ವಿಮಾ ಮೊತ್ತಈ ಪಾಲಿಸಿಯ ಅಡಿಯಲ್ಲಿ ವಿಮಾ ಮೊತ್ತದ ಆಯ್ಕೆಗಳು ರೂ.10,00,000/-, ರೂ.20,00,000/-, ರೂ.30,00,000/-, ರೂ.50,00,000/-, ರೂ.75,00,000/- ಮತ್ತು ರೂ.1, 00,00,000/-. ಆದಾಗ್ಯೂ, ರೂ.75,00,000/- ಮತ್ತು ರೂ.1,00,00,000/- ವಿಮಾ ಮೊತ್ತವನ್ನು 65 ವರ್ಷ ವಯಸ್ಸಿವರು ಮಾತ್ರ ಪಡೆಯಬಹುದು. ಇದು ಪಾಲಿಸಿಯ ಪ್ರಾರಂಭದ ಸಮಯದಲ್ಲಿ ಮಾತ್ರ ಅನ್ವಯಿಸುತ್ತದೆ. |
ಪಾಲಿಸಿ ಅವಧಿಈ ಪಾಲಿಸಿಯನ್ನು ಒಂದು, ಎರಡು ಅಥವಾ ಮೂರು ವರ್ಷಗಳ ಅವಧಿಗೆ ಪಡೆಯಬಹುದು. |
ಪೂರ್ವ ಸ್ವೀಕಾರ ವೈದ್ಯಕೀಯ ತಪಾಸಣೆವಯಸ್ಸು ಮತ್ತು ವಿಮಾ ಮೊತ್ತವನ್ನು ಲೆಕ್ಕಿಸದೆ ಈ ಪಾಲಿಸಿಯನ್ನು ಪಡೆಯಲು ಪೂರ್ವ ಸ್ವೀಕಾರ ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ. |
ಒಳರೋಗಿ ಆಸ್ಪತ್ರೆ ದಾಖಲಾತಿಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಯ ಆಸ್ಪತ್ರೆಯ ವೆಚ್ಚಗಳನ್ನು ಒಳಗೊಂಡಿದೆ. |
ಆಸ್ಪತ್ರೆಗೆ ದಾಖಲಾಗುವ ಮೊದಲುಒಳರೋಗಿ ಆಸ್ಪತ್ರೆಗೆ ದಾಖಲಾಗುವುದರ ಜೊತೆಗೆ, ಆಸ್ಪತ್ರೆಗೆ ದಾಖಲಾದ ದಿನಾಂಕದ 60 ದಿನಗಳ ಮೊದಲಿನ ವೈದ್ಯಕೀಯ ವೆಚ್ಚಗಳನ್ನು ಸಹ ಒಳಗೊಂಡಿದೆ. |
ಆಸ್ಪತ್ರೆಗೆ ದಾಖಲಾದ ನಂತರಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ ದಿನಾಂಕದಿಂದ 90 ದಿನಗಳವರೆಗೆ ತಗಲುವ ಆಸ್ಪತ್ರೆಯ ನಂತರದ ವೈದ್ಯಕೀಯ ವೆಚ್ಚಗಳನ್ನು ಒಳಗೊಂಡಿದೆ. |
ಕೊಠಡಿ ಬಾಡಿಗೆಒಳರೋಗಿ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಬರುವ ಕೊಠಡಿ, ಬೋರ್ಡಿಂಗ್ ಮತ್ತು ಶುಶ್ರೂಷೆ ವೆಚ್ಚಗಳು ವಿಮಾ ಮೊತ್ತದ 1% ವರೆಗೆ ಅಥವಾ ಗರಿಷ್ಠ ರೂ. ದಿನಕ್ಕೆ 20,000 ರೂ. |
ಹೋಮ್ ಕೇರ್ ಚಿಕಿತ್ಸೆಒಂದು ಪಾಲಿಸಿ ವರ್ಷದಲ್ಲಿ ಗರಿಷ್ಠ ರೂ. 5 ಲಕ್ಷಕ್ಕೆ ಒಳಪಟ್ಟು ನಿರ್ದಿಷ್ಟ ಪರಿಸ್ಥಿತಿಗಳಿಗೆ ಹೋಮ್ ಕೇರ್ ಚಿಕಿತ್ಸೆಯ ಖರ್ಚುಗಳನ್ನು ವಿಮಾ ಮೊತ್ತದ 10% ವರೆಗೆ ಕವರ್ ಮಾಡಲಾಗುತ್ತದೆ. ವಿಮಾದಾರರು ಈ ಸೇವೆಯನ್ನು ನಗದು ರಹಿತ ಅಥವಾ ವೆಚ್ಚ ಭರಿಸುವಿಕೆ ಆಧಾರದ ಮೇಲೆ ಪಡೆಯಬಹುದಾಗಿದೆ. |
ವೈದ್ಯಕೀಯೇತರ ಐಟಂಗಳಿಗೆ ಕವರೇಜ್ಪಾಲಿಸಿಯ ಅಡಿಯಲ್ಲಿ ಸ್ವೀಕಾರಾರ್ಹ ಕ್ಲೈಮ್ ಇದ್ದರೆ, ಆಗ ಈ ಪಾಲಿಸಿಯಲ್ಲಿ ನಿರ್ದಿಷ್ಟಪಡಿಸಿದ ವೈದ್ಯಕೀಯೇತರ ಐಟಂಗಳಿಗೆ ಪಾವತಿಸಬೇಕಾಗುತ್ತದೆ. |
ರಸ್ತೆ ಆಂಬ್ಯುಲೆನ್ಸ್ಈ ಪಾಲಿಸಿಯು ಆಸ್ಪತ್ರೆಯಲ್ಲಿ ದಾಖಲಾಗಲು, ಉತ್ತಮ ವೈದ್ಯಕೀಯ ಚಿಕಿತ್ಸೆಗಾಗಿ ಮತ್ತು ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ಸ್ಥಳಾಂತರಗೊಳ್ಳಲು, ಆಸ್ಪತ್ರೆಯಿಂದ ನಿವಾಸಕ್ಕೆ ತೆರಳಲು ಆಂಬ್ಯುಲೆನ್ಸ್ ಶುಲ್ಕಗಳನ್ನು ಒಳಗೊಂಡಿದೆ. |
ಏರ್ ಆಂಬ್ಯುಲೆನ್ಸ್ಏರ್ ಆಂಬ್ಯುಲೆನ್ಸ್ ವೆಚ್ಚ ಪ್ರತಿ ಆಸ್ಪತ್ರೆಗೆ 2.5 ಲಕ್ಷ ರೂ. ಪ್ರತಿ ಪಾಲಿಸಿ ಅವಧಿಗೆ ಗರಿಷ್ಠ 5 ಲಕ್ಷ ರೂ.ವರೆಗೆ ಒಳಗೊಂಡಿದೆ. |
ಡೊಮಿಸಿಲಿಯರಿ(ಗೃಹ) ಆಸ್ಪತ್ರೆಗೆವೈದ್ಯರ ಸಲಹೆಯ ಮೇರೆಗೆ ಮೂರು ದಿನಗಳಿಗಿಂತ ಹೆಚ್ಚಿನ ಅವಧಿಗೆ ದಾಖಲಾದರೆ ಆಯುಷ್ ಸೇರಿದಂತೆ ಗೃಹ(ಡೊಮಿಸಿಲಿಯರಿ) ಆಸ್ಪತ್ರೆಗೆ ತಗಲುವ ವೆಚ್ಚವನ್ನು ಒಳಗೊಂಡಿದೆ. |
ಡೇ ಕೇರ್ ಕಾರ್ಯವಿಧಾನಗಳುತಾಂತ್ರಿಕ ಪ್ರಗತಿಯಿಂದಾಗಿ 24 ಗಂಟೆಗಳಿಗಿಂತ ಕಡಿಮೆ ಅವಧಿಯ ಆಸ್ಪತ್ರೆಗೆ ದಾಖಲಾಗುವಿಕೆಯೊಂದಿಗೆ ನಡೆಯುವ ವೈದ್ಯಕೀಯ ಚಿಕಿತ್ಸೆಗಳು ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಭರಿಸಲಾಗುತ್ತದೆ. |
ಅಂಗ ದಾನಿ ವೆಚ್ಚಗಳುವಿಮಾದಾರ ವ್ಯಕ್ತಿಯು ಕಸಿ ಮಾಡುವಿಕೆಗಾಗಿ ಕ್ಲೈಮ್ ಪಾವತಿಸಿದರೆ ಆತನ ಅಂಗಾಂಗ ಕಸಿಗಾಗಿ ಅಂಗಾಂಗ ದಾನಿಗೆ ತಗಲುವ ಒಳರೋಗಿ ಆಸ್ಪತ್ರೆಯ ವೆಚ್ಚವನ್ನು ಪಾವತಿಸಿಲಾಗುತ್ತದೆ. ಹೆಚ್ಚುವರಿಯಾಗಿ, ರಿಡೋ ಸರ್ಜರಿ / ಐಸಿಯು ಪ್ರವೇಶದ ಅಗತ್ಯವಿರುವ ತೊಡಕುಗಳಿಗೆ ದಾನಿಯು ಮಾಡಿದ ವೆಚ್ಚಗಳು (ಯಾವುದಾದರೂ ಇದ್ದರೆ) ಭರಿಸಲಾಗುವುದು. |
ಹಾಸ್ಪೈಸ್ ಕೇರ್ನಮ್ಮ ನೆಟ್‌ವರ್ಕ್ ಸೌಲಭ್ಯದಲ್ಲಲಭ್ಯವಿದ್ದರೆ, ಗರಿಷ್ಠ ರೂ.5 ಲಕ್ಷಕ್ಕೆ ಒಳಪಟ್ಟು ವಿಮಾ ಮೊತ್ತದ 10% ವರೆಗೆ ಪಾವತಿಸಲಾಗುತ್ತದೆ. ಪಾಲಿಸಿಯ ಪ್ರಾರಂಭದಿಂದ 24 ತಿಂಗಳ ಕಾಯುವ ಅವಧಿಯ ನಂತರ ಭರಿಸಲಾಗುತ್ತದೆ. |
ಪುನರ್ವಸತಿ ಮತ್ತು ನೋವು ನಿರ್ವಹಣೆಪುನರ್ವಸತಿ ಮತ್ತು ನೋವು ನಿರ್ವಹಣೆಗೆ ಉಂಟಾಗುವ ಖರ್ಚುಗಳನ್ನು ನಿರ್ದಿಷ್ಟಪಡಿಸಿದ ಉಪ-ಮಿತಿ ಅಥವಾ ಬೇಸಿಕ್ ವಿಮಾ ಮೊತ್ತದ ಗರಿಷ್ಠ 10% ವರೆಗೆ ಯಾವುದು ಕಡಿಮೆಯೋ ಅದರಂತೆ, ಪ್ರತಿ ಪಾಲಿಸಿಯ ಅವಧಿಗೆ ಕವರ್ ಮಾಡಲಾಗುತ್ತದೆ. |
ಆಯುಷ್ ಚಿಕಿತ್ಸೆಆಯುಷ್ ಆಸ್ಪತ್ರೆಗಳಲ್ಲಿ ಆಯುರ್ವೇದ, ಯುನಾನಿ, ಸಿಧ ಮತ್ತು ಹೋಮಿಯೋಪತಿ ಪದ್ದತಿಗಳ ಅಡಿಯಲ್ಲಿ ಚಿಕಿತ್ಸೆಗಾಗಿ ಒಳರೋಗಿ ಆಸ್ಪತ್ರೆಯ ವೆಚ ವಿಮಾ ಮೊತ್ತದಲ್ಲಿ ಭರಿಸಲಾಗುತ್ತದೆ. |
ಬಾರಿಯಾಟ್ರಿಕ್ ಸರ್ಜರಿಬಾರಿಯಾಟ್ರಿಕ್ ಶಸ್ತ್ರಚಿಕಿತ್ಸಾ ವಿಧಾನಗಳಿಗಾಗಿ ಆಸ್ಪತ್ರೆಗೆ ಸೇರಿಸುವ ವೆಚ್ಚವನ್ನು ಭರಿಸಲಾಗುತ್ತದೆ. |
ಆಧುನಿಕ ಚಿಕಿತ್ಸೆಓರಲ್ ಕಿಮೊಥೆರಪಿ, ಇಂಟ್ರಾ ವಿಟ್ರಿಯಲ್ ಇಂಜೆಕ್ಷನ್‌ಗಳು, ರೋಬೋಟಿಕ್ ಸರ್ಜರಿಗಳು ಮುಂತಾದ ಆಧುನಿಕ ಚಿಕಿತ್ಸೆಗಳಿಗೆ ತಗಲುವ ವೆಚ್ಚಗಳು ಪಾಲಿಸಿ ಶೆಡ್ಯೂಲ್‌ನಲ್ಲಿ ನಿರ್ದಿಷ್ಟಪಡಿಸಿದ ವಿಮಾ ಮೊತ್ತದ 50% ವರೆಗೆ ಭರಿಸಲ್ಪಡುತ್ತವೆ. |
ಸಂಚಿತ ಬೋನಸ್ಪ್ರತಿ ಕ್ಲೈಮ್ ಮಾಡದ ವರ್ಷಕ್ಕೆ ವಿಮಾ ಮೊತ್ತದ ಗರಿಷ್ಠ 100% ಕ್ಕೆ ಒಳಪಟ್ಟು ವಿಮಾ ಮೊತ್ತದ 20% ರಷ್ಟು ಸಂಚಿತ ಬೋನಸ್ ಅನ್ನು ಒದಗಿಸಲಾಗುತ್ತದೆ. |
ಸಹ-ಪಾವತಿಪ್ರವೇಶದ ಸಮಯದಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ವಿಮಾದಾರರಿಗೆ ಅನ್ವಯಿಸುತ್ತದೆ. ಪಾಲಿಸಿಯ ಅಡಿಯಲ್ಲಿರುವ ಪ್ರತಿಯೊಂದು ಕ್ಲೈಮ್‌ಗಳು 20% ರಷ್ಟು ಸಹ-ಪಾವತಿಗೆ ಒಳಪಟ್ಟಿರುತ್ತವೆ ಮತ್ತು ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಸ್ವೀಕಾರಾರ್ಹ ಮತ್ತು ಪಾವತಿಸಬೇಕಾದ ಮೊತ್ತವನ್ನು ಕ್ಲೈಮ್ ಮಾಡಬಹುದು. |
ಆರೋಗ್ಯ ತಪಾಸಣೆಪ್ರತಿ ಕ್ಲೈಮ್-ಮಾಡದ ವರ್ಷಕ್ಕೆ ನಿಗದಿತ ಮಿತಿಗಳವರೆಗೆ ಆರೋಗ್ಯ ತಪಾಸಣೆ ವೆಚ್ಚಗಳನ್ನು ಭರಿಸಲಾಗುತ್ತದೆ. |
ಕಂತು ಆಯ್ಕೆಗಳುಪಾಲಿಸಿ ಪ್ರೀಮಿಯಂ ಅನ್ನು ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಆಧಾರದ ಮೇಲೆ ಪಾವತಿಸಬಹುದು. ಇದನ್ನು ವಾರ್ಷಿಕ, ದ್ವೈವಾರ್ಷಿಕ (2 ವರ್ಷಗಳಿಗೊಮ್ಮೆ) ಮತ್ತು ತ್ರೈವಾರ್ಷಿಕ (3 ವರ್ಷಗಳಿಗೊಮ್ಮೆ) ಆಧಾರದ ಮೇಲೂ ಪಾವತಿಸಬಹುದು. ಈ ಸೌಲಭ್ಯವು ದೀರ್ಘಾವಧಿಯ (2 ಮತ್ತು 3 ವರ್ಷಗಳ ಅವಧಿಯ) ಆಯ್ಕೆಗಳಿಗೆ ಲಭ್ಯವಿಲ್ಲ. |
ಸ್ಟಾರ್ ವೆಲ್‌ನೆಸ್ ಕಾರ್ಯಕ್ರಮವಿವಿಧ ಯೋಗಕ್ಷೇಮ ಚಟುವಟಿಕೆಗಳ ಮೂಲಕ ವಿಮಾದಾರರ ಆರೋಗ್ಯಕರ ಜೀವನಶೈಲಿಯನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ವೆಲ್‌ನೆಸ್ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಹೆಚ್ಚುವರಿಯಾಗಿ, ಗಳಿಸಿದ ವೆಲ್‌ನೆಸ್ ಬೋನಸ್ ಪಾಯಿಂಟ್‌ಗಳನ್ನು ಗರಿಷ್ಠ 10% ವರೆಗೆ ನವೀಕರಣ ರಿಯಾಯಿತಿಗಳನ್ನು ಪಡೆದುಕೊಳ್ಳಲು ಬಳಸಿಕೊಳ್ಳಬಹುದು. |
ಕುಟುಂಬ ಡಿಸ್ಕೌಂಟ್ಇಬ್ಬರು ವಯಸ್ಕರು ಪಾಲಿಸಿಯ ಫ್ಲೋಟರ್ ಆಧಾರದ ಮೇಲೆ ವಿಮಾ ಮೊತ್ತದ ವ್ಯಾಪ್ತಿಯಲ್ಲಿ ಬಂದಾಗ, ಕಿರಿಯ ಸದಸ್ಯನಿಗೆ ಪ್ರೀಮಿಯಂನಲ್ಲಿ 40% ರಿಯಾಯಿತಿಯು ಫ್ಲೋಟರ್ ರಿಯಾಯಿತಿಯಾಗಿ ಲಭ್ಯವಿದೆ. |
ಕಿರಿ ವಯಸ್ಸಿನ ರಿಯಾಯಿತಿ50 ವರ್ಷ ಮತ್ತು ಹೆಚ್ಚಿನ ವಯಸ್ಕರಿಗೆ, ಸಂಗಾತಿಯು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಆಗ ಸಂಗಾತಿಗೆ 10% ರಷ್ಟು ಡಿಸ್ಕೌಂಟ್‌ನೊಂದಿಗೆ 50 ವರ್ಷ ವಯಸ್ಸಿನ ಪ್ರೀಮಿಯಂ ಅನ್ನು ಪರಿಗಣಿಸಿ ಫ್ಯಾಮಿಲಿ ಫ್ಲೋಟರ್ ಕವರ್ ಅನ್ನು ಒದಗಿಸಬಹುದು. |
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.
ನಿಮ್ಮ ಸಮಯ ಮತ್ತು ಹಣವನ್ನು ಉಳಿಸಲು ಮತ್ತು ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಕಂಡುಕೊಳ್ಳಲು ತುಂಬಾ ಕಷ್ಟಕರವಾಗಿಸುವ ತೊಂದರೆಗಳನ್ನು ತೊಡೆದುಹಾಕಲು ನಾವು ಬದ್ಧರಾಗಿದ್ದೇವೆ.
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.