

ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿ
IRDAI UIN: SHAHLIP20046V011920
HIGHLIGHTS
Plan Essentials
ಒದಗಿಸಲಾಗಿರುವ ಪ್ಲ್ಯಾನ್‌ಗಳು
ಈ ಪಾಲಿಸಿಯು ವಿಶೇಷ ಪ್ರಯೋಜನಗಳೊಂದಿಗೆ ಬೇಸಿಕ್ ಮತ್ತು ವರ್ಧಿತ ಪ್ಲ್ಯಾನ್ ಆಯ್ಕೆಗಳನ್ನು ನೀಡುತ್ತದೆ.
ಪಾಲಿಸಿ ಅವಧಿ
ಈ ಪಾಲಿಸಿಯನ್ನು 1 ವರ್ಷ, 2 ವರ್ಷ ಅಥವಾ 3 ವರ್ಷಗಳ ಅವಧಿಗೆ ಪಡೆದುಕೊಳ್ಳಬಹುದು.
ಪಾಲಿಸಿ ವಿಧ
ಈ ಪಾಲಿಸಿಯನ್ನು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಪಡೆಯಬಹುದು.
ಪ್ರವೇಶದ ವಯಸ್ಸು
18 ರಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆಯಬಹುದು. ಫ್ಲೋಟರ್ ಆಧಾರದ ಅಡಿಯಲ್ಲಿ, 91 ದಿನಗಳಿಂದ 25 ವರ್ಷ ವಯಸ್ಸಿನವರೆಗಿನ ಗರಿಷ್ಠ ಮೂರು ಅವಲಂಬಿತ ಮಕ್ಕಳನ್ನು ಕವರ್ ಮಾಡಬಹುದು.
ಆಸ್ಪತ್ರೆ ಕ್ಯಾಶ್ ದಿನಗಳು
ಆಸ್ಪತ್ರೆಯ ಕ್ಯಾಶ್ ದಿನಗಳ ಸಂಖ್ಯೆಯು ಬೇಸಿಕ್ ಪ್ಲ್ಯಾನ್ ಅಡಿಯಲ್ಲಿ 30 ರಿಂದ 180 ದಿನಗಳವರೆಗೆ ಮತ್ತು ವರ್ಧಿತ ಪ್ಲ್ಯಾನ್ ಅಡಿಯಲ್ಲಿ 90 ರಿಂದ 180 ದಿನಗಳವರೆಗೆ ಬದಲಾಗುತ್ತದೆ.
ಡೇ ಕೇರ್ ಕಾರ್ಯವಿಧಾನಗಳು
ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ಡೇ ಕೇರ್ ಚಿಕಿತ್ಸೆಗಳಿಗೆ ಉಂಟಾಗುವ ಖರ್ಚುಗಳನ್ನು ಪಾಲಿಸಿ ವರ್ಷದಲ್ಲಿ ಐದು ಬಾರಿ ಕವರ್ ಮಾಡಲಾಗುತ್ತದೆ.
ಆಸ್ಪತ್ರೆಯ ಕ್ಯಾಶ್ ಮೊತ್ತ (ಪ್ರತಿ ದಿನಕ್ಕೆ)
ಬೇಸಿಕ್ ಪ್ಲ್ಯಾನ್ ಅಡಿಯಲ್ಲಿ ಲಭ್ಯವಿರುವ ದೈನಂದಿನ ಆಸ್ಪತ್ರೆ ಕ್ಯಾಶ್ ಮೊತ್ತಗಳೆಂದರೆ ರೂ. 1000, 2000 ಮತ್ತು 3000/-, ಮತ್ತು ವರ್ಧಿತ ಪ್ಲ್ಯಾನ್ ಅಡಿಯಲ್ಲಿ ಲಭ್ಯವಿರುವ ದೈನಂದಿನ ಆಸ್ಪತ್ರೆ ಕ್ಯಾಶ್ ಮೊತ್ತಗಳೆಂದರೆ ರೂ. 3000, 4000 ಮತ್ತು 5000/-.
Detailed List
ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ
ಪ್ರಮುಖ ಮುಖ್ಯಾಂಶಗಳು
ಅಸೌಖ್ಯ ಆಸ್ಪತ್ರೆ ಕ್ಯಾಶ್ಅನಾರೋಗ್ಯದ ಕಾರಣದಿಂದ ದೈನಂದಿನ ಆಸ್ಪತ್ರೆ ಕ್ಯಾಶ್ ಅನ್ನು ವಿಮೆದಾರರು ಆಯ್ಕೆ ಮಾಡಿದ ಗರಿಷ್ಠ ಸಂಖ್ಯೆಯ ದಿನಗಳವರೆಗೆ ಆಸ್ಪತ್ರೆ ಕ್ಯಾಶ್ ಮೊತ್ತದವರೆಗೆ ನೀಡಲಾಗುತ್ತದೆ. ಬೇಸಿಕ್ ಪ್ಲ್ಯಾನ್ ಅಡಿಯಲ್ಲಿ, ಒಂದು ದಿನದ ಕಡಿತವು ಅನ್ವಯಿಸುತ್ತದೆ. |
ಅಪಘಾತ ಆಸ್ಪತ್ರೆ ಕ್ಯಾಶ್ಅಪಘಾತಗಳ ಕಾರಣದಿಂದಾಗಿ ದೈನಂದಿನ ಆಸ್ಪತ್ರೆ ಕ್ಯಾಶ್ ಅನ್ನು ವಿಮೆದಾರರು ಆಯ್ಕೆ ಮಾಡಿದ ಗರಿಷ್ಠ ಸಂಖ್ಯೆಯ ದಿನಗಳವರೆಗೆ ಆಸ್ಪತ್ರೆ ಕ್ಯಾಶ್ ಮೊತ್ತದ 150% ವರೆಗೆ ನೀಡಲಾಗುತ್ತದೆ. |
ಐಸಿಯು ಆಸ್ಪತ್ರೆ ಕ್ಯಾಶ್ಕಾಯಿಲೆ ಅಥವಾ ಗಾಯದ ಕಾರಣದಿಂದ ಉಂಟಾಗುವ ಐಸಿಯು ಖರ್ಚುಗಳಿಗೆ ದೈನಂದಿನ ಆಸ್ಪತ್ರೆ ಕ್ಯಾಶ್ ಅನ್ನು ವಿಮೆದಾರರು ಆಯ್ಕೆ ಮಾಡಿದ ಆಸ್ಪತ್ರೆ ಕ್ಯಾಶ್ ಮೊತ್ತದ 200% ವರೆಗೆ ಒದಗಿಸಲಾಗುತ್ತದೆ. ವೈಯಕ್ತಿಕ ಮತ್ತು ಫ್ಲೋಟರ್ ಪಾಲಿಸಿಗಳ ನಡುವೆ ಗರಿಷ್ಠ ಸಂಖ್ಯೆಯ ಆಸ್ಪತ್ರೆ ನಗದು |
ಚೇತರಿಕೆ ಆಸ್ಪತ್ರೆ ಕ್ಯಾಶ್ಅನುಕ್ರಮ 5 ದಿನಗಳಿಗಿಂತ ಹೆಚ್ಚಿನ ದಿನಗಳು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ಒಂದು ದಿನದ ಹೆಚ್ಚುವರಿ ಆಸ್ಪತ್ರೆ ಕ್ಯಾಶ್ ಮೊತ್ತವನ್ನು ಚೇತರಿಕೆಯ ಆಸ್ಪತ್ರೆ ಕ್ಯಾಶ್ ರೂಪದಲ್ಲಿ ನೀಡಲಾಗುತ್ತದೆ. |
ಶಿಶು ಜನನ ಆಸ್ಪತ್ರೆ ಕ್ಯಾಶ್ಮಹಿಳಾ ವಿಮೆದಾರರು ಈ ಪಾಲಿಸಿಯನ್ನು ಮೊದಲು ಪ್ರಾರಂಭಿಸಿದಾಗಿನಿಂದ 2 ವರ್ಷಗಳ ವೇಟಿಂಗ್ ಅವಧಿಯ ನಂತರ ಹೆರಿಗೆಗಾಗಿ ದೈನಂದಿನ ಆಸ್ಪತ್ರೆ ಕ್ಯಾಶ್ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ. |
ವಿಶ್ವವ್ಯಾಪಿ ಆಸ್ಪತ್ರೆ ಕ್ಯಾಶ್ಭಾರತದ ಹೊರಗೆ ಅನಾರೋಗ್ಯ ಅಥವಾ ಗಾಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ, ವಿಮೆದಾರರು ಆಯ್ಕೆ ಮಾಡಿದ ಗರಿಷ್ಠ ಸಂಖ್ಯೆಯ ದಿನಗಳವರೆಗೆ ದೈನಂದಿನ ಆಸ್ಪತ್ರೆ ಕ್ಯಾಶ್ ಮೊತ್ತದ 200% ಅನ್ನು ಒದಗಿಸಲಾಗುತ್ತದೆ |
ಡೇ ಕೇರ್ ಕಾರ್ಯವಿಧಾನಗಳುಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ಡೇ ಕೇರ್ ಚಿಕಿತ್ಸೆಗಳಿಗೆ ಉಂಟಾಗುವ ಖರ್ಚುಗಳನ್ನು ಪಾಲಿಸಿ |

| ಕ್ರಮ ಸಂಖ್ಯೆ. | ಪ್ರಯೋಜನದ ಹೆಸರು | ಮೂಲ ಪ್ಲ್ಯಾನ್ | ಸುಧಾರಿತ ಪ್ಲ್ಯಾನ್ |
|---|---|---|---|
01 | ಅನಾರೋಗ್ಯ ಆಸ್ಪತ್ರೆ ನಗದು | ಆಸ್ಪತ್ರೆಯ ನಗದು ಮೊತ್ತ (ದಿನಕ್ಕೆ) ವಿಮೆದಾರರು ಆಯ್ದುಕೊಂಡ ಗರಿಷ್ಠ ದಿನಗಳವರೆಗೆ. ಕಳೆಯಬಹುದಾದದ್ದು: ಒಂದು ದಿನದ ಕಡಿತವು ಅನ್ವಯಿಸುತ್ತದೆ.
| ಆಸ್ಪತ್ರೆಯ ನಗದು ಮೊತ್ತ (ದಿನಕ್ಕೆ) ವಿಮೆದಾರರು ಆಯ್ದುಕೊಂಡ ಗರಿಷ್ಠ ದಿನಗಳವರೆಗೆ. ಕಳೆಯಬಹುದಾದದ್ದು: ಯಾವುದೇ ಕಡಿತವಿಲ್ಲ |
02 | ಅಪಘಾತ ಆಸ್ಪತ್ರೆ ನಗದು | ಆಸ್ಪತ್ರೆಯ ನಗದು ಮೊತ್ತದ 150% ವರೆಗೆ (ದಿನಕ್ಕೆ) ವಿಮೆದಾರರು ಆಯ್ದುಕೊಂಡ ಗರಿಷ್ಠ ದಿನಗಳವರೆಗೆ.
| ಆಸ್ಪತ್ರೆಯ ನಗದು ಮೊತ್ತದ 150% ವರೆಗೆ (ದಿನಕ್ಕೆ) ವಿಮೆದಾರರು ಆಯ್ದುಕೊಂಡ ಗರಿಷ್ಠ ದಿನಗಳವರೆಗೆ |
03 | ಅನಾರೋಗ್ಯ ಮತ್ತು / ಅಥವಾ ಗಾಯದಿಂದಾಗಿ ಐಸಿಯು ಆಸ್ಪತ್ರೆಯ ನಗದು | ವಿಮೆದಾರರು ಆಯ್ದುಕೊಂಡ ಆಸ್ಪತ್ರೆಯ ನಗದು ಮೊತ್ತದ 200% ವರೆಗೆ (ದಿನಕ್ಕೆ). ವೈಯಕ್ತಿಕ ಆಧಾರದ ಮೇಲೆ ಪಾಲಿಸಿಯನ್ನು ನೀಡಿದರೆ, ಐಸಿಯು ಆಸ್ಪತ್ರೆಯ ಹಣವನ್ನು ಪಾಲಿಸಿ ವರ್ಷದಲ್ಲಿ ಗರಿಷ್ಠ 30 ದಿನಗಳವರೆಗೆ ಪಾವತಿಸಲಾಗುತ್ತದೆ. ಫ್ಲೋಟರ್ ಆಧಾರದ ಮೇಲೆ ಪಾಲಿಸಿಯನ್ನು ನೀಡಿದರೆ, ಐಸಿಯು ಆಸ್ಪತ್ರೆಯ ಹಣವನ್ನು ಪಾಲಿಸಿ ವರ್ಷದಲ್ಲಿ ಗರಿಷ್ಠ 90 ದಿನಗಳವರೆಗೆ ಪಾವತಿಸಲಾಗುತ್ತದೆ.
| ವಿಮೆದಾರರು ಆಯ್ದುಕೊಂಡ ಆಸ್ಪತ್ರೆಯ ನಗದು ಮೊತ್ತದ 200% ವರೆಗೆ (ದಿನಕ್ಕೆ). ವೈಯಕ್ತಿಕ ಆಧಾರದ ಮೇಲೆ ಪಾಲಿಸಿಯನ್ನು ನೀಡಿದರೆ, ಐಸಿಯು ಆಸ್ಪತ್ರೆಯ ಹಣವನ್ನು ಪಾಲಿಸಿ ವರ್ಷದಲ್ಲಿ ಗರಿಷ್ಠ 30 ದಿನಗಳವರೆಗೆ ಪಾವತಿಸಲಾಗುತ್ತದೆ. ಫ್ಲೋಟರ್ ಆಧಾರದ ಮೇಲೆ ಪಾಲಿಸಿಯನ್ನು ನೀಡಿದರೆ, ಐಸಿಯು ಆಸ್ಪತ್ರೆಯ ಹಣವನ್ನು ಪಾಲಿಸಿ ವರ್ಷದಲ್ಲಿ ಗರಿಷ್ಠ 90 ದಿನಗಳವರೆಗೆ ಪಾವತಿಸಲಾಗುತ್ತದೆ |
04 | ಚೇತರಿಕೆ ಆಸ್ಪತ್ರೆ ನಗದು | ಲಭ್ಯವಿಲ್ಲ
| ಆಸ್ಪತ್ರೆ ದಾಖಲಾತಿಯು 5 ದಿನಗಳನ್ನು ಮೀರಿದ್ದರೆ ಒಂದು ದಿನದ ಹೆಚ್ಚುವರಿ ಆಸ್ಪತ್ರೆ ನಗದು ಮೊತ್ತವನ್ನು ಚೇತರಿಕೆಯ ನಗದು ಪ್ರಯೋಜನವಾಗಿ ನೀಡಲಾಗುತ್ತದೆ. |
05 | ಮಗುವಿನ ಜನನ ಆಸ್ಪತ್ರೆ ನಗದು | ಲಭ್ಯವಿಲ್ಲ
| ಲಭ್ಯವಿದೆ. ಗಮನಿಸಿ: ಈ ಪ್ರಯೋಜನವು ಇದರ ಮೊದಲ ಪ್ರಾರಂಭದಿಂದ (ಸ್ಟಾರ್ ಹಾಸ್ಪಿಟಲ್ ನಗದು ಇನ್ಶೂರೆನ್ಸ ಪಾಲಿಸಿ) 2 ವರ್ಷಗಳ ಕಾಯುವಿಕೆ ಅವಧಿಗೆ ಒಳಪಟ್ಟಿರುತ್ತದೆ. ಮಹಿಳಾ ವಿಮಾದಾರರು ಮಾತ್ರ ಈ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ |
06 | ಜಗತ್ತಿನಾದ್ಯಂತ ಆಸ್ಪತ್ರೆ ನಗದು | ಲಭ್ಯವಿಲ್ಲ
| ವಿಮಾದಾರರು ಅನಾರೋಗ್ಯ ಅಥವಾ ಗಾಯದ ಚಿಕಿತ್ಸೆಗಾಗಿ ಭಾರತದ ಹೊರಗೆ ಆಸ್ಪತ್ರೆಗೆ ದಾಖಲಾಗಿದ್ದರೆ, ವಿಮಾದಾರರು ಆಯ್ಕೆ ಮಾಡಿದ 200% ಆಸ್ಪತ್ರೆ ನಗದು ಮೊತ್ತವನ್ನು ಪಾಲತಿಸಲಾಗುತ್ತದೆ. |
ಕಾಯುವಿಕೆ ಅವಧಿ
1. ಪೂರ್ವಾಸ್ತಿತ್ವದಲ್ಲಿರುವ ರೋಗಗಳಿಗೆ (ಮೂಲ ಯೋಜನೆ) - 36 ತಿಂಗಳುಗಳು
2. ಪೂರ್ವಾಸ್ತಿತ್ವದಲ್ಲಿರುವ ರೋಗಗಳಿಗೆ (ವರ್ಧಿತ ಯೋಜನೆ) - 36 ತಿಂಗಳುಗಳು
3. ನಿರ್ದಿಷ್ಟ ರೋಗಗಳು/ಕಾರ್ಯವಿಧಾನಗಳಿಗೆ (ಮೂಲ ಮತ್ತು ವರ್ಧಿತ ಯೋಜನೆಗಳೆರಡೂ) - 24 ತಿಂಗಳುಗಳು
4. ಆರಂಭಿಕ ಕಾಯುವಿಕೆ ಅವಧಿ - 30 ದಿನಗಳು (ಅಪಘಾತಗಳನ್ನು ಹೊರತುಪಡಿಸಿ)
ಪ್ರೀಮಿಯಂ ವಿವರಣೆ
ವೈಯಕ್ತಿಕ ಮತ್ತು ಫ್ಲೋಟರ್ ಆಧಾರಕ್ಕಾಗಿ ಲಾಭ/ಪ್ರೀಮಿಯಂ ವಿವರಣೆಯನಿನು ವೀಕ್ಷಿಸಿಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
ಮುಕ್ತ ಅವಲೋಕನಾ ಅವಧಿ
ಪಾಲಿಸಿಯ ಕರಾರುಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ಪಾಲಿಸಿಯ ಸ್ವೀಕೃತಿಯ ದಿನಾಂಕದಿಂದ 15 ದಿನಗಳ ಮುಕ್ತ ಅವಲೋಕನಾ ಅವಧಿಯನ್ನು ನೀಡಲಾಗುತ್ತದೆ (ನವೀಕರಣಗಳಿಗೆ ಅನ್ವಯಿಸುವುದಿಲ್ಲ).
ನವೀಕರಣಕ್ಕಾಗಿ ರಿಯಾಯಿತಿ ಅವಧಿ
ಪಾಲಿಸಿಯ ಮುಕ್ತಾಯ ದಿನಾಂಕದಿಂದ 30 ದಿನಗಳು.
ಗಮನಿಸಿ: ನವೀಕರಣ ಪ್ರೀಮಿಯಂ, ಕರಾರುಗಳು ಮತ್ತು ಷರತ್ತುಗಳು IRDAI ನಿಂದ ಪೂರ್ವಾನುಮತಿಯೊಂದಿಗೆ ಬದಲಾವಣೆಗೆ ಒಳಪಟ್ಟಿರುತ್ತವೆ.
ಬೇರೆ ಏನನ್ನಾದರೂ ಹುಡುಕುತ್ತಿದ್ದೀರಾ?
ಎಲ್ಲಾ ಪ್ಲ್ಯಾನ್‌ಗಳನ್ನು ವೀಕ್ಷಿಸಿಪ್ರಾರಂಭಿಸಿ
ಅತ್ಯುತ್ತಮವಾದುದರ ಖಾತರಿ ಹೊಂದಿರಿ
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.


ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?
ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿ
ಇತ್ತೀಚಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಖರ್ಚುಗಳು ಹೆಚ್ಚಿವೆ ಮತ್ತು ಅವು ಹೆಚ್ಚುತ್ತಲೇ ಇವೆ ಎಂಬುದರಲ್ಲಿ ಸಂದೇಹವಿಲ್ಲ. ವಾಹಕದಿಂದ ಹರಡುವ, ಗಾಳಿಯಿಂದ ಹರಡುವ ಮತ್ತು ನೀರಿನಿಂದ ಹರಡುವ ಸೋಂಕುಗಳು ವ್ಯಕ್ತಿಯ ಸಂಪೂರ್ಣ ಮಾಸಿಕ ಉಳಿತಾಯವನ್ನು ಸುಲಭವಾಗಿ ಬರಿದಾಗಿಸಬಲ್ಲವು. ನಿಮ್ಮ ಆಸ್ಪತ್ರೆಯ ಖರ್ಚನ್ನು ಕವರ್ ಮಾಡಲು ನಿಮ್ಮ ನಿಯಮಿತ ಹೆಲ್ತ್ ಕವರೇಜ್ ಅನ್ನು ಪಡೆಯಬಹುದು. ಆದರೆ ಒಮ್ಮೆ ನೀವು ಆಸ್ಪತ್ರೆಗೆ ಬಂದ ನಂತರ, ನಿಮಗೆ ಇತರ ಹಲವಾರು ಖರ್ಚುಗಳು ಮತ್ತು ಅನಿವಾರ್ಯ ವೆಚ್ಚಗಳು ಎದುರಾಗಬಹುದು.
ಇಂತಹ ಸಂದರ್ಭಗಳಲ್ಲಿ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ನೆರವಿಗೆ ಧಾವಿಸುತ್ತದೆ ಮತ್ತು ಹಾಸ್ಪಿಟಲ್ ಕ್ಯಾಶ್ ಪಾಲಿಸಿಯ ಅತ್ಯುತ್ತಮ ಫೀಚರ್ ಎಂದರೆ ಇದರಲ್ಲಿ ಸಣ್ಣ ವಿಷಯಗಳನ್ನೂ ಸಹ ಕವರ್ ಮಾಡಲಾಗಿದೆ. ಈ ಪ್ಲ್ಯಾನ್ ನೆರವಿನಿಂದ, ನಿಮ್ಮ ದೈನಂದಿನ ಅಗತ್ಯಗಳನ್ನು ನೋಡಿಕೊಳ್ಳಬಹುದಾಗಿದೆ. ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಪಾಲಿಸಿಯು ನಿಮ್ಮ ಅಸ್ತಿತ್ವದಲ್ಲಿರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯೊಂ ದಿಗೆ ಹೆಚ್ಚುವರಿ ಲಾಭದ ಪ್ಲ್ಯಾನ್ ಆಗಿರಬಹುದು. ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ ಪ್ರತಿ ದಿನಕ್ಕೆ ನಿಗದಿತ ಮೊತ್ತದ ಹಣವನ್ನು ನಿಮಗೆ ಕವರ್ ಮಾಡಲು. ಈ ಪಾವತಿಯನ್ನು ನಿಮ್ಮ ಆಸ್ಪತ್ರೆಯಲ್ಲಿ ಇರುವ ಸಮಯದಲ್ಲಿ ಇತರ ಬೇರೆ ಖರ್ಚುಗಳಿಗೆ ಬಳಸಿಕೊಳ್ಳಬಹುದು. ಹಾಗೆಯೇ, ಈ ಪಾಲಿಸಿಯು ಆಸ್ಪತ್ರೆಯ ಹೊರಗೆ ತಗಲುವ ಪೆಟ್ರೊಲ್, ಅಟೆಂಡೆಂಟ್‌ಗೆ ಆಹಾರ ಇತ್ಯಾದಿಗಳಂತಹ ಯಾವುದೇ ಖರ್ಚುಗಳನ್ನು ಭರಿಸಲು ವಿಮೆದಾರರಿಗೆ ಪ್ರಯೋಜನಕಾರಿಯಾಗಿದೆ. ಉದಾಹರಣೆಗೆ, ನಿಮ್ಮ ಹಾಸ್ಪಿಟಲ್ ಕ್ಯಾಶ್ ಪಾಲಿಸಿಯಲ್ಲಿನ ಕವರೇಜ್ ಪ್ರತಿ ದಿನಕ್ಕೆ ರೂ. 1000 ಆಗಿದ್ದಾರೆ, ವಿಮೆಗಾರರು ನಿಮಗೆ ನಿಮ್ಮ ಆಸ್ಪತ್ರೆಗೆ ದಾಖಲಾಗುವಿಕೆಯ ಸಂಪೂರ್ಣ ಅವಧಿಯಲ್ಲಿ ಪ್ರತಿ ದಿನಕ್ಕೆ ರೂ. 1000 ಅನ್ನು ಪಾವತಿಸುತ್ತಾರೆ. ಆದರೆ, ಹಣವನ್ನು ಹೇಗೆ ಹೂಡಿಕೆ ಮಾಡಬೇಕು ಎಂಬುದು ಸಂಪೂರ್ಣವಾಗಿ ನಿಮ್ಮ ವಿವೇಚನೆಗೆ ಸಂಬಂಧಿಸಿದೆ.
ಅದು ನಿಮ್ಮ ಅಸ್ತಿತ್ವದಲ್ಲಿರುವ ಹೆಲ್ತ್ ಮೆಡಿಕಲ್ ಪಾಲಿಸಿಗೆ ಆಡ್-ಆನ್ ಆಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ದೈನಂದಿನ ಕ್ಯಾಶ್ ಮಿತಿ ಮತ್ತು ಪಾಲಿಸಿಯಲ್ಲಿ ಲಭ್ಯವಿರುವ ಕವರ್ ಮಾಡಲಾದ ದಿನಗಳ ಸಂಖ್ಯೆಯನ್ನು ಆರಿಸುವುದಷ್ಟೇ ನಿಮ್ಮ ಕೆಲಸವಾಗಿದೆ.
ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿಯು ವಿಮೆದಾರರ ಆಸ್ಪತ್ರೆಗೆ ದಾಖಲಾಗುವಿಕೆ ಸಮಯದಲ್ಲಿ ಯಾವುದೇ ಇನ್ ಮತ್ತು ಔಟ್ ಖರ್ಚುಗಳ ಜೊತೆಗೆ ದೈನಂದಿನ ಆಸ್ಪತ್ರೆ ಕ್ಯಾಶ್ ಅನ್ನು ಒದಗಿಸುತ್ತದೆ. ಸ್ಟಾರ್ ಹೆಲ್ತ್ ಒದಗಿಸುವ ಎಲ್ಲಾ ಮೆಡಿಕಲ್ ಪ್ಲ್ಯಾನ್‌ಗಳಿಗೆ ಈ ಪಾಲಿಸಿಯು ಆಡ್-ಆನ್ ಆಗಿರಬಹುದು.
ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿಯ ಫೀಚರ್‌ಗಳು
ಅರ್ಹತೆ
ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿಯನ್ನು 18 ವರ್ಷದಿಂದ 65 ವರ್ಷ ವಯಸ್ಸಿನ ವ್ಯಕ್ತಿಗಳು ಮತ್ತು ಕುಟುಂಬಗಳು ಖರೀದಿಸಬಹುದು, ಇದರಲ್ಲಿ ನಿಮ್ಮ ಸಂಗಾತಿ ಮತ್ತು 3 ತಿಂಗಳಿಂದ 25 ವರ್ಷ ವಯಸ್ಸಿನ 3 ಅವಲಂಬಿತ ಮಕ್ಕಳನ್ನು ಒಳಗೊಳ್ಳಬಹುದಾಗಿದೆ.
ಪ್ರಾಡಕ್ಟ್ ವಿಧ
ಎರಡು ಪ್ಲ್ಯಾನ್‌ಗಳು ಲಭ್ಯವಿವೆ - ಬೇಸಿಕ್ ಪ್ಲ್ಯಾನ್ ಮತ್ತು ವರ್ಧಿತ ಪ್ಲ್ಯಾನ್ - ವೈಯಕ್ತಿಕ ಮತ್ತು ಫ್ಲೋಟರ್ ಆಧಾರದ ಮೇಲೆ. ಬೇಸಿಕ್ ಮತ್ತು ವರ್ಧಿತ ಪ್ಲ್ಯಾನ್‌ಗಳ ಅಡಿಯಲ್ಲಿ, ಪಾಲಿಸಿದಾರರು ಪ್ರತಿ ದಿನಕ್ಕೆ ಆಸ್ಪತ್ರೆ ಕ್ಯಾಶ್ ಮೊತ್ತ ಮತ್ತು ಆಸ್ಪತ್ರೆ ಕ್ಯಾಶ್ ದಿನಗಳ ಸಂಖ್ಯೆಯನ್ನು ಆಯ್ಕೆ ಮಾಡಬಹುದಾಗಿದೆ. ಕೆಳಗಿನ ಕೋಷ್ಟಕವು ಆಸ್ಪತ್ರೆ ಕ್ಯಾಶ್ ಮೊತ್ತ ಮತ್ತು ಆಸ್ಪತ್ರೆ ಕ್ಯಾಶ್ ದಿನಗಳ ಸಂಖ್ಯೆಯ ಆಯ್ಕೆಗಳನ್ನು ವಿವರಿಸುತ್ತದೆ.
| ಪ್ಲ್ಯಾನ್ ವಿಧ | ಆಸ್ಪತ್ರೆ ಕ್ಯಾಶ್ ಮೊತ್ತ | Number of hospital cash days |
|---|---|---|
| ಬೇಸಿಕ್ ಪ್ಲ್ಯಾನ್ | ರೂ. 1000, ರೂ. 2000, ರೂ. 3000 | 30/60/90/120/180 days |
| ವರ್ಧಿತ ಪ್ಲ್ಯಾನ್ | ರೂ. 3000, ರೂ. 4000, ರೂ. 5000 | 90/120/180 days |
ಪಾಲಿಸಿ ಅವಧಿ
1 ವರ್ಷ / 2 ವರ್ಷ / 3 ವರ್ಷಗಳಿಗೆ ಲಭ್ಯವಿದೆ
ವೇಟಿಂಗ್ ಅವಧಿಗಳು
ಪಾಲಿಸಿ ಪ್ರಾರಂಭದ ದಿನಾಂಕದ 30 ದಿನಗಳೊಳಗೆ ಸೋಂಕಿನಿಂದ ತಗುಲಿದ ಕಾಯಿಲೆಯನ್ನು ಕವರ್ ಮಾಡಲಾಗುವುದಿಲ್ಲ. ಇದಕ್ಕೆ ಅಪಘಾತದ ಸಂದರ್ಭ ಹೊರತಾಗಿವೆ. ನಿರ್ದಿಷ್ಟ ಕಾಯಿಲೆಗಳು/ಶಸ್ತ್ರಚಿಕಿತ್ಸೆಗಳಿಗೆ 24 ತಿಂಗಳ ನಂತರ ಕವರೇಜ್ ಅನ್ನು ನೀಡಲಾಗುತ್ತದೆ. ಪಾಲಿಸಿ ಪ್ರಾರಂಭದ ದಿನಾಂಕದಿಂದ 36 ತಿಂಗಳ (ಬೇಸಿಕ್ ಪ್ಲ್ಯಾನ್) ಮತ್ತು 24 ತಿಂಗಳುಗಳ (ವರ್ಧಿತ ಪ್ಲ್ಯಾನ್) ವೇಟಿಂಗ್ ಅವಧಿಯ ನಂತರ ಪೂರ್ವಾಸ್ತಿತ್ವದ ಕಾಯಿಲೆಗಳನ್ನು ಕವರ್ ಮಾಡಲಾಗುತ್ತದೆ.
ಪೋರ್ಟಬಿಲಿಟಿ
ಪೋರ್ಟಬಿಲಿಟಿ ಕುರಿತು IRDAI ಮಾರ್ಗಸೂಚಿಗಳ ಪ್ರಕಾರ, ವಿಮೆದಾರರು ಸಂಪೂರ್ಣ ಪಾಲಿಸಿಯನ್ನು ವರ್ಗಾವಣೆ ಮಾಡಲು ಆ ವಿಮೆಗಾರರಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಪಾಲಿಸಿಯನ್ನು ಮತ್ತೊಂದು ವಿಮೆದಾರರಿಗೆ ವರ್ಗಾವಣೆ ಮಾಡುವ ಅವಕಾಶವನ್ನು ಹೊಂದಿದ್ದಾರೆ. ಎಲ್ಲಾ ಕುಟುಂಬದ ಸದಸ್ಯರು ಕನಿಷ್ಟ 45 ದಿನಗಳಿಗಿಂತ ಮೊದಲು ಆದರೆ ನವೀಕರಣ ದಿನಾಂಕಕ್ಕಿಂತ 60 ದಿನಗಳ ಮೊದಲು ವರ್ಗಾವಣೆ ಮಾಡುವಂತಿಲ್ಲ.
ಮುಕ್ತ ಲುಕ್ ಪಿರಿಯಡ್
ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ಪಾಲಿಸಿಯ ಸ್ವೀಕೃತಿಯ ದಿನಾಂಕದಿಂದ 15 ದಿನಗಳವರೆಗೆ ಮುಕ್ತ ಲುಕ್ ಪಿರಿಯಡ್ ಲಭ್ಯವಿದೆ. ವಿಮೆದಾರರು ಪಾಲಿಸಿಯಿಂದ ತೃಪ್ತರಾಗದಿದ್ದರೆ, ಅವರು ನಿಗದಿತ ಅವಧಿಯೊಳಗೆ ಪಾಲಿಸಿಯನ್ನು ರದ್ದುಗೊಳಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಆದಾಗ್ಯೂ, ಈ ಫೀಚರ್ ಪಾಲಿಸಿ ನವೀಕರಣಗಳಿಗೆ ಅನ್ವಯಿಸುವುದಿಲ್ಲ.
ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿಯಲ್ಲಿ (ಬೇಸಿಕ್ ಮತ್ತು ವರ್ಧಿತ ಪ್ಲ್ಯಾನ್) ಏನನ್ನು ಒಳಗೊಂಡಿದೆ?
ವಿಮೆದಾರರು ಆಯ್ಕೆ ಮಾಡಿದ ಗರಿಷ್ಠ ಸಂಖ್ಯೆಯ ದಿನಗಳವರೆಗೆ ಕನಿಷ್ಠ 24 ಗಂಟೆಗಳ ಕಾಲ ಚಿಕಿತ್ಸೆಗಾಗಿ ವಿಮೆದಾರರು ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭ ಎದುರಾದಾಗ ಸ್ಟಾರ್ ಆಸ್ಪತ್ರೆ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿಯು ದೈನಂದಿನ ಕ್ಯಾಶ್ ಪ್ರಯೋಜನಗಳನ್ನು ಒದಗಿಸುತ್ತದೆ. ಪಾಲಿಸಿಯ ನಿಯಮಗಳ ಪ್ರಕಾರ ಈ ಪ್ಲ್ಯಾನ್ ಈ ಕೆಳಗಿನ ಖರ್ಚುಗಳನ್ನು ಕವರ್ ಮಾಡುತ್ತದೆ.
- ಅಸೌಖ್ಯ ಆಸ್ಪತ್ರೆ ಕ್ಯಾಶ್ - ವಿಮೆದಾರರು ಆಯ್ಕೆಮಾಡಿದ ಗರಿಷ್ಠ ಸಂಖ್ಯೆಯ ದಿನಗಳವರೆಗೆ ಆಸ್ಪತ್ರೆ ಕ್ಯಾಶ್ ಮೊತ್ತ (ಪ್ರತಿದಿನಕ್ಕೆ). ಬೇಸಿಕ್ ಮತ್ತು ವರ್ಧಿತ ಪ್ಲ್ಯಾನ್‌ಗಳಿಗೆ ಅನ್ವಯಿಸುತ್ತದೆ.
- ಅಪಘಾತ ಆಸ್ಪತ್ರೆ ಕ್ಯಾಶ್ - ವಿಮೆದಾರರು ಆಯ್ಕೆಮಾಡಿದ ಗರಿಷ್ಠ ಸಂಖ್ಯೆಯ ದಿನಗಳವರೆಗೆ ಆಸ್ಪತ್ರೆ ಕ್ಯಾಶ್ ಮೊತ್ತದ (ಪ್ರತಿದಿನಕ್ಕೆ) 150%.
- ಐಸಿಯು ಆಸ್ಪತ್ರೆ ಕ್ಯಾಶ್ - ವಿಮೆದಾರರು ಆಯ್ಕೆಮಾಡಿದ ಆಸ್ಪತ್ರೆ ಕ್ಯಾಶ್ ಮೊತ್ತದ (ಪ್ರತಿ ದಿನಕ್ಕೆ) 200%. ವೈಯಕ್ತಿಕ ಆಧಾರದ ಮೇಲೆ ಪಾಲಿಸಿಯನ್ನು ನೀಡಿದರೆ, ಐಸಿಯು ಆಸ್ಪತ್ರೆ ಕ್ಯಾಶ್ ಅನ್ನು ಪಾಲಿಸಿ ವರ್ಷದಲ್ಲಿ ಗರಿಷ್ಠ 30 ದಿನಗಳವರೆಗೆ ಪಾವತಿಸಲಾಗುತ್ತದೆ. ಫ್ಲೋಟರ್ ಆಧಾರದ ಮೇಲೆ ಪಾಲಿಸಿಯನ್ನು ನೀಡಿದರೆ, ಐಸಿಯು ಆಸ್ಪತ್ರೆ ಕ್ಯಾಶ್ ಅನ್ನು ಪಾಲಿಸಿ ವರ್ಷದಲ್ಲಿ ಗರಿಷ್ಠ 90 ದಿನಗಳವರೆಗೆ ಪಾವತಿಸಲಾಗುತ್ತದೆ.
- ಚೇತರಿಕೆ ಆಸ್ಪತ್ರೆ ಕ್ಯಾಶ್ - ಅನುಕ್ರಮ 5 ದಿನಗಳಿಗಿಂತ ಹೆಚ್ಚಿನ ದಿನಗಳು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ಒಂದು ದಿನದ ಹೆಚ್ಚುವರಿ ಆಸ್ಪತ್ರೆ ಕ್ಯಾಶ್ ಮೊತ್ತವನ್ನು ಚೇತರಿಕೆಯ ಆಸ್ಪತ್ರೆ ಕ್ಯಾಶ್ ರೂಪದಲ್ಲಿ ನೀಡಲಾಗುತ್ತದೆ. ಇದು ಬೇಸಿಕ್ ಪ್ಲ್ಯಾನ್‌ಗೆ ಅನ್ವಯಿಸುವುದಿಲ್ಲ.
- ಶಿಶುಜನನ ಆಸ್ಪತ್ರೆ ಕ್ಯಾಶ್ - ಈ ಪ್ರಯೋಜನವು ಈ ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿಯನ್ನು ಮೊದಲ ಪ್ರಾರಂಭಿಸಿದಾಗಿನಿಂದ 2 ವರ್ಷಗಳವರೆಗೆ ವೇಟಿಂಗ್ ಅವಧಿಗೆ ಒಳಪಟ್ಟಿರುತ್ತದೆ. ಮಹಿಳಾ ವಿಮೆದಾರರು ಮಾತ್ರ ಈ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ. ಇದು ಬೇಸಿಕ್ ಪ್ಲ್ಯಾನ್‌ಗೆ ಅನ್ವಯಿಸುವುದಿಲ್ಲ.
- ವಿಶ್ವವ್ಯಾಪಿ ಆಸ್ಪತ್ರೆ ಕ್ಯಾಶ್ - ಭಾರತದ ಹೊರಗೆ ಅನಾರೋಗ್ಯ ಅಥವಾ ಗಾಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ, ವಿಮೆದಾರರು ಆಯ್ಕೆ ಮಾಡಿದ ಆಸ್ಪತ್ರೆ ಕ್ಯಾಶ್ ಮೊತ್ತದ (ಪ್ರತಿದಿನಕ್ಕೆ) 200% ಅನ್ನು ಒದಗಿಸಲಾಗುತ್ತದೆ. ಬೇಸಿಕ್ ಪ್ಲ್ಯಾನ್‌ಗೆ ಅನ್ವಯಿಸುವುದಿಲ್ಲ.
- ಡೇಕೇರ್ ಕಾರ್ಯವಿಧಾನಗಳು - ಮುರಿತಗಳು (ಕೂದಲೆಳೆ ಮುರಿತಗಳನ್ನು ಹೊರತುಪಡಿಸಿ), ಕಣ್ಣಿನ ಪೊರೆ, ಹಿಗ್ಗಿಸಿಕೆ ಮತ್ತು ಚಿಕಿತ್ಸೆ, ಹಿಮೋಡಯಾಲಿಸಿಸ್, ಪ್ಯಾರೆನ್ಟೆರಲ್ ಕಿಮೊಥೆರಪಿ, ರೇಡಿಯೊ ಥೆರಪಿ, ಕೊರೊನರಿ ಆಂಜಿಯೋಗ್ರಫಿ, ಲಿಥೊಟ್ರಿಪ್ಸಿ, ಸಾಮಾನ್ಯ ಅರಿವಳಿಕೆ ಅಡಿಯಲ್ಲಿ ಡಿಸ್ಲೊಕೇಶನ್, ಸಾಮಾನ್ಯ ಅರಿವಳಿಕೆ ಅಡಿಯಲ್ಲಿ ಸಿಸ್ಟೊಸ್ಕೋಪಿ. ಮೇಲೆ ತಿಳಿಸಿದ ಕವರ್‌ಗಳು 1, 2, 3 ಮತ್ತು 6 ಈ ಡೇಕೇರ್ ಚಿಕಿತ್ಸೆಗಳಿಗೆ ಅನ್ವಯಿಸುತ್ತವೆ. ವಿಮೆದಾರರು ಪಾಲಿಸಿ ವರ್ಷದಲ್ಲಿ ಐದು ಬಾರಿ ಮಾತ್ರ ಮೇಲಿನ ಡೇಕೇರ್ ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಕ್ಲೈಮ್‌ಗೆ ಅರ್ಹರಾಗಿರುತ್ತಾರೆ.
ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನ ಹಾಸ್ಪಿಟಲ್ ಕ್ಯಾಶ್ ಹೆಲ್ತ್ ಪಾಲಿಸಿ ಏಕೆ ನಮ್ಮ ಆಯ್ಕೆಯಾಗಿರಬೇಕು?
60 ವರ್ಷದೊಳಗಿನ ವ್ಯಕ್ತಿ ಮತ್ತು ಕುಟುಂಬದ ಸದಸ್ಯರು ರೂ.25,000 ತೆರಿಗೆಯ ಆದಾಯ ಕಡಿತಗಳು ಮತ್ತು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80D ಪ್ರಕಾರ ಪಾವತಿಸಿದ ಪ್ರೀಮಿಯಂಗಳ ಮೇಲೆ ಹಿರಿಯ ನಾಗರಿಕರಿಗೆ ಕಡಿತಗೊಳಿಸಬಹುದಾದ ಮೊತ್ತವು ರೂ. 50,000 ವರೆಗೆ ವಿಸ್ತರಿಸಬಹುದು. 60 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರು ಕುಟುಂಬ ಸದಸ್ಯರು ಒಂದು ಪಾಲಿಸಿಯಡಿಯಲ್ಲಿ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ನಂತರ ಕಡಿತಗೊಳಿಸಬಹುದಾದ ಮೊತ್ತವು 1 ಲಕ್ಷ ರೂ. ಆಗಿದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕುಟುಂಬದ ಸದಸ್ಯರು ಮತ್ತು ಅವರ ಪೋಷಕರು ಸಹ ಅದೇ ಪಾಲಿಸಿಯಡಿಯಲ್ಲಿ ನ್ಶೂರೆನ್ಸ್ ಅನ್ನು ಹೊಂದಿದ್ದರೆ, ಆಗ ಅವರು ರೂ. 75,000 ಕಡಿತವನ್ನು ಪಡೆಯಬಹುದಾಗಿದೆ.
ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪ್ಲ್ಯಾನ್‌ಗೆ ಕ್ಲೈಮ್ ಅನ್ನು ನೋಂದಾಯಿಸುವುದು ಹೇಗೆ?
ಸ್ಟಾರ್ ಹೆಲ್ತ್ ತನ್ನ ಎಲ್ಲಾ ಗ್ರಾಹಕರಿಗೆ ಜಂಜಾಟ-ರಹಿತ ಕ್ಲೈಮ್ ಸೆಟಲ್‌ಮೆಂಟ್ ಅನ್ನು ಒದಗಿಸುತ್ತದೆ. ನೀವು ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪ್ಲ್ಯಾನ್‌ಗೆ ವೆಚ್ಚ ಭರಿಸುವಿಕೆಯನ್ನು ಪಡೆಯಬಹುದಾಗಿದೆ.
ವೆಚ್ಚ ಭರಿಸುವಿಕೆ ಕ್ಲೈಮ್ ಎಂದರೆ ನೀವು ನಿಮ್ಮ ಸ್ವಂತ ಹಣದಿಂದ ಆಸ್ಪತ್ರೆಯ ಬಿಲ್ ಅನ್ನು ಪಾವತಿಸಿ ನಂತರ ಇನ್ಶೂರೆನ್ಸ್ ಕಂಪನಿಯಿಂದ ವೆಚ್ಚ ಭರಿಸುವಿಕೆಗೆ ಅರ್ಜಿ ಸಲ್ಲಿಸುವುದಾಗಿದೆ. ವೆಚ್ಚ ಭರಿಸುವಿಕೆ ಪ್ರಕ್ರಿಯೆಯು ಈ ಕೆಳಗಿನಂತಿರುತ್ತದೆ:
- ಆಸ್ಪತ್ರೆಗೆ ದಾಖಲಾಗುವಿಕೆಯ 24 ಗಂಟೆಗಳ ಒಳಗೆ ಕ್ಲೈಮ್ ಅನ್ನು ಪ್ರಾರಂಭಿಸಬೇಕು. ಚಿಕಿತ್ಸೆಯನ್ನು ನೆಟ್‌ವರ್ಕ್ ಅಥವಾ ನೆಟ್‌ವರ್ಕ್ ಹೊರತಾದ ಆಸ್ಪತ್ರೆಯಿಂದ ಪಡೆದುಕೊಂಡಿದ್ದಾಗಲೂ ಕೂಡ.
- ನೀವು ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಬಹುದು ಮತ್ತು ವೆಚ್ಚ ಭರಿಸುವಿಕೆಗಾಗಿ ಕ್ಲೈಮ್ ಅನ್ನು ಸಲ್ಲಿಸಬಹುದು.
- ಯಶಸ್ವಿ ಪರಿಶೀಲನೆಯ ನಂತರ, ನಿಮ್ಮ ವಿಮೆಗಾರರು ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸುತ್ತಾರೆ ಮತ್ತು ನಿಮ್ಮ ನೋಂದಾಯಿತ ಬ್ಯಾಂಕ್ ಖಾತೆಯಲ್ಲಿ ನೀವು ಮೊತ್ತವನ್ನು ಸ್ವೀಕರಿಸುತ್ತೀರಿ.
- ಆಸ್ಪತ್ರೆಯ ಡಿಸ್ಚಾರ್ಜ್ ಸಾರಾಂಶ.
- ಅಂತಿಮ ಆಸ್ಪತ್ರೆಯ ಬಿಲ್‌ನ ಪ್ರತಿ.
- ಪ್ಯಾನ್ ಕಾರ್ಡ್‌ನ ನಕಲು, ರದ್ದಾದ ಚೆಕ್ ಅಥವಾ NEFT ವಿವರಗಳು.
- ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ನಲ್ಲಿ ಅವಧಿಬದ್ಧ / ಶಾಶ್ವತ ಹೊರಗಿಡುವಿಕೆಗಾಗಿ ಕ್ಲೈಮ್.
- ವಾಸ್ತವಿಕ ಸಂಗತಿಗಳನ್ನು ಬಹಿರಂಗಪಡಿಸದಿದ್ದಲ್ಲಿ / ತಪ್ಪಾಗಿ ಪ್ರತಿನಿಧಿಸಿದರೆ / ಮೋಸದಿಂದ ಕ್ಲೈಮ್ ಮಾಡಿದರೆ.
- ಹೊರಗಿಡಲಾದ ಸೇವಾದಾತರಿಂದ ಕ್ಲೈಮ್‌ಗಳು (ಮಾರಣಾಂತಿಕ ಸ್ಥಿತಿಯ ಸ್ಥಿರೀಕರಣದ ಹಂತದವರೆಗೆ /ಅಪಘಾತದ ಸಮಯದಲ್ಲಿ ಮಾತ್ರ ಪಾವತಿಸಲಾಗುತ್ತದೆ).
- ಕ್ಲೈಮ್‌ಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಲು ನೀವು ವಿಫಲರಾದರೆ.
FAQ's
18 ವರ್ಷದಿಂದ 65 ವರ್ಷದೊಳಗಿನ ವಯಸ್ಕರು ಈ ಪಾಲಿಸಿಯನ್ನು ಖರೀದಿಸಬಹುದು. 91 ದಿನಗಳಿಂದ 25 ವರ್ಷದವರೆಗಿನ ಅವಲಂಬಿತ ಮಕ್ಕಳನ್ನೂ ಸಹ ಕವರ್ ಮಾಡಬಹುದು.
ಹೌದು. ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿಯ ಬೇಸಿಕ್ ಪ್ಲ್ಯಾನ್ ಅಸೌಖ್ಯ ಆಸ್ಪತ್ರೆ ದೈನಂದಿನ ಕ್ಯಾಶ್ ಪ್ರಯೋಜನದಿಂದ ಒಂದು ದಿನದ ಕಡಿತಗೊಳಿಸಬಹುದಾದ ಮೊತ್ತವನ್ನು ಹೊಂದಿದೆ. ಕಡಿತಗೊಳಿಸಬಹುದಾದ ಮೊತ್ತವು ವಿಮಾದಾರರು ಆಸ್ಪತ್ರೆಗೆ ದಾಖಲಾಗುವಿಕೆ ಕ್ಯಾಶ್ ಪ್ರಯೋಜನದ ಮೊತ್ತವನ್ನು ಪಾವತಿಸಲು ಪ್ರಾರಂಭಿಸುವ ಮೊದಲು ವಿಮೆದಾರರು ಕಡಿತಗೊಳಿಸುವ ಮೊತ್ತವನ್ನು ಪ್ರತಿನಿಧಿಸುತ್ತದೆ. ಉದಾ. 1 ದಿನದ ಕಡಿತಗೊಳಿಸಬಹುದಾದ ಮೊತ್ತ ಎಂದರೆ ಆಸ್ಪತ್ರೆಯಲ್ಲಿ ನೀವು ಆಯ್ಕೆಮಾಡಿದ ಒಟ್ಟು ದಿನಗಳಿಂದ ಒಂದು ದಿನಕ್ಕೆ ಒದಗಿಸಲಾದ ದೈನಂದಿನ ಕ್ಯಾಶ್ ಪ್ರಯೋಜನವನ್ನು ಕಳೆಯಲಾಗುತ್ತದೆ. ಇದಲ್ಲದೆ, ನೀವು ಆಸ್ಪತ್ರೆಯಲ್ಲಿ ಕೇವಲ ಒಂದು ದಿನ ಕಳೆದರೆ - ನಿಮ್ಮ ಆಸ್ಪತ್ರೆ ಕ್ಯಾಶ್ ಪ್ಲ್ಯಾನ್‌ನಿಂದ ಏನನ್ನೂ ಪಡೆಯಲು ಸಾಧ್ಯವಿಲ್ಲ. ಆದರೆ ನೀವು ಆಸ್ಪತ್ರೆಯಲ್ಲಿ ಐದು ದಿನಗಳನ್ನು ಕಳೆದರೆ, ನಂತರ 1- ದಿನದ ಕಡಿತವನ್ನು ಅನ್ವಯಿಸಿದ ನಂತರ, ನೀವು ನಾಲ್ಕು ದಿನಗಳವರೆಗೆ ಪ್ರಯೋಜನವನ್ನು ಪಡೆಯಲು ಅರ್ಹರಾಗುತ್ತೀರಿ.
ಆಸ್ಪತ್ರೆ ಕ್ಯಾಶ್ ಮೊತ್ತ (ಪ್ರತಿ ದಿನಕ್ಕೆ) ವಿಮೆದಾರರು ಅನಾರೋಗ್ಯ / ಅಸೌಖ್ಯ / ಗಾಯದ ಅಸೌಖ್ಯ ಆಸ್ಪತ್ರೆ ಕ್ಯಾಶ್ / ಅಪಘಾತ ಆಸ್ಪತ್ರೆ ಕ್ಯಾಶ್ (150% ) / ಅಸೌಖ್ಯದಿಂದಾಗಿ ಐಸಿಯು ಆಸ್ಪತ್ರೆ ಕ್ಯಾಶ್ ಮತ್ತು/ಅಥವಾ ಗಾಯ (200%) / ವಿಶ್ವವ್ಯಾಪಿ ಆಸ್ಪತ್ರೆ ಕ್ಯಾಶ್ (200%) / ಚೇತರಿಕೆ ಆಸ್ಪತ್ರೆ ಕ್ಯಾಶ್ / ಶಿಶುಜನನ ಆಸ್ಪತ್ರೆ ಕ್ಯಾಶ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಸಮಯದಲ್ಲಿ ವಿಮೆದಾರರು ಮಾಡಿದ ವೆಚ್ಚಗಳಿಗೆ ಇಡಿಗಂಟಿನ ಮೊತ್ತವಾಗಿ ಆಯ್ಕೆ ಮಾಡಬಹುದಾಗಿದೆ.
ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನಿಗದಿತ ದೈನಂದಿನ ಕ್ಯಾಶ್ ಪ್ರಯೋಜನಕ್ಕೆ ಅರ್ಹರಾಗಲು ವಿಮೆದಾರರು ಕನಿಷ್ಠ 24 ಗಂಟೆಗಳ ಅವಧಿಗೆ ಆಸ್ಪತ್ರೆಗೆ ದಾಖಲಾಗುವಿಕೆ ಅಗತ್ಯವಾಗಿದೆ. ಇದು ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿಯ ಬೇಸಿಕ್ ಪ್ಲ್ಯಾನ್‌ನಲ್ಲಿ ಅಸೌಖ್ಯ ಆಸ್ಪತ್ರೆ ದೈನಂದಿನ ಕ್ಯಾಶ್ ಪ್ರಯೋಜನಕ್ಕೆ ನೀಡುವ ವಿನಾಯಿತಿಯಾಗಿದೆ.
ಆಸ್ಪತ್ರೆ ಕ್ಯಾಶ್ ಮೊತ್ತವನ್ನು (ಪ್ರತಿ ದಿನ) ವಿಮೆದಾರರು ಅನಾರೋಗ್ಯ/ಅಸೌಖ್ಯ/ಗಾಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗುವಿಕೆ ಸಮಯದಲ್ಲಿ ಉಂಟಾದ ಖರ್ಚುಗಳಿಗೆ ಇಡಿಗಂಟಾಗಿ ಆಯ್ಕೆ ಮಾಡುತ್ತಾರೆ.
ಆಸ್ಪತ್ರೆ ಕ್ಯಾಶ್ ಮೊತ್ತ (ಪ್ರತಿ ದಿನ) ಆಯ್ಕೆಗಳು:
ಬೇಸಿಕ್ ಪ್ಲ್ಯಾನ್ ರೂ. :1,000/- ; 2,000/- ; 3,000/-
ವರ್ಧಿತ ಪ್ಲ್ಯಾನ್ ರೂ. :3,000/- ; 4,000/- ; 5,000/-
ನಿಮಗೆ ಅಗತ್ಯವಿರುವ ಕ್ಲೈಮ್ ದಾಖಲೆಗಳ ಪಟ್ಟಿ:
- ಡಿಸ್ಚಾರ್ಜ್ ಸಾರಾಂಶ / ಡಿಸ್ಚಾರ್ಜ್ ಪ್ರಮಾಣಪತ್ರದ ಪ್ರತಿ
- ಅಂತಿಮ ಆಸ್ಪತ್ರೆ ಬಿಲ್‌ನ ಪ್ರತಿ
- ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನಕಲುಗಳು
- NEFT ವಿವರಗಳು
ಹೌದು. ಎಲ್ಲಾ ಡೇಕೇರ್ ಕಾರ್ಯವಿಧಾನಗಳು ಈ ಪಾಲಿಸಿಯ ಅಡಿಯಲ್ಲಿ ದೈನಂದಿನ ಕ್ಯಾಶ್ ಪ್ರಯೋಜನಗಳನ್ನು ಪಡೆಯಲು ಅರ್ಹವಾಗಿವೆ.
ಹೌದು. ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿಯ ಬೇಸಿಕ್ ಪ್ಲ್ಯಾನ್‌ನಲ್ಲಿ 36 ತಿಂಗಳ ವೇಟಿಂಗ್ ಅವಧಿಯ ನಂತರ ಪೂರ್ವಾಸ್ತಿತ್ವದ ಕಾಯಿಲೆಗಳು (PEDಗಳು) ದೈನಂದಿನ ಕ್ಯಾಶ್ ಪ್ರಯೋಜನಗಳನ್ನು ಪಡೆಯಲು ಅರ್ಹವಾಗಿವೆ. ಸ್ಟಾರ್ ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿಯ ವರ್ಧಿತ ಪ್ಲ್ಯಾನ್ 24 ತಿಂಗಳ ವೇಟಿಂಗ್ ಅವಧಿಯ ನಂತರ PED ಗಳನ್ನು ಕವರ್ ಮಾಡುತ್ತದೆ.
ಖಂಡಿತವಾಗಿಯೂ. ಹಾಸ್ಪಿಟಲ್ ಕ್ಯಾಶ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ಅಸ್ತಿತ್ವದಲ್ಲಿರುವ ಯಾವುದೇ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗೆ ಆಡ್-ಆನ್ ಆಗಿ ಬಳಸಬಹುದು.
ದುರದೃಷ್ಟವಶಾತ್, ಇಲ್ಲ. ಹಾಸ್ಪಿಟಲ್ ಕ್ಯಾಶ್ ಇನ್ಶೂರೆನ್ಸ್ ಪಾಲಿಸಿಯು ಮೆಟರ್ನಿಟಿ ಖರ್ಚುಗಳನ್ನು ಕವರ್ ಮಾಡುವುದಿಲ್ಲ. ನಿಮ್ಮ ಹೆರಿಗೆ ಅಗತ್ಯಗಳಿಗಾಗಿ ನಮ್ಮ ಕೆಲವು ಅತ್ಯುತ್ತಮ ಪಾಲಿಸಿಗಳನ್ನು ನಾವು ಸೂಚಿಸುತ್ತೇವೆ. ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ, ಫ್ಯಾಮಿಲಿ ಹೆಲ್ತ್ ಆಪ್ಟಿಮಾ ಇನ್ಶೂರೆನ್ಸ್ ಪಾಲಿಸಿ ಮತ್ತು ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿಯು ಹೆರಿಗೆ ಅಗತ್ಯಗಳಿಗಾಗಿ ನಮ್ಮ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.

Health Insurance Coverage for pre-existing medical conditions is subject to underwriting review and may involve additional requirements, loadings, or exclusions. Please disclose your medical history in the proposal form for a personalised assessment.
The information provided on this page is for general informational purposes only. Availability and terms of health insurance plans may vary based on geographic location and other factors. Consult a licensed insurance agent or professional for specific advice. T&C Apply. For further detailed information or inquiries, feel free to reach out via email at marketing.d2c@starhealth.in



