New
AROGYA SEVA KENDRA - Free Health Consultation -Click Here to Know More|BIMA BHAROSA - An Integrated Grievance Management System to facilitate the policyholders and complainants to file their grievances with IRDAI -Click here to know more|Click here to link your KYC|Policies where the risk commencement date is on or after 1st October 2024, all the policy servicing shall be as per the IRDAI (Insurance Products) Regulations, 2024 dated 20th March 2024 and Master Circular on Health Insurance Business dated 29th May 2024
DND Registration

ಡಯಾಬಿಟೀಸ್ ಸೇಫ್ ಇನ್ಶೂರೆನ್ಸ್ ಪಾಲಿಸಿ

India +91✓

IRDAI UIN : SHAHLIP23081V082223

HIGHLIGHTS

Plan Essentials

purple essential logo 3

ಮಧುಮೇಹದ ಕವರ್

ವಿಧ 1 ಮತ್ತು ವಿಧ 2 ಎಂಬ ಎರಡೂ ವಿಧಗಳ ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅದರ ತೊಡಕುಗಳೊಂದಿಗೆ, ಇತರ ಕಾಯಿಲೆಗಳು ಅಥವಾ ರೋಗಗಳನ್ನು ಸಹ ಕವರ್ ಮಾಡುತ್ತದೆ.

purple essential logo 6

ಪ್ರವೇಶದ ವಯಸ್ಸು

18 ರಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಪಡೆಯಬಹುದು.

purple essential logo 6

ಪಾಲಿಸಿಯ ವಿಧ

ಈ ಪಾಲಿಸಿಯನ್ನು ವೈಯಕ್ತಿಕ ಅಥವಾ ಫ್ಲೋಟರ್ ಆಧಾರದ ಮೇಲೆ ಪಡೆಯಬಹುದು. 2 ಸದಸ್ಯರ ಕುಟುಂಬಕ್ಕೆ ಮಾತ್ರ ಫ್ಲೋಟರ್ ಪ್ಲ್ಯಾನ್ ಅನ್ನು ತೆಗೆದುಕೊಳ್ಳಬಹುದು

purple essential logo 2

ಹೊಂದಿಸಬಹುದಾದ ಪ್ಲ್ಯಾನ್ ಆಯ್ಕೆಗಳು

ಪ್ಲ್ಯಾನ್ ಎ: ಪೂರ್ವ ಸ್ವೀಕಾರ ವೈದ್ಯಕೀಯ ತಪಾಸಣೆಯೊಂದಿಗೆ. ಪ್ಲ್ಯಾನ್ ಬಿ: ಪೂರ್ವ ಸ್ವೀಕಾರ ವೈದ್ಯಕೀಯ ತಪಾಸಣೆ ಇಲ್ಲದೆಯೇ.

purple essential logo 3

ಹೊರರೋಗಿ ಖರ್ಚುಗಳು

ನೆಟ್‌ವರ್ಕ್ ಆಸ್ಪತ್ರೆಗಳು ಅಥವಾ ಡಯಾಗ್ನೋಸ್ಟಿಕ್ ಕೇಂದ್ರಗಳಲ್ಲಿ ಹೊರರೋಗಿಗಳ ಖರ್ಚನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡುತ್ತದೆ.

purple essential logo 2

ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್

ಪಾಲಿಸಿ ಅವಧಿಯಲ್ಲಿ ವಿಮೆದಾರರ ಬೇಸಿಕ್ ಮೊತ್ತದ ಬರಿದಾಗುವಿಕೆಯ ನಂತರ, ಪಾಲಿಸಿ ವರ್ಷದಲ್ಲಿ 100% ಬೇಸಿಕ್ ವಿಮಾ ಮೊತ್ತವನ್ನು ಒಂದು ಬಾರಿ ರಿಸ್ಟೋರ್ ಮಾಡಲಾಗುತ್ತದೆ.

purple essential logo 3

ವೈಯಕ್ತಿಕ ಅಪಘಾತ ಕವರ್

ಯಾವುದೇ ಹೆಚ್ಚುವರಿ ಖರ್ಚಿಲ್ಲದಂತೆ ವಿಶ್ವಾದ್ಯಂತ ವೈಯಕ್ತಿಕ ಅಪಘಾತ ಕವರ್ ಅನ್ನು ಪಡೆಯಲು ಒಬ್ಬ ವ್ಯಕ್ತಿ ಅರ್ಹನಾಗಿರುತ್ತಾರೆ.

purple essential logo 4

ಕಂತು ಆಯ್ಕೆಗಳು

ಪಾಲಿಸಿ ಪ್ರೀಮಿಯಂ ಅನ್ನು ಅರ್ಧ-ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು. ಇದನ್ನು ವಾರ್ಷಿಕ, ದ್ವೈವಾರ್ಷಿಕ (2 ವರ್ಷಗಳಿಗೊಮ್ಮೆ) ಮತ್ತು ತ್ರೈವಾರ್ಷಿಕ (3 ವರ್ಷಗಳಿಗೊಮ್ಮೆ) ಆಧಾರದ ಮೇಲೆ ಕೂಡ ಪಾವತಿಸಬಹುದಾಗಿದೆ.

Detailed List

ಏನನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

ಪ್ಲ್ಯಾನ್ Aಪ್ಲ್ಯಾನ್ B

ಇನ್ಶೂರೆನ್ಸ್ ಪೂರ್ವ ವೈದ್ಯಕೀಯ ತಪಾಸಣೆ ಕಡ್ಡಾಯ

ವಿಭಾಗ I - ಮಧುಮೇಹದ ತೊಡಕುಗಳಿಗಾಗಿ ಆಸ್ಪತ್ರೆಗೆ ದಾಖಲಾಗುವಿಕೆ

ಪ್ಲ್ಯಾನ್ Aಪ್ಲ್ಯಾನ್ B

ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ

ಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ. 

ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ

ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಜೊತೆಗೆ, ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕಕ್ಕಿಂತ 30 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ.

ಆಸ್ಪತ್ರೆಗೆ ದಾಖಲಾತಿ ನಂತರ

ಆಸ್ಪತ್ರೆಗೆ ದಾಖಲಾಗುವಿಕೆ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನಾಂಕದಿಂದ 60 ದಿನಗಳವರೆಗಿನ ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಕವರ್ ಮಾಡುತ್ತದೆ.

ಕೊಠಡಿ ಬಾಡಿಗೆ

ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ ಉಂಟಾಗುವ ಕೊಠಡಿ (ಏಕ ಸ್ಟಾಂಡರ್ಡ್ ಎ/ಸಿ ಕೊಠಡಿ), ಬೋರ್ಡಿಂಗ್ ಮತ್ತು ಶುಶ್ರೂಷೆ ಖರ್ಚುಗಳನ್ನು ಕವರ್ ಮಾಡಲಾಗುತ್ತದೆ.

ಐಸಿಯು ಶುಲ್ಕಗಳು

ವಾಸ್ತವಿಕ ಐಸಿಯು ಶುಲ್ಕಗಳನ್ನು ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡುತ್ತದೆ.

ತುರ್ತು ಆ್ಯಂಬ್ಯುಲೆನ್ಸ್

ಖಾಸಗಿ ಆ್ಯಂಬ್ಯುಲೆನ್ಸ್ ಸೇರಿದಂತೆ ವಿಮೆದಾರರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಉಂಟಾಗುವ ಆ್ಯಂಬ್ಯುಲೆನ್ಸ್ ಶುಲ್ಕಗಳನ್ನು ಪ್ರತಿ ಆಸ್ಪತ್ರೆಗೆ ದಾಖಲಾಗುವಿಕೆಗೆ ರೂ. 2000/- ರಂತೆ ಕವರ್ ಮಾಡುತ್ತದೆ.

ಡೇ ಕೇರ್ ಕಾರ್ಯವಿಧಾನಗಳು

ತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾಗುವಿಕೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಕವರ್ ಮಾಡುತ್ತದೆ.

ವಿಭಾಗ I ಅಡಿಯಲ್ಲಿ ವಿಶೇಷ ಷರತ್ತು

ಪ್ಲ್ಯಾನ್ Aಪ್ಲ್ಯಾನ್ B

ಮೂತ್ರಪಿಂಡ ಕಸಿ

ವಿಮೆದಾರರು ಸ್ವೀಕೃತಿದಾರರಾಗಿದ್ದರೆ ಮೂತ್ರಪಿಂಡ ಕಸಿಗಾಗಿ ದಾನಿಗಳ ಖರ್ಚುಗಳನ್ನು ಪಾವತಿಸಲಾಗುತ್ತದೆ, ವಿಮಾ ಮೊತ್ತದ ಲಭ್ಯತೆಗೆ ಒಳಪಟ್ಟು ಕಸಿ ಕ್ಲೈಮ್‌ಗಳನ್ನು ಪಾವತಿಸಲಾಗುತ್ತದೆ.

ಡಯಾಲಿಸಿಸ್ ಖರ್ಚುಗಳು

ಡಯಾಲಿಸಿಸ್‌ಗೆ ತಗಲುವ ಖರ್ಚುಗಳನ್ನು (ಎವಿ ಫಿಸ್ಟುಲಾ/ಗ್ರಾಫ್ಟ್ ರಚನೆ ಬದಲಾವಣೆಗಳು ಸೇರಿದಂತೆ) ಪ್ರತಿ ಸಮಾಲೋಚನೆಗೆ ರೂ. 1000/- ರಂತೆ ಕವರ್ ಮಾಡಲಾಗುತ್ತದೆ. ವಿಮೆದಾರರು ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರೆ, ಅವರಿಗೆ ಅನುಕ್ರಮ 24 ತಿಂಗಳವರೆಗೆ ಕವರ್ ನೀಡಲಾಗುತ್ತದೆ.

ಕೃತಕ ಅಂಗಗಳ ವೆಚ್ಚ

ಅಂಗಚ್ಛೇದನದ ನಂತರ ಕೃತಕ ಕೈಕಾಲುಗಳ ವೆಚ್ಚಕ್ಕೆ ತಗಲುವ ಖರ್ಚುಗಳನ್ನು ವಿಮಾ ಮೊತ್ತದ 10% ವರೆಗೆ ಕವರ್ ಮಾಡುತ್ತದೆ.

ವಿಭಾಗ II - ನಿಯಮಿತ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು

ಪ್ಲ್ಯಾನ್ Aಪ್ಲ್ಯಾನ್ B

ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ

ಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ.  

ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ

ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಜೊತೆಗೆ, ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕಕ್ಕಿಂತ 30 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ.

ಆಸ್ಪತ್ರೆಗೆ ದಾಖಲಾಗುವಿಕೆ ನಂತರ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನಾಂಕದಿಂದ 60 ದಿನಗಳವರೆಗಿನ ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡುತ್ತದೆ.

ಕೊಠಡಿ ಬಾಡಿಗೆ

ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ ಉಂಟಾಗುವ ಕೊಠಡಿ (ಏಕ ಸ್ಟಾಂಡರ್ಡ್ ಎ/ಸಿ ಕೊಠಡಿ), ಬೋರ್ಡಿಂಗ್ ಮತ್ತು ಶುಶ್ರೂಷೆ ಖರ್ಚುಗಳನ್ನು ಕವರ್ ಮಾಡುತ್ತದೆ.

ಐಸಿಯು ಶುಲ್ಕಗಳು

ವಾಸ್ತವಿಕ ಐಸಿಯು ಶುಲ್ಕಗಳನ್ನು ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುತ್ತದೆ.

ತುರ್ತು ಆ್ಯಂಬ್ಯುಲೆನ್ಸ್

ಖಾಸಗಿ ಆ್ಯಂಬ್ಯುಲೆನ್ಸ್ ಸೇರಿದಂತೆ ವಿಮೆದಾರರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಉಂಟಾಗುವ ಆ್ಯಂಬ್ಯುಲೆನ್ಸ್ ಶುಲ್ಕಗಳನ್ನು ಪ್ರತಿ ಪಾಲಿಸಿ ಅವಧಿಗೆ ರೂ. 2000/- ರಂತೆ ಕವರ್ ಮಾಡುತ್ತದೆ.

ಡೇ ಕೇರ್ ಕಾರ್ಯವಿಧಾನಗಳು

ತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿಗೆ ಆಸ್ಪತ್ರೆಗೆ ದಾಖಲಾಗುವಿಕೆ ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಕವರ್ ಮಾಡುತ್ತದೆ.

ಸೆಕ್ಷನ್ II ​​ಅಡಿಯಲ್ಲಿ ವಿಶೇಷ ಷರತ್ತು

ಪ್ಲ್ಯಾನ್ Aಪ್ಲ್ಯಾನ್ B

ಕಣ್ಣಿನ ಪೊರೆ ಚಿಕಿತ್ಸೆ

ಕಣ್ಣಿನ ಪೊರೆ ಚಿಕಿತ್ಸೆಗಾಗಿ ತಗಲುವ ಖರ್ಚನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡುತ್ತದೆ.

ವಿಭಾಗ III - ಹೊರರೋಗಿ ಖರ್ಚುಗಳು

ಪ್ಲ್ಯಾನ್ Aಪ್ಲ್ಯಾನ್ B

ಹೊರರೋಗಿ ಖರ್ಚುಗಳು

ನೆಟ್‌ವರ್ಕ್ ಆಸ್ಪತ್ರೆಗಳು ಅಥವಾ ಡಯಾಗ್ನೋಸ್ಟಿಕ್ ಕೇಂದ್ರಗಳಲ್ಲಿ ಹೊರರೋಗಿಗಳ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡುತ್ತದೆ.

ಸೆಕ್ಷನ್ IV - ಆಧುನಿಕ ಚಿಕಿತ್ಸೆಗಳಿಗೆ ಕವರ್

ಪ್ಲ್ಯಾನ್ Aಪ್ಲ್ಯಾನ್ B

ಆಧುನಿಕ ಚಿಕಿತ್ಸೆ

ಆಧುನಿಕ ಚಿಕಿತ್ಸೆಗಳಾದ ಬಲೂನ್ ಸಿನುಪ್ಲಾಸ್ಟಿ, ಇಂಟ್ರಾ ವಿಟ್ರೆಲ್ ಇಂಜೆಕ್ಷನ್‌ಗಳು, ರೋಬೋಟಿಕ್ ಶಸ್ತ್ರಚಿಕಿತ್ಸೆ ಇತ್ಯಾದಿಗಳಿಗೆ ತಗಲುವ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡುತ್ತದೆ.

ವಿಭಾಗ V - ವೈಯಕ್ತಿಕ ಅಪಘಾತ

ಪ್ಲ್ಯಾನ್ Aಪ್ಲ್ಯಾನ್ B

ವೈಯಕ್ತಿಕ ಅಪಘಾತ ಕವರ್

ಆಕಸ್ಮಿಕ ಸಾವಿನ ಸಂದರ್ಭದಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಒಬ್ಬ ವ್ಯಕ್ತಿ ವಿಶ್ವಾದ್ಯಂತ ವೈಯಕ್ತಿಕ ಅಪಘಾತದ ಕವರ್ ಪಡೆಯಲು ಅರ್ಹರಾಗಿರುತ್ತಾರೆ.
ಪಾಲಿಸಿ ವಿವರಗಳು ಹಾಗೂ ಕರಾರುಗಳು ಮತ್ತು ಷರತ್ತುಗಳನ್ನು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ದಾಖಲೆಯನ್ನು ಓದಿ.

ಬೇರೆ ಏನನ್ನಾದರೂ ಹುಡುಕುತ್ತಿದ್ದೀರಾ?

ಎಲ್ಲಾ ಪ್ಲ್ಯಾನ್‌ಗಳನ್ನು ವೀಕ್ಷಿಸಿ
ಪ್ರಾರಂಭಿಸಿ

ಅತ್ಯುತ್ತಮವಾದುದರ ಖಾತರಿ ಹೊಂದಿರಿ

ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.

ಹೆಚ್ಚಿನ ಮಾಹಿತಿ ಬೇಕೆ?
ಹೆಚ್ಚಿನ ಮಾಹಿತಿ ಬೇಕೆ?
ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?
ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?

ಡಯಾಬಿಟಿಕ್ ಮೆಲ್ಲಿಟಸ್‌ಗೆ ಹೆಲ್ತ್ ಇನ್ಶೂರೆನ್ಸ್

 

ಬಹುತೇಕ ಜನರಿಗೆ ಮಧುಮೇಹ ಮತ್ತು ಸಹ-ಅಸ್ವಸ್ಥತೆ ಅಂಶಗಳ ಬಗ್ಗೆ ತಿಳಿದಿಲ್ಲ. ಮಧುಮೇಹ ಮೆಲಿಟಿಕ್ಸ್   ಅಥವಾ ಸಿಹಿಮೂತ್ರ ರೋಗ ಎನ್ನುವುದು ಜೀವನಶೈಲಿಗೆ ಸಂಬಂಧಿಸಿದ ಅಸ್ವಸ್ಥತೆಯಾಗಿದ್ದು, ಇದು ಸಾಮಾನ್ಯವಾಗಿ ಇತರ ಗಂಭೀರ ಕಾಯಿಲೆಗಳನ್ನು ಪ್ರಚೋದಿಸುತ್ತದೆ ಮತ್ತು ಇದು ಹೃದಯಾಘಾತಕ್ಕೆ ಪ್ರಾಥಮಿಕ ಕಾರಣವಾಗಿದೆ ಮತ್ತು ಮಾರಕವಾಗಬಹುದು.

 

““ಭಾರತದಲ್ಲಿ 77 ಮಿಲಿಯನ್‌ಗಿಂತಲೂ ಹೆಚ್ಚು ಜನರು ಮಧುಮೇಹವನ್ನು ಹೊಂದಿದ್ದಾರೆ”- ವರದಿ ಮಾಡಿದವರು ಮೆಡಿಕಲ್ ನ್ಯೂಸ್ ಟುಡೇ, ದಿನಾಂಕ:- 28-ಜುಲೈ-2021.

 

ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ಕಿರಿಯ ವಯಸ್ಸಿನವರಲ್ಲಿ ಮಧುಮೇಹವು ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತಿದೆ. ಮಧುಮೇಹದಲ್ಲಿ ವಿಧ I ಮತ್ತು ವಿಧ II ಮಧುಮೇಹ ಎಂಬ ಎರಡು ವಿಧಗಳಿವೆ.

 

ಮಧುಮೇಹಕ್ಕೆ ಕಾರಣವಾಗುವ ಜೀವನಶೈಲಿಯ ಸಮಸ್ಯೆಗಳನ್ನು ನಿರ್ವಹಿಸಲು ಆರಂಭದಲ್ಲೇ ಪತ್ತೆಹಚ್ಚುವುದು ಮತ್ತು ನಿರಂತರ ಕಣ್ಗಾವಲು ಅಗತ್ಯವಾಗಿದೆ. ಸೂಕ್ತವಾದ ವೈದ್ಯಕೀಯ ಆರೈಕೆಯೊಂದಿಗೆ, ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಾತ್ರವಲ್ಲದೆ ಆರೋಗ್ಯಕರ ಜೀವನವನ್ನು ನಡೆಸಲು ನಿಮಗೆ ಸಾಧ್ಯವಾಗುತ್ತದೆ. ಆದರೆ, ವ್ಯಾಪಕವಾದ ವೈದ್ಯಕೀಯ ಚಿಕಿತ್ಸೆಗಳ ಸಂದರ್ಭದಲ್ಲಿ ಬಿಲ್‌ಗಳು ಕೂಡ ದೊಡ್ಡದಾಗಿಯೇ ಇರುತ್ತವೆ, ಅದಕ್ಕಾಗಿಯೇ ಮಧುಮೇಹ ರೋಗಿಗಳಿಗೆ ಹೆಲ್ತ್ ಇನ್ಶೂರೆನ್ಸ್ ಅಗತ್ಯವಾಗಿದೆ. ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಡಯಾಬಿಟೀಸ್ ಸೇಫ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದೆ, ಇದು ಮಧುಮೇಹದ ಇತಿಹಾಸ ಹೊಂದಿರುವ ಜನರಿಗಾಗಿಯೇ ವಿನ್ಯಾಸಗೊಳಿಸಲಾದ ವಿಶೇಷ ಪ್ಲ್ಯಾನ್ ಆಗಿದೆ.

ಡಯಾಬಿಟೀಸ್ ಸೇಫ್ ಇನ್ಶೂರೆನ್ಸ್ ಪಾಲಿಸಿ

ಡಯಾಬಿಟಿಸ್ ಸೇಫ್ ಇನ್ಶೂರೆನ್ಸ್ ಪಾಲಿಸಿಯು ವಿಧ I ಅಥವಾ ವಿಧ II ಮಧುಮೇಹ ಮತ್ತು ಅದರ ತೊಡಕುಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ ಉಂಟಾಗುವ ಎಲ್ಲಾ ಖರ್ಚುಗಳನ್ನು ಕವರ್ ಮಾಡುತ್ತದೆ. ಪ್ಲ್ಯಾನ್ ವೈಯಕ್ತಿಕ ಮತ್ತು ಫ್ಯಾಮಿಲಿ ಫ್ಲೋಟರ್ ಆಧಾರದ ಮೇಲೆ 24 ಗಂಟೆಗಳು ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ ಅಗತ್ಯವಿರುವ ಕವರೇಜ್ ಅನ್ನು ಒದಗಿಸುತ್ತದೆ.

 

ವಿಧ I ಅಥವಾ ವಿಧ II ಮಧುಮೇಹದಿಂದ ಬಳಲುತ್ತಿರುವ 18 ರಿಂದ 65 ವರ್ಷದೊಳಗಿನ  ಯಾರನ್ನಾದರೂ ಈ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಖರೀದಿಸಲು ಅರ್ಹರು ಎಂದು ಪರಿಗಣಿಸಲಾಗುತ್ತದೆ.

ಡಯಾಬಿಟೀಸ್ ಸೇಫ್ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಒಳಗೊಳ್ಳುತ್ತದೆ ಎಂಬುದನ್ನು ನಾವು ವಿವರವಾಗಿ ಅರ್ಥಮಾಡಿಕೊಳ್ಳೋಣ.

ಈ ಪಾಲಿಸಿಯಲ್ಲಿ, ನಿಮಗೆ ಪ್ಲ್ಯಾನ್ ಎ ಮತ್ತು ಪ್ಲ್ಯಾನ್ ಬಿ ಎಂಬ ಎರಡು ಪ್ಲ್ಯಾನ್ ಆಯ್ಕೆಗಳು ಲಭ್ಯವಿವೆ.

ಡಯಾಬಿಟೀಸ್ ಸೇಫ್ ಇನ್ಶೂರೆನ್ಸ್ ಪಾಲಿಸಿ - ಪ್ಲ್ಯಾನ್ ಎ ಗೆ ಇನ್ಶೂರೆನ್ಸ್ ಪೂರ್ವ ತಪಾಸಣೆ ಅಗತ್ಯವಾಗಿದೆ. ವಿಮಾ ಮೊತ್ತದವರೆಗೆ ಆಸ್ಪತ್ರೆಗೆ ದಾಖಲಾಗುವಿಕೆ ಮತ್ತು ಮಧುಮೇಹದ ತೊಂದರೆಗಳಿಂದ ಉಂಟಾಗುವ ಎಲ್ಲಾ ವೈದ್ಯಕೀಯ ಖರ್ಚುಗಳಿಗೆ ಪ್ಲ್ಯಾನ್‌ನಲ್ಲಿ ಕ್ಲೈಮ್ ಅನ್ನು ಸಲ್ಲಿಸಬಹುದಾಗಿದೆ.


ಹೃದಯ ವ್ಯವಸ್ಥೆ, ಮೂತ್ರಪಿಂಡದ ವ್ಯವಸ್ಥೆ, ಕಣ್ಣಿನ ಕಾಯಿಲೆಗಳು, ಮಧುಮೇಹದ ಬಾಹ್ಯ ನಾಳೀಯ ಕಾಯಿಲೆಗಳುಮತ್ತು ಪಾದದ ಹುಣ್ಣುಗಳಂತಹ ಮಧುಮೇಹದ ತೊಂದರೆಗಳನ್ನು ಪ್ಲ್ಯಾನ್‌ ಎ ದಿನ 1 ರಿಂದ ಕವರ್ ಮಾಡುತ್ತದೆ.

ಡಯಾಬಿಟೀಸ್ ಸೇಫ್ ಇನ್ಶೂರೆನ್ಸ್ ಪಾಲಿಸಿ ಪ್ಲ್ಯಾನ್ ಬಿ ಗೆ ಇನ್ಶೂರೆನ್ಸ್ ಪೂರ್ವ ತಪಾಸಣೆ ಅಗತ್ಯವಿಲ್ಲ. ಪಾಲಿಸಿ ಅವಧಿಯಲ್ಲಿ ಮಧುಮೇಹದಿಂದ ಉಂಟಾಗುವ ಎಲ್ಲಾ ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳನ್ನು ವಿಮಾ ಮೊತ್ತದವರೆಗೆ ಕವರ್ ಮಾಡಲಾಗುತ್ತದೆ.


ಪ್ಲ್ಯಾನ್ ಬಿ ನಲ್ಲಿ, ಹೃದಯ ವ್ಯವಸ್ಥೆ, ಮೂತ್ರಪಿಂಡದ ವ್ಯವಸ್ಥೆ, ಕಣ್ಣಿನ ರೋಗಗಳು, ಪಾದದ ಹುಣ್ಣು, ಮಧುಮೇಹದ ಬಾಹ್ಯ ನಾಳೀಯ ಕಾಯಿಲೆಗಳು ಮತ್ತು ಮಧುಮೇಹದ ಇತರ ತೊಡಕುಗಳಿಗೆ ಸಂಬಂಧಿಸಿದ ವೈದ್ಯಕೀಯ ಖರ್ಚುಗಳನ್ನು 12 ತಿಂಗಳ ವೇಟಿಂಗ್ ಅವಧಿಯ ನಂತರ ಕವರ್ ಮಾಡಲಾಗುತ್ತದೆ.

ಮಧುಮೇಹೇತರ ತೊಡಕುಗಳಿಗಾಗಿ ಎಲ್ಲಾ ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳನ್ನು ವಿಮಾ ಮೊತ್ತದವರೆಗೆ ಎರಡೂ ಪ್ಲ್ಯಾನ್‌ಗಳಲ್ಲಿ ಕವರ್ ಮಾಡಲಾಗುತ್ತದೆ. ಈ ಪಾಲಿಸಿಯ ಅಡಿಯಲ್ಲಿ, ಪೂರ್ವಾಸ್ತಿತ್ವದ ಕಾಯಿಲೆಗಳಿಗೆ ವೇಟಿಂಗ್ ಅವಧಿ 48 ತಿಂಗಳುಗಳು, ನಿರ್ದಿಷ್ಟ ಕಾಯಿಲೆಗಳಿಗೆ ವೇಟಿಂಗ್ ಆವಧಿ 24 ತಿಂಗಳುಗಳು ಮತ್ತು ಅಪಘಾತಗಳನ್ನು ಹೊರತುಪಡಿಸಿ ಪಾಲಿಸಿಯ ಆರಂಭಿಕ ವೇಟಿಂಗ್ ಅವಧಿಯು 30 ದಿನಗಳಾಗಿವೆ.


ನಿಮ್ಮ ಹೆಲ್ತ್ ಕೇರ್ ಅವಶ್ಯಕತೆಗೆ ಅನುಗುಣವಾಗಿ ಸರಿಯಾದ ಪ್ಲ್ಯಾನ್ ಅನ್ನು ಆರಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ.

  1. ಎರಡೂ ಪ್ಲ್ಯಾನ್‌ಗಳನ್ನು ವೈಯಕ್ತಿಕ ಮತ್ತು ಫ್ಲೋಟರ್ ಆಧಾರದ ಮೇಲೆ ಖರೀದಿಸಬಹುದು, ಇದು ನೀವು ಮತ್ತು ನಿಮ್ಮ ಸಂಗಾತಿಯಲ್ಲಿ ಯಾರಾದರೂ ಮಧುಮೇಹಿಗಳಾಗಿದ್ದರೆ, ಆಗ ನಿಮ್ಮನ್ನು ಕವರ್ ಮಾಡುತ್ತದೆ. ಜೀವನಪರ್ಯಂತ ನವೀಕರಣ ಲಭ್ಯವಿದೆ
  2. ಈ ಪಾಲಿಸಿಯಲ್ಲಿ ಗರಿಷ್ಠ ಮೊತ್ತದ ವಿಮಾ ಆಯ್ಕೆಯು ₹10,00,000 ಆಗಿದೆ
  3. ಎರಡೂ ಪ್ಲ್ಯಾನ್‌ಗಳು ನಿಮ್ಮ ಡೇಕೇರ್ ವೈದ್ಯಕೀಯ ಖರ್ಚುಗಳು ಮತ್ತು ಆಧುನಿಕ ಚಿಕಿತ್ಸೆಯನ್ನು (ಉಪ-ಮಿತಿಗಳವರೆಗೆ) ಕವರ್ ಮಾಡುತ್ತವೆ
  4. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ವಿಮೆದಾರರ ಆಯ್ಕೆಯ ಆಧಾರದ ಮೇಲೆ ನಿರ್ದಿಷ್ಟ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ
  5. ಮೂತ್ರಪಿಂಡ ಕಸಿ ಮಾಡಲು ಅಂಗಾಂಗ ದಾನಿಗಳ ಖರ್ಚುಗಳನ್ನು ಅನುಮತಿಸಲಾಗಿದೆ
  6. ಡಯಾಲಿಸಿಸ್ ಖರ್ಚುಗಳನ್ನು ಕವರ್ ಮಾಡುತ್ತದೆ
  7. ಆಯ್ಕೆಮಾಡಿದ ವಿಮೆದಾರರ ಆಕಸ್ಮಿಕ ಮರಣದ ಸಂದರ್ಭದಲ್ಲಿ ವಿಶ್ವವ್ಯಾಪಿ ಕವರೇಜ್ ಲಭ್ಯವಿದೆ
  1. ಕೊಠಡಿ (ಏಕ ಸ್ಟ್ಯಾಂಡರ್ಡ್ ಎ/ಸಿ ಕೊಠಡಿ), ಬೋರ್ಡಿಂಗ್ ಮತ್ತು ಶುಷ್ರೂಷೆ ಖರ್ಚುಗಳು
  2. ಶಸ್ತ್ರಚಿಕಿತ್ಸಕ, ಅರಿವಳಿಕೆ ತಜ್ಞ, ವೈದ್ಯರು, ಸಮಾಲೋಚಕರು, ಸ್ಪೆಷಲಿಸ್ಟ್ ಶುಲ್ಕಗಳು
  3. ಪ್ರತಿ ಪಾಲಿಸಿ ಅವಧಿಗೆ ₹2,000 ಮೊತ್ತದವರೆಗೆ ತುರ್ತು ಆ್ಯಂಬ್ಯುಲೆನ್ಸ್ ಶುಲ್ಕಗಳು
  4. ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕಕ್ಕಿಂತ ಮೊದಲು 30 ದಿನಗಳ ಅವಧಿಯಲ್ಲಿ ಉಂಟಾದ ಆಸ್ಪತ್ರೆಗೆ ದಾಕಲಾಗುವಿಕೆ ಪೂರ್ವ- ಖರ್ಚುಗಳು
  5. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ 60 ದಿನಗಳವರೆಗೆ ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ಖರ್ಚುಗಳು, ಪ್ರತಿ ಆಸ್ಪತ್ರೆಗೆ ದಾಖಲಾಗುವಿಕೆಗೆ ಗರಿಷ್ಠ ರೂ. 5,000/- ಗೆ ಒಳಪಟ್ಟು ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳ 7% ಅನ್ನು ಪಾವತಿಸಲಾಗುತ್ತದೆ
  6. ಯಾವುದೇ ನೆಟ್‌ವರ್ಕ್ ಸೌಲಭ್ಯದಲ್ಲಿ ಉಂಟಾಗುವ ಆಹಾರ ಸೇವನೆಗಿಂತ ಮೊದಲು ಮತ್ತು ಆಹಾರ ಸೇವನೆಯ ನಂತರದ ಮತ್ತು HbA1C ಪರೀಕ್ಷೆಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಪ್ರತಿ ಈವೆಂಟ್‌ಗೆ ರೂ. 750/- ರಂತೆ ಪ್ರತಿ ಪಾಲಿಸಿ ಅವಧಿಗೆ ರೂ. 1500/- ವರೆಗೆ ಕವರ್ ಮಾಡಲಾಗುತ್ತದೆ. ವೈದ್ಯಕೀಯ ಸಮಾಲೋಚನೆ, ಇತರ ರೋಗನಿರ್ಣಯಗಳು, ಔಷಧಿಗಳು ಮತ್ತು ಡ್ರಗ್‌ಗಳಂತಹ ಹೊರರೋಗಿ ಖರ್ಚುಗಳನ್ನು ಪ್ರತಿ ಪಾಲಿಸಿಯ ಅವಧಿಗೆ ನಿರ್ದಿಷ್ಟ ಮಿತಿಗಳವರೆಗೆ ಕವರ್ ಮಾಡುತ್ತದೆ
  7. ಐಸಿಯು ಶುಲ್ಕಗಳು
  8. ರಕ್ತ ಮತ್ತು ಆಮ್ಲಜನಕದ ಖರ್ಚುಗಳು
  9. ಔಷಧೀಯ ಖರ್ಚುಗಳು
  10. ಪಾಲಿಸಿ ಅವಧಿಯಲ್ಲಿ ಒಂದು ಬಾರಿ ಬೇಸಿಕ್ ವಿಮಾ ಮೊತ್ತದ ಬರಿದಾಗುವಿಕೆಯ ನಂತರ 100% ರಷ್ಟು ಬೇಸಿಕ್ ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್
  11. ವಿಮಾ ಮೊತ್ತದ 10% ವರೆಗೆ ಅಂಗಚ್ಛೇದನದ ಕ್ಲೈಮ್‌ಗಳು

ಸ್ಟಾರ್ ಹೆಲ್ತ್ ಡಯಾಬಿಟೀಸ್ ಸೇಫ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ನಿಮ್ಮ ಕ್ಲೈಮ್‌ಗಳು ತಿರಸ್ಕೃತಗೊಳ್ಳಲು ಕೆಲವು ಸಾಮಾನ್ಯ ಕಾರಣಗಳು ಈ ಕೆಳಕಂಡಂತಿವೆ:

  1. ನಿರ್ದಿಷ್ಟ ಅಸ್ವಸ್ಥತೆಗಾಗಿ ವೇಟಿಂಗ್ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು
  2. ಸ್ಥೂಲಕಾಯತೆಗೆ ಸಂಬಂಧಿಸಿದ ವೈದ್ಯಕೀಯ ವಿಧಾನಗಳು ತನಿಖೆ ಮತ್ತು ಮೌಲ್ಯಮಾಪನಕ್ಕಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳು
  3. ಸಂತಾನಹೀನತೆ ಮತ್ತು ಬಂಜೆತನಕ್ಕೆ ಸಂಬಂಧಿಸಿದ ಚಿಕಿತ್ಸೆ.
  4. ಸ್ವತಃ ಉಂಟುಮಾಡಿಕೊಂಡ ಗಾಯಗಳು
  5. ಕನ್ನಡಕ, ಕಾಂಟ್ಯಾಕ್ಟ್ ಲೆನ್ಸ್ ಮತ್ತು ಯಾವುದೇ ದಂತ ಚಿಕಿತ್ಸೆಗಳ ವೆಚ್ಚ

ಅಪಾಯಕಾರಿ ಅಂಶಗಳು, ಕರಾರುಗಳು ಮತ್ತು ಷರತ್ತುಗಳ ಕುರಿತು ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಮಾರಾಟವನ್ನು ಮುಕ್ತಾಯಗೊಳಿಸುವ ಮೊದಲು ಪಾಲಿಸಿಯ ಷರತ್ತುಗಳನ್ನು ಓದಿ

ಡಯಾಬಿಟೀಸ್ ಸೇಫ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ಕಾರಣಗಳು

 

ಮಧುಮೇಹೇತರ ತೊಡಕುಗಳ ಆಸ್ಪತ್ರೆಗೆ ದಾಖಲಾಗುವಿಕೆ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ

  1. ಹೃದಯಪರಿಚಲನಾ ಕಾಯಿಲೆ, ಮೂತ್ರಪಿಂಡ ವ್ಯವಸ್ಥೆಯ ರೋಗಗಳು, ಕಣ್ಣು ಮತ್ತು ಪಾದದ ಹುಣ್ಣುಗಳಂತಹ ಕಾಯಿಲೆಗಳಿಗೆ ಪ್ಲ್ಯಾನ್ ಎ ನಲ್ಲಿ ಯಾವುದೇ ವೇಟಿಂಗ್ ಅವಧಿಗಳಿಲ್ಲದೇ ಮತ್ತು ಪ್ಲ್ಯಾನ್ ಬಿ ನಲ್ಲಿ ವೇಟಿಂಗ್ ಅವಧಿಯ ನಂತರ ಕವರ್ ಮಾಡಲಾಗುತ್ತದೆ
  2. ಪಾಲಿಸಿಯ ಅವಧಿಯಲ್ಲಿ ಒಂದು ಬಾರಿ ವಿಮೆದಾರರ ಬೇಸಿಕ್ ವಿಮಾಮೊತ್ತದ ಬರಿದಾಗುವಿಕೆಯ  ನಂತರ 100% ರಷ್ಟು ಸಂಪೂರ್ಣ ವಿಮಾ ಮೊತ್ತದ ಆಟೊಮ್ಯಾಟಿಕ್ ರಿಸ್ಟೋರೇಷನ್
  3. ಪಾವತಿಸಿದ ಪ್ರೀಮಿಯಂ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80D ಅಡಿಯಲ್ಲಿ ವಿನಾಯಿತಿಗೆ ಅರ್ಹವಾಗಿದೆ
  4. ಕ್ಲೈಮ್ ಸಮಯದಲ್ಲಿ ಯಾವುದೇ ಸಹ-ಪಾವತಿ ಅಗತ್ಯವಿಲ್ಲ

FAQ's

ಡಯಾಬಿಟೀಸ್ ಸೇಫ್ ಇನ್ಶೂರೆನ್ಸ್ ಪಾಲಿಸಿಯಲ್ಲಿ, ಮಧುಮೇಹ ಮತ್ತು ಮಧುಮೇಹೇತರ ಪರಿಸ್ಥಿತಿಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುವಿಕೆಯ ಎಲ್ಲಾ ಖರ್ಚುಗಳನ್ನು ಕವರ್ ಮಾಡಲಾಗುತ್ತದೆ.

  • ಈ ಪ್ಲ್ಯಾನ್ ಅಡಿಯಲ್ಲಿ ಆರಂಭಿಕ ವೇಟಿಂಗ್ ಅವಧಿಯು 30 ದಿನಗಳು (ಅಪಘಾತಗಳನ್ನು ಹೊರತುಪಡಿಸಿ).
  • PED ಗಳಿಗೆ ವೇಟಿಂಗ್ ಅವಧಿಯು 48 ತಿಂಗಳುಗಳು.
  • ನಿರ್ದಿಷ್ಟ ಕಾಯಿಲೆಗಳಿಗೆ, ಇದು 24 ತಿಂಗಳುಗಳು.

ಪ್ಲ್ಯಾನ್ ಎ ಅಡಿಯಲ್ಲಿ - ವಿಧ I ಮತ್ತು ವಿಧ II ಮಧುಮೇಹಕ್ಕೆ ಸಂಬಂಧಿಸಿದ ತೊಡಕುಗಳನ್ನು ದಿನ 1 ರಿಂದ ಕವರ್ ಮಾಡಲಾಗುತ್ತದೆ.

ಪ್ಲ್ಯಾನ್ ಬಿ ಅಡಿಯಲ್ಲಿ -  ವಿಧ I ಮತ್ತು ವಿಧ II ಮಧುಮೇಹಕ್ಕೆ ಸಂಬಂಧಿಸಿದ ತೊಡಕುಗಳನ್ನು 12 ತಿಂಗಳ ನಂತರ ಕವರ್ ಮಾಡಲಾಗುತ್ತದೆ.

ಹೌದು. ಈ ಪ್ಲ್ಯಾನ್ ಇತರ ಕಾಯಿಲೆಗಳನ್ನು ಸಹ ಕವರ್ ಮಾಡುತ್ತದೆ

ಕಣ್ಣಿನ ಪೊರೆ, CVD ಮತ್ತು ಆಧುನಿಕ ಚಿಕಿತ್ಸೆಗಳಿಗೆ ಉಪ ಮಿತಿಗಳು ಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ ಪಾಲಿಸಿ ಷರತ್ತುಗಳನ್ನು ಓದಿ.

ಪ್ಲ್ಯಾನ್ ಎ ಮತ್ತು ಪ್ಲ್ಯಾನ್ ಬಿ ಈ ಪ್ಲ್ಯಾನ್‌ನಲ್ಲಿ ಲಭ್ಯವಿರುವ ಎರಡು ವೇರಿಯಂಟ್‌ಗಳಾಗಿವೆ.

ಮಧುಮೇಹದಿಂದ ಬಳಲುತ್ತಿರುವ 18-65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಈ ಪಾಲಿಸಿಯನ್ನು ಖರೀದಿಸಬಹುದಾಗಿದೆ.

ಡಯಾಬಿಟೀಸ್ ಸೇಫ್ ಇನ್ಶೂರೆನ್ಸ್ ಪಾಲಿಸಿ
Disclaimer:

Health Insurance Coverage for pre-existing medical conditions is subject to underwriting review and may involve additional requirements, loadings, or exclusions. Please disclose your medical history in the proposal form for a personalised assessment. 
The information provided on this page is for general informational purposes only. Availability and terms of health insurance plans may vary based on geographic location and other factors. Consult a licensed insurance agent or professional for specific advice. T&C Apply. For further detailed information or inquiries, feel free to reach out via email at marketing.d2c@starhealth.in