ವರ್ಧಿತ ಕೊಠಡಿ ಬಾಡಿಗೆಈ ಕವರ್ ಪಾಲಿಸಿ ಷರತ್ತಿನಲ್ಲಿ ತಿಳಿಸಲಾದ ಮಿತಿಗಳ ಪ್ರಕಾರ ಹೆಚ್ಚುವರಿ ಕೊಠಡಿ, ಬೋರ್ಡಿಂಗ್ ಮತ್ತು ಶೂಶ್ರೂಷೆಯ ವೆಚ್ಚಗಳನ್ನು ಭರಿಸುತ್ತದೆ. |
ಕ್ಲೈಮ್ ಗಾರ್ಡ್ (ವೈದ್ಯಕೀಯೇತರ ವಸ್ತುಗಳಿಗೆ ಕವರೇಜ್)ಮೂಲ ಪಾಲಿಸಿಯ ಅಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್ ಇದ್ದರೆ, ಈ ಆ್ಯಡ್ ಆನ್ ಕವರ್‌ನಲ್ಲಿ ನಿರ್ದಿಷ್ಟಪಡಿಸಿದ ವೈದ್ಯಕೀಯೇತರ ವೆಚ್ಚಗಳನ್ನು ಭರಿಸಲಾಗುತ್ತದೆ. |
ಆಧುನಿಕ ಚಿಕಿತ್ಸೆಗಳಿಗೆ ವರ್ಧಿತ ಮಿತಿಪಾಲಿಸಿ ಷರತ್ತಿನಲ್ಲಿ ಪಟ್ಟಿಮಾಡಲಾದ ಆಧುನಿಕ ಚಿಕಿತ್ಸೆಗಳು ಮೂಲ ಪಾಲಿಸಿಯಲ್ಲಿ ಒಳಗೊಂಡಿದ್ದರೆ, ಅಂತಹ ಚಿಕಿತ್ಸೆಗಳು ಮೂಲ ಪಾಲಿಸಿಯ ವಿಮಾ ಮೊತ್ತದವರೆಗೆ ಕವರ್ ಆಗುತ್ತದೆ. |
ಆಯುಷ್ ಚಿಕಿತ್ಸೆಗಾಗಿ ವರ್ಧಿತ ಮಿತಿಆಯುಷ್ ಆಸ್ಪತ್ರೆಗಳಲ್ಲಿ ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ ಔಷಧಿಗಳ ಅಡಿಯಲ್ಲಿ ದಾಖಲಾದ ಒಳರೋಗಿ ಆಸ್ಪತ್ರೆಯ ವೆಚ್ಚವನ್ನು ಮೂಲ ಪಾಲಿಸಿಯ ವಿಮಾ ಮೊತ್ತಕ್ಕೆ ಒಳಪಡಿಸಲಾಗುತ್ತದೆ. |
ಮನೆಯಲ್ಲಿಯೇ ಚಿಕಿತ್ಸೆಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ಪರಿಸ್ಥಿತಿಗಳಿಗೆ ಮನೆಯಲ್ಲಿಯೇ ನೀಡಲಾಗುವ ಚಿಕಿತ್ಸೆಯ ವೆಚ್ಚಗಳನ್ನು ಪಾಲಿಸಿ ವರ್ಷದಲ್ಲಿ ಗರಿಷ್ಠ ರೂ. 5,00,000/- ಕ್ಕೆ ಒಳಪಟ್ಟು ಮೂಲ ಪಾಲಿಸಿಯ ವಿಮಾಮೊತ್ತದ 10% ವರೆಗೆ ಕವರ್ ಮಾಡಲಾಗುತ್ತದೆ. |
ಬೋನಸ್ ಗಾರ್ಡ್1) ಬೋನಸ್ ಅನ್ನು ಬಳಸದ ಹೊರತು ಮೂಲ ಪಾಲಿಸಿಯ ಅಡಿಯಲ್ಲಿ ನೀಡಲಾದ ಸಂಚಿತ ಬೋನಸ್ ಅನ್ನು ನವೀಕರಣದ ಸಮಯದಲ್ಲಿ ಕಡಿತಗೊಳಿಸಲಾಗುವುದಿಲ್ಲ.
2) ವಿಮಾ ಮೊತ್ತದ ಸಂಪೂರ್ಣ ಬಳಕೆ ಮತ್ತು ಸಂಚಿತ ಬೋನಸ್‌ನ ಶೂನ್ಯ ಬಳಕೆಯ ಮೇಲೆ, ನವೀಕರಣದ ಸಮಯದಲ್ಲಿ ಮೂಲ ಪಾಲಿಸಿಯ ಅಡಿಯಲ್ಲಿ ನೀಡಲಾದ ಸಂಚಿತ ಬೋನಸ್ ಅನ್ನು ಕಡಿತಗೊಳಿಸಲಾಗುವುದಿಲ್ಲ.
3) ವಿಮಾ ಮೊತ್ತದ ಸಂಪೂರ್ಣ ಬಳಕೆ ಮತ್ತು ಸಂಚಿತ ಬೋನಸ್‌ನ ಭಾಗಶಃ ಬಳಕೆಯ ಮೇಲೆ, ನವೀಕರಣದ ಸಮಯದಲ್ಲಿ ಮೂಲ ಪಾಲಿಸಿಯ ಅಡಿಯಲ್ಲಿ ನೀಡಲಾದ ಸಂಚಿತ ಬೋನಸ್ ಲಭ್ಯವಿರುವ ಸಂಚಿತ ಬೋನಸ್ ಆಗಿರುತ್ತದೆ.
4) ವಿಮಾಮೊತ್ತ ಮತ್ತು ಸಂಚಿತ ಬೋನಸ್‌ನ ಸಂಪೂರ್ಣ ಬಳಕೆಯ ಮೇಲೆ, ನವೀಕರಣದ ಮೂಲ ಪಾಲಿಸಿಯ ಅಡಿಯಲ್ಲಿ ನೀಡಲಾದ ಸಂಚಿತ ಬೋನಸ್ ಶೂನ್ಯವಾಗಿರುತ್ತದೆ. |
ಒಟ್ಟು ಕಡಿತಗೊಳಿಸಬಹುದಾದ ಆಯ್ಕೆಗಳುವಿಮಾದಾರರು ಪಾಲಿಸಿ ಷರತ್ತಿನಲ್ಲಿ ಪಟ್ಟಿಮಾಡಲಾದ ಯಾವುದೇ ಕಡಿತಗೊಳಿಸುವಿಕೆಯನ್ನು ಆಯ್ದುಕೊಂಡರೆ ಪ್ರೀಮಿಯಂನಲ್ಲಿ ರಿಯಾಯಿತಿ ಲಭ್ಯವಿರುತ್ತದೆ. |
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.
ನಿಮ್ಮ ಸಮಯ ಮತ್ತು ಹಣವನ್ನು ಉಳಿಸಲು ಮತ್ತು ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಕಂಡುಕೊಳ್ಳಲು ತುಂಬಾ ಕಷ್ಟಕರವಾಗಿಸುವ ತೊಂದರೆಗಳನ್ನು ತೊಡೆದುಹಾಕಲು ನಾವು ಬದ್ಧರಾಗಿದ್ದೇವೆ.
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.