದೆ
ಪ್ರೀಮಿಯಂ ಲೋಡಿಂಗ್ ಮತ್ತು ಐಚ್ಛಿಕ ಕವರ್ಗಳನ್ನು ಆಯ್ಕೆ ಮಾಡಲು ಡಿಸ್ಕೌಂಟ್
ಕವರ್ ಹೆಸರು
ಡಿಸ್ಕೌಂಟ್ / ಲೋಡಿಂಗ್ %
ಸಂಚಿತ ಬೋನಸ್ ಬೂಸ್ಟರ್
5% ಲೋಡಿಂಗ್
ಕೊಠಡಿ ವರ್ಗದ ಮಾರ್ಪಾಡು
ಯಾವುದೇ ಕೊಠಡಿ
10% ಲೋಡಿಂಗ್
ಹಂಚಿಕೊಂಡ ವಸತಿ
7.5 % ಡಿಸ್ಕೌಂಟ್
ಪೂರ್ವಾಸ್ತಿತ್ವದ ಕಾಯಿಲೆಗಳ ವೇಟಿಂಗ್ ಅವಧಿಯ ಕಡಿತ
ವೇಟಿಂಗ್ ಅವಧಿಯಲ್ಲಿ ಬದಲಾವಣೆ
ಲೋಡಿಂಗ್ (ಒಂದು ಬಾರಿ ಮಾತ್ರ ಅನ್ವಯಿಸುತ್ತದೆ)
48 ತಿಂಗಳಿಂದ 36 ತಿಂಗಳವರೆಗೆ
15%
48 ತಿಂಗಳಿಂದ 24 ತಿಂಗಳವರೆಗೆ
35%
48 ತಿಂಗಳಿಂದ 12 ತಿಂಗಳವರೆಗೆ
50%
ವೈದ್ಯಕೀಯೇತರ ಐಟಂಗಳಿಗೆ ಕವರೇಜ್ (ಉಪಭೋಗ್ಯ ವಸ್ತುಗಳು)
7.5% ಲೋಡಿಂಗ್
ವಿಮಾ ಮೊತ್ತದ ಅನಿಯಮಿತ ಆಟೋಮ್ಯಾಟಿಕ್ ರಿಸ್ಟೋರೇಷನ್
5% ಲೋಡಿಂಗ್
ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮ
ಈ ಕಾರ್ಯಕ್ರಮವು ವಿವಿಧ ಸ್ವಾಸ್ಥ್ಯ ಚಟುವಟಿಕೆಗಳ ಮೂಲಕ ವಿಮೆದಾರರ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು, ಪ್ರೋತ್ಸಾಹಿಸಲು ಮತ್ತು ರಿವಾರ್ಡ್ ನೀಡುವ ಉದ್ದೇಶವನ್ನು ಹೊಂದಿದೆ. ಕೆಳಗೆ ನೀಡಲಾಗಿರುವ ಸ್ವಾಸ್ಥ್ಯ ಚಟುವಟಿಕೆಗಳನ್ನು ವಿಮೆದಾರರಿಗೆ ಸ್ವಾಸ್ಥ್ಯ ರಿವಾರ್ಡ್ ಪಾಯಿಂಟ್ಗಳನ್ನು ಗಳಿಸಲು ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಅದನ್ನು ಕಂಪನಿಯು ಟ್ರ್ಯಾಕ್ ಮಾಡುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ. ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ವಿಮೆದಾರರು ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳನ್ನು ಪ್ರೀಮಿಯಂನಲ್ಲಿ ಡಿಸ್ಕೌಂಟ್ ಪಡೆಯಲು ಬಳಸಿಕೊಳ್ಳಬಹುದು.
ಈ ಸ್ವಾಸ್ಥ್ಯ ಕಾರ್ಯಕ್ರಮವನ್ನು ಸ್ಟಾರ್ ಹೆಲ್ತ್ ಮೊಬೈಲ್ ಅಪ್ಲಿಕೇಶನ್ಗಳ ಮೂಲಕ ಆನ್ಲೈನ್ನಲ್ಲಿ ದೊರೆಯುವಂತೆ ಮಾಡಲಾಗಿದೆ ಮತ್ತು ನಿರ್ವಹಿಸಲಾಗುತ್ತದೆ.
ಗಮನಿಸಿ: ಕೆಳಗಿನ ಕೋಷ್ಟಕದಲ್ಲಿ ಉಲ್ಲೇಖಿಸಲಾದ ಸ್ವಾಸ್ಥ್ಯ ಚಟುವಟಿಕೆಗಳು (ಕ್ರಮ ಸಂಖ್ಯೆ 1 ರಿಂದ 6 ರವರೆಗೆ) 18 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಿಮೆದಾರರಿಗೆ (ಗಳಿಗೆ) ಮಾತ್ರ ಅನ್ವಯಿಸುತ್ತವೆ.
ಕೆಳಗಿನ ಕೋಷ್ಟಕವು ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಲಭ್ಯವಿರುವ ಪ್ರೀಮಿಯಂ ಮೇಲಿನ ಡಿಸ್ಕೌಂಟ್ ಅನ್ನು ವಿವರಿಸುತ್ತದೆ;
ಗಳಿಸಿದ ಸ್ವಾಸ್ತ್ಯ ಪಾಯಿಂಟ್ಗಳು
ಪ್ರೀಮಿಯಂನಲ್ಲಿ ಡಿಸ್ಕೌಂಟ್
200 ರಿಂದ 350
4%
351 ರಿಂದ 600
10%
601 ರಿಂದ 750
14%
751 ಮತ್ತು ಅಧಿಕ
20%
*ಫ್ಲೋಟರ್ ಪಾಲಿಸಿಯ ಸಂದರ್ಭದಲ್ಲಿ ಕೆಳಗಿನ ಕೋಷ್ಟಕದ ಪ್ರಕಾರ ವೈಟೇಜ್ ಅನ್ನು ನೀಡಲಾಗುತ್ತದೆ :
ಕುಟುಂಬದ ಗಾತ್ರ
ವೈಟೇಜ್
ಸ್ವತಃ, ಸಂಗಾತಿ**
1:1
ಸ್ವತಃ, ಸಂಗಾತಿ ** ಮತ್ತು ಅವಲಂಬಿತ ಮಕ್ಕಳು (18 ವರ್ಷಗಳವರೆಗೆ)
1:1:0:0:0
ಸ್ವತಃ, ಸಂಗಾತಿ** ಮತ್ತು ಅವಲಂಬಿತ ಮಕ್ಕಳು (18 ವರ್ಷಕ್ಕಿಂತ ಮೇಲ್ಪಟ್ಟವರು)
2:2:1:1:1
**ಸಂಗಾತಿ/ಲಿವ್-ಇನ್ ಪಾಲುದಾರರು/ಸಲಿಂಗ ಸಂಗಾತಿ
ಗಮನಿಸಿ: ಎರಡು ವರ್ಷ ಮತ್ತು ಮೂರು ವರ್ಷಗಳ ಪಾಲಿಸಿಗಳ ಸಂದರ್ಭದಲ್ಲಿ, ಎರಡು ವರ್ಷ ಮತ್ತು ಮೂರು ವರ್ಷಗಳ ಅವಧಿಯಲ್ಲಿ ಗಳಿಸಿದ ಒಟ್ಟು ಸ್ವಾಸ್ಥ್ಯ ಪಾಯಿಂಟ್ಗಳನ್ನು ಕ್ರಮವಾಗಿ ಎರಡು ಮತ್ತು ಮೂರರಿಂದ ಭಾಗಿಸಲಾಗುತ್ತದೆ.
ಮ್ಯಾಮೊಗ್ರಫಿ ಮತ್ತು PAP ಪರೀಕ್ಷೆ (ಮಹಿಳೆಯರಿಗಾಗಿ) ವರದಿಯ ಸಲ್ಲಿಕೆಗಾಗಿ
20
11.
ಪ್ರಾಸ್ಟೇಟ್ ನಿರ್ದಿಷ್ಟ ಪ್ರತಿಜನಕ (PSA) ಪರೀಕ್ಷಾ ವರದಿಯನ್ನು ಸಲ್ಲಿಕೆಗಾಗಿ (50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ)
20
12.
ಗ್ಲುಕೋಮಾ ತಪಾಸಣೆ (50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ)
20
1. ಸ್ವಾಸ್ಥ್ಯ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದಕ್ಕಾಗಿ ಸೈನ್-ಅಪ್ ಪಾಯಿಂಟ್ಗಳು: ಸ್ಟಾರ್ ಹೆಲ್ತ್ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದಕ್ಕೆ ವಿಮೆದಾರರು 100 ರಿವಾರ್ಡ್ ಪಾಯಿಂಟ್ಗಳನ್ನು ಗಳಿಸಬಹುದು.
2. ಆರೋಗ್ಯವನ್ನು ನಿರ್ವಹಿಸಿ ಮತ್ತು ಟ್ರ್ಯಾಕ್ ಮಾಡಿ
a)ಆರೋಗ್ಯ ಅಪಾಯದ ಮೌಲ್ಯಮಾಪನ (HRA) ಪ್ರಶ್ನಾವಳಿಯು ವಿಮೆದಾರರ ಆರೋಗ್ಯ ಮತ್ತು ಜೀವನದ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವ ಆನ್ಲೈನ್ ಸಾಧನವಾಗಿದೆ. ಇದು ವಿಮೆದಾರರಿಗೆ ತಮ್ಮ ವೈಯಕ್ತಿಕ ಜೀವನಶೈಲಿಯ ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ. ವಿಮೆದಾರರು www.starhealth.in ವೆಬ್ಸೈಟ್ ಮೂಲಕ ತಮ್ಮ ಖಾತೆಗೆ ಲಾಗ್ ಇನ್ ಮಾಡಬಹುದು ಮತ್ತು HRA ಪ್ರಶ್ನಾವಳಿಯನ್ನು ಪೂರ್ಣಗೊಳಿಸಬಹುದು. ವಿಮೆದಾರರು ಪ್ರತಿ ಪಾಲಿಸಿ ವರ್ಷಕ್ಕೆ ಒಂದು ಬಾರಿ ಇದನ್ನು ತೆಗೆದುಕೊಳ್ಳಬಹುದಾಗಿದೆ.
ಆನ್ಲೈನ್ HRA ಪ್ರಶ್ನಾವಳಿಯನ್ನು ಪೂರ್ಣಗೊಳಿಸಿದ ನಂತರ, ವಿಮೆದಾರರು 150 ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ.
ಗಮನಿಸಿ: HRA ಅಡಿಯಲ್ಲಿ ನಮೂದಿಸಲಾದ ಸ್ವಾಸ್ಥ್ಯ ಪಾಯಿಂಟ್ಗಳನ್ನು ಪಡೆಯಲು, ವಿಮೆದಾರರು ತಾವು HRA ಚಟುವಟಿಕೆಯನ್ನು ಪ್ರಾರಂಭಿಸಿದ ಒಂದು ತಿಂಗಳೊಳಗೆ ಸಂಪೂರ್ಣ HRA ಅನ್ನು ಪೂರ್ಣಗೊಳಿಸಬೇಕು.
b)ಮುನ್ನೆಚ್ಚರಿಕಾ ಅಪಾಯದ ಮೌಲ್ಯಮಾಪನ: ವಿಮೆದಾರರು ಪಾಲಿಸಿ ವರ್ಷದಲ್ಲಿ ಡಯಾಗ್ನೋಸ್ಟಿಕ್ / ಮುನ್ನೆಚ್ಚರಿಕಾ ಪರೀಕ್ಷೆಗಳಿಗೆ ಒಳಗಾಗುವ ಮೂಲಕ ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸಬಹುದು. ಈ ಪರೀಕ್ಷೆಗಳು ಕೆಳಗೆ ತಿಳಿಸಲಾದ ನಾಲ್ಕು ಕಡ್ಡಾಯ ಪರೀಕ್ಷೆಗಳನ್ನು ಒಳಗೊಂಡಿರಬೇಕು. ವಿಮೆದಾರರು ಈ ಪರೀಕ್ಷೆಗಳನ್ನು ಯಾವುದೇ ಡಯಾಗ್ನೋಸ್ಟಿಕ್ ಕೇಂದ್ರದಲ್ಲಿ ಅವರ ಸ್ವಂತ ವೆಚ್ಚದಲ್ಲಿ ಮಾಡಿಸಿಕೊಳ್ಳಬೇಕು.
-ಪರೀಕ್ಷಾ ವರದಿಗಳನ್ನು ಸಲ್ಲಿಸಿದ ನಂತರ, ವಿಮೆದಾರರು 200 ರಿವಾರ್ಡ್ ಪಾಯಿಂಟ್ಗಳನ್ನು ಗಳಿಸುತ್ತಾರೆ.
ಗಮನಿಸಿ: ಈ ಪರೀಕ್ಷೆಗಳ ವರದಿಗಳನ್ನು ಒಟ್ಟಿಗೆ ಮತ್ತು ಅಂತಹ ಆರೋಗ್ಯ ತಪಾಸಣೆಗೆ ಒಳಗಾದ ದಿನಾಂಕದಿಂದ 30 ದಿನಗಳೊಳಗೆ ಸಲ್ಲಿಸಬೇಕು.
ಮುನ್ನೆಚ್ಚರಿಕಾ ಆಪಾಯದ ಮೌಲ್ಯಮಾಪನದ ಅಡಿಯಲ್ಲಿ ಕಡ್ಡಾಯ ಪರೀಕ್ಷೆಗಳ ಪಟ್ಟಿ
1. ಸಂಪೂರ್ಣ ಹಿಮೋಗ್ರಾಮ್ ಪರೀಕ್ಷೆ
2. ರಕ್ತದ ಸಕ್ಕರೆ (ಆಹಾರಸೇವನೆ ಪೂರ್ವದಲ್ಲಿ ರಕ್ತದಲ್ಲಿ ಸಕ್ಕರೆ (FBS) + ಆಹಾರ ಸೇವನೆಯ ನಂತರದ ಪರೀಕ್ಷೆ (PP) [ಅಥವಾ] HbA1c)
3.ಸ್ವಾಸ್ಥ್ಯ ಮೈತ್ರಿ: ಕೆಳಗೆ ನೀಡಿರುವಂತೆ ಯಾವುದೇ ಫಿಟ್ನೆಸ್ ಮತ್ತು ಆರೋಗ್ಯ ಸಂಬಂಧಿತ ಚಟುವಟಿಕೆಗಳನ್ನು ಮಾಡಿದ್ದಕ್ಕಾಗಿ ವಿಮೆದಾರರು ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ. ಫಿಟ್ನೆಸ್ ಉಪಕ್ರಮಗಳು ಮತ್ತು ಸ್ವಾಸ್ಥ್ಯ ಪಾಯಿಂಟ್ಗಳ ಪಟ್ಟಿ:
ಉಪಕ್ರಮ
ಸ್ವಾಸ್ಥ್ಯ ಪಾಯಿಂಟ್ಗಳು
a.
ವಾಕಥಾನ್, ಮ್ಯಾರಥಾನ್, ಸೈಕ್ಲೋಥಾನ್ ಮತ್ತು ಅಂತಹುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದು
200
-ಈವೆಂಟ್ನಲ್ಲಿ ಭಾಗವಹಿಸಲು ತೆಗೆದುಕೊಂಡ ಪ್ರವೇಶ ಟಿಕೆಟ್ನ ವಿವರಗಳೊಂದಿಗೆ BIB ಸಂಖ್ಯೆಯನ್ನು ಸಲ್ಲಿಸಿದ ನಂತರ ಮತ್ತು/ಅಥವಾ
-ಸ್ಟಾರ್ ಹೆಲ್ತ್ ಮೊಬೈಲ್ ಅಪ್ಲಿಕೇಶನ್ನಲ್ಲಿ 20,000 ಸ್ಟೆಪ್ಗಳ ಎಣಿಕೆಯನ್ನು ಸಾಧಿಸಿದಾಗ
b.
ಆರೋಗ್ಯ ಕ್ಲಬ್ನಲ್ಲಿ ಸದಸ್ಯತ್ವ (ಪ್ರತಿ ತ್ರೈಮಾಸಿಕಕ್ಕೆ 50 ಪಾಯಿಂಟ್ಗಳು) - ಜಿಮ್ / ಯೋಗ ಕೇಂದ್ರ / ಜುಂಬಾ ತರಗತಿಗಳು / ಏರೋಬಿಕ್ ವ್ಯಾಯಾಮ / ಕ್ರೀಡಾ ಕ್ಲಬ್ / ಪೈಲೇಟ್ಸ್ ತರಗತಿಗಳು / ಈಜು / ತೈ ಚಿ / ಮಾರ್ಷಲ್ ಆರ್ಟ್ಸ್ / ಜಿಮ್ನಾಸ್ಟಿಕ್ಸ್ / ನೃತ್ಯ ತರಗತಿಗಳಲ್ಲಿ
200
ಗಮನಿಸಿ: ವಿಮೆದಾರರು ಯಾವುದೇ ಆರೋಗ್ಯ ಕ್ಲಬ್ನ ಸದಸ್ಯರಲ್ಲದಿದ್ದರೆ, ಪಾಲಿಸಿ ಅಪಾಯದ ಪ್ರಾರಂಭದ ದಿನಾಂಕದಿಂದ 3 ತಿಂಗಳೊಳಗೆ ಅವರು ಕ್ಲಬ್ಗೆ ಸೇರಬೇಕು. ವಿಮೆದಾರರು ಆರೋಗ್ಯ ಕ್ಲಬ್ ಸದಸ್ಯತ್ವವನ್ನು ಸಲ್ಲಿಸಬೇಕು.
4.ಸಕ್ರಿಯರಾಗಿರಿ: ಕೆಳಗೆ ತಿಳಿಸಿದಂತೆ ಸ್ಟಾರ್ ಮೊಬೈಲ್ ಅಪ್ಲಿಕೇಶನ್ನಲ್ಲಿ ಸ್ಟೆಪ್ ಎಣಿಕೆ ಗುರಿಯನ್ನು ಸಾಧಿಸಿದ್ದಕ್ಕಾಗಿ ವಿಮೆದಾರರು ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ:
ರಿವಾರ್ಡ್ ಪಾಯಿಂಟ್ಗಳನ್ನು ಪಡೆಯಲು ಮಾನದಂಡ
ತಿಂಗಳಿನ 16 ದಿನಗಳಿಗೆ ಪ್ರತಿ ದಿನಕ್ಕೆ ಸ್ಟೆಪ್ಗಳ ಸಂಖ್ಯೆಯು ಕನಿಷ್ಠ 8,000 ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ, ಅದನ್ನು ಒಂದು ಸಕ್ರಿಯ ತಿಂಗಳು ಎಂದು ಪರಿಗಣಿಸಲಾಗುತ್ತದೆ ಮತ್ತು ವಿಮೆದಾರರು 20 ರಿವಾರ್ಡ್ ಪಾಯಿಂಟ್ಗಳನ್ನು ಪಡೆಯುತ್ತಾರೆ.
ಗಮನಿಸಿ:
ಒಂದು ವೇಳೆ ವಿಮೆದಾರರು ಪಾಲಿಸಿ ವರ್ಷದಲ್ಲಿ 10 ಸಕ್ರಿಯ ತಿಂಗಳುಗಳನ್ನು ಸಾಧಿಸಿದರೆ, ಅವರು ಬೋನಸ್ ಆಗಿ 50 ಹೆಚ್ಚುವರಿ ಪಾಯಿಂಟ್ಗಳನ್ನು ಪಡೆಯುತ್ತಾರೆ.
ಸಕ್ರಿಯರಾಗಿರಿ ಅಡಿಯಲ್ಲಿ ಪ್ರತಿ ದಿನದ ಸರಾಸರಿ ಸ್ಟೆಪ್ಗಳ ಲೆಕ್ಕಾಚಾರದಲ್ಲಿ ಪ್ರತಿ ಪಾಲಿಸಿ ವರ್ಷದ ಮೊದಲನೇ ತಿಂಗಳು ಮತ್ತು ಕೊನೆಯ ತಿಂಗಳುಗಳನ್ನು ಪರಿಗಣಿಸಲಾಗುವುದಿಲ್ಲ.
ಈ ಪ್ರಯೋಜನವನ್ನು ಪಡೆದುಕೊಳ್ಳಲು ಪಾಲಿಸಿ ಅಪಾಯದ ಪ್ರಾರಂಭ ದಿನಾಂಕದ 30 ದಿನಗಳೊಳಗೆ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು.
ವಿಮೆದಾರ ಸದಸ್ಯರು ಪೂರ್ಣಗೊಳಿಸಿದ ಸರಾಸರಿ ಸ್ಟೆಪ್ಗಳ ಎಣಿಕೆಯನ್ನು 'ಸ್ಟಾರ್ ಮೊಬೈಲ್ ಅಪ್ಲಿಕೇಶನ್' ನಲ್ಲಿ ಟ್ರ್ಯಾಕ್ ಮಾಡಲಾಗುತ್ತದೆ.
5. ಸ್ಥಿತಿ ನಿರ್ವಹಣಾ ಕಾರ್ಯಕ್ರಮ
(i) ತೂಕ ನಿರ್ವಹಣಾ ಕಾರ್ಯಕ್ರಮ:
a)ಈ ಕಾರ್ಯಕ್ರಮವು ಅಧಿಕ ತೂಕ ಮತ್ತು ಸ್ಥೂಲಕಾಯ ಹೊಂದಿರುವ ವಿಮೆದಾರರಿಗೆ ತಮ್ಮ ಬಾಡಿ ಮಾಸ್ ಇಂಡೆಕ್ಸ್ (BMI) ಅನ್ನು ಪಟ್ಟಿಮಾಡಿದ ಸ್ವಾಸ್ಥ್ಯ ತಜ್ಞರ ಮೂಲಕ ನಿರ್ವಹಿಸಲು ಸಹಾಯ ಮಾಡುತ್ತದೆ, ಅವರು ಹೆಚ್ಚಿನ ತೂಕವನ್ನು ಕಳೆದುಕೊಳ್ಳಲು ಮತ್ತು ಅವರ BMI ಅನ್ನು ಕಾಪಾಡಿಕೊಳ್ಳಲು ವಿಮೆದಾರರಿಗೆ ಮಾರ್ಗದರ್ಶನ ನೀಡುತ್ತಾರೆ. -ಕೆಳಗೆ ತಿಳಿಸಿದಂತೆ ಫಲಿತಾಂಶಗಳನ್ನು ಸಾಧಿಸಿದರೆ ಮತ್ತು ನಿರ್ವಹಿಸಿದರೆ 150 ಸ್ವಾಸ್ಥ್ಯ ಪಾಯಿಂಟ್ಗಳನ್ನು ನೀಡಲಾಗುತ್ತದೆ.
ಕ್ರಮ ಸಂಖ್ಯೆ
ಕಾಯಿಲೆಯ ಹೆಸರು
ಸಲ್ಲಿಸಬೇಕಾದ ಮೌಲ್ಯಗಳು
ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸಲು ಮಾನದಂಡ
1.
ಬೊಜ್ಜು (BMI 29 ಕ್ಕಿಂತ ಹೆಚ್ಚಿದ್ದರೆ)
ಎತ್ತರ ಮತ್ತು ತೂಕ (BMI ಕಂಡುಹಿಡಿಯಲು)
18 ಮತ್ತು 29 ರ ನಡುವಿನ BMI ಅನ್ನು ಸಾಧಿಸುವುದು ಮತ್ತು ಕಾಪಾಡಿಕೊಳ್ಳುವುದು
2.
ಅಧಿಕ ತೂಕ (BMI 25 ಮತ್ತು 29 ರ ನಡುವೆ ಇದ್ದರೆ)
ಎತ್ತರ ಮತ್ತು ತೂಕ (BMI ಕಂಡುಹಿಡಿಯಲು)
BMI ಅನ್ನು ಎರಡು ಪಾಯಿಂಟ್ ಕಡಿಮೆ ಮಾಡುವುದು ಮತ್ತು ಪಾಲಿಸಿ ವರ್ಷದಲ್ಲಿ ಅದೇ BMI ಅನ್ನು ಕಾಪಾಡಿಕೊಳ್ಳುವುದು
- ಮೌಲ್ಯಗಳನ್ನು (BMI ಗಾಗಿ) ಪ್ರತಿ 2 ತಿಂಗಳಿಗೊಮ್ಮೆ ಸಲ್ಲಿಸಬೇಕು (ಪ್ರತಿ ಪಾಲಿಸಿ ವರ್ಷದಲ್ಲಿ 5 ಬಾರಿ)
ವಿಮೆದಾರರು ಅಧಿಕ ತೂಕ / ಬೊಜ್ಜು ಹೊಂದಿಲ್ಲ, ವಿಮೆದಾರರು ನಮ್ಮೊಂದಿಗೆ ಸ್ಟಾರ್ ಸ್ವಾಸ್ಥ್ಯ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರ/ಆಕೆಯ 'ಸಕ್ರಿಯ ಜೀವನ ಯಶಸ್ಸಿನ ಕಥೆ'ಯನ್ನು ಸಲ್ಲಿಸಬಹುದು. ಸ್ಟಾರ್ ಸ್ವಾಸ್ಥ್ಯ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಕ್ರಿಯ ಜೀವನದ ಯಶಸ್ಸಿನ ಕಥೆಯನ್ನು ಸಲ್ಲಿಸಿದ ನಂತರ, ವಿಮೆದಾರರು 50 ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸುತ್ತಾರೆ.
(ii)ದೀರ್ಘಕಾಲಿಕ ಸ್ಥಿತಿ ನಿರ್ವಹಣಾ ಕಾರ್ಯಕ್ರಮ:
a)ಈ ಕಾರ್ಯಕ್ರಮವು ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಪರಿಚಲನಾ ಕಾಯಿಲೆ ಅಥವಾ ಆಸ್ತಮಾದಿಂದ ಬಳಲುತ್ತಿರುವ ವಿಮೆದಾರರಿಗೆ ಆರೋಗ್ಯ ಸ್ಥಿತಿಯನ್ನು ಕಾಪಾಡಿಕೊಳ್ಳಲು/ಸುಧಾರಿಸಲು ವಿಮೆದಾರರಿಗೆ ಮಾರ್ಗದರ್ಶನ ನೀಡುವ ಪಟ್ಟಿಮಾಡಿದ ಸ್ವಾಸ್ಥ್ಯ ತಜ್ಞರ ಮೂಲಕ ಅವರ ಆರೋಗ್ಯವನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.
-ವಿಮೆದಾರರು ಪ್ರತಿ 3 ತಿಂಗಳಿಗೊಮ್ಮೆ ಪರೀಕ್ಷಾ ಫಲಿತಾಂಶ ಮೌಲ್ಯಗಳನ್ನು ಪಾಲಿಸಿ ವರ್ಷದಲ್ಲಿ ಗರಿಷ್ಠ 3 ಬಾರಿ ಸಲ್ಲಿಸಬೇಕು. -ಪರೀಕ್ಷಾ ಫಲಿತಾಂಶದ ಮೌಲ್ಯಗಳು ಕೆಳಗೆ ನೀಡಲಾದ ಮೌಲ್ಯಗಳ +/- 10% ವ್ಯಾಪ್ತಿಯಲ್ಲಿದ್ದರೆ, ಪಾಲಿಸಿ ವರ್ಷದಲ್ಲಿ ಕನಿಷ್ಠ 2 ಬಾರಿ, 150 ಸ್ವಾಸ್ಥ್ಯ ಪಾಯಿಂಟ್ಗಳನ್ನು ನೀಡಲಾಗುತ್ತದೆ. -ಈ ಪರೀಕ್ಷಾ ವರದಿಗಳನ್ನು ಆರೋಗ್ಯ ತಪಾಸಣೆಗೆ ಒಳಪಟ್ಟ ದಿನಾಂಕದಿಂದ 1 ತಿಂಗಳೊಳಗೆ ಸಲ್ಲಿಸಬೇಕು
ಕ್ರಮ ಸಂಖ್ಯೆ
ಕಾಯಿಲೆಯ ಹೆಸರು
ಸಲ್ಲಿಸಬೇಕಾದ ಪರೀಕ್ಷೆಗಳು
ಹೆಚ್ಚುವರಿ ಸ್ವಾಸ್ಥ್ಯ ಪಾಯಿಂಟ್ಗಳನ್ನು ಗಳಿಸಲು ಮೌಲ್ಯಗಳ ಮಾನದಂಡ
1.
ಮಧುಮೇಹ (ವಿಮೆದಾರರು HbA1c ಪರೀಕ್ಷಾ ಮೌಲ್ಯವನ್ನು ಸಲ್ಲಿಸಬಹುದು (ಅಥವಾ) ಆಹಾರಸೇವನೆ ಪೂರ್ವದಲ್ಲಿ ರಕ್ತದಲ್ಲಿ ಸಕ್ಕರೆ (FBS) ರೇಂಜ್ ಮತ್ತು ಆಹಾರಸೇವನೆ ನಂತರದ ಪರೀಕ್ಷಾ ಮೌಲ್ಯ)
HbA1c
≤ 6.5
ಆಹಾರಸೇವನೆ ಪೂರ್ವದಲ್ಲಿ ರಕ್ತದಲ್ಲಿ ಸಕ್ಕರೆ (FBS) ರೇಂಜ್ ಮತ್ತು ಆಹಾರಸೇವನೆ ನಂತರದ ಪರೀಕ್ಷಾ ಮೌಲ್ಯ
160 mg/dl ಗಿಂತ ಕಡಿಮೆ 100 ರಿಂದ 125 mg/dl
2.
ಅಧಿಕ ರಕ್ತದೊತ್ತಡ
ಇದರಿಂದ ಅಳೆಯಲಾಗುತ್ತದೆ - ಬಿಪಿ ಉಪಕರಣ
ಸಿಸ್ಟೊಲಿಕ್ ರೇಂಜ್ - 110 ರಿಂದ 140 mmHg ಡಯಾಸ್ಟೊಲಿಕ್ ರೇಂಜ್ - 70 ರಿಂದ 90 mmHg
3.
ಹೃದ್ರೋಗ
LDL ಕೊಲೆಸ್ಟ್ರಾಲ್ 100 ರಿಂದ 159 mg/dl ಒಟ್ಟು ಕೊಲೆಸ್ಟರಾಲ್ / HDL ಕೊಲೆಸ್ಟರಾಲ್ ಅನುಪಾತ
100 ರಿಂದ 159 mg/dl ≤ 4.0
4.
ಅಸ್ತಮಾ
PFT (ಪಲ್ಮನರಿ ಫಂಕ್ಷನ್ ಟೆಸ್ಟ್)
FEV1 (PFC) 75% ಅಥವಾ ಹೆಚ್ಚು FEV1/ FVC 70% ಅಥವಾ ಹೆಚ್ಚು
b) ವಿಮೆದಾರರು ದೀರ್ಘಕಾಲಿಕ ತೀವ್ರಸ್ಥಿತಿ/ಗಳಿಂದ (ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಪರಿಚಲನಾ ಕಾಯಿಲೆ ಅಥವಾ ಆಸ್ತಮಾ) ಬಳಲುತ್ತಿಲ್ಲವಾದರೆ ಅವರು "ಒತ್ತಡ ನಿವಾರಣೆ ಮತ್ತು ಮನಸ್ಸು ದೇಹ ಹೀಲಿಂಗ್ ಕಾರ್ಯಕ್ರಮವನ್ನು" ಆಯ್ಕೆ ಮಾಡಬಹುದು. ಈ ಕಾರ್ಯಕ್ರಮ ವಿಮೆದಾರರಿಗೆ ಆಂತರಿಕ (ಸ್ವಯಂ-ಉತ್ಪಾದಿತ) ಮತ್ತು ಬಾಹ್ಯ ಅಂಶಗಳಿಂದ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
- ಒತ್ತಡ ನಿವಾರಣೆ ಮತ್ತು ಮನಸ್ಸು ದೇಹ ಹೀಲಿಂಗ್ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ 150 ಸ್ವಾಸ್ಥ್ಯ ಪಾಯಿಂಟ್ಗಳನ್ನು ನೀಡಲಾಗುತ್ತದೆ.
ಗಮನಿಸಿ: ಇದು 10 ವಾರಗಳ ಕಾರ್ಯಕ್ರಮವಾಗಿದ್ದು, ಇದನ್ನು ವಿಮೆದಾರರು ಯಾವುದೇ ವಿರಾಮವಿಲ್ಲದೆ ಪೂರ್ಣಗೊಳಿಸಬೇಕು.
6.ಮುನ್ನೆಚ್ಚರಿಕಾ ಆರೈಕೆಗಾಗಿ ರಿವಾರ್ಡ್ ಪಾಯಿಂಟ್ಗಳು: ವಿಮೆದಾರರು ಪಾಲಿಸಿ ವರ್ಷದಲ್ಲಿ ತಾವು ಹೊಂದಿದ್ದ ಪಾಲಿಸಿ ವರ್ಷದಲ್ಲಿ ಒಂದು ಬಾರಿ ಈ ಕೆಳಗಿನ ಆರೋಗ್ಯ ತಪಾಸಣೆ ವರದಿಗಳನ್ನು ಸಲ್ಲಿಸುವುದಕ್ಕಾಗಿ ಸ್ವಾಸ್ಥ್ಯ ರಿವಾರ್ಡ್ ಪಾಯಿಂಟ್ಗಳನ್ನು ಗಳಿಸಬಹುದು.
a. ಲಸಿಕಾ ಪ್ರಮಾಣಪತ್ರ/ಗಳ ಸಲ್ಲಿಕೆ: ವಿಮೆದಾರರು ಪಾಲಿಸಿಯ ವರ್ಷದಲ್ಲಿ ತಾವು ಹೊಂದಿದ್ದ ಲಸಿಕೆಗೆ ಸಂಬಂಧಿಸಿದ ಲಸಿಕಾ ಪ್ರಮಾಣಪತ್ರವನ್ನು ಸಲ್ಲಿಸುವ ಮೂಲಕ 20 ಸ್ವಾಸ್ಥ್ಯ ರಿವಾರ್ಡ್ ಪಾಯಿಂಟ್ಗಳನ್ನು ಗಳಿಸಬಹುದು. ಉದಾ: ಕೋವಿಡ್, HPV, ಹಂದಿ ಜ್ವರ (H1N1), ಹೆಪಟೈಟಿಸ್ ಇತ್ಯಾದಿಗಳಿಗೆ ಲಸಿಕೆ.
b. ಮುನ್ನೆಚ್ಚರಿಕಾ ನೇತ್ರ ತಪಾಸಣಾ ವರದಿ ಸಲ್ಲಿಕೆ: ವಿಮೆದಾರರು ನೇತ್ರ ತಪಾಸಣೆ ವರದಿಯನ್ನು ಸಲ್ಲಿಸಿದ್ದಕ್ಕಾಗಿ 20 ಸ್ವಾಸ್ಥ್ಯ ರಿವಾರ್ಡ್ ಪಾಯಿಂಟ್ಗಳನ್ನು ಗಳಿಸಬಹುದು, ಇದು ಸಮೀಪ ಮತ್ತು ದೂರದ ದೃಷ್ಟಿ (ವಿಷುಯಲ್ ಇಕ್ವಿಟಿ) ಮತ್ತು ಬಣ್ಣ ದೃಷ್ಟಿ ಪರೀಕ್ಷೆಯನ್ನು ಒಳಗೊಂಡಿರುತ್ತದೆ.
c. ಮುನ್ನೆಚ್ಚರಿಕಾ ದಂತ ತಪಾಸಣೆಯ ವರದಿ ಸಲ್ಲಿಕೆ: ಅರ್ಹ ದಂತವೈದ್ಯರಿಂದ ಬಾಯಿಕುಳಿಯ ತಪಾಸಣೆಯನ್ನು ಒಳಗೊಂಡಿರುವ ದಂತ ತಪಾಸಣಾ ವರದಿಯನ್ನು ಸಲ್ಲಿಸುವುದಕ್ಕಾಗಿ ವಿಮೆದಾರರು 20 ಸ್ವಾಸ್ಥ್ಯ ರಿವಾರ್ಡ್ ಪಾಯಿಂಟ್ಗಳನ್ನು ಗಳಿಸಬಹುದು.
d. ಮ್ಯಾಮೊಗ್ರಫಿ ಮತ್ತು PAP ಪರೀಕ್ಷಾ ವರದಿಯ ಸಲ್ಲಿಕೆ: ವಿಮೆದಾರರು ಕ್ಷ-ಕಿರಣ ಮ್ಯಾಮೊಗ್ರಾಫಿ ಅಥವಾ ಕಲರ್ಡ್ ಡಾಪ್ಲರ್ ಮ್ಯಾಮೊಗ್ರಾಮ್ ಅನ್ನು ಮುನ್ನೆಚ್ಚರಿಕಾ ಸ್ತನ ತಪಾಸಣೆ ಮತ್ತು PAP ಸ್ಮೀಯರ್ (ಬಯಾಪ್ಸಿ) ವರದಿಯ ಸಲ್ಲಿಸುವುದಕ್ಕಾಗಿ 20 ಸ್ವಾಸ್ಥ್ಯ ರಿವಾರ್ಡ್ ಪಾಯಿಂಟ್ಗಳನ್ನು ಗಳಿಸಬಹುದು.
e. ಪ್ರಾಸ್ಟೇಟ್ ನಿರ್ದಿಷ್ಟ ಪ್ರತಿಜನಕ (PSA) ಪರೀಕ್ಷೆ (50 ವರ್ಷ ವಯಸ್ಸಿನ ಪುರುಷರಿಗೆ ಅನ್ವಯಿಸುತ್ತದೆ): ಪ್ರಾಸ್ಟೇಟ್ ನಿರ್ದಿಷ್ಟ ಪ್ರತಿಜನಕ ರಕ್ತದ ವರದಿಯನ್ನು ಸಲ್ಲಿಸುವುದಕ್ಕಾಗಿ ವಿಮೆದಾರರು 20 ಸ್ವಾಸ್ಥ್ಯ ರಿವಾರ್ಡ್ ಪಾಯಿಂಟ್ಗಳನ್ನು ಗಳಿಸಬಹುದು.
f. ಗ್ಲುಕೋಮಾ ತಪಾಸಣೆ (50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ): ಟಾನೊಮೆಟರಿ (ಸ್ಲಿಟ್ ಲ್ಯಾಂಪ್ ಪರೀಕ್ಷೆ), ಪ್ಯಾಚಿಮೀಟರ್ ಪರೀಕ್ಷೆ, ವಿಷುಯಲ್ ಫೀಲ್ಡ್ ಪರೀಕ್ಷೆ, ಹಿಗ್ಗಿದ ಕಣ್ಣಿನ ಪರೀಕ್ಷೆ ಮತ್ತು ಗೊನಿಯೊಸ್ಕೋಪಿ ಪರೀಕ್ಷೆ ಸೇರಿದಂತೆ ಎರಡೂ ಕಣ್ಣುಗಳ ಗ್ಲುಕೋಮಾ ತಪಾಸಣಾ ಪರೀಕ್ಷೆಯ ವರದಿಗಳನ್ನು ಸಲ್ಲಿಸುವ ಮೂಲಕ ವಿಮೆದಾರರು 20 ಸ್ವಾಸ್ಥ್ಯ ರಿವಾರ್ಡ್ ಪಾಯಿಂಟ್ಗಳನ್ನು ಗಳಿಸಬಹುದು.
ಸ್ವಾಸ್ಥ್ಯ ಸೇವೆಗಳಿಗೆ ಅನ್ವಯವಾಗುವ ಕರಾರುಗಳು ಮತ್ತು ಷರತ್ತುಗಳು
ಇದಕ್ಕೆ ಸಂಬಂಧಿಸಿದಂತೆ ವಿಮೆದಾರರು ಒದಗಿಸುವ ಯಾವುದೇ ಮಾಹಿತಿಯನ್ನು ಗೌಪ್ಯವಾಗಿಡಬೇಕು.
ಸ್ವಾಸ್ಥ್ಯ ರಿವಾರ್ಡ್ ಪಾಯಿಂಟ್ಗಳಿಗೆ ಸಂಬಂಧಿಸಿದಂತೆ ಯಾವುದೇ ನಗದು ರಿಡೆಮ್ಷನ್ ಇರುವುದಿಲ್ಲ.
ವಿಮೆದಾರರು ಅಂತಹ ಚಟುವಟಿಕೆ/ಪರೀಕ್ಷೆಯನ್ನು ಕೈಗೊಂಡ 1 ತಿಂಗಳೊಳಗೆ ವಿವಿಧ ಸ್ವಾಸ್ಥ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳು, ವರದಿಗಳು, ರಸೀದಿಗಳು ಇತ್ಯಾದಿಗಳನ್ನು ಘೋಷಿಸಬೇಕು ಮತ್ತು ಸಲ್ಲಿಸಬೇಕು.
ಪಟ್ಟಿಯಲ್ಲಿರುವ ಸೇವಾದಾತರ ಮೂಲಕ ಒದಗಿಸಲಾದ ಸೇವೆಗಳಿಗೆ, ಸ್ಟಾರ್ ಹೆಲ್ತ್ ಕೇವಲ ಫೆಸಿಲಿಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದೆ; ಆದ್ದರಿಂದ ಯಾವುದೇ ಹೆಚ್ಚುತ್ತಿರುವ ಖರ್ಚುಗಳು ಅಥವಾ ಸೇವೆಗಳಿಗೆ ಬಾಧ್ಯರಾಗಿರುವುದಿಲ್ಲ.
ಎಲ್ಲಾ ವೈದ್ಯಕೀಯ ಸೇವೆಗಳನ್ನು ಪಟ್ಟಿಮಾಡಿದ ಸೇವಾದಾತರರಿಂದ ಒದಗಿಸಲಾಗುತ್ತಿದೆ. ಪಟ್ಟಿಯಲ್ಲಿ ಸೇರಿಸುವುದಕ್ಕೆ ಮೊದಲು ನಾವು ಸಂಪೂರ್ಣ ಜಾಗರೂಕರಾಗಿದ್ದರೂ ವಿಮೆದಾರರು ವೈದ್ಯಕೀಯ ಸಲಹೆ/ಸೇವೆಗಳನ್ನು ಪಡೆದುಕೊಳ್ಳುವ/ ತೆಗೆದುಕೊಳ್ಳುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಬೇಕು. ಈ ಸಲಹೆಗಳು/ಸೇವೆಗಳನ್ನು ಬಳಸಿಕೊಳ್ಳುವ ನಿರ್ಧಾರವು ವಿಮೆದಾರರ ವಿವೇಚನೆಗೆ ಸಂಬಂಧಿಸಿದೆ.
ಅನ್ಯಾಯದಿಂದ ಸಾಧಿಸಲಾಗಿದೆ ಎಂದು ಕಂಡುಬಂದಲ್ಲಿ ಸ್ವಾಸ್ಥ್ಯ ರಿವಾರ್ಡ್ ಪಾಯಿಂಟ್ಗಳನ್ನು ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.
ಸ್ಟಾರ್ ಹೆಲ್ತ್, ಅದರ ಗುಂಪು ಘಟಕಗಳು ಅಥವಾ ಅಂಗಸಂಸ್ಥೆಗಳು, ಅವರ ಆಯಾ ನಿರ್ದೇಶಕರು, ಅಧಿಕಾರಿಗಳು, ಉದ್ಯೋಗಿಗಳು, ಏಜೆಂಟ್ಗಳು, ಮಾರಾಟಗಾರರು, ಸದಸ್ಯರು ಕ್ಲೈಮ್ ಮಾಡುವ ಸ್ವಾಸ್ಥ್ಯ ಕಾರ್ಯಕ್ರಮದ ಮೂಲಕ ಮತ್ತು / ಅಥವಾ ರಿಂದ ಅನುಭವಿಸಿದ, ಉಂಟಾದ ಅಥವಾ ಅನುಭವಿಸಿದ ಯಾವುದೇ ಕ್ರಿಯೆಗಳು, ಹಕ್ಕುಗಳು, ಬೇಡಿಕೆಗಳು, ನಷ್ಟಗಳು, ಹಾನಿಗಳು, ವೆಚ್ಚಗಳು, ಶುಲ್ಕಗಳು ಮತ್ತು ವೆಚ್ಚಗಳಿಗೆ ಜವಾಬ್ದಾರರಾಗಿರುವುದಿಲ್ಲ.
ನೀಡಲಾಗುವ ಸೇವೆಗಳು ಕಾಲಕಾಲಕ್ಕೆ IRDAI ಹೊರಡಿಸಿದ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತವೆ.
ಪ್ರಯೋಜನಗಳ ವಿವರಣೆ:
51 ವರ್ಷದ ಗೋಪಾಲ್ ಮತ್ತು ಅವರ ಪತ್ನಿ ರಮ್ಯಾ ಮತ್ತು ಅವರ ಇಬ್ಬರು ಅವಲಂಬಿತ ಮಕ್ಕಳೊಂದಿಗೆ (18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) 10 ಲಕ್ಷ ವಿಮಾ ಮೊತ್ತದ ಸ್ಮಾರ್ಟ್ ಹೆಲ್ತ್ ಪ್ರೊ ಅನ್ನು ಖರೀದಿಸುತ್ತಾರೆ, ಅವರು ಸ್ವಾಸ್ಥ್ಯ ಪಾಯಿಂಟ್ಗಳನ್ನು ಹೇಗೆ ಗಳಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳೋಣ. ಗೋಪಾಲ್ ಅವರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಘೋಷಿಸಿದ್ದಾರೆ. ರಮ್ಯಾ ಅವರು ತಮ್ಮ BMI 27 ಎಂದು ಘೋಷಿಸಿದ್ದಾರೆ. ಗೋಪಾಲ್ ಮತ್ತು ರಮ್ಯಾ ಅವರು ಸ್ಟಾರ್ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ದಾಖಲಾಗಿದ್ದಾರೆ ಮತ್ತು ಕೆಳಗಿನ ಸ್ವಾಸ್ಥ್ಯ ಚಟುವಟಿಕೆಗಳನ್ನು ಪೂರ್ಣಗೊಳಿಸಿದ್ದಾರೆ.
ಕ್ರಮ ಸಂಖ್ಯೆ
ಚಟುವಟಿಕೆ
ಗೋಪಾಲ್ ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳು
ರಮ್ಯಾ ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳು
1
ಸ್ವಾಸ್ಥ್ಯ ಕಾರ್ಯಕ್ರಮಕ್ಕೆ ನೋಂದಾಯಿಸಿಕೊಂಡಿದ್ದಕ್ಕಾಗಿ ಸೈನ್ ಅಪ್ ಪಾಯಿಂಟ್ಗಳು
100
100
2
ಆರೋಗ್ಯವನ್ನು ನಿರ್ವಹಿಸಿ ಮತ್ತು ಟ್ರ್ಯಾಕ್ ಮಾಡಿ
a) ಆನ್ಲೈನ್ ಆರೋಗ್ಯ ಅಪಾಯದ ಮೌಲ್ಯಮಾಪನ (HRA)
150
150
b) ಮುನ್ನೆಚ್ಚರಿಕಾ ಅಪಾಯದ ಮೌಲ್ಯಮಾಪನ
200
200
3
ಸ್ವಾಸ್ಥ್ಯ ಮೈತ್ರಿ
c) ವಾಕಥಾನ್, ಮ್ಯಾರಥಾನ್, ಸೈಕ್ಲೋಥಾನ್ ಮತ್ತು ಅಂತಹುದೇ ಚಟುವಟಿಕೆಗಳಲ್ಲಿ ಭಾಗವಹಿಸುವುದು
200
0
d) ಆರೋಗ್ಯ ಕ್ಲಬ್ನಲ್ಲಿ ಸದಸ್ಯತ್ವ
100
150
4
ಸಕ್ರಿಯರಾಗಿರಿ (ಸ್ಟೆಪ್ ಎಣಿಕೆಯ ಆಧಾರದ ಮೇಲೆ ಸ್ವಾಸ್ಥ್ಯ ಪಾಯಿಂಟ್ಗಳು)
250
120
5
'ಸಕ್ರಿಯ ಜೀವನದ ಯಶಸ್ಸಿನ ಕಥೆ' ಹಂಚಿಕೊಂಡಿದ್ದಕ್ಕೆ
50
0
6
ಸ್ಥಿತಿ ನಿರ್ವಹಣಾ ಕಾರ್ಯಕ್ರಮ (CMP)
150
150
7
ಲಸಿಕಾ ಪ್ರಮಾಣಪತ್ರದ ಸಲ್ಲಿಕೆ
20
20
8
ಮುನ್ನೆಚ್ಚರಿಕಾ ಕಣ್ಣಿನ ತಪಾಸಣೆ ವರದಿ ಸಲ್ಲಿಕೆಗಾಗಿ
20
0
9
ಮುನ್ನೆಚ್ಚರಿಕಾ ದಂತ ತಪಾಸಣೆ ವರದಿ ಸಲ್ಲಿಕೆಗಾಗಿ
0
20
10
ಮ್ಯಾಮೊಗ್ರಫಿ ಮತ್ತು PAP ಪರೀಕ್ಷೆ (ಮಹಿಳೆಯರಿಗಾಗಿ) ವರದಿಯ ಸಲ್ಲಿಕೆಗಾಗಿ
0
20
11
ಪ್ರಾಸ್ಟೇಟ್ ನಿರ್ದಿಷ್ಟ ಪ್ರತಿಜನಕ (PSA) ಪರೀಕ್ಷಾ ವರದಿಯ ಸಲ್ಲಿಕೆಗಾಗಿ (50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ)
20
0
12
ಗ್ಲುಕೋಮಾ ತಪಾಸಣೆ (50 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ)
20
0
ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳ ಒಟ್ಟು ಸಂಖ್ಯೆ
1280
930
ವೈಟೇಜ್ ಆಧಾರದ ಮೇಲೆ ಸ್ವಾಸ್ಥ್ಯ ಪಾಯಿಂಟ್ಗಳ ಸಂಖ್ಯೆ - 1:1:0:0
640 (1280X1/2)
465 (930X1/2)
ಗೋಪಾಲ್ ಮತ್ತು ರಮ್ಯಾ ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳ ಒಟ್ಟು ಸಂಖ್ಯೆ = 1105 (640+465)
ಗಳಿಸಿದ ಸ್ವಾಸ್ಥ್ಯ ಪಾಯಿಂಟ್ಗಳ ಆಧಾರದ ಮೇಲೆ, ಗೋಪಾಲ್ ಮತ್ತು ರಮ್ಯಾ ನವೀಕರಣ ಪ್ರೀಮಿಯಂನಲ್ಲಿ 20% ಡಿಸ್ಕೌಂಟ್ ಅನ್ನು ಪಡೆಯಲು ಅರ್ಹರಾಗಿದ್ದಾರೆ
ವೇಟಿಂಗ್ ಅವಧಿ
1. ಪೂರ್ವಾಸ್ತಿತ್ವದ ಕಾಯಿಲೆಗಳಿಗೆ - 48 ತಿಂಗಳುಗಳು 2. ನಿರ್ದಿಷ್ಟ ಕಾಯಿಲೆಗಳು / ಕಾರ್ಯವಿಧಾನಗಳಿಗೆ - 24 ತಿಂಗಳುಗಳು 3. ಆರಂಭಿಕ ವೇಟಿಂಗ್ ಅವಧಿ - 30 ದಿನಗಳು (ಅಪಘಾತಗಳನ್ನು ಹೊರತುಪಡಿಸಿ)
ತೆರಿಗೆ ಪ್ರಯೋಜನಗಳು
ಈ ಇನ್ಶೂರೆನ್ಸ್ ಪಾಲಿಸಿಗೆ ನಗದು ಹೊರತುಪಡಿಸಿ ಯಾವುದೇ ವಿಧಾನದಿಂದ ಪಾವತಿಸಿದ ಪ್ರೀಮಿಯಂ ಮೊತ್ತವು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿದೆ.
ಮುಕ್ತ ಅವಲೋಕನಾ ಅವಧಿ
ಮುಕ್ತ ಅವಲೋಕನಾ ಅವಧಿಯು ಹೊಸ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಅನ್ವಯಿಸುತ್ತದೆ ಮತ್ತು ನವೀಕರಣಗಳು ಅಥವಾ ಪಾಲಿಸಿಯನ್ನು ಪೋರ್ಟ್ ಮಾಡುವ/ವರ್ಗಾವಣೆ ಸಮಯದಲ್ಲಿ ಅನ್ವಯವಾಗುವುದಿಲ್ಲ.
ಪಾಲಿಸಿಯ ಪ್ರಾರಂಭದ ಸಮಯದಲ್ಲಿ, ಪಾಲಿಸಿಯ ಕರಾರುಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ಮತ್ತು ಸ್ವೀಕಾರಾರ್ಹವಲ್ಲದಿದ್ದಲ್ಲಿ ಪಾಲಿಸಿಯನ್ನು ಹಿಂತಿರುಗಿಸಲು ವಿಮೆದಾರರಿಗೆ ಪಾಲಿಸಿಯ ಸ್ವೀಕೃತಿಯ ದಿನಾಂಕದಿಂದ 15 ದಿನಗಳ ಅವಧಿಯನ್ನು ನೀಡಲಾಗುತ್ತದೆ.
ಮುಕ್ತ ಅವಲೋಕನಾ ಅವಧಿಯಲ್ಲಿ ವಿಮೆದಾರರು ಯಾವುದೇ ಕ್ಲೈಮ್ ಮಾಡದಿದ್ದರೆ, ವಿಮೆದಾರರು ಈ ಕೆಳಗಿನವುಗಳಿಗೆ ಅರ್ಹರಾಗಿರುತ್ತಾರೆ
i. ಪಾವತಿಸಿದ ಪ್ರೀಮಿಯಂನ ಮರುಪಾವತಿ ಕಳೆ ವಿಮೆದಾರರ ವೈದ್ಯಕೀಯ ಪರೀಕ್ಷೆ ಮತ್ತು ಸ್ಟ್ಯಾಂಪ್ ಡ್ಯೂಟಿ ಶುಲ್ಕಗಳು ಅಥವಾ ವಿಮೆದಾರರಿಂದ ಉಂಟಾದ ಯಾವುದೇ ಖರ್ಚುಗಳು ii. ಅಪಾಯವು ಈಗಾಗಲೇ ಪ್ರಾರಂಭವಾಗಿದ್ದು ಮತ್ತು ಪಾಲಿಸಿಯ ವಾಪಸಾತಿಯ ಆಯ್ಕೆಯನ್ನು ಪಾಲಿಸಿದಾರರು ಆಯ್ದುಕೊಂಡರೆ, ಕವರ್ನಲ್ಲಿನ ಅವಧಿಗೆ ಅಷ್ಟು ಪ್ರಮಾಣದ ಅಪಾಯದ ಪ್ರೀಮಿಯಂನ ಕಡಿತ ಅಥವಾ iii.ಇನ್ಶೂರೆನ್ಸ್ ಕವರೇಜ್ನ ಒಂದು ಭಾಗ ಮಾತ್ರ ಪ್ರಾರಂಭವಾಗಿದ್ದು, ಅಂತಹ ಅವಧಿಯಲ್ಲಿ ಇನ್ಶೂರೆನ್ಸ್ ಕವರೇಜ್ಗೆ ಅನುಗುಣವಾಗಿ ಅಷ್ಟು ಪ್ರಮಾಣದ ಪ್ರೀಮಿಯಂ
ವೈದ್ಯಕೀಯೇತರ ಐಟಂಗಳಿಗೆ ಕವರೇಜ್
ವೈದ್ಯಕೀಯೇತರ ಐಟಂಗಳಿಗೆ (ಉಪಭೋಗ್ಯ ವಸ್ತುಗಳು) ಕವರೇಜ್ ಆಯ್ಕೆ ಮಾಡಿದರೆ ಮಾತ್ರ ಲಭ್ಯವಿರುತ್ತದೆ. ವಿವರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
ವೈಯಕ್ತಿಕ ಮತ್ತು ಫ್ಲೋಟರ್ ಆಧಾರದ ಮೇಲೆ ಪ್ರಯೋಜನ/ಪ್ರೀಮಿಯಂ ವಿವರಣೆ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ.
ಸ್ಟಾರ್ ಹೆಲ್ತ್
ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಏಕೆ ನಮ್ಮ ಆಯ್ಕೆಯಾಗಿರಬೇಕು?
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್ಮೆಂಟ್ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್ವರ್ಕ್ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.
ಸ್ವಾಸ್ಥ್ಯ ಕಾರ್ಯಕ್ರಮ
ನಮ್ಮ ಸ್ವಾಸ್ಥ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತ್ತು ಆರೋಗ್ಯಕರವಾಗಿರುವುದಕ್ಕಾಗಿ ರಿವಾರ್ಡ್ಗಳನ್ನು ಗಳಿಸಿ. ನವೀಕರಣ ಡಿಸ್ಕೌಂಟ್ಗಳನ್ನು ಪಡೆಯಲು ಆ ರಿವಾರ್ಡ್ಗಳನ್ನು ರಿಡೀಮ್ ಮಾಡಿಕೊಳ್ಳಿ.
ಡಯಾಗ್ನೋಸ್ಟಿಕ್ ಕೇಂದ್ರಗಳು
ಮನೆಯಿಂದಲೇ ಲ್ಯಾಬ್ ಸ್ಯಾಂಪಲ್ಗಳ ಪಿಕಪ್ ಮತ್ತು ಮನೆ ಬಾಗಿಲಿಗೆ ಆರೋಗ್ಯ ತಪಾಸಣೆಯೊಂದಿಗೆ ಭಾರತದಾದ್ಯಂತ 1,635 ಡಯಾಗ್ನೋಸ್ಟಿಕ್ ಕೇಂದ್ರಗಳಿಗೆ ಪ್ರವೇಶ ಪಡೆಯಿರಿ.
ಇ-ಫಾರ್ಮಸಿ
ರಿಯಾಯಿತಿ ದರದಲ್ಲಿ ಔಷಧಗಳನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿ. 2780 ನಗರಗಳಲ್ಲಿ ಹೋಮ್ ಡೆಲಿವರಿ ಮತ್ತು ಸ್ಟೋರ್ ಪಿಕಪ್ಗಳು ಲಭ್ಯವಿದೆ.
24*7 ಗ್ರಾಹಕ ಸೇವೆ
ಕ್ಲೈಮ್ ಮಾಹಿತಿ, ಟೆಲಿಹೆಲ್ತ್ ಸೇವೆಗಳು ಮತ್ತು ನಿಮ್ಮ ಪ್ರಶ್ನೆಗಳಿಗೆ ಪರಿಹಾರಕ್ಕಾಗಿ 1800-425-2255 ಗೆ ನಮಗೆ ಕರೆ ಮಾಡಿ.
ಇನ್-ಹೌಸ್ ಕ್ಲೈಮ್ ಸೆಟಲ್ಮೆಂಟ್
ನಾವು TPA ಇಲ್ಲದೆಯೇ ಅರ್ಹ ಇನ್-ಹೌಸ್ ತಂಡದೊಂದಿಗೆ ಕ್ಲೈಮ್ಗಳನ್ನು ಸೆಟಲ್ ಮಾಡುವ ಪ್ರಪ್ರಥಮ ಸ್ವತಂತ್ರ ಹೆಲ್ತ್ ಇನ್ಶೂರೆನ್ಸ್ ಕಂಪನಿಯಾಗಿದ್ದೇವೆ.
ಕ್ಲೈಮ್ ಸೆಟಲ್ಮೆಂಟ್
ನಮ್ಮ ಕ್ಯಾಶ್ಲೆಸ್ಗೆ ಸಂಬಂಧಿಸಿದ 90% ಕ್ಲೈಮ್ಗಳನ್ನು 2 ಗಂಟೆಗಳೊಳಗೆ ಸೆಟಲ್ ಮಾಡಲಾಗುತ್ತದೆ ಮತ್ತು ವೆಚ್ಚ ಭರಿಸುವಿಕೆಗೆ ಸಂಬಂಧಿಸಿದ 92% ಕ್ಲೈಮ್ಗಳನ್ನು 7 ದಿನಗಳೊಳಗೆ ಸೆಟಲ್ ಮಾಡಲಾಗುತ್ತದೆ.
ಆಸ್ಪತ್ರೆಗಳು
ಗುಣಮಟ್ಟದ ಚಿಕಿತ್ಸೆಗಾಗಿ ನಮ್ಮ ಮೌಲ್ಯಯುತ ಸೇವಾದಾತರು, ಒಪ್ಪಿಕೊಂಡ ನೆಟ್ವರ್ಕ್ ಮತ್ತು ನೆಟ್ವರ್ಕ್ ಆಸ್ಪತ್ರೆಗಳ ಅಡಿಯಲ್ಲಿ ನಾವು ನಿಮ್ಮನ್ನು ಕವರ್ ಮಾಡುತ್ತೇವೆ.
ಪ್ರಶಸ್ತಿಗಳು
ನಮ್ಮ ನವೀನ ಪ್ರಾಡಕ್ಟ್, ಅತ್ಯುತ್ತಮ ಕ್ಲೈಮ್ ಸೆಟಲ್ಮೆಂಟ್ ಮತ್ತು ಅತ್ಯುತ್ತಮ ಸೇವಾದಾತರಿಗೆ ಹೆಸರಾಂತ ಸಮೀಕ್ಷೆ ಸಂಸ್ಥೆಗಳಿಂದ ಪ್ರಶಸ್ತಿ ಲಭಿಸಿದೆ.
ನೆಟ್ವರ್ಕ್ ಆಸ್ಪತ್ರೆಗಳು
ಸ್ಟಾರ್ ಹೆಲ್ತ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳು ತಡೆರಹಿತ ಕ್ಯಾಶ್ಲೆಸ್ ಸೌಲಭ್ಯಗಳನ್ನು ಒದಗಿಸುತ್ತವೆ. ಅನುಮೋದನೆ ಪ್ರಕ್ರಿಯೆಯು ತ್ವರಿತ ಮತ್ತು ಆರಾಮದಾಯಕವಾಗಿದೆ.
ಒಪ್ಪಿಕೊಂಡ ನೆಟ್ವರ್ಕ್ ಆಸ್ಪತ್ರೆಗಳು
ಶಸ್ತ್ರಚಿಕಿತ್ಸಾ ಮತ್ತು ವೈದ್ಯಕೀಯ ಕಾರ್ಯವಿಧಾನಗಳಿಗೆ ಮಿತವ್ಯಯಿ ಪ್ಯಾಕೇಜ್ ದರಗಳನ್ನು ಒದಗಿಸಲು ಸ್ಟಾರ್ ಹೆಲ್ತ್ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಆಸ್ಪತ್ರೆಗಳು.
ಮೌಲ್ಯಯುತ ಸೇವಾದಾತರು
ಈ ಆಸ್ಪತ್ರೆಗಳನ್ನು ಸ್ಟಾರ್ ಹೆಲ್ತ್ ಗುರುತಿಸುತ್ತದೆ ಮತ್ತು ಅವರ ಪ್ರಯತ್ನಗಳು, ಸೇವೆಗಳು ಮತ್ತು ಗುಣಮಟ್ಟಕ್ಕಾಗಿ ವಿಶೇಷ ಮನ್ನಣೆ ನೀಡಲಾಗುತ್ತದೆ.
ನೆಟ್ವರ್ಕ್ ಹೊರತಾದ ಆಸ್ಪತ್ರೆಗಳು
ನೆಟ್ವರ್ಕ್ ಹೊರತಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳನ್ನು ಪಡೆಯಲು (ಸ್ಟಾರ್ ಹೆಲ್ತ್ನೊಂದಿಗೆ ಒಪ್ಪಂದ ಮಾಡಿಕೊಳ್ಳದ), ನೀವು ವೆಚ್ಚ ಭರಿಸುವಿಕೆ ಕ್ಲೈಮ್ಗಳನ್ನು ಪಡೆಯಬಹುದಾಗಿದೆ.
ಹೊರಗಿಡಲಾದ ಸೇವಾದಾತರು
ಕ್ಲೈಮ್ಗಳು ಸ್ವೀಕಾರಾರ್ಹವಲ್ಲದ ಆಸ್ಪತ್ರೆಗಳು. ಆದರೆ ಮಾರಣಾಂತಿಕ ಪರಿಸ್ಥಿತಿ/ಅಪಘಾತದ ಖರ್ಚುಗಳನ್ನು ಸ್ಥಿರೀಕರಣದವರೆಗೆ ಕವರ್ ಮಾಡಲಾಗುತ್ತದೆ.
ಬೇರೆ ಏನನ್ನಾದರೂ ಹುಡುಕುತ್ತಿದ್ದೀರಾ?
ಪ್ರಾರಂಭಿಸಿ
ಅತ್ಯುತ್ತಮವಾದುದರ ಖಾತರಿ ಹೊಂದಿರಿ
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.
ಹೆಚ್ಚಿನ ಮಾಹಿತಿ ಬೇಕೆ?
ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?
Disclaimer: Health Insurance Coverage for pre-existing medical conditions is subject to underwriting review and may involve additional requirements, loadings, or exclusions. Please disclose your medical history in the proposal form for a personalised assessment. The information provided on this page is for general informational purposes only. Availability and terms of health insurance plans may vary based on geographic location and other factors. Consult a licensed insurance agent or professional for specific advice. T&C Apply. For further detailed information or inquiries, feel free to reach out via email at marketing.d2c@starhealth.in