ಸ್ಟಾರ್ ಔಟ್ ಪೇಶೆಂಟ್ ಕೇರ್ ಇನ್ಶೂರೆನ್ಸ್ ಪಾಲಿಸಿ

*I hereby authorise Star Health Insurance to contact me. It will override my registry on the NCPR.

IRDAI UIN : SHAHLIP22231V012122

HIGHLIGHTS

Plan Essentials

essentials

ಹೊರರೋಗಿ ಕವರ್

ಭಾರತದ ಯಾವುದೇ ನೆಟ್‌ವರ್ಕ್ ಸೌಲಭ್ಯದಲ್ಲಿ ಹೊರರೋಗಿಗಳ ಸಮಾಲೋಚನೆ, ರೋಗನಿರ್ಣಯ ಮತ್ತು ಚಿಕಿತ್ಸೆಯ ವೆಚ್ಚಗಳನ್ನು ಪಾವತಿಸಲು ಈ ಪಾಲಿಸಿಯನ್ನು ಪ್ರಸ್ತಾಪಿಸಲಾಗುತ್ತದೆ.
essentials

ಕವರ್ ಆಯ್ಕೆಗಳು

ಯಾವುದೇ ವ್ಯಕ್ತಿ ಅಥವಾ ಕುಟುಂಬ (6 ಸದಸ್ಯರವರೆಗೆ) ಈ ಪಾಲಿಸಿಯನ್ನು ಪಡೆಯಬಹುದು. ಈ ಪಾಲಿಸಿಯು 4 ವಿಮಾ ಮೊತ್ತದ ಆಯ್ಕೆಯನ್ನು ಹೊಂದಿದೆ - ರೂ. 25,000/50,000/75,000/1,00,000.
essentials

ಪ್ಲ್ಯಾನ್ ಆಯ್ಕೆಗಳು

ಈ ಪಾಲಿಸಿಯು 3 ಪ್ಲ್ಯಾನ್ ಆಯ್ಕೆಗಳನ್ನು ಹೊಂದಿದೆ - ಸಿಲ್ವರ್, ಗೋಲ್ಡ್ ಮತ್ತು ಪ್ಲಾಟಿನಮ್ ಮತ್ತು ಇವುಗಳ ಅಡಿಯಲ್ಲಿ, ಪೂರ್ವಾಸ್ತಿತ್ವದಲ್ಲಿರುವ ಕಾಯಿಲೆಗಳನ್ನು ಕ್ರಮವಾಗಿ 48, 24 ಮತ್ತು 12 ತಿಂಗಳುಗಳನ್ನು ಕವರ್ ಮಾಡಲಾಗುತ್ತದೆ.
essentials

ಅಲೋಪತಿಯೇತರ ಚಿಕಿತ್ಸೆ

ಹೊರರೋಗಿಗಳ ವೈದ್ಯಕೀಯ ಸಮಲೋಚನೆ ಮತ್ತು ಆಯುಷ್ ಔಷಧ ವ್ಯವಸ್ಥೆಯ ಅಡಿಯಲ್ಲಿ ಉಂಟಾಗುವ ಚಿಕಿತ್ಸಾ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ
essentials

ಡಯಾಗ್ನೋಸ್ಟಿಕ್ಸ್, ಫಿಸಿಯೋಥೆರಪಿ ಮತ್ತು ಫಾರ್ಮಸಿ

ನೆಟ್‌ವರ್ಕ್ ಸೌಲಭ್ಯದಲ್ಲಿ ಡಯಾಗ್ನೋಸ್ಟಿಕ್ಸ್, ಫಿಸಿಯೋಥೆರಪಿ ಮತ್ತು ಫಾರ್ಮಸಿಗೆ ತಗಲುವ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ.
essentials

ದಂತ ಚಿಕಿತ್ಸೆ ಕವರ್

ನೈಸರ್ಗಿಕ ಹಲ್ಲಿನ ಸಮಸ್ಯೆ ಅಥವಾ ಅಪಘಾತಗಳಿಂದ ಯಾವುದೇ ರೀತಿಯ ಹಲ್ಲಿನ ಸಮಸ್ಯೆಯುಂಟಾಗಿದ್ದರೆ ಅವುಗಳ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಕವರ್ ಮಾಡಲಾಗುತ್ತದೆ.
essentials

ಕಣ್ಣಿನ ಚಿಕಿತ್ಸೆ ಕವರ್

ಆಕಸ್ಮಿಕ ಗಾಯಗಳಿಂದ ಕಣ್ಣಿನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಕವರ್ ಮಾಡಲಾಗುತ್ತದೆ.
DETAILED LIST

ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

ಪಾಲಿಸಿ ವಿಧ

ಈ ಪಾಲಿಸಿಯನ್ನು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ

ಪಾಲಿಸಿ ಅವಧಿ

ಈ ಪಾಲಿಸಿಯನ್ನು ಒಂದು ವರ್ಷದ ಅವಧಿಗೆ ಪಡೆಯಬಹುದು.

ಪ್ರವೇಶ ವಯಸ್ಸು

18 ರಿಂದ 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆಯಬಹುದು. ಅವಲಂಬಿತ ಮಕ್ಕಳಿಗೆ 31 ನೇ ದಿನದಿಂದ 25 ವರ್ಷಗಳವರೆಗೆ ರಕ್ಷಣೆ ನೀಡಲಾಗುತ್ತದೆ.

ಹೊರರೋಗಿ ಸಮಾಲೋಚನೆ

ಭಾರತದಲ್ಲಿನ ಯಾವುದೇ ನೆಟ್‌ವರ್ಕ್ ಸೌಲಭ್ಯದಲ್ಲಿ ಹೊರರೋಗಿಗಳ ಸಮಾಲೋಚನೆಗಾಗಿ ತಗಲುವ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ

ಆಯುಷ್ ಕವರ್

ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಔಷಧಗಳ ಅಡಿಯಲ್ಲಿ ಹೊರರೋಗಿಗಳ ವೈದ್ಯಕೀಯ ಸಮಾಲೋಚನೆ ಮತ್ತು ಚಿಕಿತ್ಸಾ ವೆಚ್ಚಗಳನ್ನು ಒಳಗೊಂಡಿದೆ.

ಡಯಾಗ್ನೋಸ್ಟಿಕ್ಸ್, ಫಿಸಿಯೋಥೆರಪಿ ಮತ್ತು ಫಾರ್ಮಸಿ

ನೆಟ್‌ವರ್ಕ್ ಸೌಲಭ್ಯದಲ್ಲಿ ಡಯಾಗ್ನೋಸ್ಟಿಕ್ಸ್, ಫಿಸಿಯೋಥೆರಪಿ ಮತ್ತು ಫಾರ್ಮಸಿಗೆ ತಗಲುವ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ.

ಹಲ್ಲಿನ ಚಿಕಿತ್ಸೆ

ನೈಸರ್ಗಿಕ ಹಲ್ಲುಗಳ ಸಮಸ್ಯೆ ಅಥವಾ ಅಪಘಾತಗಳಿಂದ ಉಂಟಾಗುವ ಯಾವುದೇ ಹಲ್ಲಿನ ಸಮಸ್ಯೆಗೆ ಚಿಕಿತ್ಸೆಯನ್ನು ಕೈಗೊಳ್ಳುವ ಸಂದರ್ಭದಲ್ಲಿ ಅವುಗಳ ವೆಚ್ಚಗಳನ್ನು ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಕವರ್ ಮಾಡಲಾಗುತ್ತದೆ.

ಕಣ್ಣಿನ ಚಿಕಿತ್ಸೆ ಕವರ್

ಭಾರತದಲ್ಲಿನ ಯಾವುದೇ ನೆಟ್‌ವರ್ಕ್ ಸೌಲಭ್ಯದಲ್ಲಿ ಆಕಸ್ಮಿಕ ಗಾಯಗಳಿಂದ ಉಂಟಾಗುವ ಕಣ್ಣಿನ ಚಿಕಿತ್ಸಾ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ.

ಜೀವನಪರ್ಯಂತ ನವೀಕರಣ

ಈ ಪಾಲಿಸಿಯು ಜೀವನಪರ್ಯಂತ ನವೀಕರಣದ ಆಯ್ಕೆಯನ್ನು ನೀಡುತ್ತದೆ.

ನವೀಕರಣ ರಿಯಾಯಿತಿ

ಎರಡು ನಿರಂತರ ಕ್ಲೈಮ್ ಮುಕ್ತ ವರ್ಷಗಳ ಪ್ರತಿ ಬ್ಲಾಕ್‌ನ ನಂತರ ನವೀಕರಣದ ಸಮಯದಲ್ಲಿ ವಿಮಾದಾರರು ಪ್ರೀಮಿಯಂನಲ್ಲಿ 25% ನಷ್ಟು ರಿಯಾಯಿತಿಯನ್ನು ಪಡೆಯಬಹುದು.
ಪಾಲಿಸಿ ವಿವರಗಳು ಹಾಗೂ ಕರಾರುಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ದಾಖಲೆಯನ್ನು ಓದಿ.
ಸ್ಟಾರ್ ಹೆಲ್ತ್

ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಏಕೆ ನಮ್ಮ ಆಯ್ಕೆಯಾಗಿರಬೇಕು?

ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.

ನಮ್ಮ ಗ್ರಾಹಕರು

ಸ್ಟಾರ್ ಹೆಲ್ತ್ ಜೊತೆಗೆ ‘ಸಂತೋಷದಾಯಕ ವಿಮಾದಾರರು!’ ಆಗಿದ್ದಾರೆ

ನಿಮ್ಮ ಸಮಯ ಮತ್ತು ಹಣವನ್ನು ಉಳಿಸಲು ಮತ್ತು ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಕಂಡುಕೊಳ್ಳಲು ತುಂಬಾ ಕಷ್ಟಕರವಾಗಿಸುವ ತೊಂದರೆಗಳನ್ನು ತೊಡೆದುಹಾಕಲು ನಾವು ಬದ್ಧರಾಗಿದ್ದೇವೆ.

Customer Image
ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಿಂದ ಹೆಲ್ತ್ ಅನ್ನು ಖರೀದಿಸಲು ನನ್ನಸ್ನೇಹಿತರೊಬ್ಬರು ಹೇಳಿದ್ದರು ಹಾಗೂ ನನ್ನ ಮಗನ ಅನಾರೋಗ್ಯದ ಸಮಯದಲ್ಲಿ ಅದು ನನಗೆ ಸಹಾಯ ಮಾಡಿತು ಅವರ ನಗದು ರಹಿತ ಚಿಕಿತ್ಸಾ ಸೌಲಭ್ಯವು ಆ ಸಮಯದಲ್ಲಿ ಸಹಾಯಕವಾಗಿತ್ತು. ಅವರ ಸೇವೆ ಮತ್ತು ಬೆಂಬಲವನ್ನುನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ

ಟಿಜಿ ಕೆ ಉಮ್ಮನ್

ತಿರುವನಂತಪುರಂ

ವಿಮಾದಾರರಾಗಿ
Customer Image
ನಾನು ಕಳೆದ 8 ವರ್ಷಗಳಿಂದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿದ್ದೇನೆ ಮತ್ತು ಆ ಸಮಯದಲ್ಲಿ ಎರಡು ಕ್ಲೈಮ್‌ಗಳಿಗೆ ಅರ್ಜಿ ಸಲ್ಲಿಸಿದ್ದೇನೆ. ಎರಡೂ ಕ್ಲೈಮ್‌ಗಳು ಇತ್ಯರ್ಥಗೊಂಡಿವೆ ಮತ್ತು ನಾನು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಕಂಪನಿಯಿಂದ ಉತ್ತಮ ಬೆಂಬಲವನ್ನು ಪಡೆದಿದ್ದೇನೆ.

ವಾಣಿಶ್ರೀ

ಬೆಂಗಳೂರು

ವಿಮಾದಾರರಾಗಿ
Customer Image
ನನ್ನ ಕುಟುಂಬವು 2006 ರಿಂದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿದೆ. ಕಳೆದ ತಿಂಗಳು ನಾವು ಅರ್ಜಿ ಸಲ್ಲಿಸಿದ ನಮ್ಮ ಕ್ಲೈಮ್ ಅನ್ನು ಯಾವುದೇ ತೊಂದರೆಯಿಲ್ಲದೆ ಇತ್ಯರ್ಥಗೊಳಿಸಲಾಗಿದೆ. ನಾವು ಅಂತಹ ಸೇವಾ ಪೂರೈಕೆದಾರರ ಭಾಗವಾಗಿರುವುದಕ್ಕೆ ನಮಗೆ ಸಂತೋಷವಾಗಿದೆ.

ರಾಮಚಂದ್ರನ್

ಚೆನ್ನೈ

ವಿಮಾದಾರರಾಗಿ
Customer Image
ನನಗೆ ಅಗತ್ಯವಿದ್ದಾಗ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನನಗೆ ಸಾಕಷ್ಟು ಸಹಾಯ ಮಾಡಿತು. ನನ್ನ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ನನಗೆ ನಗದು ರಹಿತ ಚಿಕಿತ್ಸೆಯನ್ನು ಒದಗಿಸಿದ ಸ್ಟಾರ್‌ನ ಸಮಗ್ರ ನೀತಿಯ ಅಡಿಯಲ್ಲಿ ನಾನು ಕವರೇಜ್ ಪಡೆದಿದ್ದೇನೆ.

ಶೈಲಾ ಗಣಾಚಾರಿ

ಮುಂಬೈ

ವಿಮಾದಾರರಾಗಿ
Customer Image
ನಾನು ಕಳೆದ 7-8 ವರ್ಷಗಳಿಂದ ಮೆಡಿಕ್ಲೈಮ್ ಸೇವೆಗಳನ್ನು ಬಳಸುತ್ತಿದ್ದೇನೆ. ನಾನು ಇತರ ಕಂಪನಿಗಳನ್ನು ಪ್ರಯತ್ನಿಸಿದೆ. ಆದರೆ, ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನನಗೆ ಒದಗಿಸಿದ ಸೇವೆಯಿಂದ ನಾನು ತೃಪ್ತನಾಗಿದ್ದೇನೆ, ಅವರು ಸ್ನೇಹಪರ ಬೆಂಬಲ ಸಿಬ್ಬಂದಿಯನ್ನು ಸಹ ಹೊಂದಿದ್ದಾರೆ.

ಸುಧೀರ್ ಭಾಯಿಜಿ

ಇಂದೋರ್

ವಿಮಾದಾರರಾಗಿ
user
ಟಿಜಿ ಕೆ ಉಮ್ಮನ್
ತಿರುವನಂತಪುರಂ

ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಿಂದ ಹೆಲ್ತ್ ಅನ್ನು ಖರೀದಿಸಲು ನನ್ನಸ್ನೇಹಿತರೊಬ್ಬರು ಹೇಳಿದ್ದರು ಹಾಗೂ ನನ್ನ ಮಗನ ಅನಾರೋಗ್ಯದ ಸಮಯದಲ್ಲಿ ಅದು ನನಗೆ ಸಹಾಯ ಮಾಡಿತು ಅವರ ನಗದು ರಹಿತ ಚಿಕಿತ್ಸಾ ಸೌಲಭ್ಯವು ಆ ಸಮಯದಲ್ಲಿ ಸಹಾಯಕವಾಗಿತ್ತು. ಅವರ ಸೇವೆ ಮತ್ತು ಬೆಂಬಲವನ್ನುನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ

user
ವಾಣಿಶ್ರೀ
ಬೆಂಗಳೂರು

ನಾನು ಕಳೆದ 8 ವರ್ಷಗಳಿಂದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿದ್ದೇನೆ ಮತ್ತು ಆ ಸಮಯದಲ್ಲಿ ಎರಡು ಕ್ಲೈಮ್‌ಗಳಿಗೆ ಅರ್ಜಿ ಸಲ್ಲಿಸಿದ್ದೇನೆ. ಎರಡೂ ಕ್ಲೈಮ್‌ಗಳು ಇತ್ಯರ್ಥಗೊಂಡಿವೆ ಮತ್ತು ನಾನು ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಕಂಪನಿಯಿಂದ ಉತ್ತಮ ಬೆಂಬಲವನ್ನು ಪಡೆದಿದ್ದೇನೆ.

user
ರಾಮಚಂದ್ರನ್
ಚೆನ್ನೈ

ನನ್ನ ಕುಟುಂಬವು 2006 ರಿಂದ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನಲ್ಲಿದೆ. ಕಳೆದ ತಿಂಗಳು ನಾವು ಅರ್ಜಿ ಸಲ್ಲಿಸಿದ ನಮ್ಮ ಕ್ಲೈಮ್ ಅನ್ನು ಯಾವುದೇ ತೊಂದರೆಯಿಲ್ಲದೆ ಇತ್ಯರ್ಥಗೊಳಿಸಲಾಗಿದೆ. ನಾವು ಅಂತಹ ಸೇವಾ ಪೂರೈಕೆದಾರರ ಭಾಗವಾಗಿರುವುದಕ್ಕೆ ನಮಗೆ ಸಂತೋಷವಾಗಿದೆ.

user
ಶೈಲಾ ಗಣಾಚಾರಿ
ಮುಂಬೈ

ನನಗೆ ಅಗತ್ಯವಿದ್ದಾಗ ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನನಗೆ ಸಾಕಷ್ಟು ಸಹಾಯ ಮಾಡಿತು. ನನ್ನ ಆಂಜಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರ ನೆಟ್‌ವರ್ಕ್ ಆಸ್ಪತ್ರೆಯಲ್ಲಿ ನನಗೆ ನಗದು ರಹಿತ ಚಿಕಿತ್ಸೆಯನ್ನು ಒದಗಿಸಿದ ಸ್ಟಾರ್‌ನ ಸಮಗ್ರ ನೀತಿಯ ಅಡಿಯಲ್ಲಿ ನಾನು ಕವರೇಜ್ ಪಡೆದಿದ್ದೇನೆ.

user
ಸುಧೀರ್ ಭಾಯಿಜಿ
ಇಂದೋರ್

ನಾನು ಕಳೆದ 7-8 ವರ್ಷಗಳಿಂದ ಮೆಡಿಕ್ಲೈಮ್ ಸೇವೆಗಳನ್ನು ಬಳಸುತ್ತಿದ್ದೇನೆ. ನಾನು ಇತರ ಕಂಪನಿಗಳನ್ನು ಪ್ರಯತ್ನಿಸಿದೆ. ಆದರೆ, ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ನನಗೆ ಒದಗಿಸಿದ ಸೇವೆಯಿಂದ ನಾನು ತೃಪ್ತನಾಗಿದ್ದೇನೆ, ಅವರು ಸ್ನೇಹಪರ ಬೆಂಬಲ ಸಿಬ್ಬಂದಿಯನ್ನು ಸಹ ಹೊಂದಿದ್ದಾರೆ.

ಬೇರೆ ಏನನ್ನಾದರೂ ಹುಡುಕುತ್ತಿದ್ದೀರಾ?

ಪ್ರಾರಂಭಿಸಿ

ಅತ್ಯುತ್ತಮವಾದುದರ ಖಾತರಿ ಹೊಂದಿರಿ

ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.

Contact Us
ಹೆಚ್ಚಿನ ಮಾಹಿತಿ ಬೇಕೆ?
Get Insured
ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?

ಸ್ಟಾರ್ ಔಟ್ ಪೇಶೆಂಟ್ ಕೇರ್ ಇನ್ಶೂರೆನ್ಸ್ ಪಾಲಿಸಿ

 

OPD ಕವರ್ ಜೊತೆಗೆ ಹೆಲ್ತ್ ಇನ್ಶೂರೆನ್ಸ್

 

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಸಾಮಾನ್ಯವಾಗಿ ನಮ್ಮ ಆದ್ಯತಾ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದಿಲ್ಲ. ಸಾಮಾನ್ಯವಾಗಿ ಇದನ್ನು ಅನಗತ್ಯ ಖರ್ಚು ಎಂದು ಭಾವಿಸಲಾಗುತ್ತದೆ. ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ನೀಡುವ ಸುರಕ್ಷತೆಯನ್ನು ನಾವು ಅರ್ಥಮಾಡಿಕೊಳ್ಳುವುದು ತೀರಾ ವಿರಳ ಎನ್ನಬಹುದು. ಮನುಷ್ಯರಾಗಿ, ನಮಗೆ ಖಂಡಿತವಾಗಿಯೂ ಕಾಯಿಲೆಗಳು/ರೋಗಗಳಿಗೆ ದಾಖಲಾಗುವುದನ್ನು ನಿರೀಕ್ಷಿಸಲಾಗುವುದಿಲ್ಲ ಮತ್ತು ನಮಗೆ ಹೆಲ್ತ್ ಇನ್ಸೂರೆನ್ಸ್ ಪಾಲಿಸಿಯ ಅಗತ್ಯವಿಲ್ಲ ಎಂದು ಭಾವಿಸಿರುತ್ತೇವೆ. ಆದರೆ ದುರದೃಷ್ಟವಶಾತ್ ನಾವು ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ನೆಗಡಿಯಿಂದ, ಕೆಮ್ಮಿನಿಂದ ಹಿಡಿದು ಅತಿಸಾರ ಅಥವಾ ಅಲರ್ಜಿಗಳವರೆಗಿನ ಯಾವುದೇ ಪರಿಸ್ಥಿತಿಗಳು ಖಂಡಿತವಾಗಿ ನಿಮ್ಮನ್ನು ಕ್ಲಿನಿಕ್ ಅಥವಾ ಆಸ್ಪತ್ರೆಗೆ ಕೊಂಡೊಯ್ಯಬಹುದು.

 

ಭಾರತದಲ್ಲಿ OPD ವೆಚ್ಚಗಳು ಒಟ್ಟು ಆರೋಗ್ಯ ವೆಚ್ಚದ 60% ಗಿಂತ ಹೆಚ್ಚು ಎಂದು ನಿಮಗೆ ತಿಳಿದಿದೆಯೇ? ಹೌದು, ನೀವು ಓದಿದ್ದು ಸರಿಯಾಗಿಯೇ ಇದೆ. ಮತ್ತು ಪ್ರತಿ ಸಮಾಲೋಚನೆಗೆ ರೂ 500 ಪಾವತಿಸುವುದು ಹೆಚ್ಚು ಎನಿಸದಿದ್ದರೂ ಇಡೀ ವರ್ಷದಲ್ಲಿ ಉಂಟಾಗುವ ಒಟ್ಟು ವೆಚ್ಚಗಳನ್ನು ಖಂಡಿತವಾಗಿಯೂ ಲಘುವಾಗಿ ಪರಿಗಣಿಸಲಾಗುವುದಿಲ್ಲ.

 

ಆರೋಗ್ಯದ ರಕ್ಷಣೆಗಾಗಿ ಖರ್ಚು ಮಾಡಲು ವಿವಿಧ ಕಾರಣಗಳಿದ್ದರೂ ಈ ವೆಚ್ಚಗಳನ್ನು ತಗ್ಗಿಸಲು ಒಂದು ಮಾರ್ಗವೆಂದರೆ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು. ಪಾಲಿಸಿಯಿಂದ ಒದಗಿಸಲಾದ ಪ್ರಯೋಜನಗಳನ್ನು ಪಡೆಯಲು ನೀವು ಆಸ್ಪತ್ರೆಗೆ ದಾಖಲಾಗಬೇಕಿಲ್ಲ ಒಳರೋಗಿಯಾಗುವ ಅಗತ್ಯವೂ ಇಲ್ಲ.

 

ಇವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ನಾವು ಸ್ಟಾರ್ ಔಟ್ ಪೇಶೆಂಟ್ ಕೇರ್ ಇನ್ಶೂರೆನ್ಸ್ ಪಾಲಿಸಿಯನ್ನು ರೂಪಿಸಿದ್ದೇವೆ. OPD ವೆಚ್ಚಗಳನ್ನು ತಗ್ಗಿಸಲು ಈ ಪಾಲಿಸಿಯು ನಿಮಗೆ ಸಹಾಯ ಮಾಡುವುದರಿಂದ ನಾವು ಅನಾರೋಗ್ಯಕ್ಕೆ ಒಳಗಾದರೆ ಒತ್ತಡಪಡುವ ಅಥವಾ ಚಿಂತಿಸಬೇಕಾದ ಅಗತ್ಯವಿಲ್ಲ.

 

ಕೆಲವು ಆರೋಗ್ಯ ಪರಿಸ್ಥಿತಿಗಳಿಗಾಗಿ ನೀವು ಆಸ್ಪತ್ರೆಗೆ ದಾಖಲಾಗಬೇಕಾಗಬಹುದು, ಹೆಚ್ಚಿನ ಕಾಯಿಲೆಗಳಿಗೆ ಆಸ್ಪತ್ರೆಯ ಅಗತ್ಯವಿಲ್ಲ ಮತ್ತು ಅಂತಹ ಕಾಯಿಲೆಗಳಿಗೆ ನೀಡಲಾಗುವ ಚಿಕಿತ್ಸೆಗಳು ಹೊರರೋಗಿ ಚಿಕಿತ್ಸೆಗಳ ಅಡಿಯಲ್ಲಿ ಬರುತ್ತದೆ. ಹೊರರೋಗಿ ಚಿಕಿತ್ಸೆಯು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸದೆಯೇ ನೀಡಿದ ಎಲ್ಲಾ ಚಿಕಿತ್ಸೆಗಳನ್ನು ಒಳಗೊಂಡಿರುತ್ತದೆ. ಉದಾ. ಸಮಾಲೋಚನಾ ಶುಲ್ಕಗಳು, ವಿಟಮಿನ್ ಸಪ್ಲಿಮೆಂಟ್‌ಗಳು, ಆ್ಯಂಟಿಬಯೋಟಿಕ್‌ಗಳು.

 

ಪರೀಕ್ಷೆಗಳು, ಸ್ಕ್ಯಾನಿಂಗ್‌ಗಳು, ಆಸ್ಪತ್ರೆಯಲ್ಲಿ ತಜ್ಞರೊಂದಿಗೆ ಸಮಾಲೋಚನೆ ನಡೆಸುವುದು ಅಥವಾ ದಂತವೈದ್ಯರ ಚಿಕಿತ್ಸಾಲಯದಲ್ಲಿ ಹಲ್ಲು ತುಂಬಿಸುವುದು ಇತ್ಯಾದಿಗಳಂತಹ ಸಾಮಾನ್ಯ ಹೊರರೋಗಿ ಚಿಕಿತ್ಸಾ ವಿಧಾನಗಳಲ್ಲಿ ನೀವು ಉಳಿಸಬಹುದಾದ ಹಣವನ್ನು ಒಮ್ಮೆ ಊಹಿಸಿ.

ಔಟ್ ಪೇಶೆಂಟ್ ಕೇರ್ ಪಾಲಿಸಿ ಎಂದರೇನು?

  • ಹೊರರೋಗಿ ವೈದ್ಯಕೀಯ ಸಮಾಲೋಚನೆ
  • ಅಲೋಪತಿಯಲ್ಲದ ಚಿಕಿತ್ಸಾ ವೆಚ್ಚಗಳು
  • ಡಯಾಗ್ನೋಸ್ಟಿಕ್ಸ್, ಫಿಸಿಯೋಥೆರಪಿ ಮತ್ತು ಫಾರ್ಮಸಿ ವೆಚ್ಚಗಳು
  • ದಂತ ಮತ್ತು ಕಣ್ಣಿನ ಚಿಕಿತ್ಸಾ ವೆಚ್ಚಗಳು

 

ವಿಷಯಮಾನದಂಡ
ಪ್ರವೇಶ ವಯಸ್ಸು18 ವರ್ಷಗಳಿಂದ 50 ವರ್ಷಗಳು
ಅವಲಂಬಿತ ಮಕ್ಕಳು – 31 ದಿನಗಳಿಂದ 25 ವರ್ಷಗಳು
ನವೀಕರಣಜೀವನಪರ್ಯಂತ
ಪಾಲಿಸಿ ಅವಧಿ1 ವರ್ಷ
ವಿಮಾ ಮೊತ್ತರೂ 25000 ದಿಂದ 1 ಲಕ್ಷ
ರಿಯಾಯಿತಿಗಳು

ನವೀಕರಣ ರಿಯಾಯಿತಿ  – 2 ನಿರಂತರ ಕ್ಲೈಮ್ ಮುಕ್ತ ವರ್ಷಗಳ ಪ್ರತಿ ಬ್ಲಾಕ್ ನಂತರ ಪ್ರೀಮಿಯಂನಲ್ಲಿ 25%

5% - ಆನ್‌ಲೈನ್‌ನಲ್ಲಿ ಪಾಲಿಸಿ ಖರೀದಿಸಿದರೆ

ವೇಟಿಂಗ್ ಅವಧಿPED- 48/24/12 ತಿಂಗಳುಗಳು (ಕ್ರಮವಾಗಿ ಸಿಲ್ವರ್/ಗೋಲ್ಡ್/ಪ್ಲಾಟಿನಮ್)ಆರಂಭಿಕ ವೇಟಿಂಗ್ ಅವಧಿ – 30 ದಿನಗಳು (ಅಪಘಾತಗಳನ್ನು ಹೊರತುಪಡಿಸಿ) 

 

ಪ್ರಯೋಜನಗಳುಕವರೇಜ್ ಮಿತಿಕವರ್‌ನ ವಿವರಣೆ
ಹೋರರೋಗಿ ಸಮಾಲೋಚನೆS.I ವರೆಗೆ ಮತ್ತು ಬೋನಸ್ ಯಾವುದಾದರೂ
ಇದ್ದರೆ
ಭಾರತದಲ್ಲಿನ ನೆಟ್‍ವರ್ಕ್‌ನಲ್ಲಿರುವ ಯಾವುದೇ ಘಟಕಗಳಲ್ಲಿ ತಗಲುವ ಹೊರರೋಗಿ ವೆಚ್ಚಗಳು ಕವರ್ ಆಗುತ್ತದೆ.
ಅಲೋಪತಿಯಲ್ಲದ ಚಿಕಿತ್ಸಾ ವೆಚ್ಚಗಳುಕವರ್ ಆಗುತ್ತದೆವಿಮಾ ಮೊತ್ತದ ತನಕ ಆಯುಷ್ ಚಿಕಿತ್ಸೆ ಬಯಸುವವರಿಗೆ ಅಲೋಪತಿಯೇತರ ಚಿಕಿತ್ಸೆ ಕವರ್ ಆಗುತ್ತದೆ.
ಡಯಾಗ್ನೋಸ್ಟಿಕ್ಸ್, ಫಿಸಿಯೋಥೆರಪಿ ಮತ್ತು ಫಾರ್ಮಸಿಕವರ್ ಆಗುತ್ತದೆಭಾರತದಲ್ಲಿನ ನೆಟ್‍ವರ್ಕ್‌ನಲ್ಲಿರುವ ಯಾವುದೇ ಘಟಕಗಳಲ್ಲಿ ತಗಲುವ ನಿಮ್ಮ ಡಯಗ್ನೋಸ್ಟಿಕ್ಸ್, ಫಿಸಿಯೋಥೆರಪಿ ಮತ್ತು ಫಾರ್ಮಸಿ ವೆಚ್ಚಗಳು ಕವರ್ ಆಗುತ್ತವೆ.
ದಂತ ಮತ್ತು ಕಣ್ಣಿನ ಚಿಕಿತ್ಸಾ ವೆಚ್ಚಗಳುಕವರ್ ಆಗುತ್ತದೆಅಪಘಾತದಿಂದ ಉಂಟಾಗುವ ದಂತ ಮತ್ತು ಕಣ್ಣಿನ ಸಮಸ್ಯೆಗೆ ಭಾರತದಲ್ಲಿನ ನೆಟ್‍ವರ್ಕ್‌ನಲ್ಲಿರುವ ಯಾವುದೇ ಘಟಕಗಳಲ್ಲಿ ತಗಲುವ ಚಿಕಿತ್ಸೆಯ ವೆಚ್ಚಗಳು ಕವರ್ ಆಗುತ್ತವೆ.

ಡೇಕೇರ್ ಚಿಕಿತ್ಸೆ ಮತ್ತು OPD ಚಿಕಿತ್ಸೆಯ ನಡುವಿನ ವ್ಯತ್ಯಾಸ

 

ಡೇಕೇರ್ ಚಿಕಿತ್ಸೆಗಳು:

 

ಸಾಮಾನ್ಯವಾಗಿ, ನಿಮ್ಮ ಹೆಲ್ತ್ ಇನ್ಸೂರೆನ್ಸ್ ವಿರುದ್ಧ ಕ್ಲೈಮ್ ಮಾಡಲು, ನೀವು ಕನಿಷ್ಟ 24 ಗಂಟೆಗಳ ಕಾಲವಾದರೂ ಆಸ್ಪತ್ರೆಗೆ ದಾಖಲಾಗಬೇಕು. ಆದಾಗ್ಯೂ, ಕೆಲವು ಚಿಕಿತ್ಸೆಗಳಿಗೆ ಅವುಗಳ ತಾಂತ್ರಿಕ ಪ್ರಗತಿಯ ಕಾರಣದಿಂದ ಇನ್ನು ಮುಂದೆ 24 ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆಯಿಲ್ಲ. ಈ ಹಿಂದೆ, ಕಣ್ಣಿನ ಪೊರೆ ಚಿಕಿತ್ಸೆಯನ್ನು ಪಡೆಯುವ ರೋಗಿಯ ಶಸ್ತ್ರ ಚಿಕಿತ್ಸೆಯ ನಂತರ ಹಲವಾರು ದಿನಗಳವರೆಗೆ ಆಸ್ಪತ್ರೆಯಲ್ಲಿ ಇರಬೇಕಾಗುತ್ತಿತ್ತು. ಈಗ ತಾಂತ್ರಿಕ ಪ್ರಗತಿಯ ಪರಿಣಾಮವಾಗಿ, ಶಸ್ತ್ರಚಿಕಿತ್ಸೆಯನ್ನು ಕೈಗೊಂಡ ದಿನವೇ  ರೋಗಿಯು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಬಹುದು.

 

ಅಂತಹ ಚಿಕಿತ್ಸೆಯು ನಿಮ್ಮ ಪಾಲಿಸಿಯಲ್ಲಿ ಒಳಗೊಂಡಿದ್ದರೆ, ಅವುಗಳು ಚಿಕಿತ್ಸೆಯ ವ್ಯಾಖ್ಯಾನದ ಅಡಿಯಲ್ಲಿ ಬರುತ್ತವೆ.

 

OPD ಚಿಕಿತ್ಸೆಗಳು:

 

ಹೊರರೋಗಿ ವಿಭಾಗ ಅಥವಾ OPD, ರೋಗಿಯು ಸಲಹೆ, ಪರೀಕ್ಷೆಗಳು, ಎಕ್ಸ್-ರೇಗಳು, ತನಿಖೆಗಳು, ರೋಗನಿರ್ಣಯ, ಫಿಸಿಯೋಥೆರಪಿ ಇತ್ಯಾದಿಗಳನ್ನು ಪಡೆಯುವ ಉದ್ದೇಶಕ್ಕಾಗಿ ವೈದ್ಯರನ್ನು ಭೇಟಿ ಮಾಡುವ ಸ್ಥಿತಿಯನ್ನು ಇದು ಸೂಚಿಸುತ್ತದೆ.

 

ಡೇ ಕೇರ್ ಮತ್ತು OPD ಚಿಕಿತ್ಸೆಗಳು ಸರಿಸುಮಾರು ಒಂದೇ ರೀತಿಯದ್ದಾಗಿವೆ ಏಕೆಂದರೆ ಅವೆರಡೂ ಕಡಿಮೆ ಸಮಯವನ್ನು ಒಳಗೊಂಡಿರುತ್ತವೆ.

 

ಆತ್ಪತ್ರೆಯ ದಾಖಲಾತಿ ಇವೆರಡರ ನಡುವಿನ ಪ್ರಮುಖ ವ್ಯತ್ಯಾಸವಾಗಿದೆ. ಡೇ ಕೇರ್ ಕಾರ್ಯವಿಧಾನಕ್ಕೆ ಕಡಿಮೆ ಸಮಯ ಸಾಕಾದರೂ ಸಹ ಇದನ್ನು ಆಸ್ಪತ್ರೆಯಲ್ಲಿ ನಡೆಸಿದಾಗ ಮಾತ್ರ ನೀವು ಡೇ ಕೇರ್ ಚಿಕಿತ್ಸೆಯ ಅಡಿಯಲ್ಲಿ ನಿಮ್ಮ ವೈದ್ಯಕೀಯ ವೆಚ್ಚವನ್ನು ಪಡೆಯಲು ಸಾಧ್ಯವಾಗುತ್ತದೆ. OPD ಚಿಕಿತ್ಸೆಗಳಿಗೆ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. OPD ಚಿಕಿತ್ಸೆಯ ಸ್ವರೂಪವೆಂದರೆ ನೀವು ಆಸ್ಪತ್ರೆಗೆ ಅಥವಾ ಕ್ಲಿನಿಕ್‌ಗೆ ದಾಖಲಾಗದೆ ಚಿಕಿತ್ಸೆ ಪಡೆಯುವುದು ಸಾಧ್ಯ.

 

ಇದಕ್ಕೆ ರೂಟ್ ಕೆನಾಲ್ ಒಂದು ಒಳ್ಳೆಯ ಉದಾಹರಣೆಯಾಗಿದೆ. ರೂಟ್ ಕೆನಾಲ್ ಅನ್ನು ಕ್ಲಿನಿಕ್ ಅಥವಾ ಆಸ್ಪತ್ರೆಯಲ್ಲಿ ದಾಖಲಾಗದೆ ಕೈಗೊಳ್ಳಬಹುದು ಮತ್ತು ಆದ್ದರಿಂದ ಇದು OPD ವರ್ಗದ ಅಡಿಯಲ್ಲಿ ಬರುತ್ತದೆ. ಅಪಘಾತದ ಸಂದರ್ಭದಲ್ಲಿ ಮಾಡಿದ ಹಲ್ಲಿನ ಶಸ್ತ್ರಚಿಕಿತ್ಸೆಯು ಡೇಕೇರ್ ಚಿಕಿತ್ಸೆಯ ಅಡಿಯಲ್ಲಿ ಬರಬಹುದು.

ನೀವು ಔಟ್ ಪೇಶೆಂಟ್ ಕೇರ್ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಖರೀದಿಸಬೇಕು?

ಭಾರತದಲ್ಲಿ ವೈದ್ಯಕೀಯ ಚಿಕಿತ್ಸೆಯ ವೆಚ್ಚವು ಗಣನೀಯ ವೇಗದಲ್ಲಿ ಏರುತ್ತಿದೆ ಮತ್ತು ಇದು ಹೆಲ್ತ್ ಇನ್ಸೂರೆನ್ಸ್ ಅನ್ನು ಆಯ್ಕೆಗಿಂತ ಹೆಚ್ಚಾಗಿ ಅಗತ್ಯವನ್ನಾಗಿ ಮಾಡಿದೆ. OPD ಚಿಕಿತ್ಸೆಗಳು ಇಂದು ತುಂಬಾ ಸಾಮಾನ್ಯವಾಗಿದ. ಜ್ವರ, ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ECG, ಎಕ್ಸ್-ರೇಗಳು ಅಥವಾ ಕುಟುಂಬ ವೈದ್ಯರನ್ನು ಅಥವಾ ಸಲಹೆಗಾರರನ್ನನು ಯಾರು ತಾನೇ ಆಗಾಗ ಭೇಟಿ ಮಾಡುತ್ತಿಲ್ಲ?

 

ಸಾಮಾನ್ಯವಾಗಿ, ಹೊರರೋಗಿ ಚಿಕಿತ್ಸೆಗಳು ಅಸ್ತಿತ್ವದಲ್ಲಿರುವ ಪಾಲಿಸಿಗಳಿಗೆ ಆಡ್-ಆನ್ ಆಗಿ ಬರುತ್ತವೆ ಅಥವಾ ಪ್ರಮಾಣಿತ ಪಾಲಿಸಿಯೊಂದಿಗೆ ಪ್ರಯೋಜನ ಪಡೆಯುತ್ತವೆ ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆರ್ಥಿಕ ಅನುಕೂಲಕ್ಕೆ ಸೂಕ್ತವಾದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವಾಗ ಅದರ ಅವಶ್ಯಕತೆಗಳು ಮತ್ತು ಅಗತ್ಯಗಳನ್ನು ಹೊಂದಿರುತ್ತಾರೆ. OP ಕವರ್ ಮತ್ತು ಒಳರೋಗಿ ಕವರ್ ಅನ್ನು ಹೊಂದುವ ಮೂಲಕ ವ್ಯಕ್ತಿಯು ಸಂಪೂರ್ಣವಾಗಿ ಕವರೇಜ್ ಪಡೆಯಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಆರೋಗ್ಯವಂತ ವ್ಯಕ್ತಿಯು ಸಹ ವೈದ್ಯಕೀಯ ಪರಿಸ್ಥಿತಿಗಳಿಗಾಗಿ ವೈದ್ಯರನ್ನು ಭೇಟಿ ಮಾಡುವ ಸಾಧ್ಯತೆಯಿದೆ, ಇದು ಆಸ್ಪತ್ರೆಗೆ ದಾಖಲಾಗುವಷ್ಟು ಗಂಭೀರವಾಗಿರುವುದಿಲ್ಲ ಉದಾಹರಣೆಗೆ ಹೇಳಬೇಕೆಂದರೆ, ಹಲ್ಲು ತುಂಬುವುದು ಅಥವಾ ವೈದ್ಯರೊಂದಿಗೆ ಸಾಮಾನ್ಯ ಭೇಟಿ. ವಯಸ್ಸು ಹೆಚ್ಚಾದಂತೆ ನಿಯಮಿತ ಆರೋಗ್ಯ ತಪಾಸಣೆಗಳು ಜೀವನದ ಭಾಗವಾಗುತ್ತವೆ ನೀವು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸುವ ವ್ಯಕ್ತಿಯಾಗಿದ್ದರೆ, ಅಂತಹ ವೆಚ್ಚಗಳನ್ನು OP ಕೇರ್ ಕವರ್ ಮಾಡುತ್ತದೆ. ದುರದೃಷ್ಟವಶಾತ್, ದಂತ ಚಿಕಿತ್ಸೆಗಳು, ರೋಗನಿರ್ಣಯ ಪರೀಕ್ಷೆಗಳು, ವೈದ್ಯರೊಂದಿಗಿನ ಪೀರಿಯಾಡಿಕ್ ಸಮಾಲೋಚನೆ, ತಡೆಗಟ್ಟುವ ತಪಾಸಣೆ ಮತ್ತು ಔಷಧಗಳ ವೆಚ್ಚವು ಸಾವಿರದಿಂದ 1 ಲಕ್ಷದವರೆಗೆ ಇರುತ್ತದೆ. ಹೊರರೋಗಿ ಕವರ್ ಆರೋಗ್ಯವಂತ ವ್ಯಕ್ತಿಗೆ ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ಆಗಾಗ್ಗೆ ಭೇಟಿ ನೀಡುವ ಯಾರಿಗಾದರೂ ಹೆಚ್ಚು ಸೂಕ್ತವಾಗಿದೆ ಮತ್ತು ನಿಮ್ಮ ಔಷಧ ಹಾಗೂ ಚಿಕಿತ್ಸೆಯ ವೆಚ್ಚವನ್ನು ನೀವು ಜೇಬಿನಿಂದ ಪಾವತಿಸಬೇಕಾಗಿಲ್ಲ.

ಸ್ಟಾರ್ ಔಟ್ ಪೇಶೆಂಟ್ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಆರಿಸಬೇಕು?

 

  • ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ನಗದು-ರಹಿತ ಸೌಲಭ್ಯ

 

ನಮ್ಮ ನಿರಂತರವಾಗಿ ಹೆಚ್ಚುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನಲ್ಲಿ ನಗದುರಹಿತ ಸೌಲಭ್ಯವನ್ನು ನೀವು ಆರಾಮದಾಯಕವಾಗಿ ಪಡೆಯಬಹುದು. ಯೋಜಿತ ಅಥವಾ ಯೋಜಿತವಲ್ಲದ ವೈದ್ಯಕೀಯ ವೆಚ್ಚಗಳ ಸಮಯದಲ್ಲಿ ನಿಮ್ಮ ಹತ್ತಿರದ ನೆಟ್‌ವರ್ಕ್ ಆಸ್ಪತ್ರೆಗೆ ನಾವು ಸುಲಭವಾಗಿ ಪ್ರವೇಶಿಸಬೇಕು ಎಂಬುದು ನಮ್ಮ ಗುರಿಯಾಗಿದೆ. ಸ್ಟಾರ್ ಹೆಲ್ತ್ ಇನ್ಶೂರೆನ್ಸ್ 14,000+ ಆಸ್ಪತ್ರೆಗಳ ನೆಟ್‌ವರ್ಕ್ ಅನ್ನು ಹೊಂದಿದೆ. ಸಂಪೂರ್ಣ ಪಟ್ಟಿಗಾಗಿ, ಇಲ್ಲಿ ಭೇಟಿ ನೀಡಿ.

 

  • ಆನ್‌ಲೈನ್ ರಿಯಾಯಿತಿ

 

ನೀವು starhealth.in ನಿಂದ ನೇರ ಆನ್‌ಲೈನ್ ಖರೀದಿಗಾಗಿ 5%  ರಿಯಾಯಿತಿಯನ್ನು ಪಡೆಯಬಹುದು. ನವೀಕರಣ ರಿಯಾಯಿತಿ – 2 ನಿರಂತರ ಕ್ಲೈಮ್ ಮುಕ್ತ ವರ್ಷಗಳ ಪ್ರತಿ ಬ್ಲಾಕ್ ನಂತರ ಪ್ರೀಮಿಯಂನಲ್ಲಿ 25% ರಿಯಾಯಿತಿ

 

  • ಜಂಜಾಟ-ರಹಿತ ಕ್ಲೈಮ್ ಪ್ರಕ್ರಿಯೆ

 

ವಿಮಾ ಪ್ರಕ್ರಿಯಗಳು ಸಾಮಾನ್ಯವಾಗಿ ದೀರ್ಘ ಮತ್ತು ಅಧಿಕ ದಾಖಲೆಗಳನ್ನು ಬೇಡುವ ಪ್ರಕ್ರಿಯೆಯಾಗಿರಬಹುದು. ಆದಾಗ್ಯೂ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಡಿಜಿಟಲ್-ಸ್ನೇಹಿ, ಶೂನ್ಯ-ಸ್ಪರ್ಶ, ತ್ವರಿತ ಮತ್ತು ಅನುಕೂಲಕರ ಆಯ್ಕೆಗಳನ್ನು ನೀಡುತ್ತದೆ ಅದು ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ನಿಮಗೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

 

  • ತೆರಿಗೆ ಪ್ರಯೋಜನಗಳು

 

60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿ ಮತ್ತು ಕುಟುಂಬದ ಸದಸ್ಯರು  ತೆರಿಗೆಯ ಆದಾಯದಿಂದ ರೂ. 25,000 ಕಡಿತಗಳನ್ನು ಪಡೆಯಬಹುದು, ಮತ್ತು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80D ಪ್ರಕಾರ ಪಾವತಿಸಿದ ಪ್ರೀಮಿಯಂಗಳ ಮೇಲೆ ಹಿರಿಯ ನಾಗರಿಕರಿಗೆ ಕಡಿತಗೊಳಿಸಬಹುದಾದ ಮೊತ್ತವು ರೂ. 50000 ವರೆಗೆ ವಿಸ್ತರಿಸಬಹುದು. 60 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರು ಕುಟುಂಬ ಸದಸ್ಯರು ಒಂದು ಪಾಲಿಸಿಯಡಿಯಲ್ಲಿ ವಿಮೆ ಮಾಡಿದ್ದರೆ, ಕಡಿತಗೊಳಿಸಬಹುದಾದ ಮೊತ್ತವು ರೂ. 1 ಲಕ್ಷ ಆಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಬ್ಬ ಕುಟುಂಬದ ಸದಸ್ಯರಿದ್ದರೆ ಮತ್ತು ಅವರ ಪೋಷಕರು ಸಹ ಅದೇ ಪಾಲಿಸಿಯಡಿಯಲ್ಲಿ ವಿಮೆ ಮಾಡಿದ್ದರೆ, ಅವರು ರೂ. 75000 ಗಳ ಕಡಿತವನ್ನು ಪಡೆಯಬಹುದು..

FAQ's